Reliance Industries ಜೊತೆಗೆ ಒಪ್ಪಂದ ಮಾಡಿಕೊಂಡ ಭಾರತೀಯ ಅಥ್ಲೆಟಿಕ್ಸ್‌ ಫೆಡರೇಶನ್‌

ದೇಶಾದ್ಯಂತ ಅಥ್ಲೆಟಿಕ್ಸ್‌ ಅನ್ನು ಪೋಷಿಸುವುದು, ಶೋಧಿಸುವುದು ಮತ್ತು ಅಭಿವೃದ್ಧಿಪಡಿಸಲು ಈ ಪಾಲುದಾರಿಕೆ ನೆರವಾಗುತ್ತದೆ. ಅಲ್ಲದೆ, ವಿಶ್ವ ದರ್ಜೆ ಸೌಲಭ್ಯಗಳು, ಕೋಚಿಂಗ್ ಮತ್ತು ಕ್ರೀಡಾ ವಿಜ್ಞಾನ ಹಾಗೂ ಔಷಧಗಳನ್ನು ಪೂರೈಸುವುದಕ್ಕೆ ಇದು ನೆರವಾಗಲಿದೆ.

ನಿತಾ ಅಂಬಾನಿ

ನಿತಾ ಅಂಬಾನಿ

  • Share this:
    ಮುಂಬೈ, 14 ಜುಲೈ 2022: ಭಾರತದಲ್ಲಿ ಅಥ್ಲೆಟಿಕ್ಸ್‌ (Athletics) ಅಭಿವೃದ್ಧಿಗಾಗಿ ರಿಲಯನ್ಸ್‌ ಇಂಡಸ್ಟ್ರೀಸ್ ಲಿಮಿಟೆಡ್‌ (RIL) ಮತ್ತು ಅಥ್ಲೆಟಿಕ್ಸ್‌ ಫೆಡರೇಶನ್ ಆಫ್ ಇಂಡಿಯಾ (AFI) ದೀರ್ಘಕಾಲೀನ ಒಪ್ಪಂದವನ್ನು ಮಾಡಿಕೊಂಡಿವೆ. ಹಲವು ವರ್ಷಗಳಿಂದಲೂ ಎಎಫ್‌ಐ ಜೊತೆಗೆ ರಿಲಯನ್ಸ್‌ ಫೌಂಡೇಶನ್‌ (Reliance Foundation) ಸಹಭಾಗಿತ್ವ ಹೊಂದಿದ್ದು, ಈ ಒಪ್ಪಂದದಿಂದ ಎರಡೂ ಸಂಸ್ಥೆಗಳು ಇನ್ನಷ್ಟು ತೊಡಗಿಸಿಕೊಳ್ಳಲು ನೆರವಾಗಲಿದೆ. ದೇಶಾದ್ಯಂತ ಅಥ್ಲೆಟಿಕ್ಸ್‌ ಅನ್ನು ಪೋಷಿಸುವುದು, ಶೋಧಿಸುವುದು ಮತ್ತು ಅಭಿವೃದ್ಧಿಪಡಿಸಲು ಈ ಪಾಲುದಾರಿಕೆ ನೆರವಾಗುತ್ತದೆ. ಅಲ್ಲದೆ, ವಿಶ್ವ ದರ್ಜೆ ಸೌಲಭ್ಯಗಳು (World class facilities), ಕೋಚಿಂಗ್ (Coaching) ಮತ್ತು ಕ್ರೀಡಾ ವಿಜ್ಞಾನ (Sports Science) ಹಾಗೂ ಔಷಧಗಳನ್ನು ಪೂರೈಸುವುದಕ್ಕೆ ಇದು ನೆರವಾಗಲಿದೆ. ಒಡಿಶಾ ರಿಲಯನ್ಸ್‌ ಫೌಂಡೇಶನ್‌ ಅಥ್ಲೆಟಿಕ್ಸ್‌ ಹೈ ಪರ್ಫಾರ್ಮೆನ್ಸ್‌ ಸೆಂಟರ್ ಮತ್ತು ಶ್ರೀ ಎಚ್‌ಎನ್‌ ರಿಲಯನ್ಸ್‌ ಫೌಂಡೇಶನ್‌ ಹಾಸ್ಪಿಟಲ್‌ನಂತಹ ರಿಲಯನ್ಸ್‌ ಫೌಂಡೇಶನ್‌ನ ವ್ಯವಸ್ಥೆಗಳನ್ನು ಕ್ರೀಡಾಳುಗಳು ಬಳಸಲು ಇದು ನೆರವಾಗುತ್ತದೆ.

    ಈ ಪಾಲುದಾರಿಕೆ ಅಡಿಯಲ್ಲಿ ಮಹಿಳಾ ಅಥ್ಲೀಟ್‌ಗಳ ಮೇಲೆ ಹೆಚ್ಚಿನ ಗಮನ ಹರಿಸಲಿದೆ ಮತ್ತು ಅಥ್ಲೆಟಿಕ್ಸ್‌ನ ಲಿಂಗ ತಾರತಮ್ಯವನ್ನು ಕಡಿಮೆ ಮಾಡುವ ಉದ್ದೇಶವನ್ನು ಹೊಂದಲಾಗಿದೆ. ಎಎಫ್‌ಐನ ಪ್ರಧಾನ ಪಾಲುದಾರ ರಿಲಯನ್ಸ್‌ ಬ್ರ್ಯಾಂಡ್‌ ಎಲ್ಲ ಪ್ರಮುಖ ರಾಷ್ಟ್ರೀಯ, ಅಂತಾರಾಷ್ಟ್ರೀಯ ಸ್ಫರ್ಧೆಗಳು ಮತ್ತು ತರಬೇತಿ ಕ್ಯಾಂಪ್‌ಗಳಲ್ಲಿ ರಾಷ್ಟ್ರೀಯ ತಂಡದ ಜೆರ್ಸಿಗಳಲ್ಲಿ ಕಾಣಿಸಿಕೊಳ್ಳಲಿದೆ.

    “ರಿಲಯನ್ಸ್‌ ಫೌಂಡೇಶನ್‌ನ ಪಾಲುದಾರಿಕೆಯನ್ನು ಭಾರತೀಯ ಅಥ್ಲೆಟಿಕ್ಸ್‌ ಫೆಡರೇಶನ್‌ ಜೊತೆಗೆ ವಿಸ್ತರಿಸುವುದಕ್ಕೆ ನಾವು ಹೆಮ್ಮೆ ಹೊಂದಿದ್ದೇವೆ. ಜಾಗತಿಕ ಕ್ರೀಡೆಯಲ್ಲಿ ಅಥ್ಲೆಟಿಕ್ಸ್‌ ಎಂಬುದು ಒಂದು ಮಹತ್ವದ ಕ್ರೀಡೆಯಾಗಿದೆ ಮತ್ತು ಯುವ ಪ್ರತಿಭೆಗಳಿಗೆ ವಿಶ್ವ ದರ್ಜೆಯ ಸೌಲಭ್ಯಗಳು ಮತ್ತು ಅವಕಾಶಗಳನ್ನು ಒದಗಿಸುವ ಮೂಲಕ ಭಾರತೀಯ ಅಥ್ಲೆಟಿಕ್ಸ್‌ನ ಪ್ರಗತಿಯ ಉದ್ದೇಶವನ್ನು ಈ ಸಹಭಾಗಿತ್ವವು ಹೊಂದಿದೆ. ಅದರಲ್ಲೂ ವಿಶೇಷವಾಗಿ ಮಹಿಳಾ ಕ್ರೀಡಾಪಟುಗಳ ಮೇಲೆ ಹೆಚ್ಚಿನ ಗಮನ ಹರಿಸಲಾಗುತ್ತದೆ. ಸರಿಯಾದ ಮೂಲಸೌಕರ್ಯ, ತರಬೇತಿ ಮತ್ತು ಬೆಂಬಲದೊಂದಿಗೆ, ವಿಶ್ವಾದ್ಯಂತ ನಮ್ಮ ಇನ್ನಷ್ಟು ಹೆಚ್ಚಿನ ಸಂಖ್ಯೆಯ ಯುವತಿಯರು ಗೆಲುವಿನ ನಗು ಬೀರಲಿದ್ದಾರೆ ಎಂಬ ವಿಶ್ವಾಸವನ್ನು ನಾವು ಹೊಂದಿದ್ದೇವೆ. ಭಾರತದಲ್ಲಿ ಒಲಿಂಪಿಕ್‌ ಚಳವಳಿಯನ್ನು ಇನ್ನಷ್ಟು ಸಬಲಗೊಳಿಸುವ ನಮ್ಮ ಕನಸಿನ ಕಡೆಗೆ ಈ ಪಾಲುದಾರಿಕೆ ಮಹತ್ವದ ಹೆಜ್ಜೆಯಾಗಿರಲಿದೆ” ಎಂದು ರಿಲಯನ್ಸ್‌ ಇಂಡಸ್ಟ್ರೀಸ್ ಲಿಮಿಎಟಡ್‌ನ ನಿರ್ದೇಶಕಿ ಮತ್ತು ಐಒಸಿ ಸದಸ್ಯೆ ನೀತಾ ಎಂ ಅಂಬಾನಿ ಹೇಳಿದ್ದಾರೆ.

    ಇದನ್ನೂ ಓದಿ: Jio, Airtel Best Plans: 100 ರೂಪಾಯಿಗಿಂತ ಕಡಿಮೆ ಬೆಲೆಗೆ ಸಿಗುವ ಬೆಸ್ಟ್ ಪ್ಲಾನ್​ಗಳಿವು



    ಭಾರತೀಯ ಅಥ್ಲೆಟಿಕ್ಸ್‌ ಫೆಡರೇಶನ್‌ನ ಅಧ್ಯಕ್ಷರಾಗಿರುವ ಅಡಿಲ್ಲೆ ಸುಮರಿವಲ್ಲಾ ಹೇಳುವಂತೆ “ಶ್ರೀಮತಿ ನೀತಾ ಅಂಬಾನಿ ಮತ್ತು ರಿಲಯನ್ಸ್‌ ಇಂಡಸ್ಟ್ರೀಸ್‌ಗೆ ನಾವು ತುಂಬಾ ಆಭಾರಿಯಾಗಿದ್ದೇವೆ. ಕಳೆದ ಕೆಲವು ವರ್ಷಗಳಿಂದಲೂ ರಿಲಯನ್ಸ್‌ ಜೊತೆಗೆ ಎಎಫ್‌ಐ ಕೆಲಸ ಮಾಡುತ್ತಿದ್ದು, ಪ್ರಧಾನ ಪಾಲುದಾರನಾಗಿ ಅದು ನಮಗೆ ನೆರವು ನೀಡುತ್ತಿದೆ. ಅಂತಾರಾಷ್ಟ್ರೀಯ ಕಾರ್ಯಕ್ರಮಗಳಲ್ಲಿ ನಮ್ಮ ಅಥ್ಲೀಟ್‌ಗಳು ಭಾಗವಹಿಸುವ ಪ್ರಮಾಣ ಹೆಚ್ಚಳವಾಗುತ್ತಿರುವುದನ್ನು ನಾವು ಗಮನಿಸಿದ್ದೇವೆ ಮತ್ತು ರಿಲಯನ್ಸ್‌ ಇಂಡಸ್ಟ್ರೀಸ್‌ನಂತಹ ಪಾಲುದಾರರ ಮೂಲಕ ಈ ಸಂಖ್ಯೆ ಮುಂದಿನ ದಿನಗಳಲ್ಲಿ ಇನ್ನಷ್ಟು ಹೆಚ್ಚಳವಾಗಲಿದೆ ಎಂಬ ವಿಶ್ವಾಸವನ್ನು ನಾವು ಹೊಂದಿದ್ದೇವೆ” ಎಂದಿದ್ದಾರೆ.

    ಇದನ್ನೂ ಓದಿ: Jio TV: ಪಂಡರಾಪುರದ ವಿಠಲ ರುಕ್ಮಿಣಿ ದೇವಸ್ಥಾನದ ನೇರ ದರ್ಶನ ಈಗ ಜಿಯೋ ಟಿವಿಯಲ್ಲಿ

    ಅಥ್ಲೆಟಿಕ್ಸ್‌ನ ಮೂಲಸೌಕರ್ಯ, ಕೌಶಲ ಅಭಿವೃದ್ಧಿ, ಡಿಜಿಟಲ್‌ ಸಬಲೀಕರಣದ ಮೂಲಕ ಭಾರತೀಯ ಕ್ರೀಡಾ ಮೂಲಸೌಕರ್ಯವನ್ನು ಸುಧಾರಿಸುವ ನಿಟ್ಟಿನಲ್ಲಿ ಎಎಫ್‌ಐ ಸೇರಿದಂತೆ ಹಲವು ಪಾಲುದಾರರೊಂದಿಗೆ ರಿಲಯನ್ಸ್‌ ಫೌಂಡೇಶನ್‌ ನಿಕಟವಾಗಿ ಕೆಲಸ ಮಾಡುತ್ತಿದೆ. ಶ್ರೀಮತಿ ನೀತಾ ಎಂ ಅಂಬಾನಿ ಭಾರತದ ಒಲಿಂಪಿಕ್‌ ಚಳವಳಿಯಲ್ಲಿ ಮುಂಚೂಣಿ ಸ್ಥಾನದಲ್ಲಿದ್ದಾರೆ ಮತ್ತು ಭಾರತದ ಮುಂದಿನ ತಲೆಮಾರಿಗೆ ಕ್ರೀಡಾ ಅವಕಾಶಗಳನ್ನು ಒದಗಿಸುವುದಕ್ಕೆ ಬದ್ಧವಾಗಿದ್ದಾರೆ. 2016 ರಿಂದಲೂ ಐಒಸಿ ಸದಸ್ಯೆಯಾಗಿ ಅವರ ಪಾತ್ರವು ಈ ನಿಟ್ಟಿನಲ್ಲಿ ಅಮೂಲ್ಯವಾದದ್ದಾಗಿದೆ.
    Published by:Harshith AS
    First published: