Reliance Jio Deal: ರಿಲಾಯನ್ಸ್ ಜಿಯೋದ ಶೇ.2.3 ಪಾಲನ್ನು 11,367 ಕೋಟಿ ರೂಪಾಯಿಗೆ ಖರೀದಿಸಿದ ವಿಸ್ತಾ ಇಕ್ವಿಟಿ ಪಾರ್ಟ್ನರ್ಸ್

Jio- Vista Equity Partners deal: ಮೊದಲು ವಿಸ್ತಾ ಇಕ್ವಿಟಿ ಪಾರ್ಟ್ನರ್ಸ್ ಸಾಕಷ್ಟು ಟೆಕ್​ ಸಂಸ್ಥೆಗಳ ಮೇಲೆ ಹೂಡಿಕೆ ಮಾಡಿತ್ತು. ಆದರೆ,ಭಾರತದಲ್ಲಿ ಈ ಸಂಸ್ಥೆಯ ಮೊದಲ ಹೂಡಿಕೆ ಇದಾಗಿದೆ.

ಜಿಯೋ

ಜಿಯೋ

  • Share this:
    ಮುಂಬೈ (ಮೇ 8): ಫೇಸ್​ಬುಕ್​ ಹಾಗೂ ಸಿಲ್ವರ್​ ಲೇಕ್​ ಸಂಸ್ಥೆಗಳು ಮುಕೇಶ್​ ಅಂಬಾನಿ ಒಡೆತನದ ರಿಲಾಯನ್ಸ್​ ಜಿಯೋದ ಪಾಲನ್ನು ದೊಡ್ಡ ಮೊತ್ತಕ್ಕೆ ಖರೀದಿ ಮಾಡಿದ್ದ ವಿಚಾರ ಭಾರೀ ಸುದ್ದಿಯಾಗಿತ್ತು. ಇದರ ಬೆನ್ನಲ್ಲೇ ಈಗ ಅಮೆರಿಕದ ವಿಸ್ತಾ ಇಕ್ವಿಟಿ ಪಾರ್ಟ್ನರ್ಸ್​ ಕೂಡ ಜಿಯೋ ಮೇಲೆ ದೊಡ್ಡ ಮೊತ್ತದಲ್ಲಿ ಹೂಡಿಕೆ ಮಾಡಿದೆ. ಜಿಯೋದ ಶೇ.2.3 ಪಾಲನ್ನು 11,367 ಕೋಟಿ ರೂಪಾಯಿಗೆ ವಿಸ್ತಾ ಸಂಸ್ಥೆ ಪಡೆದುಕೊಂಡಿದೆ.

    200ನೇ ಇಸ್ವಿಯಲ್ಲಿ ಆರಂಭವಾದ ವಿಸ್ತಾ ಅಮೆರಿಕದಲ್ಲಿ ಮುಂಚೂಣಿಯಲ್ಲಿರುವ ಸಂಸ್ಥೆಗಳಲ್ಲಿ ಒಂದು. ಈಗ ಈ ಸಂಸ್ಥೆ ಜಿಯೋದ ಶೇ.2.3 ಪಾಲನ್ನು ಖರೀದಿಸಿದೆ. ಕೇವಲ ಮೂರು ವಾರಗಳಲ್ಲಿ ಜಿಯೋಮೇಲೆ ನಡೆದ ಮೂರನೇ ದೊಡ್ಡ ಮೂರನೇ ಇದಾಗಿದೆ. ಈ ಒಪ್ಪಂದದಿಂದ ಜಿಯೋದ ಇಕ್ವಿಟಿ ಮೊತ್ತ 4.91 ಲಕ್ಷ ಆಗಲಿದೆ.

    ಈ ಮೊದಲು ವಿಸ್ತಾ ಇಕ್ವಿಟಿ ಪಾರ್ಟ್ನರ್ಸ್ ಸಾಕಷ್ಟು ಟೆಕ್​ ಸಂಸ್ಥೆಗಳ ಮೇಲೆ ಹೂಡಿಕೆ ಮಾಡಿತ್ತು. ಆದರೆ,ಭಾರತದಲ್ಲಿ ಈ ಸಂಸ್ಥೆಯ ಮೊದಲ ಹೂಡಿಕೆ ಇದಾಗಿದೆ.

    ಇದನ್ನೂ ಓದಿ: ಅಮೆರಿಕದ ಸಿಲ್ವರ್ ಲೇಕ್​ನಿಂದ Jioದಲ್ಲಿ Rs. 5,655.75 ಕೋಟಿ ಹೂಡಿಕೆ

    ಕೆಲವೇ ವಾರಗಳ ಹಿಂದೆ ಅಮೆರಿಕದ ಟೆಕ್​ ಸಂಸ್ಥೆ ಫೇಸ್​ಬುಕ್ ಜಿಯೋದ ಶೇ.9.99 ಪಾಲನ್ನು ಖರೀದಿಸಿತ್ತು. ಈ ಷೇರಿನ ಮೌಲ್ಯ 43,574 ಕೋಟಿ ರೂಪಾಯಿ ಆಗಿದೆ. ಇನ್ನು, ಖಾಸಗಿ ಹೂಡಿಕೆ ನಿರ್ವಹಣಾ ಸಂಸ್ಥೆಯಾ ಸಿಲ್ವರ್ ಲೇಕ್ ಜಿಯೋದಲ್ಲಿ ಶೇ. 1ರಷ್ಟು ಪಾಲನ್ನು ಖರೀದಿಸಿತ್ತು. ಇದರ ಮೌಲ್ಯ ಸುಮಾರು 5,655.75 ಕೋಟಿ ರೂ ಮೊತ್ತವಾಗುತ್ತದೆ.
    First published: