ಮುಂಬೈ (ಮೇ 17): ಮುಕೇಶ್ ಅಂಬಾನಿ ಒಡೆತನದ ರಿಲಾಯನ್ಸ್ ಜಿಯೋ ಸಂಸ್ಥೆಯ ಮೇಲೆ ಒಂದಾದಮೇಲೆ ಒಂದರಂತೆ ವಿದೇಶಿ ಸಂಸ್ಥೆಗಳು ಹೂಡಿಕೆ ಮಾಡುತ್ತಲೇ ಇವೆ. ಈಗ ಅಮೆರಿಕ ಮೂಲದ ಜನರಲ್ ಅಟ್ಲಾಂಟಿಕ್ 6,598 ಕೋಟಿ ರೂಪಾಯಿ ಹೂಡಿಕೆ ಮಾಡಿದೆ. ಒಂದೇ ತಿಂಗಳಲ್ಲಿ ಇದು ನಾಲ್ಕನೇ ಹೂಡಿಕೆ ಆಗಿದೆ.
ಜಿಯೋ ಸಂಸ್ಥೆ ಶೇ. 1.34 ಪಾಲನ್ನು 6598.38 ಕೋಟಿ ರೂಪಾಯಿಗೆ ಜನರಲ್ ಅಟ್ಲಾಂಟಿಕ್ ಸಂಸ್ಥೆಗೆ ಮಾರಾಟ ಮಾಡಿದೆ. ಈ ಮೂಲಕ ಮತ್ತೊಂದು ಬೃಹತ್ ಹೂಡಿಕೆಯನ್ನು ಸಂಸ್ಥೆ ಪಡೆದಿದೆ.
ಇದನ್ನೂ ಓದಿ: ರಿಲಾಯನ್ಸ್ ಜಿಯೋದ ಶೇ.2.3 ಪಾಲನ್ನು 11,367 ಕೋಟಿ ರೂಪಾಯಿಗೆ ಖರೀದಿಸಿದ ವಿಸ್ತಾ ಇಕ್ವಿಟಿ ಪಾರ್ಟ್ನರ್ಸ್
ಅಮೆರಿಕದ ಟೆಕ್ ಸಂಸ್ಥೆ ಫೇಸ್ಬುಕ್ ಜಿಯೋದ ಶೇ.9.99 ಪಾಲನ್ನು ಖರೀದಿಸಿತ್ತು. ಈ ಷೇರಿನ ಮೌಲ್ಯ 43,574 ಕೋಟಿ ರೂಪಾಯಿ ಆಗಿದೆ. ಇನ್ನು, ಖಾಸಗಿ ಹೂಡಿಕೆ ನಿರ್ವಹಣಾ ಸಂಸ್ಥೆಯಾ ಸಿಲ್ವರ್ ಲೇಕ್ ಜಿಯೋದಲ್ಲಿ ಶೇ. 1ರಷ್ಟು ಪಾಲನ್ನು ಖರೀದಿಸಿತ್ತು. ಇದರ ಮೌಲ್ಯ ಸುಮಾರು 5,655.75 ಕೋಟಿ ರೂ. ಮೊತ್ತವಾಗುತ್ತದೆ.ಜಿಯೋದ ಶೇ.2.3 ಪಾಲನ್ನು 11,367 ಕೋಟಿ ರೂಪಾಯಿಗೆ ವಿಸ್ತಾ ಸಂಸ್ಥೆ ಪಡೆದುಕೊಂಡಿದೆ.
ಈಗ ಜಿಯೋ ಸಂಸ್ಥೆ ಮೇಲೆ ಮತ್ತೊಂದು ಹೂಡಿಕೆ ಆಗಿದೆ. ಈ ಮೂಲಕ ಸಂಸ್ಥೆ ಒಂದು ತಿಂಗಳ ಅವಧಿಯಲ್ಲಿ ಒಟ್ಟು, 67,194.75 ಹೂಡಿಕೆ ಪಡೆದಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ