Reliance Jio: ವಿಶ್ವದ ಅಮೂಲ್ಯ ಸಂಸ್ಥೆಗಳ ಲೀಗ್‌ನ ಅಗ್ರ 40 ಸ್ಥಾನವನ್ನು ಪ್ರವೇಶಿಸಿದ ರಿಲಾಯನ್ಸ್‌

2020 ರ ಜೂನ್ 19 ರಂದು ರಿಲಯನ್ಸ್ 150 ಬಿಲಿಯನ್ ಯುಎಸ್ ಮಾರುಕಟ್ಟೆ ಬಂಡವಾಳವನ್ನು ಸಂಗ್ರಹಿಸಿತ್ತು. ಅಂದರೆ ಕಳೆದ 60 ದಿನಗಳಲ್ಲಿ ರಿಲಾಯನ್ಸ್ ಮಾರುಕಟ್ಟೆ ಮೌಲ್ಯ 60 ಬಿಲಿಯನ್ ಯುಎಸ್ ಡಾಲರ್ ಏರಿಕೆ ಕಂಡಂತಾಗಿದೆ.

ಮುಖೇಶ್‌ ಅಂಬಾನಿ.

ಮುಖೇಶ್‌ ಅಂಬಾನಿ.

 • Share this:
  ಮುಂಬೈ (ಸೆಪ್ಟೆಂಬರ್ 10); ಮುಖೇಶ್ ಅಂಬಾನಿ ನೇತೃತ್ವದ ರಿಲಾಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (ಆರ್‌ಐಎಲ್‌) ವಿಶ್ವದ ಅಮೂಲ್ಯ ಸಂಸ್ಥೆಗಳ ಲೀಗ್‌ನ ಅಗ್ರ 40 ಸ್ಥಾನವನ್ನು ಪ್ರವೇಶಿಸಿದೆ. ಅಲ್ಲದೆ 210 ಬಿಲಿಯನ್ ಅಮೆರಿಕನ್ ಡಾಲರ್‌ನಷ್ಟು ಮಾರುಕಟ್ಟೆ ಮೌಲ್ಯವನ್ನು ಹೊಂದಿರುವ ಮೊದಲ ಭಾರತೀಯ ಕಂಪೆನಿ ಎಂಬ ಹಿರಿಮೆಗೂ ರಿಲಾಯನ್ಸ್ ಪಾತ್ರವಾಗಿದೆ. ಗುರುವಾರದ ಷೇರು ಮಾರುಕಟ್ಟೆಯಲ್ಲಿ ಆರ್‌ಐಎಲ್‌ ಸ್ಕ್ರಿಪ್ಟ್ ರೋಸ್ ಸಾರ್ವಕಾಲಿಕ ದಾಖಲೆಯ ಗರಿಷ್ಠ 2,344.95 ಮಟ್ಟವನ್ನು ತಲುಪಿತ್ತು. ಇನ್ನೂ ಎನ್ಎಸ್ಇ ಇಂಟ್ರಾ ಸಹ ದಾಖಲೆಯ ಏರಿಕೆ ಕಂಡಿದ್ದು, 2,319 ರೂ ಗೆ ತನ್ನ ದಿನದ ವಹಿವಾಟನ್ನು ಮುಗಿಸಿದ್ದು ಶೇ. 7.29 ರಷ್ಟು ಲಾಭವನ್ನು ದಾಖಲಿಸಿತ್ತು.

  ರಿಲಾಯನ್ಸ್ ಪಿಪಿ ಸ್ಕ್ರಿಪ್ಟ್ ಎನ್ಎಸ್ಇಯಲ್ಲಿ ಶೇ.10 ರಷ್ಟು ಹೆಚ್ಚುವರಿ ಗಳಿಕೆ ಸಾಧಿಸುವ ಮೂಲಕ ಮಾರುಕಟ್ಟೆ ವಹಿವಾಟು ಅಂತ್ಯದ ವೇಳೆಗೆ ಸಾರ್ವಕಾಲಿಕ 1,393.7 ಕ್ಕೆ ತಲುಪಿದೆ. ಪರಿಣಾಮ ರಿಲಾಯನ್ಸ್ ಕಂಪನಿಯ ಮಾರುಕಟ್ಟೆಯ ಒಟ್ಟು ಬಂಡವಾಳೀಕರಣ 15.45 ಲಕ್ಷ ಕೋಟಿ ರೂ.ಗೆ ಅಥವಾ 210 ಬಿಲಿಯನ್ ಯುಎಸ್ ಡಾಲರ್‌ಗೆ ಏರಿದಂತಾಗಿದೆ ಎಂದು ಮಾರುಕಟ್ಟೆ ತಜ್ಞರು ಮಾಹಿತಿ ನೀಡಿದ್ದಾರೆ.

  ಮಾರುಕಟ್ಟೆ ಮುಕ್ತಾಯದ ಸಮಯದಲ್ಲಿ, ಆರ್‌ಐಎಲ್‌ಎಂ-ಕ್ಯಾಪ್ 208.3 ಬಿಲಿಯನ್ ಯುಎಸ್ ಡಾಲರ್ ಆಗಿದೆ. ಮಾರುಕಟ್ಟೆ ವಿಶ್ಲೇಷಕರ ಪ್ರಕಾರ, ಯಾವುದೇ ಭಾರತೀಯ ಕಂಪನಿಯು 200 ಬಿಲಿಯನ್ ಯುಎಸ್ ಮಾರುಕಟ್ಟೆ ಬಂಡವಾಳೀಕರಣದ ಮೈಲಿಗಲ್ಲು ದಾಟಿರುವುದು ಇದೇ ಮೊದಲು ಎನ್ನಲಾಗುತ್ತಿದೆ.

  ಮಾರುಕಟ್ಟೆ ವಿಶ್ಲೇಷಕರ ಪ್ರಕಾರ ರಿಲಯನ್ಸ್ ಇಂಡಸ್ಟ್ರೀಸ್ ಪ್ರಸ್ತುತ ವಿಶ್ವದ 40 ನೇ ಅಮೂಲ್ಯ ಸಂಸ್ಥೆಯಾಗಿದ್ದು, ಎಕ್ಸಾನ್ ಮೊಬಿಲ್, ಪೆಪ್ಸಿಕೋ, ಎಸ್ಎಪಿ, ಒರಾಕಲ್, ಫಿಜರ್ ಮತ್ತು ನೊವಾರ್ಟಿಸ್ ಸೇರಿದಂತೆ ಹಲವು ಕಂಪನಿಗಳನ್ನು ಹಿಂದಿಕ್ಕಿ ಮುಂದಕ್ಕೆ ಚಲಿಸಿದೆ. ಅಲ್ಲದೆ, ಆರ್‌ಐಎಲ್‌ ಏಷ್ಯಾದ ಟಾಪ್ 10 ಅತ್ಯಮೂಲ್ಯ ಕಂಪನಿಗಳಲ್ಲಿ ಒಂದಾಗಿಯೂ ಗುರುತಿಸಿಕೊಂಡಿದೆ.

  ಇದನ್ನೂ ಓದಿ : ಭಿನ್ನಲಿಂಗೀಯರಂತೆಯೇ 8 ವರ್ಷ ಜೊತೆಗೆ ವಾಸಿಸಿದ್ದ ಸಲಿಂಗಿ ದಂಪತಿಗಳು; ಶವ ಪರೀಕ್ಷೆಯ ನಂತರ ಸತ್ಯ ಬಹಿರಂಗ

  ರಿಲಯನ್ಸ್ ಪಿಪಿ ಅಥವಾ ಇತ್ತೀಚೆಗೆ ಮುಕ್ತಾಯಗೊಂಡ ಹಕ್ಕುಗಳ ಸಂಚಿಕೆಯಲ್ಲಿ ನೀಡಲಾದ ಭಾಗಶಃ ಪಾವತಿಸಿದ ಷೇರುಗಳು ಕೇವಲ ಮೂರು ತಿಂಗಳಲ್ಲಿ 4.4 ಪಟ್ಟು ಹೆಚ್ಚಾಗಿದೆ. ಈ ಸಂಚಿಕೆ 2020 ರ ಜೂನ್ 4 ರಂದು ಮುಕ್ತಾಯಗೊಂಡಿತು. ಅಲ್ಲಿ ಹೂಡಿಕೆದಾರರು ಭಾಗಶಃ ಪಾವತಿಸಿದ ಪ್ರತಿ ಪಾಲನ್ನು ಹೊಂದಲು 314.25 ರೂ. ಪಾವತಿಸಿದ್ದಾರೆ.

  2020 ರ ಜೂನ್ 19 ರಂದು ರಿಲಯನ್ಸ್ 150 ಬಿಲಿಯನ್ ಯುಎಸ್ ಮಾರುಕಟ್ಟೆ ಬಂಡವಾಳವನ್ನು ಸಂಗ್ರಹಿಸಿತ್ತು. ಅಂದರೆ ಕಳೆದ 60 ದಿನಗಳಲ್ಲಿ ರಿಲಾಯನ್ಸ್ ಮಾರುಕಟ್ಟೆ ಮೌಲ್ಯ 60 ಬಿಲಿಯನ್ ಯುಎಸ್ ಡಾಲರ್ ಏರಿಕೆ ಕಂಡಂತಾಗಿದೆ.
  Published by:MAshok Kumar
  First published: