Reliance-BP: ರಿಲಾಯನ್ಸ್‌-ಬ್ರಿಟೀಷ್‌ ಪೆಟ್ರೋಲಿಯಂ; ಜಂಟಿ ಇಂಧನ ಉದ್ಯಮ ಆರಂಭಿಸಿದ ಜಾಗತಿಕ ಕಂಪೆನಿಗಳು

RBML ಚಲನಶೀಲತೆ ಮತ್ತು ಕಡಿಮೆ ಇಂಗಾಲದ ಪರಿಹಾರಗಳಲ್ಲಿ ಮುಂಚೂಣಿಯಲ್ಲಿರುವ ಗುರಿಯನ್ನು ಹೊಂದಿದ್ದು, ಡಿಜಿಟಲ್ ಮತ್ತು ತಂತ್ರಜ್ಞಾನವನ್ನು ಹೊಂದಿರುವ ಭಾರತೀಯ ಗ್ರಾಹಕರಿಗೆ ಕೈಗೆಟುಕುವ ಬೆಲೆಯಲ್ಲಿ ಈ ಆಯ್ಕೆಗಳನ್ನು ನೀಡಲಾಗುವುದು ಎಂದು ರಿಲಾಯನ್ಸ್ ಕಂಪೆನಿಯ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಮುಖೇಶ್ ಅಂಬಾನಿ ತಿಳಿಸಿದ್ದಾರೆ.

news18-kannada
Updated:July 9, 2020, 9:08 PM IST
Reliance-BP: ರಿಲಾಯನ್ಸ್‌-ಬ್ರಿಟೀಷ್‌ ಪೆಟ್ರೋಲಿಯಂ; ಜಂಟಿ ಇಂಧನ ಉದ್ಯಮ ಆರಂಭಿಸಿದ ಜಾಗತಿಕ ಕಂಪೆನಿಗಳು
ರಿಲಾಯನ್ಸ್ ಇಂಡಸ್ಟ್ರೀಸ್
  • Share this:
ಮುಂಬೈ (ಜುಲೈ 09) ಇಂಗ್ಲೆಂಡ್ ಮೂಲದ ತೈಲ ಕಂಪೆನಿ 'ದಿ ಬ್ರಿಟೀಷ್ ಪೆಟ್ರೋಲಿಯಂ' (ಬಿಪಿ) ಮತ್ತು ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (ಆ‌ರ್‌ಐಎಲ್‌) ಎರಡೂ ಒಟ್ಟಾಗಿ ಇಂಧನ ಮತ್ತು ಚಲನಶೀಲ ಜಂಟಿ ಉದ್ಯಮವಾಗಿ ರಿಲಯನ್ಸ್-ಬಿಪಿ ಮೊಬಿಲಿಟಿ ಲಿಮಿಟೆಡ್ (RBML) ಅನ್ನು ಪ್ರಾರಂಭಿಸುವುದಾಗಿ ಗುರುವಾರ ಪ್ರಕಟಣೆ ಹೊರಡಿಸಿದೆ.

ಅಧಿಕೃತ ಪ್ರಕಟಣೆಯ ಪ್ರಕಾರ, ಜಂಟಿ ಉದ್ಯಮದಲ್ಲಿ ಶೇ.49 ರಷ್ಟು ಪಾಲನ್ನು ಇಂಗ್ಲೆಂಡ್ ಮೂಲದ ಬಿಪಿ ಕಂಪೆನಿ 1 ಬಿಲಿಯನ್ ಡಾಲರ್ ನೀಡಿ ಖರೀದಿಸಿದರೆ, ಉಳಿದ ಶೇ.51 ರಷ್ಟು ಪಾಲನ್ನು ರಿಲಾಯನ್ಸ್ ತನ್ನಲ್ಲಿಯೇ ಉಳಿಸಿಕೊಂಡಿದೆ. "ಜಿಯೋ-ಬಿಪಿ" ಬ್ರಾಂಡ್ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಈ ಜಂಟಿ ಉದ್ಯಮವು ಭಾರತದ ಇಂಧನಗಳು ಮತ್ತು ಚಲನಶೀಲತೆ ಮಾರುಕಟ್ಟೆಗಳಲ್ಲಿ ಪ್ರಮುಖ ಪಾತ್ರವಹಿಸಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

"ಈ ಜಂಟಿ ಉದ್ಯಮವು ಭಾರತೀಯ ಗ್ರಾಹಕರಿಗೆ ಕಡಿಮೆ ಅನಿಲವನ್ನು ಹೊರಸೂಸುವ ಸುಧಾರಿತ ಇಂಧನದ ವಾಹನ, ಎಲೆಕ್ಟ್ರಿಕ್ ವೆಹಿಕಲ್ ಚಾರ್ಜಿಂಗ್ ಮತ್ತು ಇತರ ಕಡಿಮೆ ಇಂಗಾಲವನ್ನು ಹೊರಸೂಸುವ ವಾಹನಗಳನ್ನು ನೀಡಲು ಪ್ರಯತ್ನಿಸಲಿದೆ.

ಪ್ರಸ್ತುತ 1,400 ಕ್ಕೂ ಹೆಚ್ಚು ಚಿಲ್ಲರೆ ಇಂಧನ ತಾಣಗಳನ್ನು ಹೊಂದಿರುವ RBML ಮುಂದಿನ ಐದು ವರ್ಷಗಳಲ್ಲಿ ಈ ಸಂಖ್ಯೆಯನ್ನು 5,500 ರವರೆಗೆ ವಿಸ್ತರಿಸುವ ಗುರಿ ಹೊಂದಿದೆ. ಮುಂಬರುವ ವರ್ಷಗಳಲ್ಲಿ ತನ್ನ ಅಸ್ತಿತ್ವವನ್ನು 30 ರಿಂದ 45 ವಿಮಾನ ನಿಲ್ದಾಣಗಳಿಗೆ ಹೆಚ್ಚಿಸುವ ಗುರಿಯನ್ನು ಸಹ ಇದು ಹೊಂದಿದೆ" ಎಂದು ಪ್ರಕಟಣೆ ತಿಳಿಸಿದೆ.

"ಚಿಲ್ಲರೆ ಮತ್ತು ವಾಯುಯಾನ ಇಂಧನ ವಿಭಾಗಗಳಲ್ಲಿ ಪ್ಯಾನ್-ಇಂಡಿಯನ್ ಉಪಸ್ಥಿತಿಯನ್ನು ಸ್ಥಾಪಿಸುವ ಸಲುವಾಗಿ ರಿಲಯನ್ಸ್ ಕಂಪೆನಿ ಬ್ರಟೀಷ್ ಪೆಟ್ರೋಲಿಯಂ ಜೊತೆಗೆ ತನ್ನ ಮೌಲ್ಯಯುತವಾದ ಪಾಲುದಾರಿಕೆಯನ್ನು ವಿಸ್ತರಿಸುತ್ತಿದೆ.

RBML ಚಲನಶೀಲತೆ ಮತ್ತು ಕಡಿಮೆ ಇಂಗಾಲದ ಪರಿಹಾರಗಳಲ್ಲಿ ಮುಂಚೂಣಿಯಲ್ಲಿರುವ ಗುರಿಯನ್ನು ಹೊಂದಿದ್ದು, ಡಿಜಿಟಲ್ ಮತ್ತು ತಂತ್ರಜ್ಞಾನವನ್ನು ಹೊಂದಿರುವ ಭಾರತೀಯ ಗ್ರಾಹಕರಿಗೆ ಕೈಗೆಟುಕುವ ಬೆಲೆಯಲ್ಲಿ ಈ ಆಯ್ಕೆಗಳನ್ನು ನೀಡಲಾಗುವುದು" ಎಂದು ರಿಲಾಯನ್ಸ್ ಕಂಪೆನಿಯ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಮುಖೇಶ್ ಅಂಬಾನಿ ತಿಳಿಸಿದ್ದಾರೆ.

2011 ರಲ್ಲಿ ಬ್ರಟೀಷ್ ಪೆಟ್ರೋಲಿಯಂ ಕಂಪೆನಿಯು ತನ್ನ ಕೆಲವು ಪರಿಶೋಧನಾ ವಿಭಾಗಗಳಲ್ಲಿ ರಿಲಾಯನ್ಸ್‌ನಿಂದ ಶೇ.30 ರಷ್ಟು ಪಾಲನ್ನು ಪಡೆದುಕೊಂಡಿತ್ತು ಮತ್ತು ಗ್ಯಾಸ್ ಸೋರ್ಸಿಂಗ್, ಮಾರ್ಕೆಟಿಂಗ್ ಟೈ-ಅಪ್ ಅನ್ನು ರೂಪಿಸಿತ್ತು.ಇದನ್ನೂ ಓದಿ : ಕೋಲಾರದಲ್ಲಿ ತಹಶೀಲ್ದಾರ್‌ ಕೊಲೆ; ಜಮೀನು ವ್ಯಾಜ್ಯಕ್ಕೆ ಬಿತ್ತು ಸರ್ಕಾರಿ ಅಧಿಕಾರಿಯ ಹೆಣ

ಹೀಗಾಗಿ 2017 ರಲ್ಲಿ ಎರಡು ಕಂಪನಿಗಳು ಪರ್ಯಾಯ ಇಂಧನಗಳು ಮತ್ತು ಚಲನಶೀಲತೆ ವ್ಯವಹಾರಗಳನ್ನು ಅಭಿವೃದ್ಧಿಪಡಿಸುವ ಸಲುವಾಗಿ ಒಟ್ಟಾಗಿ ಕೆಲಸ ಮಾಡುವ ಕುರಿತ ಒಪ್ಪಂದಗಳಿಗೆ ಸಹಿ ಹಾಕಿದವು. ನಂತರ 2019 ರಲ್ಲಿ ಎರಡು ಕಂಪನಿಗಳು ಜಂಟಿ ಉದ್ಯಮವನ್ನು ಘೋಷಿಸಿದವು. ಆದರೆ, ಈ ಉದ್ಯಮ ಈಗ ಕಾರ್ಯರೂಪಕ್ಕೆ ಬಂದಿರುವುದು ಉಲ್ಲೇಖಾರ್ಹ.
Published by: MAshok Kumar
First published: July 9, 2020, 9:05 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading