Reliance Jio-Facebook Deal: ರಿಲಾಯನ್ಸ್​ ಜಿಯೋದ ಶೇ. 9.99 ಷೇರನ್ನು 43,574 ಕೋಟಿ ರೂಪಾಯಿಗೆ ಖರೀದಿಸಿದ ಫೇಸ್​ಬುಕ್​

Reliance Jio-Facebook Deal ಈ ಬೆಳವಣಿಗೆ ಬಗ್ಗೆ ಅಂಬಾನಿ ಒಡೆತನದ ರಿಲಾಯನ್ಸ್​ ಇಂಡಸ್ಟ್ರೀಸ್​ ಸಂತಸ ವ್ಯಕ್ತಪಡಿಸಿದೆ. ಅಷ್ಟೇ ಅಲ್ಲ, ಟೆಲಿಕಾಂ ಸಂಸ್ಥೆಯಲ್ಲಿ ಇಂಥದ್ದೊಂದು ಅಭೂತಪೂರ್ವ ಬೆಳವಣಿಗೆ ಹಿಂದೆಂದು ನಡೆದಿರಲಿಲ್ಲ ಎಂದು ಹೇಳಿದೆ.

news18-kannada
Updated:April 22, 2020, 9:39 AM IST
Reliance Jio-Facebook Deal: ರಿಲಾಯನ್ಸ್​ ಜಿಯೋದ ಶೇ. 9.99 ಷೇರನ್ನು 43,574 ಕೋಟಿ ರೂಪಾಯಿಗೆ ಖರೀದಿಸಿದ ಫೇಸ್​ಬುಕ್​
ಮಾರ್ಕ್​ ಜುಕರ್​ಬರ್ಗ್ - ಮುಕೇಶ್​ ಅಂಬಾನಿ
  • Share this:
ಮುಂಬೈ (ಏ.22): ಭಾರತೀಯ ಟೆಲಿಕಾಂನಲ್ಲಿ ಹೊಸ ಅಲೆ ಸೃಷ್ಟಿಸಿದ್ದ ಉದ್ಯಮಿ ಮುಕೇಶ್​ ಅಂಬಾನಿ ಒಡೆತನದ ಜಿಯೋ ತನ್ನ ಶೇ.9.99 ಷೇರನ್ನು ಅಮೆರಿಕದ ಟೆಕ್​ ಸಂಸ್ಥೆ ಫೇಸ್​ಬುಕ್​ಗೆ ಮಾರಾಟ ಮಾಡಿದೆ. ಈ ಷೇರಿನ ಮೌಲ್ಯ 43,574 ಕೋಟಿ ರೂಪಾಯಿ ಆಗಿದೆ.

ಈ ಬೆಳವಣಿಗೆ ಬಗ್ಗೆ ಅಂಬಾನಿ ಒಡೆತನದ ರಿಲಾಯನ್ಸ್​ ಇಂಡಸ್ಟ್ರೀಸ್​ ಸಂತಸ ವ್ಯಕ್ತಪಡಿಸಿದೆ. ಅಷ್ಟೇ ಅಲ್ಲ, ಟೆಲಿಕಾಂ ಸಂಸ್ಥೆಯಲ್ಲಿ ಇಂಥದ್ದೊಂದು ಅಭೂತಪೂರ್ವ ಬೆಳವಣಿಗೆ ಹಿಂದೆಂದು ನಡೆದಿರಲಿಲ್ಲ ಎಂದು ಹೇಳಿದೆ.

ಈ ಒಪ್ಪಂದದ ಬಗ್ಗೆ ಮಾತನಾಡಿರುವ ಆರ್​​ಐಎಲ್​ ಮುಖ್ಯಸ್ಥ ಮುಕೇಶ್​ ಅಂಬಾನಿ, “2016ರಲ್ಲಿ ನಾವು ಜಿಯೋ ಲಾಂಚ್​ ಮಾಡಿದ್ದೆವು. ಭಾರತದ ಡಿಜಿಟಲ್​ ಸರ್ವೋದಯದ ಕನಸು ಕಂಡು ನಾವು ಜಿಯೋ ಆರಂಭಿಸಿದ್ದೆವು. ಇಡೀ ಜಗತ್ತು ಡಿಜಿಟಲೀಕರಣವಾಗಿದೆ. ಈ ವೇಳೆ ಭಾರತೀಯರೂ ಡಿಜಿಟಲ್​ ಯುಗದಲ್ಲಿ ಮುಂದೆ ಬರಬೇಕು ಎಂಬುದು ನಮ್ಮ ಆಶಯವಾಗಿತ್ತು. ಈಗ ಈ ವಿಚಾರದಲ್ಲಿ ಇನ್ನು ಒಂದು ಹೆಜ್ಜೆ ಮುಂದೆ ಹೋಗಿದ್ದೇವೆ.  ಫೇಸ್​ಬುಕ್​ ಜೊತೆ ಮಹತ್ವದ ಒಪ್ಪಂದ ಮಾಡಿಕೊಂಡಿದ್ದೇವೆ,” ಎಂದಿದ್ದಾರೆ.

ಇದನ್ನೂ ಓದಿ: ಜಿಯೋ ಧಮಾಕಾ ಆಫರ್: ಕಡಿಮೆ ಮೊತ್ತಕ್ಕೆ ಅನಿಯಮಿತ ಕರೆ, ಪ್ರತಿದಿನ 2GB ಡೇಟಾ ಉಚಿತ

“ಪ್ರಧಾನಿ ನರೇಂದ್ರ ಮೋದಿಯವರು ಡಿಜಿಟಲ್​ ಇಂಡಿಯಾದ ಕನಸು ಕಂಡಿದ್ದಾರೆ. ಸುಲಭ ಜೀವನ ನಡೆಸುವುದು ಮತ್ತು ಸುಲಭವಾಗಿ ಉದ್ಯಮ ಮಾಡುವುದು ಈ ಯೋಜನೆಯ ಪ್ರಮುಖ ಉದ್ದೇಶಗಳು. ಕೊರೋನಾ ವೈರಸ್​ ಕಡಿಮೆ ಆದ ನಂತರ ಭಾರತ ಆರ್ಥಿಕವಾಗಿ ಸಬಲವಾಗಲಿದೆ. ಭಾರತದ ಆರ್ಥಿಕತೆ ಮೇಲೆ ಈ ಒಪ್ಪಂದ ಪ್ರಮುಖ ಬದಲಾವಣೆಗೆ ಕಾರಣವಾಗಲಿದೆ,”  ಎಂದು ಅಂಬಾನಿ ಹೇಳಿದರು.

ಈ ಒಪ್ಪಂದದ ಬಗ್ಗೆ ಫೇಸ್​ಬುಕ್​ ಸಂಸ್ಥೆ ಮುಖ್ಯಸ್ಥ ಮಾರ್ಕ್​ ಜುಕರ್​ಬರ್ಗ್​   ಕೂಡ ಸಂತಸ ವ್ಯಕ್ತಪಡಿಸಿದ್ದಾರೆ. “ಡಿಜಿಟಲ್​ ಯುಗ ಬೆಳೆಯುತ್ತಲಿದೆ. ಈ ಸಂದರ್ಭದಲ್ಲಿ ಈ ಒಪ್ಪಂದ ಬಹಳ ಮಹತ್ವ ಪಡೆದುಕೊಂಡಿದೆ. ಉದ್ಯಮ ಸುಲಭ ಮಾಡಲು ಮತ್ತು ಮೊಬೈಲ್​ ಮೂಲಕವೇ ಎಲ್ಲವನ್ನೂ ಖರೀದಿಸುವಂತೆ ಮಾಡಲು ಈ ಯೋಜನೆ ಸಹಕಾರಿಯಾಗಲಿದೆ,” ಎಂದು ಜುಕರ್​ಬರ್ಗ್​ ವಿಶ್ವಾಸ ವ್ಯಕ್ತಪಡಿಸಿದರು.

First published: April 22, 2020, 7:46 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading