HOME » NEWS » National-international » RELIANCE INDUSTRIES ANNOUNCES RS 500 CRORE CONTRIBUTION TO PM CARES FUND RH

ರಿಲಯನ್ಸ್​ನಿಂದ ಪ್ರಧಾನಮಂತ್ರಿ ಕೊರೋನಾ ನಿಧಿಗೆ 500 ಕೋಟಿ ರೂಪಾಯಿ ದೇಣಿಗೆ

ಈ ಸಂಬಂಧ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್, ಪ್ರಧಾನಮಂತ್ರಿ ಕೊರೋನಾ ನಿಧಿಗೆ 500 ಕೋಟಿ ಜೊತೆಗೆ ಇತರೆ ರಾಜ್ಯಗಳಿಗೂ ಪ್ರತ್ಯೇಕವಾಗಿ ದೇಣಿಗೆ ನೀಡಿದೆ.

news18-kannada
Updated:March 30, 2020, 9:07 PM IST
ರಿಲಯನ್ಸ್​ನಿಂದ ಪ್ರಧಾನಮಂತ್ರಿ ಕೊರೋನಾ ನಿಧಿಗೆ 500 ಕೋಟಿ ರೂಪಾಯಿ ದೇಣಿಗೆ
ಮುಖೇಶ್​​ ಅಂಬಾನಿ
  • Share this:
ನವದೆಹಲಿ: ಮಾರಕ ಕೊರೋನಾ ಸೋಂಕು ನಿಯಂತ್ರಣಕ್ಕೆ ಬಾರದೆ ದಿನದಿಂದ ದಿನಕ್ಕೆ  ತನ್ನ ಕರಾಳ ನರ್ತನ ತೋರುತ್ತಿದೆ. ಮಾರಕ ಸೋಂಕು ತಡೆಗೆ ಈಗಾಗಲೇ ಉದ್ಯಮಿಗಳು, ಸಿನಿಮಾ ನಟರು ತಮ್ಮ ಕೈಲಾದ ಆರ್ಥಿಕ ನೆರವು ನೀಡುತ್ತಿದ್ದಾರೆ. ಅದರಂತೆ ರಿಲಯನ್ಸ್​ ಇಂಡಸ್ಟ್ರೀಸ್ ಲಿಮಿಟೆಡ್​ನಿಂದ ಪ್ರಧಾನಮಂತ್ರಿ ಪರಿಹಾರ ನಿಧಿಗೆ 500 ಕೋಟಿ ರೂಪಾಯಿ ದೇಣಿಗೆ ನೀಡಿದೆ.

ಈ ಸಂಬಂಧ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್, ಪ್ರಧಾನಮಂತ್ರಿ ಕೊರೋನಾ ನಿಧಿಗೆ 500 ಕೋಟಿ ಜೊತೆಗೆ ಇತರೆ ರಾಜ್ಯಗಳಿಗೂ ಪ್ರತ್ಯೇಕವಾಗಿ ದೇಣಿಗೆ ನೀಡಿದೆ.

ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟಡ್​ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಮುಖೇಶ್ ಅಂಬಾನಿ ಮಾತನಾಡಿ, ಕೊರೋನಾ ವೈರಸ್​ ಬಿಕ್ಕಟ್ಟಿನಿಂದ ದೇಶದ ಶೀಘ್ರದಲ್ಲಿ ಹೊರಬರಲಿದೆ ಎಂಬ ವಿಶ್ವಾಸವಿದೆ. ಇಂತಹ ಬಿಕ್ಕಟ್ಟಿನ ಸಮಯದಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್​ ಇಡೀ ಕುಟುಂಬ ರಾಷ್ಟ್ರದ ಜೊತೆಗೆ ಇದೆ ಕೋವಿಡ್-19 ವಿರುದ್ಧದ ಯುದ್ಧದಲ್ಲಿ ಗೆಲವಿಗಾಗಿ ಮಾಡಬೇಕಾದ ಎಲ್ಲ ಕೆಲಸವನ್ನು ಮಾಡಲಾಗುವುದು ಎಂದು ಹೇಳಿದರು.

ರಿಲಾಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್​ನ ಪತ್ರಿಕಾ ಪ್ರಕಟಣೆ.


ರಿಲಾಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್​ನ ಪತ್ರಿಕಾ ಪ್ರಕಟಣೆ.


ರಿಲಯನ್ಸ್ ಇಂಡಿಸ್ಟ್ರೀಸ್​ ಕೊಡುಗೆಗಳು
  • ಪ್ರಧಾನಮಂತ್ರಿ ಪರಿಹಾರ ನಿಧಿಗೆ 500 ಕೋಟಿ ರೂಪಾಯಿ

  • ಮಹಾರಾಷ್ಟ್ರ ಮುಖ್ಯಮಂತ್ರಿ ಪರಿಹಾರ ನಿಧಿಗೆ 5 ಕೋಟಿ ರೂ.

  • ಗುಜರಾತ್ ಪರಿಹಾರ ನಿಧಿಗೆ 5 ಕೋಟಿ ರೂ.

  • ಕೋವಿಡ್​-19 ಚಿಕಿತ್ಸೆಗಾಗಿ ಎರಡು ವಾರದಲ್ಲಿ ನೂರು ಬೆಡ್​ಗಳ ಸೌಕರ್ಯವುಳ್ಳ ವಿಶೇಷ ಆಸ್ಪತ್ರೆ ನಿರ್ಮಾಣ

  • ದೇಶಾದ್ಯಂತ ಮುಂದಿನ ಹತ್ತು ದಿನಗಳ ಕಾಲ ಬಡವರಿಗೆ ಊಟ ನೀಡಲು 50 ಲಕ್ಷ ರೂಪಾಯಿ.

  • ಆರೋಗ್ಯ ಕಾರ್ಯಕರ್ತರು ಮತ್ತು ಇತರ ರಕ್ಷಣಾ ಸಿಬ್ಬಂದಿಗೆ ದಿನಕ್ಕೆ ಒಂದು ಲಕ್ಷ ಮಾಸ್ಕ್ ವಿತರಣೆ

  • ತುರ್ತು ವಾಹನಗಳಿಗೆ ದೇಶಾದ್ಯಂತ ಇಂಧನ ಉಚಿತ

  • ರಿಲಾಯನ್ಸ್ ರಿಟೈಲ್ಸ್ ಸ್ಟೋರ್​ಗಳ​ ಮೂಲಕ ಜನರಿಗೆ ಬೇಕಾದ ಅಗತ್ಯ ವಸ್ತುಗಳ ಪೂರೈಕೆ ಮತ್ತು ಹೋಂ ಡೆಲಿವರಿ ವ್ಯವಸ್ಥೆ


ಇದನ್ನು ಓದಿ: ಕೇರಳದಲ್ಲಿ ಮತ್ತೆ 32 ಮಂದಿಗೆ ಕೊರೋನಾ; ಸೋಂಕಿತರ ಸಂಖ್ಯೆ 213ಕ್ಕೇರಿಕೆ
Youtube Video
First published: March 30, 2020, 8:25 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories