53,125 ಕೋಟಿ ಮೌಲ್ಯದ ಷೇರು ಮಾರಾಟಕ್ಕೆ ಅವಕಾಶ ನೀಡಿದ ರಿಲಾಯನ್ಸ್​

ಟ್ರೇಡಿಂಗ್​ ವೇಳೆ ರಿಲಾಯನ್ಸ್​ ಷೇರುಗಳ ಗರಿಷ್ಠ ಮೌಲ್ಯ 211 ರೂಪಾಯಿ ಹಾಗೂ ಕನಿಷ್ಠ ಮೌಲ್ಯ 158 ರೂಪಾಯಿ ಆಗಿತ್ತು. ಇನ್ನು, 2.4 ಕೋಟಿ ಷೇರುಗಳನ್ನು ಜನರು ಕೊಟ್ಟು-ತೆಗೆದುಕೊಂಡು ಮಾಡಿದ್ದಾರೆ.

ರಿಲಾಯನ್ಸ್

ರಿಲಾಯನ್ಸ್

 • Share this:
  ಮುಂಬೈ (ಮೇ 20): ಷೇರು ಮಾರುಕಟ್ಟೆಯಲ್ಲಿ ರೈಟ್​ ಇಸ್ಯೂಗಾಗಿ ಮಾಡಿದ ಹೊಸ ಫ್ಲಾಟ್​ಫಾರ್ಮ್​ನಲ್ಲಿ ಮುಕೇಶ್​ ಅಂಬಾನಿ ಒಡೆತನದ ರಿಲಾಯನ್ಸ್​ ಇಂಡಸ್ಟ್ರೀಸ್​ ಸಂಸ್ಥೆಯು 53, 125 ಕೋಟಿ ಮೌಲ್ಯದ ಷೇರುಗಳನ್ನು ಮಾರಾಟಕ್ಕೆ ಇಟ್ಟಿದೆ.

  ರಿಲಾಯನ್ಸ್​ ಇಂಡಸ್ಟ್ರೀಸ್​ ಷೇರುಗಳ ಮೂಲ ಬೆಲೆ 1257 ರೂಪಾಯಿ ಆಗಿದೆ. ಆದರೆ, ಮಧ್ಯಾಹ್ನ 1:28ಕ್ಕೆ ಸುಮಾರಿಗೆ ಈ ಷೇರುಗಳು 1429 ರೂಪಾಯಿಗೆ ಮಾರಾಟವಾಗುತ್ತಿತ್ತು. ಅಂದರೆ, ಜನರು ಆರ್​ಐಎಲ್​ ಷೇರುಗಳನ್ನು 172 ರೂಪಾಯಿ ಹೆಚ್ಚುವರಿಯಾಗಿ ನೀಡಿ ಕೊಂಡುಕೊಳ್ಳುತ್ತಿದ್ದಾರೆ.

  ಟ್ರೇಡಿಂಗ್​ ವೇಳೆ ರಿಲಾಯನ್ಸ್​ ಷೇರುಗಳ ಗರಿಷ್ಠ ಮೌಲ್ಯ 211 ರೂಪಾಯಿ ಹಾಗೂ ಕನಿಷ್ಠ ಮೌಲ್ಯ 158 ರೂಪಾಯಿ ಆಗಿತ್ತು. ಇನ್ನು, 2.4 ಕೋಟಿ ಷೇರುಗಳನ್ನು ಜನರು ಕೊಟ್ಟು-ತೆಗೆದುಕೊಂಡು ಮಾಡಿದ್ದಾರೆ. ಈ ಟ್ರೇಡಿಂಗ್​ ಮೇ 29ಕ್ಕೆ ಅಂತ್ಯವಾಗಲಿದೆ.

  ಇದನ್ನೂ ಓದಿ: ಕರ್ನಾಟಕ ರಾಜ್ಯಾದ್ಯಂತ ಅರ್ಧ ದಿನದಲ್ಲಿ 63 ಹೊಸ ಕೇಸ್; ಹಾಸನದಲ್ಲಿ ಅತ್ಯಧಿಕ; ಒಟ್ಟು ಪ್ರಕರಣ 1,458ಕ್ಕೇರಿಕೆ

  ರಿಲಾಯನ್ಸ್​ ಇಂಡಸ್ಟ್ರೀಸ್​ ಷೇರುದಾರರು ಈಗ ಶೇ.25 ಮೊತ್ತ ಅಂದರೆ 314.25 ಹಣವನ್ನು ಪಾವತಿಸಿ ಕಂಪನಿಯ ಷೇರು ಪಡೆಯಬಹುದು. ಉಳಿದ ಬಾಕಿ ಮೊತ್ತವನ್ನು ಮುಂದಿನ ವರ್ಷದ ಮೇ ಹಾಗೂ ನವೆಂಬರ್​ ತಿಂಗಳಲ್ಲಿ ಪಾವತಿಸಬೇಕು.
  First published: