Reliance Jio-Facebook deal: ದಿನೇದಿನೆ ಜಿಯೋ ಬಳಕೆದಾರರ ಸಂಖ್ಯೆ ಹೆಚ್ಚಳ; ದೇಶದ ಜನರ ಸಂಪರ್ಕಕ್ಕೆ ದಾರಿ ತೋರಿದ ನೆಟ್​ವರ್ಕ್

Reliance Jio-Facebook deal: ರಿಲಯನ್ಸ್​ ಜಿಯೋ ನೆಟ್​ವರ್ಕ್ 388 ಮಿಲಿಯನ್ ಬಳಕೆದಾರರನ್ನು ಹೊಂದಿದ್ದು, ದೇಶದ ಎಲ್ಲ ಮೂಲೆಗಳನ್ನೂ ತಲುಪಿದೆ.

news18-kannada
Updated:April 22, 2020, 3:02 PM IST
Reliance Jio-Facebook deal: ದಿನೇದಿನೆ ಜಿಯೋ ಬಳಕೆದಾರರ ಸಂಖ್ಯೆ ಹೆಚ್ಚಳ; ದೇಶದ ಜನರ ಸಂಪರ್ಕಕ್ಕೆ ದಾರಿ ತೋರಿದ ನೆಟ್​ವರ್ಕ್
ಜಿಯೋ
  • Share this:
ನವದೆಹಲಿ (ಏ. 22): ಟೆಲಿಕಾಂ ಕ್ಷೇತ್ರದಲ್ಲಿ ಸಂಚಲನ ಸೃಷ್ಟಿಸಿದ್ದ ರಿಲಯನ್ಸ್​ ಜಿಯೋದ ಶೇ. 9.99ರಷ್ಟು ಷೇರನ್ನು ಖರೀದಿಸಿರುವ ತಂತ್ರಜ್ಞಾನ ಕ್ಷೇತ್ರದ ದೈತ್ಯ ಕಂಪನಿ ಫೇಸ್​ಬುಕ್ 43,574 ಕೋಟಿ ರೂ. ಬಂಡವಾಳ ಹೂಡಿಕೆ ಮಾಡಿದೆ. ಇದರಿಂದಾಗಿ ಭಾರತದ ಉದ್ಯಮ ಕ್ಷೇತ್ರದಲ್ಲಿ ಮತ್ತು ಜನರ ಮೇಲೆ ಯಾವೆಲ್ಲ ರೀತಿಯ ಪ್ರಭಾವ ಉಂಟಾಗಲಿದೆ ಎಂಬ ಮಾಹಿತಿ ಇಲ್ಲಿದೆ.

ರಿಲಯನ್ಸ್​ ಇಂಡಸ್ಟ್ರೀಸ್​ ಲಿಮಿಟೆಡ್​ನ ಭಾಗವಾಗಿರುವ ಜಿಯೋ ಭಾರತದಲ್ಲಿ ಅತಿ ವೇಗವಾಗಿ ಪ್ರಾಬಲ್ಯ ಸಾಧಿಸಿರುವ ಮೊಬೈಲ್ ನೆಟ್​ವರ್ಕ್ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ. ಹೈಸ್ಪೀಡ್​ ಇಂಟರ್ನೆಟ್​, ದೇಶದೆಲ್ಲೆಡೆ ಸಂಪರ್ಕ ಸಾಧಿಸಿರುವ ಜಿಯೋ ಜೊತೆಗೆ ಫೇಸ್​ಬುಕ್ ಒಪ್ಪಂದ ಮಾಡಿಕೊಂಡಿದೆ.

ಈ ಬಗ್ಗೆ ಹೇಳಿಕೆ ನೀಡಿದ್ದ ರಿಲಯನ್ಸ್​ ಸಂಸ್ಥೆಯ ಮುಖ್ಯಸ್ಥ ಮುಕೇಶ್ ಅಂಬಾನಿ, 2016ರಲ್ಲಿ ಡಿಜಿಟಲ್​ ಯುಗದ ಕನಸು ಕಂಡು ನಾವು ಜಿಯೋ ಸಂಸ್ಥೆಯನ್ನು ಆರಂಭಿಸಿದೆವು. ಇಡೀ ಜಗತ್ತೇ ಈಗ ಡಿಜಿಟಲೀಕರಣವಾಗಿದೆ. ಈ ವೇಳೆ ಭಾರತೀಯರೂ ಡಿಜಿಟಲ್​ ಯುಗದಲ್ಲಿ ಮುಂದೆ ಬರಬೇಕು ಎಂಬುದು ನಮ್ಮ ಆಶಯವಾಗಿತ್ತು. ಈಗ ಈ ವಿಚಾರದಲ್ಲಿ ಇನ್ನು ಒಂದು ಹೆಜ್ಜೆ ಮುಂದೆ ಹೋಗಿದ್ದೇವೆ. ಹೀಗಾಗಿ, ಫೇಸ್​ಬುಕ್​ ಜೊತೆ ಒಪ್ಪಂದ ಮಾಡಿಕೊಂಡಿದ್ದೇವೆ ಎಂದಿದ್ದಾರೆ.

ಇದನ್ನೂ ಓದಿ: ಭಾರತದಲ್ಲಿ ಕೊರೋನಾಗೆ 645 ಬಲಿ; 20 ಸಾವಿರ ದಾಟಿದ ಸೋಂಕಿತರ ಸಂಖ್ಯೆ

ರಿಲಯನ್ಸ್​ ಜಿಯೋ ನೆಟ್​ವರ್ಕ್ 388 ಮಿಲಿಯನ್ ಬಳಕೆದಾರರನ್ನು ಹೊಂದಿದ್ದು, ದೇಶದ ಎಲ್ಲ ಮೂಲೆಗಳನ್ನೂ ತಲುಪಿದೆ. ಹಾಗೇ, ದೇಶದಲ್ಲಿ 260 ಮಿಲಿಯನ್ ಫೇಸ್​ಬುಕ್ ಬಳಕೆದಾರರು ಇದ್ದಾರೆ. ಬೇರೆ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಫೇಸ್​ಬುಕ್ ಬಳಕೆದಾರರ ಸಂಖ್ಯೆ ಹೆಚ್ಚೇ ಇದೆ. ಹಾಗೇ, ಫೇಸ್​ಬುಕ್ ಒಡೆತನದ ವಾಟ್ಸಾಪ್ ಬಳಕೆದಾರರ ಸಂಖ್ಯೆಯೇನೂ ಕಡಿಮೆಯಿಲ್ಲ. ಸ್ಮಾರ್ಟ್​ಫೋನ್ ಇರುವ ಪ್ರತಿಯೊಬ್ಬರೂ ವಾಟ್ಸಾಪ್​ ಬಳಸುತ್ತಿದ್ದಾರೆ. 2019ರ ನೀತಿ ಆಯೋಗದ ಮಾಹಿತಿ ಪ್ರಕಾರ ಭಾರತದಲ್ಲಿ 400 ಮಿಲಿಯನ್ ವಾಟ್ಸಾಪ್ ಬಳಕೆದಾರರಿದ್ದಾರೆ.

ಇದನ್ನೂ ಓದಿ: Reliance Jio-Facebook Deal: ರಿಲಾಯನ್ಸ್​ ಜಿಯೋದ ಶೇ. 9.99 ಷೇರನ್ನು 43,574 ಕೋಟಿ ರೂಪಾಯಿಗೆ ಖರೀದಿಸಿದ ಫೇಸ್​ಬುಕ್​

ದೇಶದಲ್ಲಿ ಫೇಸ್​ಬುಕ್ ಮತ್ತು ವಾಟ್ಸಾಪ್​ ಬಳಕೆದಾರರ ಅತಿದೊಡ್ಡ ಸಮುದಾಯವೇ ಇದೆ. ಸ್ಮಾರ್ಟ್​ ಫೋನ್ ಬಳಕೆದಾರರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಪೇಟಿಎಂ, ಗೂಗಲ್ ಪೇ, ಫೋನ್ ಪೇ, ವಾಟ್ಸಾಪ್​ ಮೂಲಕ ಹಣ ಪಾವತಿ ಮಾಡುವವರ ಸಂಖ್ಯೆ ದೊಡ್ಡದಿದೆ. ಫೇಸ್​ಬುಕ್ ಒಡೆತನದ ವಾಟ್ಸಾಪ್​ ಮೂಲಕವೂ ಹಣ ಪಾವತಿಗೆ ಸರ್ಕಾರ ಅನುಮತಿ ನೀಡಿದ ನಂತರ ಫೇಸ್​ಬುಕ್ ಈ ಕ್ಷೇತ್ರದಲ್ಲಿ ಪ್ರಾಬಲ್ಯ ಸಾಧಿಸಲು ಅದಕ್ಕಾಗಿ ಜಿಯೋ ನೆಟ್​ವರ್ಕ್ ಬಳಸಿಕೊಳ್ಳುವ ಬಗ್ಗೆ ಚಿಂತಿಸಿ, ಈ ಒಪ್ಪಂದ ಮಾಡಿಕೊಂಡಿದೆ ಎಂಬ ಮಾತುಗಳೂ ಕೇಳಿಬರುತ್ತಿವೆ.ಕಳೆದ 5 ವರ್ಷಗಳಲ್ಲಿ ದೇಶದ 560 ಮಿಲಿಯನ್ ಜನರು ಇಂಟರ್ನೆಟ್​ ಸಂಪರ್ಕ ಹೊಂದಿದ್ದಾರೆ. ಈ ಹಿನ್ನೆಲೆಯಲ್ಲಿ ಫೇಸ್​ಬುಕ್ ಮತ್ತು ಜಿಯೋ ನೆಟ್​ವರ್ಕ್ ಒಪ್ಪಂದಿಂದಾಗಿ ದೇಶದಲ್ಲಿ ಹೊಸ ಉದ್ಯೋಗಾವಕಾಶಗಳು ಸೃಷ್ಟಿಯಾಗುವ ಸಾಧ್ಯತೆಯೂ ಇದೆ. ಸಣ್ಣ, ಮಧ್ಯಮ, ಸೂಕ್ಷ್ಮ ಉದ್ದಿಮೆದಾರರಿಗೆ ಇದರಿಂದ ಹೆಚ್ಚು ಅನುಕೂಲವಾಗಲಿದೆ ಎಂದು ಆರ್ಥಿಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
First published: April 22, 2020, 2:54 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading