ರಿಲಯನ್ಸ್ ಇಂಡಸ್ಟ್ರೀಸ್ 4ನೇ ತ್ರೈಮಾಸಿಕ ವರದಿ; 6,346 ಕೋಟಿ ರೂಪಾಯಿ ನಿವ್ವಳ ಲಾಭ

ಕೊರೋನಾ ಮಹಾಮಾರಿಯಿಂದಾಗಿ ತೀವ್ರ ಬಿಕ್ಕಟ್ಟು ಎದುರಾಗಿದೆ. ಈ ಮಹಾಸಂಕಷ್ಟದ ಸ್ಥಿತಿಯಲ್ಲಿ ರಿಲಯನ್ಸ್​ ಇಂಡಸ್ಟ್ರಿಸ್ ಮುಖ್ಯ ವ್ಯವಸ್ಥಾಪಕ ನಿರ್ದೇಶಕ ಮುಕೇಶ್ ಅಂಬಾನಿ ಅವರು ತಮ್ಮಿಡೀ ಸಂಬಳವನ್ನೇ ತ್ಯಾಗ ಮಾಡಿದ್ದಾರೆ.

ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್

ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್

 • Share this:
  ರಿಲಯನ್ಸ್ ಇಂಡಸ್ಟ್ರಿಯ ನಾಲ್ಕನೇ ತ್ರೈಮಾಸಿಕ ವರದಿಯ ಅಂಕಿ-ಅಂಶಗಳು ಗುರುವಾರ ಪ್ರಕಟವಾಗಿದ್ದು, ಕಂಪನಿಯೂ 6,346 ಕೋಟಿ ನಿವ್ವಳ ಲಾಭ ಗಳಿಸಿದೆ ಎಂದು ವರದಿ ಹೇಳಿದೆ. ಕಳೆದ ತ್ರೈಮಾಸಿಕಕ್ಕೆ ಹೋಲಿಕೆ ಮಾಡಿದರೆ 4,267 ಕೋಟಿ ನಷ್ಟವಾಗಿದೆ. ಒಟ್ಟು 10,813 ಕೋಟಿ ಹೊಂದಾಣಿಕ ಲಾಭ ಲೆಕ್ಕ ಹಾಕಲಾಗಿತ್ತು. ಸಿಎನ್​ಬಿಸಿ-ಟಿವಿ 18 ಸಮೀಕ್ಷೆ ಕೂಡ 10,721 ಕೋಟಿ ರೂ. ಲಾಭದ ಲೆಕ್ಕಾಚಾರ ಮಾಡಿತ್ತು.

  1.36 ಲಕ್ಷ ಕೋಟಿ ಆದಾಯ ಬಂದಿದ್ದು, ಸಿಎನ್​ಬಿಸಿ-ಟಿವಿ 18 ಸಮೀಕ್ಷೆ 1.47 ಲಕ್ಷ ಕೋಟಿ ಎಂದು ಹೇಳಿತ್ತು. ಇಬಿಐಟಿಡಿಎ 21,782 ಕೋಟಿ ಎಂದು ವರದಿ ಮಾಡಿತ್ತು. ಸಿಎನ್​ಬಿಸಿ-ಟಿವಿ 18 ಸಮೀಕ್ಷೆ 21,356 ಕೋಟಿ ಎಂದು ಹೇಳಿತ್ತು.

  ರಿಲಯನ್ಸ್ ಇಂಡಸ್ಟ್ರಿ ಆಡಳಿತ ಮಂಡಳಿ ಪ್ರತಿ ಷೇರಿಗೆ 1,275 ದರದಲ್ಲಿ ಹಂಚಿಕೆಗೆ ಅನುಮೋದನೆ ನೀಡಿದೆ. ಇದರಿಂದ 53,000 ಕೋಟಿ ರೂ. ಏರಿಕೆಯಾಗಿದೆ.

  ಒಟ್ಟು ರಿಫೈನಿಂಗ್​ನಿಂದ 8.90/ಬಿಬಿಎಲ್​ ಡಾಲರ್ ಬಂದಿದೆ. ಸಿಎನ್​ಬಿಸಿ - ಟಿವಿ 19 ಸಮೀಕ್ಷೆ 7.88/ಬಿಬಿಎಲ್ ಡಾಲರ್ ಎಂದು ಅಂದಾಜಿಸಿತ್ತು.

  ಕೊರೋನಾ ಮಹಾಮಾರಿಯಿಂದಾಗಿ ತೀವ್ರ ಬಿಕ್ಕಟ್ಟು ಎದುರಾಗಿದೆ. ಈ ಮಹಾಸಂಕಷ್ಟದ ಸ್ಥಿತಿಯಲ್ಲಿ ರಿಲಯನ್ಸ್​ ಇಂಡಸ್ಟ್ರಿಸ್ ಮುಖ್ಯ ವ್ಯವಸ್ಥಾಪಕ ನಿರ್ದೇಶಕ ಮುಕೇಶ್ ಅಂಬಾನಿ ಅವರು ತಮ್ಮಿಡೀ ಸಂಬಳವನ್ನೇ ತ್ಯಾಗ ಮಾಡಿದ್ದಾರೆ. ಜೊತೆಗೆ ಆರ್​ಐಎಲ್​ನ ಕಾರ್ಯನಿರ್ವಾಹಕ ನಿರ್ದೇಶಕರು, ಸದಸ್ಯರು ಸೇರಿದಂತೆ ಆಡಳಿತ ಮಂಡಳಿಯ ಎಲ್ಲಾ ನಿರ್ದೇಶಕರು ಏಪ್ರಿಲ್ 1ರಿಂದ ಜಾರಿಗೆ ಬರುವಂತೆ ತಮ್ಮ ಸಂಬಳ-ಭತ್ಯೆಯಲ್ಲಿ ಶೇ. 30ರಿಂದ 50ರಷ್ಟು ತ್ಯಾಗ ಮಾಡಿದ್ದಾರೆ. ಮತ್ತು ವಾರ್ಷಿಕ 15 ಲಕ್ಷಕ್ಕಿಂತ ಹೆಚ್ಚು ಸಂಬಳ ಪಡೆಯುತ್ತಿರುವ ರಿಲಯನ್ಸ್​ನ ಎಲ್ಲ ಉದ್ಯೋಗಿಗಳು ಶೇ. 10ರಷ್ಟು ಸಂಬಳ ಬಿಟ್ಟುಕೊಡಲಿದ್ದಾರೆ.

  ಇದನ್ನು ಓದಿ: ಕೋವಿಡ್-19 ಬಿಕ್ಕಟ್ಟು: ಇಡೀ ಸಂಬಳ ಬಿಟ್ಟುಕೊಟ್ಟ ಅಂಬಾನಿ; 15 ಲಕ್ಷದವರೆಗಿನ ಸಂಬಳದ ಉದ್ಯೋಗಿಗಳಿಗಿಲ್ಲ ವೇತನ ಕಡಿತ

  ಇದನ್ನು ಓದಿ: 4ನೇ ತ್ರೈಮಾಸಿಕದಲ್ಲಿ ಶೇ.177ರಷ್ಟು ಏರಿಕೆ ಕಂಡ ರಿಲಯನ್ಸ್ ಜಿಯೋ; 2331 ಕೋಟಿ ನಿವ್ವಳ ಲಾಭ
  First published: