Reliance Jio-Silver Lake Deal: ಜಿಯೋ-ಸಿಲ್ವರ್‌ ಲೇಕ್ ಒಪ್ಪಂದದ ಮೂಲಕ ಭಾರತೀಯ ಡಿಜಿಟಲ್ ವ್ಯವಸ್ಥೆ ಮತ್ತಷ್ಟು ಪ್ರಗತಿ ಸಾಧಿಸಲಿದೆ; ಮುಖೇಶ್ ಅಂಬಾನಿ

Reliance Jio-Silver Lake Deal: ಖಾಸಗಿ ಹೂಡಿಕೆ ನಿರ್ವಹಣಾ ಕಂಪನಿಯಾದ ಸಿಲ್ವರ್ ಲೇಕ್ ಜಿಯೋದಲ್ಲಿ ಶೇ. 1ರಷ್ಟು ಪಾಲನ್ನು ಖರೀದಿಸಿದೆ. ಇದು ಸುಮಾರು 750 ಮಿಲಿಯನ್ ಡಾಲರ್, ಅಂದರೆ ಸುಮಾರು 5,655.75 ಕೋಟಿ ರೂ ಮೊತ್ತವಾಗುತ್ತದೆ.

MAshok Kumar | news18-kannada
Updated:May 4, 2020, 12:54 PM IST
Reliance Jio-Silver Lake Deal: ಜಿಯೋ-ಸಿಲ್ವರ್‌ ಲೇಕ್ ಒಪ್ಪಂದದ ಮೂಲಕ ಭಾರತೀಯ ಡಿಜಿಟಲ್ ವ್ಯವಸ್ಥೆ ಮತ್ತಷ್ಟು ಪ್ರಗತಿ ಸಾಧಿಸಲಿದೆ; ಮುಖೇಶ್ ಅಂಬಾನಿ
ಮುಕೇಶ್ ಅಂಬಾನಿ.
  • Share this:
ಮುಂಬೈ (ಮೇ 04); ಭಾರತದ ಡಿಜಿಟಲ್ ಮಾರುಕಟ್ಟೆಯಲ್ಲಿ ರಿಲಾಯನ್ಸ್ ಜಿಯೋ ಮುಂಚೂಣಿಯಲ್ಲಿದೆ. ಇದೇ ಕಾರಣಕ್ಕೆ ವಿಶ್ವದ ದಿಗ್ಗಜ ಕಂಪನಿಗಳು ಜಿಯೋದಲ್ಲಿ ಹೂಡಿಕೆ ಮಾಡಲು ಆಸಕ್ತಿ ತೋರುತ್ತಿವೆ. ಅಲ್ಲದೆ, ಅಮೆರಿಕ ಮೂಲದ ಸಿಲ್ವರ್ ಲೇಕ್ ಕಂಪಡನಿ ಜೊತೆಗಿನ ಒಪ್ಪಂದದಿಂದ ದೇಶದ ಡಿಜಿಟಲ್ ವ್ಯವಸ್ಥೆ ಮತ್ತಷ್ಟು ಪ್ರಗತಿ ಸಾಧಿಸಲಿದೆ‌ ಎಂದು ಆರ್​ಐಎಲ್ ಛೇರ್ಮನ್ ಮುಕೇಶ್ ಅಂಬಾನಿ ಅಭಿಪ್ರಾಯಪಟ್ಟಿದ್ದಾರೆ.

ರಿಲಾಯನ್ಸ್‌ ಜಿಯೋದಲ್ಲಿ ಫೇಸ್‌ಬುಕ್ ಹೂಡಿಕೆ ಮಾಡಿದ ಬೆನ್ನಿಗೆ ಅಮೆರಿಕದ ಮತ್ತೊಂದು ಬೃಹತ್ ಕಂಪನಿ ಸಿಲ್ವರ್ ಲೇಕ್ ಕೂಡ ಜಿಯೋದಲ್ಲಿ ಹೂಡಿಕೆ ಮಾಡಲು ಮುಂದಾಗಿದೆ. ಖಾಸಗಿ ಹೂಡಿಕೆ ನಿರ್ವಹಣಾ ಕಂಪನಿಯಾದ ಸಿಲ್ವರ್ ಲೇಕ್ ಜಿಯೋದಲ್ಲಿ ಶೇ. 1ರಷ್ಟು ಪಾಲನ್ನು ಖರೀದಿಸಿದೆ. ಇದು ಸುಮಾರು 750 ಮಿಲಿಯನ್ ಡಾಲರ್, ಅಂದರೆ ಸುಮಾರು 5,655.75 ಕೋಟಿ ರೂ ಮೊತ್ತವಾಗುತ್ತದೆ.

ಈ ಒಪ್ಪಂದದ ಕುರಿತು ಮಾತನಾಡಿರುವ ಮುಕೇಶ್ ಅಂಬಾನಿ, "ಸಿಲ್ವರ್ ಲೇಕ್​ನಿಂದ ಜಿಯೋಗೆ ಹೂಡಿಕೆಯಾಗಿರುವುದು ಉತ್ತಮ ಬೆಳವಣಿಗೆ. ಭಾರತೀಯ ಡಿಜಿಟಲ್ ವ್ಯವಸ್ಥೆಗೆ ಪುಷ್ಟಿ ನೀಡಲು ಇದು ಸಹಕಾರಿಯಾಗಲಿದೆ. ಅಲ್ಲದೆ, ಭಾರತದ ಡಿಜಿಟಲ್ ಮಾರುಕಟ್ಟೆಯಲ್ಲಿ ರಿಲಾಯನ್ಸ್ ಜಿಯೋ ಮತ್ತಷ್ಟು ಮುಂಚೂಣಿಗೆ ಕೊಂಡೊಯ್ಯಲಿದೆ" ಎಂದು ಅಭಿಪ್ರಾಯಪಟ್ಟಿದ್ದಾರೆ.

ಫೇಸ್‌ಬುಕ್ ಈಗಾಗಲೇ ಜಿಯೋದಲ್ಲಿ ಶೇ.9.99 ರಷ್ಟು ಷೇರು ಖರೀದಿ ಮಾಡಿದೆ. ಈ ಮೂಲಕ ರಿಲಾಯನ್ಸ್‌ ಜಿಯೋ ಕಂಪೆನಿಗೆ 5.7 ಬಿಲಿಯನ್ ಡಾಲರ್ ಹಣವನ್ನು ಹೂಡಿಕೆಯ ರೂಪದಲ್ಲಿ ಹರಿದು ಬಂದಿತ್ತು. ಇದೀಗ ಸಿಲ್ವರ್‌ ಲೇಕ್‌ನಿಂದ 750 ಮಿಲಿಯನ್ ಡಾಲರ್ ಹಣ ಹೂಡಿಕೆಯಾಗಿದ್ದು, ಈ ಒಪ್ಪಂದದಿಂದ ರಿಲಾಯನ್ಸ್ ಇಂಡಸ್ಟ್ರೀಸ್ ಸಂಸ್ಥೆಯ ಮೌಲ್ಯ ಸುಮಾರು 65 ಬಿಲಿಯನ್ ಡಾಲರ್​ನಷ್ಟಾಗಿದೆ.

ಕೊರೋನಾದ ಬಿಕ್ಕಟ್ಟಿನ ಪರಿಸ್ಥಿತಿಯಲ್ಲಿ ಈ ಬೆಳವಣಿಗೆಗಳಾಗುತ್ತಿರುವುದು ಗಮನಾರ್ಹ. ಭಾರತದಲ್ಲಿ ಡಿಜಿಟಲ್ ವ್ಯವಸ್ಥೆಯಲ್ಲಿ ಕ್ರಾಂತಿಕಾರಿ ಬದಲಾವಣೆಯಾಗುವ ಅಗತ್ಯವಿದೆ. ದೇಶದ ಮೂಲೆ ಮೂಲೆಯಲ್ಲೂ ಡಿಜಿಟಲ್ ವ್ಯವಸ್ಥೆ ಸಮರ್ಪಕವಾಗಿ ಅಳವಡಿಕೆಯಾಗಬೇಕಿದೆ. ಈ ದೃಷ್ಟಿಯಿಂದ ಜಿಯೋದಲ್ಲಿ ವಿದೇಶೀ ಹೂಡಿಕೆಯಾಗುತ್ತಿರುವುದು ಒಳ್ಳೆಯದು ಎಂದು ಕೆಲ ಆರ್ಥಿಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ : Reliance Jio-Silver Lake Deal: ಅಮೆರಿಕದ ಸಿಲ್ವರ್ ಲೇಕ್​ನಿಂದ Jioದಲ್ಲಿ Rs. 5,655.75 ಕೋಟಿ ಹೂಡಿಕೆ
First published: May 4, 2020, 11:50 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading