150 ಬಿಲಿಯನ್ ಡಾಲರ್​ ಮಾರುಕಟ್ಟೆ ಮೌಲ್ಯ ಹೆಚ್ಚಿಸಿಕೊಂಡ ಭಾರತದ ಮೊದಲ ಕಂಪನಿ ರಿಲಯನ್ಸ್ ಇಂಡಸ್ಟ್ರೀಸ್

ಆರ್​ಐಎಲ್​ನಲ್ಲಿ ಭಾರೀ ಪ್ರಮಾಣದ ಜಾಗತಿಕ ಹೂಡಿಕೆಯಿಂದಾಗಿ ಕಂಪನಿ ಸಾಲಮುಕ್ತವಾಗಿದ ಎಂದು ಆರ್​ಐಎಲ್​ ಹೇಳಿದೆ. ಸೌದಿ ಆರೇಬಿಯಾದ ಪಬ್ಲಿಕ್ ಇನ್ವೆಸ್ಟ್​ಮೆಂಟ್ ಫಂಡ್ (ಪಿಐಎಫ್) 11,367 ಕೋಟಿ ರೂ. ಹೂಡಿಕೆಯೊಂದಿಗೆ ಶೇ.2.32 ಷೇರು ಖರೀದಿಸಿದೆ ಎಂದು ಗುರುವಾರ ಕಂಪನಿ ಹೇಳಿತ್ತು.

ಮುಖೇಶ್​ ಅಂಬಾನಿ

ಮುಖೇಶ್​ ಅಂಬಾನಿ

 • Share this:
  ರಿಲಾಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್​ನ ಮಾರುಕಟ್ಟೆ ಮೌಲ್ಯ ಸೋಮವಾರ 150 ಬಿಲಿಯನ್ ಡಾಲರ್ ತಲುಪುವುದರೊಂದಿಗೆ ಭಾರತದ ಮೊದಲ ಕಂಪನಿ ಈ ಸಾಧನೆ ಮಾಡಿದ ಹೆಗ್ಗಳಿಕೆಗೆ ಪಾತ್ರವಾಗಿದೆ.

  ಸೋಮವಾರ ಬೆಳಗ್ಗೆ ಷೇರು ವಹಿವಾಟಿನಲ್ಲಿ ಕಂಪನಿಯ ಮಾರುಕಟ್ಟೆ ಮೌಲ್ಯ 28,248.97 ಕೋಟಿಯಿಂದ 11,43,667 ಕೋಟಿ ರೂಪಾಯಿಗೆ (150 ಬಿಲಿಯನ್ ಡಾಲರ್) ತಲುಪಿತು.

  ಬಿಎಸ್​ಇಯಲ್ಲಿ ಗರಿಷ್ಠ ಷೇರು ಶೇ.2.53ರಷ್ಟು ಏರಿಕೆಯೊಂದಿಗೆ ದಾಖಲೆಯ 1,804.10 ರೂಪಾಯಿಗೆ ಏರಿಕೆ ಕಂಡಿತು. ಎನ್‌ಎಸ್‌ಇಯಲ್ಲಿ ಇದು ಶೇಕಡಾ 2.54 ರಷ್ಟು ಏರಿಕೆಯಾಗಿ ಸಾರ್ವಕಾಲಿಕ ಗರಿಷ್ಠ 1,804.20 ರೂ.ಗೆ ತಲುಪಿದೆ. ರಿಲಯನ್ಸ್ ಇಂಡಸ್ಟ್ರೀಸ್ ಶುಕ್ರವಾರ 11 ಲಕ್ಷ ಕೋಟಿ ರೂ.ಗಳ ಮಾರುಕಟ್ಟೆ ಮೌಲ್ಯವನ್ನು ದಾಟಿದ ಮೊದಲ ಭಾರತೀಯ ಕಂಪನಿಯಾಗಿದೆ.


  ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಅಧ್ಯಕ್ಷ ಮುಕೇಶ್ ಅಂಬಾನಿ ಅವರು ತಮ್ಮ ತೈಲ ಉದ್ಯಮದಿಂದ ದೂರಸಂಪರ್ಕ ಉದ್ಯಮದ ನಿವ್ವಳ ಸಾಲ ಮುಕ್ತವಾಗಿದೆ ಎಂದು ಘೋಷಿಸಿದ ನಂತರ ಕಂಪನಿಯ ಮಾರುಕಟ್ಟೆ ಮೌಲ್ಯ 11 ಲಕ್ಷ ಕೋಟಿ ರೂ. ದಾಟಿದೆ.

  ಕಳೆದ ಎರಡು ತಿಂಗಳಲ್ಲಿ ಜಾಗತಿಕ ಹೂಡಿಕೆದಾರರಿಂದ ಹೂಡಿಕೆ ಮತ್ತು ಹಕ್ಕು ವಿಷಯವಾಗಿ ಕಂಪನಿಯಲ್ಲಿ 1.69 ಲಕ್ಷ ಏರಿಕೆಯಾಗಿತ್ತು. ಇದರೊಂದಿಗೆ ರಿಲಯನ್ಸ್ ಇಂಡಸ್ಟ್ರೀಸ್ ನಿವ್ವಳ ಸಾಲ ಮುಕ್ತವಾಗಿದೆ ಎಂದು ಅಧ್ಯಕ್ಷ ಮುಖೇಶ್ ಅಂಬಾನಿ ಅವರು ಘೋಷಿಸಿದ್ದರು.

  ಜಿಯೋ ಡಿಜಿಟಲ್ ಪ್ಲಾಟ್​ಫಾರಂನಲ್ಲಿ ಒಂದು ತ್ರೈಮಾಸಿಕಕ್ಕಿಂತ ಕಡಿಮೆ ಅವಧಿಯಲ್ಲಿ ಜಾಗತಿಕ ಟೆಕ್ ಹೂಡಿಕೆದಾರರಿಂದ 1.15 ಲಕ್ಷ ಹೂಡಿಕೆಯಾಗಿದೆ. ಮತ್ತು ಕಳೆದ 58 ದಿನಗಳ ಅವಧಿಯಲ್ಲಿ ಹಕ್ಕು ವಿಷಯವಾಗಿ 53,124.20 ಕೋಟಿ ಬಂದಿದೆ.

  ಕಳೆದ ವರ್ಷ ಇಂಧನ ಚಿಲ್ಲರೆ ವ್ಯಾಪಾರದಲ್ಲಿ ಶೇ.49ರಷ್ಟು ಪಾಲನ್ನು ಯುಕೆ ಬಿಪಿ ಪಿಎಲ್‌ಸಿಗೆ 7,000 ಕೋಟಿ ರೂ.ಗೆ ಮಾರಾಟ ಮಾಡಿದ್ದು, ಒಟ್ಟು ಸಂಗ್ರಹಿಸಿದ ನಿಧಿ 1.75 ಲಕ್ಷ ಕೋಟಿ ರೂ.ಗಳಿಗಿಂತ ಹೆಚ್ಚಿದೆ ಎಂದು ಕಂಪನಿ ತಿಳಿಸಿದೆ. ರಿಲಯನ್ಸ್ ಇಂಡಸ್ಟ್ರೀಸ್ 2020 ಮಾರ್ಚ್ 31ರಲ್ಲಿ 1,61,035 ಕೋಟಿ ರೂ. ಸಾಲ ಹೊಂದಿತ್ತು.

  ಇದನ್ನು ಓದಿ: ನಿಗದಿ ಪಡಿಸಿದ ಅವಧಿಗೂ ಮೊದಲೇ ಸಾಲಮುಕ್ತಗೊಂಡ ರಿಲಾಯನ್ಸ್​; ಮುಖೇಶ್ ಅಂಬಾನಿ ಘೋಷಣೆ

  ಆರ್​ಐಎಲ್​ನಲ್ಲಿ ಭಾರೀ ಪ್ರಮಾಣದ ಜಾಗತಿಕ ಹೂಡಿಕೆಯಿಂದಾಗಿ ಕಂಪನಿ ಸಾಲಮುಕ್ತವಾಗಿದ ಎಂದು ಆರ್​ಐಎಲ್​ ಹೇಳಿದೆ. ಸೌದಿ ಆರೇಬಿಯಾದ ಪಬ್ಲಿಕ್ ಇನ್ವೆಸ್ಟ್​ಮೆಂಟ್ ಫಂಡ್ (ಪಿಐಎಫ್) 11,367 ಕೋಟಿ ರೂ. ಹೂಡಿಕೆಯೊಂದಿಗೆ ಶೇ.2.32 ಷೇರು ಖರೀದಿಸಿದೆ ಎಂದು ಗುರುವಾರ ಕಂಪನಿ ಹೇಳಿತ್ತು. ಹಲವು ವರ್ಷಗಳ ಬಳಿಕ ಈ ವರ್ಷ ಕಂಪನಿಯ ಷೇರು ಶೇ.19ರಷ್ಟು ಹೆಚ್ಚಾಗಿದೆ.
  First published: