HOME » NEWS » National-international » RELIANCE JIO MAKES DOMESTIC VOICE CALLS FREE FROM JANUARY 1ST SNVS

Jio Free Call – ಜ. 1ರಿಂದ ಜಿಯೋದಿಂದ ಉಚಿತ ಕರೆ ಸೌಲಭ್ಯ

ಟ್ರಾಯ್ ಸಂಸ್ಥೆ ಇಂಟರ್​ಕನೆಕ್ಟ್ ಯೂಸೇಜ್ ಚಾರ್ಜ್ (IUC) ವ್ಯವಸ್ಥೆಯನ್ನ ರದ್ದುಮಾಡಿದರೆ ತನ್ನ ಗ್ರಾಹಕರಿಗೆ ಉಚಿತ ಧ್ವನಿ ಕರೆಯ ಸೌಲಭ್ಯ ಒದಗಿಸುವುದಾಗಿ ವಾಗ್ದಾನ ನೀಡಿದ್ದ ಜಿಯೋ ಇದೀಗ ತನ್ನ ಮಾತಿನ ಪ್ರಕಾರ ಜ.1ರಿಂದ ವಾಯ್ಸ್ ಕಾಲ್ ಉಚಿತಗೊಳಿಸಿದೆ.

news18
Updated:December 31, 2020, 3:28 PM IST
Jio Free Call – ಜ. 1ರಿಂದ ಜಿಯೋದಿಂದ ಉಚಿತ ಕರೆ ಸೌಲಭ್ಯ
ಜಿಯೋ
  • News18
  • Last Updated: December 31, 2020, 3:28 PM IST
  • Share this:
ಮುಂಬೈ(ಡಿ. 31): ಡಾಟಾ ಪ್ಯಾಕ್ ಹಾಕಿಕೊಂಡು ಇಂಟರ್ನೆಟ್ ಮೂಲಕ ನಾವು ಉಚಿತವಾಗಿ ಧ್ವನಿ ಕರೆ ಮಾಡಬಹುದು. ಇಂಟರ್ನೆಟ್ ಇಲ್ಲದೇ ಸಿಮ್​ನಿಂದ ಧ್ವನಿ ಕರೆ ಮಾಡಬೇಕೆಂದರೆ ಅದಕ್ಕೆ ನಿರ್ದಿಷ್ಟ ಶುಲ್ಕ ತೆರಬೇಕು. ಆದರೆ, ಹೊಸ ವರ್ಷದಿಂದ, ಅಂದರೆ ನಾಳೆಯಿಂದ ನೀವು ರಿಲಾಯನ್ಸ್ ಜಿಯೋದ ಸಿಮ್​ನಿಂದ ಉಚಿತವಾಗಿ ಕರೆ ಮಾಡಬಹುದಾಗಿದೆ. ಇದು ಭಾರತದೊಳಗೆ ಯಾವುದೇ ಮೊಬೈಲ್ ನಂಬರ್​ಗೆ ಮಾಡಲಾಗುವ ಕರೆಗಳಿಗೆ ಅನ್ವಯವಾಗುತ್ತದೆ. ರಿಲಾಯನ್ಸ್ ಜಿಯೋ ಇನ್ಫೋಕಾಮ್ ಸಂಸ್ಥೆ ಉಚಿತ ಕರೆ ಸೌಲಭ್ಯದ ಬಗ್ಗೆ ಅಧಿಕೃತ ಮಾಹಿತಿ ನೀಡಿದೆ. ಇಂಟರ್​ಕನೆಟ್ ಯೂಸೇಜ್ ಚಾರ್ಜ್ (IUC) ವ್ಯವಸ್ಥೆ ಅಂತ್ಯವಾಗುತ್ತಿರುವ ಹಿನ್ನೆಲೆಯಲ್ಲಿ ಜಿಯೋ ತನ್ನ ಗ್ರಾಹಕರಿಗೆ ಇಂಥದ್ದೊಂದು ನ್ಯೂ ಇಯರ್ ಗಿಫ್ಟ್ ನೀಡಿದೆ.

ಅಂತರಸಂಪರ್ಕ ಬಳಕೆ ಶುಲ್ಕ (IUC) ವ್ಯವಸ್ಥೆ ನಿಂತ ನಂತರ ಜನವರಿ 1ರಿಂದ ಜಿಯೋ ಮತ್ತೊಮ್ಮೆ ಇಂಟರ್ನೆಟ್ ರಹಿತ ಧ್ವನಿ ಕರೆಯನ್ನ ಉಚಿತವಾಗಿ ಗ್ರಾಹಕರಿಗೆ ಒದಗಿಸುತ್ತದೆ ಎಂದು ರಿಲಾಯನ್ಸ್ ಸಂಸ್ಥೆ ತಿಳಿಸಿದೆ. ಐಯುಸಿ ವ್ಯವಸ್ಥೆ ಮುಗಿದ ಬಳಿಕ ಉಚಿತ ಧ್ವನಿ ಕರೆ ಸೌಲಭ್ಯ ಕೊಡುವುದಾಗಿ ಈ ಹಿಂದೆ ಜಿಯೋ ಹೇಳಿಕೊಂಡಿತ್ತು. ಆ ವಾಗ್ದಾನದಂತೆ ಜ. 1ರಿಂದ ಭಾರತದ ಜಿಯೋ ಗ್ರಾಹಕರಿಗೆ ದೇಶದೊಳಗೆ ಉಚಿತವಾಗಿ ಧ್ವನಿ ಕರೆ ಮಾಡುವ ಅವಕಾಶವನ್ನು ಕೊಟ್ಟಿದೆ.

ಇದನ್ನೂ ಓದಿ: KAPL recruitment 2020: PSR ಮತ್ತು ಏರಿಯಾ ಮ್ಯಾನೇಜರ್ ಹುದ್ದೆಗಳಿಗೆ ಅರ್ಜಿ ಆಹ್ವಾನ; ಪದವಿ ವಿದ್ಯಾರ್ಹತೆ ಪಡೆದವರಿಗೆ ಅವಕಾಶ

ಜಿಯೋದಿಂದ ದೇಶದ ಎಲ್ಲಿಗೆ ಬೇಕಾದರೂ ಯಾವುದೇ ನೆಟ್​ವರ್ಕ್​ಗೆ ಬೇಕಾದರೂ ಮಾಡುವ ಕರೆಗೆ ಯಾವುದೇ ಶುಲ್ಕ ಇರುವುದಿಲ್ಲ. ಸಂಪೂರ್ಣ ಉಚಿತವಾಗಿರುತ್ತದೆ. ಐಯುಸಿ ವ್ಯವಸ್ಥೆಯಿಂದಾಗಿ ಧ್ವನಿ ಕರೆಗೆ ಶುಲ್ಕ ವಿಧಿಸಲಾಗುತ್ತಿತ್ತು. ಒಂದು ನೆಟ್ವರ್ಕ್​ನಿಂದ ಗ್ರಾಹಕರು ಬೇರೊಂದು ನೆಟ್​ವರ್ಕ್​ನ ಗ್ರಾಹಕರಿಗೆ ಮೊಬೈಲ್ ಕರೆ ಮಾಡಿದಾಗ ನಿರ್ದಿಷ್ಟ ಶುಲ್ಕ ಕೊಡುವ ವ್ಯವಸ್ಥೆಯೇ ಐಯುಸಿ. ಹೀಗಾಗಿ, ಜಿಯೋ ಆ ಶುಲ್ಕದ ಹಣವನ್ನು ತನ್ನ ಗ್ರಾಹಕರಿಂದ ಭರಿಸುತ್ತಿತ್ತು. ಈಗ ಐಯುಸಿ ವ್ಯವಸ್ಥೆಯನ್ ತೆಗೆದುಹಾಕಿರುವುದರಿಂದ ಜಿಯೋ ಮತ್ತೊಮ್ಮೆ ತನ್ನ ಗ್ರಾಹಕರಿಗೆ ಉಚಿತ ಕರೆ ಸೌಲಭ್ಯ ಒದಗಿಸುತ್ತಿದೆ.
Published by: Vijayasarthy SN
First published: December 31, 2020, 3:03 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories