RIL AGM 2020: ವಾಟ್ಸಾಪ್‌ನಲ್ಲಿ ರಿಲಾಯನ್ಸ್‌ ಇಂಡಸ್ಟ್ರೀಸ್‌ ಚಾಟ್‌ಬಾಟ್‌ ಸಹಾಯಕ; ಕಂಪೆನಿಯ 43ನೇ ವಾರ್ಷಿಕ ಸಭೆಗೆ ವಿಶೇಷ ಕೊಡುಗೆ

ರಿಲಯನ್ಸ್ ಇಂಡಸ್ಟ್ರೀಸ್ “ಎಜಿಎಂ ವಾಟ್ಸಾಪ್ Chatbot‌ ” ಸಹಾಯಕವನ್ನು ಪ್ರವೇಶಿಸಲು ನೀವು +917977111111 ಗೆ“ ಹಾಯ್” ಎಂಬ ಸಂದೇಶವನ್ನು ಕಳುಹಿಸಬೇಕು. ಈ ಸಂಖ್ಯೆಯನ್ನು ನಿಮ್ಮ ಫೋನ್‌ಬುಕ್‌ನಲ್ಲಿ ಉಳಿಸಲು ಮತ್ತು ವಾಟ್ಸಾಪ್‌ನಲ್ಲಿ ಸರಳ ಪ್ರವೇಶಕ್ಕಾಗಿ ಶಿಫಾರಸು ಮಾಡಲಾಗಿದೆ.

news18-kannada
Updated:July 15, 2020, 12:07 PM IST
RIL AGM 2020: ವಾಟ್ಸಾಪ್‌ನಲ್ಲಿ ರಿಲಾಯನ್ಸ್‌ ಇಂಡಸ್ಟ್ರೀಸ್‌ ಚಾಟ್‌ಬಾಟ್‌ ಸಹಾಯಕ; ಕಂಪೆನಿಯ 43ನೇ ವಾರ್ಷಿಕ ಸಭೆಗೆ ವಿಶೇಷ ಕೊಡುಗೆ
ವಾಟ್ಸಾಪ್‌ ಚಾಟ್‌ಬಾಟ್‌.
  • Share this:
ದೇಶದ ಅತಿದೊಡ್ಡ ಉದ್ಯಮವಾದ ರಿಲಾಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಕಂಪನಿಯ ಮೊದಲ ಆನ್‌ಲೈನ್‌ ವಾರ್ಷಿಕ ಸಾಮಾನ್ಯ ಸಭೆಗೆ (ಎಜಿಎಂ) ಕ್ಷಣಗಣನೆ ಆರಂಭವಾಗಿದೆ. ಇದು ರಿಲಾಯನ್ಸ್ ಇಂಡಸ್ಟ್ರೀಸ್‌ನ 43ನೇ ವಾರ್ಷಿಕ ಸಭೆಯಾಗಿದ್ದು, ಈ ಸಭೆಯ ಆರಂಭಕ್ಕೂ ಮುನ್ನ ವರ್ಚುವಲ್ ಈವೆಂಟ್ ಷೇರುದಾರರನ್ನು ಆಕರ್ಷಿಸುವ ಸಲುವಾಗಿ ರಿಲಾಯನ್ಸ್ ಕಂಪೆನಿ ವಾಟ್ಸಾಪ್‌ನಲ್ಲಿ ’Chatbot‌’ ಸಹಾಯಕವನ್ನು ಪ್ರಾರಂಭಿಸಿದೆ.

ಅಂತಾರಾಷ್ಟ್ರೀಯ ಮಟ್ಟದಲ್ಲಿ ವರ್ಚುವಲ್ ಈವೆಂಟ್ ಷೇರುದಾರರು ಸೇರಿದಂತೆ ಜಾಗತಿಕ ಹೂಡಿಕೆದಾರರನ್ನು ಆಕರ್ಷಿಸುವ ಸಲುವಾಗಿ ಈ Chatbot‌ ಅನ್ನು ಪ್ರಾರಂಭಿಸಲಾಗಿದ್ದು, ಇದು ಎಲ್ಲರನ್ನೂ ಆಕರ್ಷಿಸುವ ನಿರೀಕ್ಷೆ ಇದೆ ಎನ್ನಲಾಗುತ್ತಿದೆ.

ಈ ವಾಟ್ಸಾಪ್ Chatbot ಅಸಿಸ್ಟೆಂಟ್ ಅನ್ನು ಷೇರುದಾರರಿಗೆ ಆನ್‌ಬೋರ್ಡಿಂಗ್‌ ಪ್ರಕ್ರಿಯೆಯಲ್ಲಿ ಸಹಾಯ ಮಾಡುವ ಸಲುವಾಗಿಯೇ ವಿನ್ಯಾಸಗೊಳಿಸಲಾಗಿದೆ. ಸಾಮಾನ್ಯವಾಗಿ ಎಫ್ಎಕ್ಯೂ (FAQ)ಗಳು ವರ್ಚುವಲ್ ಎಜಿಎಂಗೆ ಮಾರ್ಗದರ್ಶನ, ನಿರ್ಣಯಗಳ ಮೇಲೆ ಮತದಾನ, ಲಾಭಾಂಶ, ತೆರಿಗೆ ವಿವರಗಳು, ಪ್ರಮುಖ ಲಿಂಕ್‌ಗಳು ಮತ್ತು ದಾಖಲೆಗಳನ್ನು ಹಂಚಿಕೊಳ್ಳಲು ಸಹಾಯ ಮಾಡುತ್ತದೆ. ಬಳಕೆದಾರರು ವಾಟ್ಸಾಪ್ Chatbot‌ ಅಸಿಸ್ಟೆಂಟ್ ಮೂಲಕ FAQ ವೀಡಿಯೊಗಳನ್ನು ಪ್ರವೇಶಿಸಲು ಸಹ ಸಾಧ್ಯವಾಗುತ್ತದೆ ಎಂದು ತಿಳಿಸಲಾಗಿದೆ.

ರಿಲಯನ್ಸ್ ಇಂಡಸ್ಟ್ರೀಸ್ “ಎಜಿಎಂ ವಾಟ್ಸಾಪ್ Chatbot‌ ” ಸಹಾಯಕವನ್ನು ಪ್ರವೇಶಿಸಲು ನೀವು +917977111111 ಗೆ“ ಹಾಯ್” ಎಂಬ ಸಂದೇಶವನ್ನು ಕಳುಹಿಸಬೇಕು. ಈ ಸಂಖ್ಯೆಯನ್ನು ನಿಮ್ಮ ಫೋನ್‌ಬುಕ್‌ನಲ್ಲಿ ಉಳಿಸಲು ಮತ್ತು ವಾಟ್ಸಾಪ್‌ನಲ್ಲಿ ಸರಳ ಪ್ರವೇಶಕ್ಕಾಗಿ ಶಿಫಾರಸು ಮಾಡಲಾಗಿದೆ.

ಈ Chatbot‌ ‌ ಅಸಿಸ್ಟೆಂಟ್ ಅನ್ನು ’ಹಪ್ಟಿಕ್’ ನಡೆಸುತ್ತಿದೆ. ಒಮ್ಮೆ ನೀವು Chatbot‌ ಸಹಾಯಕರಿಗೆ ಕೀವರ್ಡ್ ಕಳುಹಿಸಿದರೆ ನೀವು ತ್ವರಿತ ಸಂದೇಶದ ಮೂಲಕ ಆಯ್ಕೆಗಳ ಮೆನುವನ್ನು ಪಡೆಯುತ್ತೀರಿ. ಅದರಿಂದ ಮುಂದುವರಿಯಲು ನೀವು ಸಂಬಂಧಿತ ಆಯ್ಕೆ ಸಂಖ್ಯೆಯನ್ನು ಆಯ್ಕೆ ಮಾಡಬಹುದು.

ಇದನ್ನೂ ಓದಿ : ರಿಲಾಯನ್ಸ್​ನ ಚೊಚ್ಚಲ ಆನ್​ಲೈನ್ ಎಜಿಎಂ ಸಭೆ; Chatbot ಪ್ರಯೋಗ
ರಿಲಯನ್ಸ್ ಇಂಡಸ್ಟ್ರೀಸ್ ಎಜಿಎಂ ವಾಟ್ಸಾಪ್ Chatbot‌ ಅಸಿಸ್ಟೆಂಟ್ ನಿಮ್ಮ ವಾಟ್ಸಾಪ್ ಬಳಸುವ ಎಲ್ಲಾ ಸಾಧನಗಳಲ್ಲೂ ಮುಕ್ತವಾಗಿ ಲಭ್ಯವಿದೆ. ರಿಲಯನ್ಸ್ ಇಂಡಸ್ಟ್ರೀಸ್ "ಎಜಿಎಂ ವಾಟ್ಸಾಪ್ Chatbot‌ " ಸಹಾಯಕ ಯಾವುದೇ ಪ್ರಶ್ನೆಗಳಿಗೆ 24x7 ಲಭ್ಯವಿರುತ್ತದೆ.
Published by: MAshok Kumar
First published: July 15, 2020, 12:05 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading