ರಿಲಾಯನ್ಸ್ ಜಿಯೋ ಇದೀಗ ಆ್ಯಂಡ್ರಾಯ್ಡ್ ಬಳಕೆದಾರರಿಗಾಗಿ ಜಿಯೋ ಬ್ರೌಸರ್ ಬೀಟಾ ವರ್ಷನ್ ಅನ್ನು ಪರಿಚಯಿಸಿದೆ. ಗೂಗಲ್ ಪ್ಲೇ ಸ್ಟೋರ್ನಲ್ಲಿ ನೂತನ ವರ್ಷನ್ ಬಳಕೆಗೆ ಸಿಗುತ್ತಿದ್ದು, ಡೌನ್ಲೋಡ್ ಮಾಡುವ ಮೂಲಕ ಬಳಸಬಹುದಾಗಿದೆ. ಬಳಕೆದಾರರಿಗೆ ಹೆಚ್ಚಿನ ಫೀಚರ್ ಒದಗಿಸಲು ಜಿಯೋ ಬ್ರೌಸರ್ನಲ್ಲಿ ಗೂಗಲ್ ಕ್ರೋಮ್, ಮೈಕೋಸಾಫ್ಟ್ ಎಡ್ಜ್ ಮತ್ತು ಒಪೇರಾದೊಂದಿಗೆ ಕೈ ಜೋಡಿಸಿದೆ. ಸದ್ಯ ಬಳಕೆದಾರರು ಗೂಗಲ್ ಪ್ಲೇ ಸ್ಟೋರ್ಗೆ ತೆರಳುವ ಮೂಲಕ ಡೌನ್ಲೋಡ್ ಮಾಡಿಕೊಂಡು ಜಿಯೋ ಬ್ರೌಸರ್ ಬೀಟಾ ವರ್ಷನ್ ಬಳಸಬಹುದಾಗಿದೆ.
ಇತ್ತೀಚೆಗೆ ಕೇಂದ್ರ ಸರ್ಕಾರ ಚೀನಾ ಮೂಲಕ ಅನೇಕ ಆ್ಯಪ್ಗಳನ್ನು ಬ್ಯಾನ್ ಮಾಡಿದೆ. ಆಂತರಿಕ ಮತ್ತು ಬಾಹ್ಯ ದೃಷ್ಠಿಕೋನದಿಂದಾಗಿ ಈ ನಿರ್ಣಯವನ್ನು ಕೈಗೊಂಡಿದೆ. ಮಾತ್ರವಲ್ಲದೆ, ದೇಶಿಯ ಆ್ಯಪ್ಗಳ ಅಭಿವೃದ್ಧಿಯತ್ತ ಚಿತ್ತ ಹರಿಸಿದೆ. ಆತ್ಮನಿರ್ಭಾರ್ ಭಾರತ್ ದ್ಯೇಯದೆಡೆಗೆ ಹೆಚ್ಚಿನ ಗಮಹರಿಸುತ್ತಿದೆ. ಇನ್ನು ಜಿಯೋ ಬ್ರೌಸರ್ ಚೀನಾ ಮೂಲದ ಯುಸಿ ಬ್ರೌಸರ್ ಆ್ಯಪ್ಗೆ ಸರಿಸಮಾನವಾಗಿ ಅಭಿವೃದ್ಧಿ ಪಡಿಸಲಾಗಿದೆ.
ಜಿಯೋ ಬ್ರೌಸರ್ನಲ್ಲಿ ಪ್ರೈವೆಟ್ ಬ್ರೌಸಿಂಗ್ ಮೋಡ್ ಜೊತೆಗೆ ಸೆಕ್ಯೂರಿಟಿ ಪಿನ್ ನಮೂದಿಸಬಹುದಾಗಿದೆ. ಬುಕ್ ಮಾರ್ಕ್ ಮತ್ತು ಫೈಲ್ಗಳನ್ನು ಡೌನ್ ಮಾಡುವ ಆಯ್ಕೆಯನ್ನು ಇದರಲ್ಲಿ ನೀಡಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ