Forbes List| ಫೋರ್ಬ್ಸ್ ವಿಶ್ವದ ಅತ್ಯುತ್ತಮ ಉದ್ಯೋಗದಾತ ರ‍್ಯಾಂಕಿಂಗ್‌ ಪಟ್ಟಿ 2021ರಲ್ಲಿ ಅಗ್ರಸ್ಥಾನ ಪಡೆದ ರಿಲಯನ್ಸ್ ಇಂಡಸ್ಟ್ರೀಸ್!

ದಕ್ಷಿಣ ಕೊರಿಯಾದ ಟೆಕ್ ದೈತ್ಯ ಸ್ಯಾಮ್‌ಸಂಗ್ ಜಾಗತಿಕ ರ‍್ಯಾಂಕಿಂಗ್ನಲ್ಲಿ ಉನ್ನತ ಸ್ಥಾನದಿಂದ ಖ್ಯಾತಿ ಗಳಿಸಿದರೆ ಅಮೆರಿಕಾ ದೈತ್ಯ ಕಂಪನಿಗಳಾದ ಐಬಿಎಮ್, ಮೈಕ್ರೋಸಾಫ್ಟ್, ಅಮೆಜಾನ್, ಆ್ಯಪಲ್, ಆಲ್ಫಾಬೆಟ್ ಹಾಗೂ ಡೆಲ್ ಟೆಕ್ನಾಲಜೀಸ್ ನಂತರದ ಸ್ಥಾನಗಳನ್ನಲಂಕರಿಸಿವೆ.

ಮುಖೇಶ್ ಅಂಬಾನಿ.

ಮುಖೇಶ್ ಅಂಬಾನಿ.

  • Share this:

2021 ರ ಅತ್ಯುತ್ತಮ ಉದ್ಯೋಗದಾತರ ರ‍್ಯಾಕಿಂಗ್‌ 2021 ರ ಫೋರ್ಬ್ಸ್ (Forbes 2021) ಪ್ರಕಟಿಸಿದ ಪಟ್ಟಿಯಲ್ಲಿ, ಆದಾಯ, ಲಾಭ ಮತ್ತು ಮಾರುಕಟ್ಟೆ ಮೌಲ್ಯದಿಂದ ದೇಶದ ಅತಿದೊಡ್ಡ ಕಂಪನಿಯಾದ ರಿಲಯನ್ಸ್ ಇಂಡಸ್ಟ್ರೀಸ್ (Reliance Industries) ಲಿಮಿಟೆಡ್ ಭಾರತೀಯ ಕಾರ್ಪೋರೇಟ್‌ಗಳ (Corporate) ವಲಯದಲ್ಲಿಯೇ ಅಗ್ರಸ್ಥಾನವನ್ನಲಂ ಕರಿಸಿದೆ. ಫಿಲಿಪ್ಸ್, ಸನೋಫಿ, ಫೈಜರ್ ಮತ್ತು ಇಂಟೆಲ್‌ನಂತಹ 750 ಜಾಗತಿಕ ಕಾರ್ಪೋರೇಟ್‌ಗಳ ಒಟ್ಟಾರೆ ರ‍್ಯಾಂಕಿಂಗ್‌ನಲ್ಲಿ ರಿಲಯನ್ಸ್ 52 ನೇ ಸ್ಥಾನದಲ್ಲಿದೆ. ಫೋರ್ಬ್ಸ್ ರ‍್ಯಾಂಕಿಂಗ್‌ ಪ್ರಕಾರ ICICI (ಐಸಿಐಸಿಐ) ಬ್ಯಾಂಕ್ NSE 2.44 % 65, HDFC (ಎಚ್‌ಡಿಎಫ್‌ಸಿ) ಬ್ಯಾಂಕ್ 77 ಮತ್ತು HCL (ಎಚ್‌ಸಿಎಲ್) ಟೆಕ್ನಾಲಜೀಸ್ ಉನ್ನತ 100 ರ‍್ಯಾಂಕಿಂಗ್‌ಗಳಲ್ಲಿ 90 ಶ್ರೇಯಾಂಕಗಳಲ್ಲಿರುವ ಇತರ ಭಾರತೀಯ ಹೆಸರುಗಳಾಗಿವೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) 119 ಮತ್ತು ಲಾರ್ಸೆನ್ ಮತ್ತು ಟ್ಯೂಬ್ರೊ (Larsen & Toubro) 127 ನೇ ಸ್ಥಾನವನ್ನುಲಂಕರಿಸಿವೆ.


ಇನ್ಫೋಸಿಸ್ (Infosys) 588 ಮತ್ತು ಟಾಟಾ ಗ್ರೂಪ್ (Tata Group) 746 ರ ಸ್ಥಾನ ಪಡೆದಿದೆ. ಜೀವ ವಿಮಾ ನಿಗಮ (LIC) 504 ನೇ ಸ್ಥಾನದಲ್ಲಿದೆ. ಈ ಶ್ರೇಯಾಂಕಗಳನ್ನು ದೀರ್ಘ- ಅವಧಿಯ ಸಮೀಕ್ಷೆಯನ್ನು ಆಧರಿಸಿ ನೀಡಲಾಗಿದ್ದು ಉದ್ಯೋಗಿಗಳು ಹಲವಾರು ಅಂಶಗಳನ್ನು ಪರಿಗಣಿಸಿ ತಮ್ಮ ಉದ್ಯೋಗದಾತರಿಗೆ ಅಂಕಗಳನ್ನು ನೀಡಿದ್ದಾರೆ.


ದಕ್ಷಿಣ ಕೊರಿಯಾದ ಟೆಕ್ ದೈತ್ಯ ಸ್ಯಾಮ್‌ಸಂಗ್ ಜಾಗತಿಕ ರ‍್ಯಾಂಕಿಂಗ್ನಲ್ಲಿ ಉನ್ನತ ಸ್ಥಾನದಿಂದ ಖ್ಯಾತಿ ಗಳಿಸಿದರೆ ಅಮೆರಿಕಾ ದೈತ್ಯ ಕಂಪನಿಗಳಾದ ಐಬಿಎಮ್, ಮೈಕ್ರೋಸಾಫ್ಟ್, ಅಮೆಜಾನ್, ಆ್ಯಪಲ್, ಆಲ್ಫಾಬೆಟ್ ಹಾಗೂ ಡೆಲ್ ಟೆಕ್ನಾಲಜೀಸ್ ನಂತರದ ಸ್ಥಾನಗಳನ್ನಲಂಕರಿಸಿವೆ. ಚೀನಾದ ಹುವಾವೇ ವಿಶ್ವದ 8 ನೇ ಅತ್ಯುತ್ತಮ ಉದ್ಯೋಗದಾತರಾಗಿ ಸ್ಥಾನ ಪಡೆದಿದೆ.


ಬಹುರಾಷ್ಟ್ರೀಯ ಕಂಪನಿಗಳು ಮತ್ತು ಸಂಸ್ಥೆಗಳಿಗಾಗಿ ಕೆಲಸ ಮಾಡುವ 58 ದೇಶಗಳ 1,50,000 ಪೂರ್ಣ ಸಮಯದ ಮತ್ತು ಅರೆಕಾಲಿಕ ಉದ್ಯೋಗಿಗಳನ್ನು ಸಮೀಕ್ಷೆ ನಡೆಸುವ ಮೂಲಕ ಶ್ರೇಯಾಂಕವನ್ನು ಜೋಡಿಸಲು ಮಾರುಕಟ್ಟೆ ಸಂಶೋಧನಾ ಕಂಪನಿ ಸ್ಟಾಟಿಸ್ಟಾ ಜೊತೆ ಪಾಲುದಾರಿಕೆ ಮಾಡಿಕೊಂಡಿದೆ ಎಂದು ಫೋರ್ಬ್ಸ್ ಹೇಳಿದೆ.


ಇದನ್ನೂ ಓದಿ: Sonia Gandhi Reinstates Her Role| ಕಾಂಗ್ರೆಸ್​ ಪಕ್ಷಕ್ಕೆ ಮತ್ತೆ ಸೋನಿಯಾ ಗಾಂಧಿಯೇ ಫುಲ್ ಟೈಮ್ ಅಧ್ಯಕ್ಷೆ; CWC​ ಸಭೆಯಲ್ಲಿ ತೀರ್ಮಾನ!

"ಸಮೀಕ್ಷೆಯಲ್ಲಿ ಭಾಗವಹಿಸಿದವರು ಸ್ನೇಹಿತರು ಮತ್ತು ಕುಟುಂಬಕ್ಕೆ ಶಿಫಾರಸು ಮಾಡಲು ತಮ್ಮದೇ ಸಂಸ್ಥೆಯ ಉದ್ಯೋಗದಾತರನ್ನು ಇಚ್ಛೆಗನುಸಾರವಾಗಿ ರೇಟ್ ಮಾಡಲು ಕೇಳಿಕೊಂಡರು. ಧನಾತ್ಮಕ ಅಥವಾ ಋಣಾತ್ಮಕವಾಗಿ ಎದ್ದು ಕಾಣುವ ತಮ್ಮ ಉದ್ಯಮಗಳಲ್ಲಿ ಇತರ ಉದ್ಯೋಗದಾತರನ್ನು ಮೌಲ್ಯಮಾಪನ ಮಾಡಲು ಸಹ ಅವರನ್ನು ಕೇಳಲಾಯಿತು. ಈ ಪಟ್ಟಿಯು ಅತ್ಯಧಿಕ ಅಂಕಗಳನ್ನು ಪಡೆದ 750 ಕಂಪನಿಗಳಿಂದ ಕೂಡಿದೆ” ಎಂದು ಫೋರ್ಬ್ಸ್ ಹೇಳಿದೆ.


ಸಂಸ್ಥೆಯ ಒಟ್ಟಾರೆ ಚಿತ್ರಣ, ಆರ್ಥಿಕ ಸಾಧನೆ, ಜಾಣ್ಮೆ ಅಭಿವೃದ್ಧಿ, ಲಿಂಗ ಸಮಾನತೆ ಹಾಗೂ ಸಾಮಾಜಿಕ ಜವಬ್ದಾರಿ ಮೊದಲಾದ ಅಂಶಗಳನ್ನು ಆಧರಿಸಿ ಭಾಗವಹಿಸುವವರು ತಮ್ಮ ತಮ್ಮ ಕಂಪನಿಗಳಿಗೆ ಶ್ರೇಯಾಂಕಗಳನ್ನು ನೀಡುವಂತೆ ಕೇಳಲಾಗಿದೆ. 750 ಕಂಪನಿಗಳು ಅಂತಿಮ ಪಟ್ಟಿಯಲ್ಲಿ ಹೆಚ್ಚಿನ ಒಟ್ಟು ಅಂಕಗಳನ್ನು ಪಡೆದಿವೆ ಎಂದು ಫೋರ್ಬ್ಸ್ ತಿಳಿಸಿದೆ. ತೈಲದಿಂದ ರಿಟೇಲ್‌ ಕ್ಷೇತ್ರದವರೆಗೆ ತನ್ನ ವಿಸ್ತಾರವನ್ನು ಹಬ್ಬಿಸಿರುವ ರಿಲಯನ್ಸ್ 2020-21 ರ ಸಾಂಕ್ರಾಮಿಕದ ಸಮಯದಲ್ಲಿ ಸರಿಸುಮಾರು 75,000 ಹೊಸ ಉದ್ಯೋಗಗಳನ್ನು ಸೃಷ್ಟಿಸಿದೆ.


ಇದನ್ನೂ ಓದಿ: Ban on Firecrackers| 'ಪಟಾಕಿ ಮೇಲಿನ ನಿಷೇಧವನ್ನು ಪರಿಶೀಲಿಸಿ'; 4 ರಾಜ್ಯಗಳ ಮುಖ್ಯಮಂತ್ರಿಗಳಿಗೆ ಪತ್ರ ಬರೆದ ಎಂ.ಕೆ. ಸ್ಟಾಲಿನ್!

ಎಲ್ಲಾ ಸಮೀಕ್ಷೆಗಳನ್ನು ಅನಾಮಧೇಯಗೊಳಿಸಿದ್ದು ಭಾಗವಹಿಸುವವರು ಮುಕ್ತವಾಗಿ ತಮ್ಮ ಅಂಕಗಳನ್ನು ನೀಡುವಂತೆ ಅನುಮತಿಸಲಾಯಿತು. ಪಟ್ಟಿಯಲ್ಲಿರುವ ಇತರ ಭಾರತೀಯ ಸಂಸ್ಥೆಗಳಲ್ಲಿ ಬಜಾಜ್ 215, ಆಕ್ಸಿಸ್ ಬ್ಯಾಂಕ್ 254, ಇಂಡಿಯನ್ ಬ್ಯಾಂಕ್ 314, ಆಯಿಲ್ ಮತ್ತು ನ್ಯಾಚುರಲ್ ಗ್ಯಾಸ್ ಕಾರ್ಪ್ (ಒಎನ್ ಜಿಸಿ) 404, ಅಮರ ರಾಜ ಗ್ರೂಪ್ 405, ಕೋಟಕ್ ಮಹೀಂದ್ರಾ ಬ್ಯಾಂಕ್ 418 ಮತ್ತು ಬ್ಯಾಂಕ್ ಆಫ್ ಇಂಡಿಯಾ 451,ಐಟಿಸಿ 453, ಸಿಪ್ಲಾ 460 ಮತ್ತು ಬ್ಯಾಂಕ್ ಆಫ್ ಬರೋಡಾ 496 ನೇ ಸ್ಥಾನಗಳನ್ನು ಪಡೆದುಕೊಂಡಿವೆ.

Published by:MAshok Kumar
First published: