ಸೌರಶಕ್ತಿಗಾಗಿ ಕಡಿಮೆ-ವೆಚ್ಚದ ತಂತ್ರಜ್ಞಾನ ಹೊಂದಿರುವ NexWafe ಜತೆ RIL ಹೂಡಿಕೆ

ಅಕ್ಟೋಬರ್ 12 ರಂದು RIL ಪ್ರತ್ಯೇಕ ಪ್ರಕಟಣೆಯಲ್ಲಿ ಹೈಡ್ರೋಜನ್ ಎಲೆಕ್ಟ್ರೋಲೈಸರ್‌ಗಳನ್ನು ಅಭಿವೃದ್ಧಿಪಡಿಸಲು ಮತ್ತು ತಯಾರಿಸಲು RNSEL, ಸ್ಟೈಸ್‌ಡಾಲ್ A/S ನೊಂದಿಗೆ ಪಾಲುದಾರಿಕೆ ಮಾಡಿಕೊಂಡಿದೆ ಎಂದು ತಿಳಿಸಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ರಿಲಯನ್ಸ್ ಇಂಡಸ್ಟ್ರೀಸ್‌ನ ಸಂಪೂರ್ಣ ಮಾಲೀಕತ್ವದ ಅಂಗ ಸಂಸ್ಥೆಯಾಗಿರುವ ರಿಲಯನ್ಸ್ ನ್ಯೂ ಎನರ್ಜಿ ಸೋಲಾರ್  (RNESL) ಜರ್ಮನಿಯ ನೆಕ್ಸ್‌ವೇಫ್ GmbHನಲ್ಲಿ 29 ಮಿಲಿಯನ್ ಡಾಲರ್‌ ಹೂಡಿಕೆ ಮಾಡುತ್ತಿದ್ದು RNESL (Reliance New Energy Solar) ಜರ್ಮನ್ ಕಂಪನಿಯ 39 ಮಿಲಿಯನ್ ಯೂರೋಗಳ ಹಣಕಾಸು ಸುತ್ತೋಲೆಯಲ್ಲಿ ಪ್ರಮುಖ ಹೂಡಿಕೆದಾರನಾಗಿರುತ್ತದೆ. ಹೆಚ್ಚು-ದಕ್ಷತೆಯ ಮೋನೋಕ್ರಿಸ್ಟಲೈನ್ ಸಿಲಿಕಾನ್ ವೇಫರ್‌ಗಳನ್ನು ಉತ್ಪಾದಿಸುವ ನೆಕ್ಸ್‌ವೇಫ್‌ನೊಂದಿಗೆ (NexWafe) RIL ಒಪ್ಪಂದ ಮಾಡಿಕೊಂಡಿದ್ದು 86,887 ಸೀರೀಸ್ ಸಿ ಷೇರುಗಳನ್ನು 287.73 ಯೂರೋಗಳಂತೆ ಕಂಪನಿ ಪಡೆಯುತ್ತದೆ ಎಂದು ಹೇಳಿಕೆಯಲ್ಲಿ ತಿಳಿಸಿದೆ. ಅಂಗೀಕರಿಸಿರುವ ಮೈಲಿಗಲ್ಲುಗಳನ್ನು ಸಾಧಿಸಲು 1 ಯೂರೋ ಮೊತ್ತದಂತೆ ಚಲಾಯಿಸಬಹುದಾದ  36,201 ವಾರಂಟ್‌ಗಳನ್ನು ಒದಗಿಸುತ್ತದೆ ಎಂಬುದಾಗಿ ಕಂಪನಿ ಎಕ್ಸ್‌ಚೇಂಜ್ ಫೈಲಿಂಗ್‌ನಲ್ಲಿ ತಿಳಿಸಿದೆ.

ನೆಕ್ಸ್‌ವೇಫ್ ಸ್ವಾಮ್ಯದ ತಂತ್ರಜ್ಞಾನ ಹೊಂದಿದ್ದು ದ್ಯುತಿವಿದ್ಯುಜ್ಜನಕ (PV) ಕೋಶಗಳನ್ನು ಉತ್ಪಾದಿಸುವ ವೆಚ್ಚವನ್ನು ತೀವ್ರವಾಗಿ ಕಡಿಮೆ ಮಾಡುತ್ತದೆ. ತಂತ್ರಜ್ಞಾನವು ಸೌರ ದ್ಯುತಿವಿದ್ಯುಜ್ಜನಕವನ್ನು ನವೀಕರಿಸಬಹುದಾದ ಶಕ್ತಿಯ ಕಡಿಮೆ ವೆಚ್ಚದ ರೂಪವಾಗಿ ಮಾರ್ಪಡಿಸುತ್ತದೆ ಎಂದು ಕಂಪನಿ ತಿಳಿಸಿದೆ.

Reliance To Acquire 40 Stake In Sterling & Wilson Solar
ರಿಲಯನ್ಸ್​ ಇಂಡಸ್ಟ್ರೀಸ್


ಮೋನೋಕ್ರಿಸ್ಟಲೈನ್ ಸಿಲಿಕಾನ್ ವೇಫರ್‌ಗಳನ್ನು ಅಗ್ಗದ ಕಚ್ಚಾವಸ್ತುಗಳಿಂದ ನೇರವಾಗಿ ಅಭಿವೃದ್ಧಿಪಡಿಸುವುದು ಹಾಗೂ ಉತ್ಪಾದಿಸುವುದು ತಂತ್ರಜ್ಞಾನವಾಗಿದ್ದು ಫೈಲಿಂಗ್ ಪ್ರಕಾರ ದುಬಾರಿ ಹಾಗೂ ಶಕ್ತಿಯ ತೀವ್ರ ಸ್ವರೂಪದ ಮಧ್ಯಂತರ ಹಂತಗಳಿಲ್ಲದೆಯೇ ನೇರವಾಗಿ ಅನಿಲ ಹಂತದಿಂದ ಕೊನೆಗೊಂಡ ವೇಫರ್‌ಗಳಿಗೆ ಹೋಗುತ್ತದೆ.

ದೇಶೀಯ ಮತ್ತು ಜಾಗತಿಕ ಮಾರುಕಟ್ಟೆಗಳಿಗೆ ಸೇವೆ ಸಲ್ಲಿಸಲು ಭಾರತದಲ್ಲಿ ಗಿಗಾ-ಸ್ಕೇಲ್ ವೇಫರ್ ಉತ್ಪಾದನಾ ಸೌಲಭ್ಯಗಳನ್ನು ಸ್ಥಾಪಿಸಲು RIL ಉದ್ದೇಶಿಸಿದೆ. ರಿಲಯನ್ಸ್ ಮತ್ತು ನೆಕ್ಸ್‌ವೇಫ್ ಜಂಟಿ ಅಭಿವೃದ್ಧಿ ಮತ್ತು ವಾಣಿಜ್ಯೀಕರಣಕ್ಕಾಗಿ ಭಾರತ ಕಾರ್ಯತಂತ್ರದ ಪಾಲುದಾರಿಕೆ ಒಪ್ಪಂದವನ್ನು ಹೆಚ್ಚಿನ ದಕ್ಷತೆಯ, ಮೋನೋಕ್ರಿಸ್ಟಲೈನ್ "ಹಸಿರು ಸೌರ ವೇಫರ್‌ಗಳ" ಪ್ರಮಾಣದಲ್ಲಿ ಮಾಡಿಕೊಂಡಿವೆ.

ಇದನ್ನೂ ಓದಿ:ADIA-Reliance Retail – ಅಬುಧಾಬಿಯ ಎಡಿಐಎಯಿಂದ ರಿಲಾಯನ್ಸ್ ರೀಟೇಲ್​ನಲ್ಲಿ 5,512 ಕೋಟಿ ರೂ ಹೂಡಿಕೆ

2030ರ ವೇಳೆಗೆ 100 GW ನವೀಕರಿಸಬಹುದಾದ ಇಂಧನವನ್ನು (ಅಥವಾ ರಾಷ್ಟ್ರೀಯ ಗುರಿಯ 22 %) ಉತ್ಪಾದಿಸುವ ಗುರಿ ಸಾಧಿಸುವಲ್ಲಿ RIL ತೆಗೆದುಕೊಂಡಿರುವ ಮತ್ತೊಂದು ಕ್ರಮ ಇದಾಗಿದೆ. ಮುಂದಿನ ಮೂರು ವರ್ಷಗಳಲ್ಲಿ ನವೀಕರಿಸಬಹುದಾದ ಶಕ್ತಿಯಲ್ಲಿ ರಿಲಯನ್ಸ್ 75,000 ಕೋಟಿ ರೂ. ವೆಚ್ಚದಲ್ಲಿ ಗುಜರಾತ್‌ನ ಜಾಮ್‌ನಗರದಲ್ಲಿರುವ ಧೀರೂಭಾಯಿ ಅಂಬಾನಿ ಗ್ರೀನ್ ಎನರ್ಜಿ ಗಿಗಾ ಕಾಂಪ್ಲೆಕ್ಸ್ ಅನ್ನು 5,000 ಎಕರೆ ಪ್ರದೇಶದಲ್ಲಿ ಸ್ಥಾಪಿಸುವ ಉದ್ದೇಶ ಹೊಂದಿದೆ.

ಈ ಸಂಕೀರ್ಣವು ಸೌರ ಶಕ್ತಿಯ ಉತ್ಪಾದನೆಗಾಗಿ ಒಂದು ಸಂಯೋಜಿತ ಸೌರ ದ್ಯುತಿವಿದ್ಯುಜ್ಜನಕ ಮಾಡ್ಯೂಲ್ ಕಾರ್ಖಾನೆ, ಮಧ್ಯಂತರ ಶಕ್ತಿ ಸಂಗ್ರಹಿಸಲು ಸುಧಾರಿತ ಶಕ್ತಿ ಶೇಖರಣಾ ಬ್ಯಾಟರಿ ಕಾರ್ಖಾನೆ, ಹಸಿರು ಹೈಡ್ರೋಜನ್ ಉತ್ಪಾದಿಸಲು ಒಂದು ವಿದ್ಯುದ್ವಿಚ್ಛೇದ್ಯ ಕಾರ್ಖಾನೆ ಮತ್ತು ಹೈಡ್ರೋಜನ್ ಅನ್ನು ಮೋಟಿವ್ ಮತ್ತು ಸ್ಟೇಷನರಿ ಪವರ್ ಆಗಿ ಪರಿವರ್ತಿಸಲು ಇಂಧನ ಕೋಶ ಕಾರ್ಖಾನೆ ಹೊಂದಿದೆ. ಗಿಗಾಫ್ಯಾಕ್ಟರಿಗಳಿಗೆ ಪೂರಕ ವಸ್ತು ಮತ್ತು ಸಲಕರಣೆಗಳನ್ನು ತಯಾರಿಸಲು ಇದು ಮೂಲಸೌಕರ್ಯವನ್ನೂ ಹೊಂದಿದೆ.

ಆರ್‌ಐಎಲ್ ತಮ್ಮ ಶಕ್ತಿ ಮತ್ತು ವಸ್ತುಗಳ ವ್ಯಾಪಾರವನ್ನು ಪರಿವರ್ತಿಸುವ ಪ್ರಕ್ರಿಯೆಯಲ್ಲಿದೆ. ಜೂನ್‌ನಲ್ಲಿ ನಡೆದ ಕಂಪನಿಯ ವಾರ್ಷಿಕ ಸಾಮಾನ್ಯ ಸಭೆಯಲ್ಲಿ, ಕಂಪನಿಯ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ (ಸಿಎಂಡಿ) ಮುಖೇಶ್ ಅಂಬಾನಿ ತಮ್ಮ ಹೊಸ ಇಂಧನ ವ್ಯವಹಾರಕ್ಕಾಗಿ ತಮ್ಮ ಯೋಜನೆಯನ್ನು ವಿವರಿಸಿದ್ದಾರೆ. ಹೈಪರ್-ಇಂಟಿಗ್ರೇಷನ್ ಮೂಲಕ, ವೈಜ್ಞಾನಿಕ ಜ್ಞಾನ ಮತ್ತು ತಾಂತ್ರಿಕ ನಾವೀನ್ಯತೆ ಪಡೆಯುವುದು; ಉತ್ಪಾದನಾ ವೆಚ್ಚದಲ್ಲಿ ಶುದ್ಧ ಶಕ್ತಿಯ ಬೇಡಿಕೆ; ಸ್ವತ್ತುಗಳು ಮತ್ತು ಕಾರ್ಯಾಚರಣೆಗಳ ದಕ್ಷತೆ ಸುಧಾರಿಸುವ ಕಾರ್ಯ ನಡೆಸುವುದು ಮೊದಲಾದ ಯೋಜನೆಗಳನ್ನು ಹಮ್ಮಿಕೊಂಡಿರುವುದಾಗಿ ತಿಳಿಸಿದ್ದಾರೆ.

ಇದನ್ನೂ ಓದಿ: RNESL-Ambri Deal- ಅಮೆರಿಕದ ಆಂಬ್ರಿ ಸಂಸ್ಥೆಯಲ್ಲಿ ರಿಲಾಯನ್ಸ್​ನ RNESL ಹೂಡಿಕೆ

ಅಕ್ಟೋಬರ್ 12 ರಂದು RIL ಪ್ರತ್ಯೇಕ ಪ್ರಕಟಣೆಯಲ್ಲಿ ಹೈಡ್ರೋಜನ್ ಎಲೆಕ್ಟ್ರೋಲೈಸರ್‌ಗಳನ್ನು ಅಭಿವೃದ್ಧಿಪಡಿಸಲು ಮತ್ತು ತಯಾರಿಸಲು RNSEL, ಸ್ಟೈಸ್‌ಡಾಲ್ A/S ನೊಂದಿಗೆ ಪಾಲುದಾರಿಕೆ ಮಾಡಿಕೊಂಡಿದೆ ಎಂದು ತಿಳಿಸಿದೆ. ಸ್ಟೈಸ್‌ಡಾಲ್ ಡ್ಯಾನಿಶ್ ಕಂಪನಿಯಾಗಿದ್ದು, ಹವಾಮಾನ ವೈಪರೀತ್ಯಗಳನ್ನು ತಗ್ಗಿಸುವ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸಿ ವಾಣಿಜ್ಯೀಕರಿಸುತ್ತದೆ.

ಅಕ್ಟೋಬರ್ 10ರಂದು ರಿಲಯನ್ಸ್ ನ್ಯೂ ಎನರ್ಜಿ ಸೋಲಾರ್ ಲಿಮಿಟೆಡ್ (RNESL) ನಾರ್ವೆ ಪ್ರಧಾನ ಕಚೇರಿಯ REC ಸೋಲಾರ್ ಹೋಲ್ಡಿಂಗ್ಸ್ AS (REC ಗ್ರೂಪ್) ನ ಸ್ವಾಧೀನಪಡಿಸಿಕೊಳ್ಳುವಿಕೆಯನ್ನು ಘೋಷಿಸಿತು. ಇದರ ಹೊರತಾಗಿ ಇನ್ನೊಂದು ಒಪ್ಪಂದದಲ್ಲಿ, RNESL ಸ್ಟೆರ್ಲಿಂಗ್ ಮತ್ತು ವಿಲ್ಸನ್ ಸೋಲಾರ್ ಲಿಮಿಟೆಡ್ (SWSL) ನ 40% ಅನ್ನು ಸ್ವಾಧೀನಪಡಿಸಿಕೊಂಡಿದೆ ಎಂದು ಘೋಷಣೆ ಮಾಡಿದೆ.
Published by:Anitha E
First published: