• Home
 • »
 • News
 • »
 • national-international
 • »
 • Reliance AGM 2021: ರಿಲಯನ್ಸ್​ ಸಂಸ್ಥೆ ಶೇ 11ಕ್ಕಿಂತ ಹೆಚ್ಚಿನ ಮೆಡಿಕಲ್​ ಲಿಕ್ವಿಡ್​ ಆಕ್ಸಿಜನ್​ ಉತ್ಪಾದಿಸುತ್ತಿದೆ; ನೀತಾ ಅಂಬಾನಿ

Reliance AGM 2021: ರಿಲಯನ್ಸ್​ ಸಂಸ್ಥೆ ಶೇ 11ಕ್ಕಿಂತ ಹೆಚ್ಚಿನ ಮೆಡಿಕಲ್​ ಲಿಕ್ವಿಡ್​ ಆಕ್ಸಿಜನ್​ ಉತ್ಪಾದಿಸುತ್ತಿದೆ; ನೀತಾ ಅಂಬಾನಿ

ನೀತಾ ಅಂಬಾನಿ

ನೀತಾ ಅಂಬಾನಿ

ಇಂದು ರಿಲಯನ್ಸ್​ ಸಂಸ್ಥೆ ಶೇ 11ಕ್ಕಿಂತ ಹೆಚ್ಚಿನ ಮೆಡಿಕಲ್​ ಲಿಕ್ವಿಡ್​ ಆಕ್ಸಿಜನ್​ ಉತ್ಪಾದಿಸುತ್ತಿದೆ.

 • Share this:

  ಕೋವಿಡ್​ ಬಿಕ್ಕಟ್ಟಿನ ಸಮಯದಲ್ಲಿ ರಿಲಾಯನ್ಸ್​ ಫೌಂಡೇಶನ್​ ದೇಶದ ಜನರಿಗೆ ಸಹಾಯ ಮಾಡುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಿದೆ. ಈ ಕುರಿತು ರಿಲಯನ್ಸ್ ಇಂಡಸ್ಟೀಸ್​ ಲಿಮಿಟೆಡ್​ನ 44 ವಾರ್ಷಿಕ ಸಮ್ಮೇಳನದಲ್ಲಿ (ಎಜಿಎಂ) ಹೂಡಿಕೆದಾರರ ಸಮಾವೇಶದಲ್ಲಿ ಮಾತನಾಡಿದ ನೀತಾ ಅಂಬಾನಿ, ಆಕ್ಸಿಜನ್​ ಬಿಕ್ಕಟ್ಟು ಎದುರಾಗುವವರೆಗೂ ನಾವು ಮೆಡಿಕಲ್​ ಆಕ್ಸಿಜನ್​ ಲಿಕ್ವಿಡ್​ ಅನ್ನು ಉತ್ಪಾದಿಸುತ್ತಿರಲಿಲ್ಲ. ಯಾವಾಗ ಬಿಕ್ಕಟ್ಟು ಎದುರಾಯಿತು ಆಗ ನಾವು ನಮ್ಮ ಜಾಮ್​ನಗರ ಘಟಕದಲ್ಲಿ ಮೆಡಿಕಲ್​ ಲಿಕ್ವಿಡ್​ ಆಕ್ಸಿಜನ್​ ಉತ್ಪಾದನೆಗೆ ಮುಂದಾದೆವು.  ನಮ್ಮ ದೇಶ ಮತ್ತು ದೇಶದ ಜನರ ಆದ್ಯತೆಗೆ ಅನುಗುಣವಾಗಿ ಕಾರ್ಯನಿರ್ವಹಿಸಲು ನಿರ್ಧರಿಸಿದೆವು ಎಂದು ತಿಳಿಸಿದರು


  ಆಕ್ಸಿಜನ್​ ಬಿಕ್ಕಟ್ಟು ಎದುರಾಗುತ್ತಿದ್ದಂತೆ ಎರಡೇ ವಾರಗಳಲ್ಲಿ ಜಾಮ್​ನಗರದಲ್ಲಿರುವ ನಮ್ಮ ಘಟಕದಲ್ಲಿ ಸುರಕ್ಷತಾ ಕ್ರಮ ಅನುಸರಿಸಿ ದಿನಕ್ಕೆ 1100 ಮೆಟ್ರಿಕ್​ ಟನ್​ ಆಕ್ಸಿಜನ್​ ಉತ್ಪಾದನೆ ಮಾಡಲಾಯಿತು. ಕೋವಿಡ್​ ವಿರುದ್ಧ ಹೋರಾಡಲು ಐದು ಮಿಷನ್​ಗಳಿಗೆ ನಾವು ಚಾಲನೆ ನೀಡಿದೆವು. ಮಿಷನ್​ ಕೋವಿಡ್​, ಮಿಷನ್​ ಆಕ್ಸಿಜನ್​, ಮಿಷನ್​ ಕೋವಿಡ್​ ಇನ್ಫ್ರಾ, ಮಿಷನ್​ ಅನ್ನ ಸೇವಾ, ಮಿಷನ್​ ಎಂಪ್ಲಾಯ್​ ಕೇರ್​ ಮತ್ತು ಮಿಷನ್​ ವಾಕ್ಸಿನ್​ ಸುರಕ್ಷಾ ಯೋಜನೆಗಳನ್ನು ಪ್ರಾರಂಭಿಸಿದೆವು ಎಂದರು


  ರಿಲಯನ್ಸ್​ ಭಾರತ ಸೇರಿದಂತೆ ಜರ್ಮನಿ, ಸಿಂಗಾಪುರ, ಸೌದಿ ಅರೇಬಿಯಾ ನೆದರ್ಲ್ಯಾಂಡ್ಸ್​, ಬೆಲ್ಜಿಯಂ, ಥೈಲ್ಯಾಂಡ್​, ಇಂಡೋನೇಷ್ಯಾದ 100 ಹೊಸ ಮೆಡಿಕಲ್​ ದರ್ಜೆಯ ಆಕ್ಸಿಜನ್​ ಟ್ಯಾಂಕರ್​ ಖರೀದಿಸಿದ ಭಾರತದಲ್ಲಿ ಸೇವೆಗೆ ಬಳಸಿಕೊಂಡಿತು. ಆಕ್ಸಿಜನ್​ ಸೇವೆಯನ್ನು ಬಲಪಡಿಸಲು ದೇಶಾಧ್ಯಂತ ಹಲವಾರು ಆಸ್ಪತ್ರೆಗಳಲ್ಲಿ ಆಕ್ಸಿಜನ್​ ಜನರೇಟರ್​ಗಳನ್ನು ಸ್ಥಾಪಿಸಲು ಸಹಾಯ ಮಾಡಿದ್ದೇವೆ, ಮಿಷನ್​ ಆಕ್ಸಿಜನ್​ಗಾಗಿ ನಿಸ್ವಾರ್ಥವಾಗಿ ಮತ್ತು ದಣಿವರಿಯಿಲ್ಲದೇ ಕೆಲಸ ಮಾಡಿದ ನಮ್ಮ ಎಲ್ಲ ಇಂಜಿನಿಯರ್​, ವೈದ್ಯರಯ ಮತ್ತು ವಾರಿಯರ್​ಗಳಿಗೆ ನಾವು ಧನ್ಯವಾದ ತಿಳಿಸುತ್ತೇವೆ ಎಂದರು


  ಇಂದು ರಿಲಯನ್ಸ್​ ಸಂಸ್ಥೆ ಶೇ 11ಕ್ಕಿಂತ ಹೆಚ್ಚಿನ ಮೆಡಿಕಲ್​ ಲಿಕ್ವಿಡ್​ ಆಕ್ಸಿಜನ್​ ಉತ್ಪಾದಿಸುತ್ತಿದೆ. ಅಲ್ಲದೇ ಈ ಆಕ್ಸಿಜನ್​ಗಳನ್ನು ದೇಶಕ್ಕೆ ಉಚಿತವಾಗಿ ನೀಡಲಾಗುತ್ತಿದೆ.
  ಎರಡನೇ ಅಲೆ ಸೋಂಕಿನಲ್ಲಿ ಮುಂಬೈನಲ್ಲಿ 875 ಬೆಡ್​ಉಳ್ಳ ಕೋವಿಡ್​ ಆರೈಕೆ ಕೇಂದ್ರ ನಿರ್ಮಿಸಲಾಗಿದೆ, ಕೋವಿಡ್​ ಆರೈಕೆಗಾಗಿ 2000ಕ್ಕೂ ಹೆಚ್ಚು ಬೆಡ್​ ಸಾಮರ್ಥ್ಯದ ಆಕ್ಸಿಜನ್​ ಸೇರಿದಂತೆ ಎಲ್ಲಾ ಅಗತ್ಯ ಸೇವೆಗಳನ್ನು ಉಚಿತವಾಗಿ ಒದಗಿಸುತ್ತಿದ್ದೇವೆ


  ಮಿಷನ್​ ಎಂಪ್ಲೋಯ್​ ಕೇರ್​ ಅಡಿ ನಮ್ಮ ಸಂಸ್ಥೆ ನೌಕರರ ಮತ್ತು ಅವರ ಕುಟುಂಬದ ಕಾಳಜಿ ನಡೆಸುತ್ತಿದ್ದೇವೆ. ಲಾಕ್​ಡೌನ್​ ಆರಂಭದಲ್ಲಿ ನಾವು ಮಿಷನ್​ ಅನ್ನ ಸೇವೆ ಆರಂಭಿಸಿದ್ದು, ಅಗತ್ಯವಿರುವವರಿಗೆ ಆಹಾರ ನೀಡುತ್ತಿದ್ದೇವೆ. ಜೊತೆಗೆ ಜಾನಮುವಾರು, ಪ್ರಾಣಿಗಳಿಗೂ ಆಹಾರ ನೀಡಲಾಗುತ್ತಿದೆ,

  Published by:Seema R
  First published: