Reliance Jio-Silver Lake Deal: ಜಿಯೋದ ಶೇ.1 ಪಾಲನ್ನು ಖರೀದಿಸಿದ ಸಿಲ್ವರ್ ಲೇಕ್; ಏನಿದು ಒಪ್ಪಂದ?

Reliance Jio-Silver Lake Deal: ಖಾಸಗಿ ಹೂಡಿಕೆ ನಿರ್ವಹಣಾ ಕಂಪನಿಯಾದ ಸಿಲ್ವರ್ ಲೇಕ್ ಜಿಯೋದಲ್ಲಿ ಶೇ. 1ರಷ್ಟು ಪಾಲನ್ನು ಖರೀದಿಸಿದೆ. ಇದರ ಮೊತ್ತ ಸುಮಾರು 5,655.75 ಕೋಟಿ ರೂ ಆಗಿದೆ. ಈ ಒಪ್ಪಂದದಿಂದ ರಿಲಾಯನ್ಸ್ ಇಂಡಸ್ಟ್ರೀಸ್ ಸಂಸ್ಥೆ ಇನ್ನಷ್ಟು ಶ್ರೀಮಂತವಾಗಲಿದೆ.

news18-kannada
Updated:May 4, 2020, 12:53 PM IST
Reliance Jio-Silver Lake Deal: ಜಿಯೋದ ಶೇ.1 ಪಾಲನ್ನು ಖರೀದಿಸಿದ ಸಿಲ್ವರ್ ಲೇಕ್; ಏನಿದು ಒಪ್ಪಂದ?
ಮುಖೇಶ್​ ಅಂಬಾನಿ
  • Share this:
ಮುಂಬೈ (ಮೇ.4):  ಟೆಕ್​ ದಿಗ್ಗಜ ಫೇಸ್​ಬುಕ್ ಸಂಸ್ಥೆ ರಿಲಾಯನ್ಸ್ ಜಿಯೋದಲ್ಲಿ 43 ಸಾವಿರ ಕೋಟಿ ಹೂಡಿಕೆ ಮಾಡಿದ್ದು ಭಾರೀ ಸುದ್ದಿಯಾಗಿತ್ತು. ಇದಾದ ಬೆನ್ನಲ್ಲೇ ಅಮೆರಿಕದ ಮತ್ತೊಂದು ಬೃಹತ್ ಕಂಪನಿ ಸಿಲ್ವರ್ ಲೇಕ್ ಕೂಡ ಜಿಯೋದಲ್ಲಿ ಹೂಡಿಕೆ ಮಾಡಿದೆ.

ಖಾಸಗಿ ಹೂಡಿಕೆ ನಿರ್ವಹಣಾ ಕಂಪನಿಯಾದ ಸಿಲ್ವರ್ ಲೇಕ್ ಜಿಯೋದಲ್ಲಿ ಶೇ. 1ರಷ್ಟು ಪಾಲನ್ನು ಖರೀದಿಸಿದೆ. ಇದರ ಮೊತ್ತ ಸುಮಾರು 5,655.75 ಕೋಟಿ ರೂ ಆಗಿದೆ. ಈ ಒಪ್ಪಂದದಿಂದ ರಿಲಾಯನ್ಸ್ ಇಂಡಸ್ಟ್ರೀಸ್ ಸಂಸ್ಥೆ ಇನ್ನಷ್ಟು ಶ್ರೀಮಂತವಾಗಲಿದೆ.

ಇಲ್ಲಿದೆ ಒಪ್ಪಂದದ ಹೈಲೈಟ್ಸ್​:


  • ಸಿಲ್ವರ್ ಲೇಕ್ ಶೇ.1.15 ಷೇರಿಗೆ 5,656 ಕೋಟಿ ರೂಪಾಯಿ ಹೂಡಿಕೆ ಮಾಡಿದೆ

  • ಈ ಈಕ್ವಿಟಿ ಮೌಲ್ಯದಂತೆ ರಿಲಾಯನ್ಸ್​ನ ಒಟ್ಟಾರೆ ಮಾರುಕಟ್ಟೆ ಬಂಡವಾಳದಲ್ಲಿ ಇದು ಶೇ. 52ರಷ್ಟಾಗುತ್ತದೆ

  • ಈಗಾಗಲೇ ಡಿಜಿಟಲೀಕರಣಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡಲಾಗುತ್ತಿದೆ. ಈಗ ಕೊರೋನಾ ಪೂರ್ಣಗೊಂಡ ನಂತರ ಡಿಜಿಟಲ್​ ವ್ಯವಹಾರ ಮತ್ತಷ್ಟು ಹೆಚ್ಚಲಿದೆ. ಹೀಗಾಗಿ ಈ ಹೂಡಿಕೆ ಬಹಳ ಮಹತ್ವ ಪಡೆದುಕೊಂಡಿದೆ.
  • ಸಿಲ್ವರ್ ಲೇಕ್ ಈ ಮೊದಲು ಟ್ವಿಟ್ಟರ್​ ಸೇರಿ ಸಾಕಷ್ಟು ಟೆಕ್​ ಕಂಪನಿಗಳ ಮೇಲೆ ಹೂಡಿಕೆ ಮಾಡಿದೆ.

  • ಭಾರತದಲ್ಲಿ ಸಿಲ್ವರ್ ಲೇಕ್ ಹೂಡಿಕೆ ಮಾಡಿದ್ದು ಇದೇ ಮೊದಲು

First published: May 4, 2020, 12:21 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading