Reliance: ಮೊದಲ ತ್ರೈಮಾಸಿಕ ಲಾಭಾಂಶ: ರಿಲಯನ್ಸ್ ಇಂಡಸ್ಟ್ರೀಸ್​ಗೆ 13,806 ಕೋಟಿ ರೂ. ನಿವ್ವಳ ಲಾಭ

ಅಬುಧಾಬಿಯಲ್ಲಿ ಹೊಸ ರಾಸಾಯನಿಕ ಘಟಕ ಸ್ಥಾಪನೆಗೆ ಆಡ್ನಾಕ್ ಜೊತೆ ಒಪ್ಪಂದ. ಜಿಯೋ ಚಂದಾದಾರರ ಸಂಖ್ಯೆ 440.6 ದಶಲಕ್ಷ, 20 ಶತಕೋಟಿ ಜಿಬಿ ದಾಟಿದ ಡೇಟಾ ಟ್ರಾಫಿಕ್. ಸಂಸ್ಥೆಯ ಉದ್ಯೋಗಿಗಳು ಮತ್ತವರ ಕುಟುಂಬ ಸದಸ್ಯರಿಗೆ 10 ಲಕ್ಷಕ್ಕೂ ಹೆಚ್ಚು ಡೋಸ್​ ಲಸಿಕೆ

ರಿಲಯನ್ಸ್​ ಇಂಡಸ್ಟ್ರೀಸ್

ರಿಲಯನ್ಸ್​ ಇಂಡಸ್ಟ್ರೀಸ್

 • Share this:
  ಜೂನ್ 30, 2021ಕ್ಕೆ ಅಂತ್ಯವಾದ ಆರ್ಥಿಕ ವರ್ಷ 2021-22ರ ಮೊದಲ ತ್ರೈಮಾಸಿಕದಲ್ಲಿ ರಿಲಯನ್ಸ್ ಇಂಡಸ್ಟ್ರೀಯು 13,806 ರೂ. ನಿವ್ವಳ ಲಾಭ ಮಾಡಿದೆ.

  ಕಳೆದ ವರ್ಷ ಇದೇ ತ್ರೈಮಾಸಿಕಕ್ಕೆ ಹೋಲಿಸಿದರೆ ಪ್ರಸ್ತುತ ತ್ರೈಮಾಸಿಕದಲ್ಲಿ ಶೇ. 66.7ರಷ್ಟು ಆದಾಯದಲ್ಲಿ ಏರಿಕೆ ಕಂಡಿದೆ. ಈ ಅವಧಿಯಲ್ಲಿ ಮಾರಾಟ ಮತ್ತು ಸೇವೆಗಳ ಒಟ್ಟು ಮೌಲ್ಯ 158,862 ಕೋಟಿ ರೂ.ಗಳಾಗಿದೆ. ಬಡ್ಡಿ, ತೆರಿಗೆ, ಡಿಪ್ರಿಸಿಯೇಶನ್ ಹಾಗೂ ಇತರೇ ಮೂಲಗಳಿಂದ ಬಂದಂತಹ ಆದಾಯವು  (EBITDA) ಈ ತ್ರೈಮಾಸಿಕದಲ್ಲಿ 27,550 ಕೋಟಿ ರೂ.ಗಳಷ್ಟಿದೆ.

  ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಅಬುಧಾಬಿಯ ರುವಾಯಸ್​ನಲ್ಲಿ ಹೊಸ ರಾಸಾಯನಿಕ ತಯಾರಿಕಾ ಘಟಕವನ್ನು ಸ್ಥಾಪಿಸಲು ಅಬುಧಾಬಿ ನ್ಯಾಶನಲ್ ಆಯಿಲ್ ಕಂಪನಿ 'ಆಡ್ನಾಕ್'ನೊಂದಿಗೆ ಈ ತ್ರೈಮಾಸಿಕದಲ್ಲಿ ಒಪ್ಪಂದ ಮಾಡಿಕೊಂಡಿದೆ. ಇದೇ ಅವಧಿಯಲ್ಲಿ ರಿಲಯನ್ಸ್ ಹಾಗೂ ಬಿಪಿ ಸಂಸ್ಥೆಗಳು ಭಾರತದ ಪೂರ್ವದಲ್ಲಿರುವ KGD6 ಬ್ಲಾಕ್​ನ ಸೆಟ್​ಲೈಟ್​ ಕ್ಲಸ್ಟರ್​ನಲ್ಲಿ ಇರುವ ಗ್ಯಾಸ್​ ಪ್ಲಾಂಟ್​ನಿಂದ ಉತ್ಪಾದನೆಯನ್ನು ಪ್ರಾರಂಭಿಸಲಾಗುವುದು ಎಂದು ಘೋಷಿಸಿವೆ.

  ರಿಲಯನ್ಸ್ ಇಂಡಸ್ಟ್ರೀ ಸ್​ ಅಂಗಸಂಸ್ಥೆಯಾದ ರಿಲಯನ್ಸ್ ಜಿಯೋ ಇನ್ಫೋಕಾಮ್ ಲಿಮಿಟೆಡ್, ಆಂಧ್ರಪ್ರದೇಶ, ದೆಹಲಿ ಹಾಗೂ ಮುಂಬಯಿ ವೃತ್ತಗಳಲ್ಲಿ 800 ಮೆಗಾಹರ್ಟ್ಸ್ ಬ್ಯಾಂಡ್​ ಸ್ಪೆಕ್ಟ್ರಮ್ ಹಕ್ಕನ್ನು ಪಡೆದುಕೊಳ್ಳಲು ಭಾರ್ತಿ ಏರ್​ಟೆಲ್​ ಲಿಮಿಟೆಡ್​ನೊಂದಿಗೆ ಒಪ್ಪಂದಕ್ಕೆ ಸಹಿಹಾಕಿದ್ದು, ಈ ಮೂಲಕ ತನ್ನ ನೆಟ್ವರ್ಕ್ ಸಾಮರ್ಥ್ಯವನ್ನು ಇನ್ನಷ್ಟು ಹೆಚ್ಚಿಸಿಕೊಂಡಿದೆ. ಇದೇ ಅವಧಿಯಲ್ಲಿ ರಿಲಯನ್ಸ್ ಜಿಯೋ ಇನ್ಫೋಕಾಮ್ ಲಿಮಿಟೆಡ್ ಸಂಸ್ಥೆಯು ಗೂಗಲ್​ನೊಂದಿಗೆ ರೂಪಿಸಿದ 'ಜಿಯೋಫೋನ್ ನೆಕ್ಸ್ಟ್' ಸ್ಮಾರ್ಟ್​ಫೋನ್​ ಅನ್ನೂ ಸಹ ಮೊದಲ ಬಾರಿಗೆ ಪರಿಚಯಿಸಲಾಯಿತು.

  ರಿಲಯನ್ಸ್ ಇಂಡಸ್ಟ್ರೀಸ್​ನ ಇನ್ನೊಂದು ಅಂಗಸಂಸ್ಥೆ ರಿಲಯನ್ಸ್ ರೀಟೇಲ್ ವೆಂಚರ್ಸ್ ಲಿಮಿಟೆಡ್ ಇದೇ ಅವಧಿಯಲ್ಲಿ ಜಸ್ಟ್ ಡಯಲ್ ಲಿಮಿಟೆಡ್​ನಲ್ಲಿ ತಾನು ಖರೀದಿಸಿದ ಪಾಲಿನ ಮೊತ್ತವನ್ನು ಘೋಷಿಸಿದೆ.  ಜಸ್ಟ್​ ಡಯಲ್​​ ಸಂಸ್ಥೆಯ  ಶೇ. 40.95 ಪಾಲನ್ನು 3,497 ಕೋಟಿ ರೂ.ಗಳಿಗೆ ಖರೀದಿಸಲಿದ್ದು ಶೇ. 26.0ವರೆಗಿನ ಹೆಚ್ಚುವರಿ ಪಾಲಿಗಾಗಿ ನಿಯಮಾನುಸಾರ ಓಪನ್ ಆಫರ್ ಪ್ರಕಟಿಸಲಿದೆ.

  ಮಿಶನ್ ವ್ಯಾಕ್ಸಿನ್ ಸುರಕ್ಷಾ ಕಾರ್ಯಕ್ರಮದಡಿಯಲ್ಲಿ ರಿಲಯನ್ಸ್ ಸಮೂಹವು ತನ್ನ ಉದ್ಯೋಗಿಗಳು ಮತ್ತವರ ಕುಟುಂಬ ಸದಸ್ಯರಿಗೆ 10 ಲಕ್ಷಕ್ಕೂ ಹೆಚ್ಚು ಡೋಸ್​ ಲಸಿಕೆಯನ್ನು ಉಚಿತವಾಗಿ ನೀಡಿದೆ. ಅರ್ಹ ಉದ್ಯೋಗಿಗಳ ಪೈಕಿ ಶೇ. 98ಕ್ಕಿಂತ ಹೆಚ್ಚಿನವರು ಈಗಾಗಲೇ ಮೊದಲ ಡೋಸ್ ಪಡೆದುಕೊಂಡಿದ್ದಾರೆ. ಈ ಕಾರ್ಯಕ್ರಮದಡಿ ತೆರೆಯಲಾದ ಕೆಲ ವ್ಯಾಕ್ಸಿನ್ ಕೇಂದ್ರಗಳಲ್ಲಿ ಬಡ- ಮಧ್ಯಮ ವರ್ಗದವರಿಗೂ ಲಸಿಕೆಗಳನ್ನು ನೀಡಲಾಗುತ್ತಿದೆ.

  ಜಿಯೋ ಪ್ಲಾಟ್​ಫಾರ್ಮ್​ ಲಿಮಿಟೆಡ್: ರಿಲಯನ್ಸ್ ಸಮೂಹದ ಅಂಗಸಂಸ್ಥೆ ಜಿಯೋ ಪ್ಲಾಟ್ಫಾರ್ಮ್​ ಲಿಮಿಟೆಡ್  2021-22ರ ಮೊದಲ ತ್ರೈಮಾಸಿಕದಲ್ಲಿ 3,651 ಕೋಟಿ ರೂ. ನಿವ್ವಳ ಲಾಭ ಗಳಿಸಿದೆ. ಕಳೆದ ವರ್ಷ ಇದೇ ತ್ರೈಮಾಸಿಕ್ಕೆ ಹೋಲಿಸದರೆ 44.9ರಷ್ಟು ಹೆಚ್ಚಾಗಿದೆ.

  ಜೂನ್ ಅಂತ್ಯದ ವೇಳೆಗೆ ಜಿಯೋ ಚಂದಾದಾರರ ಸಂಖ್ಯೆ 440.6 ದಶಲಕ್ಷಕ್ಕೆ ತಲುಪಿದ್ದು, ಈ ಸಂಖ್ಯೆಯಲ್ಲಿ ಕಳೆದ ವರ್ಷದ ಹೋಲಿಸಿದರೆ 42.3 ದಶಲಕ್ಷದಷ್ಟು ನಿವ್ವಳ ಹೆಚ್ಚಳ ಕಂಡುಬಂದಿದೆ. ಈ ತ್ರೈಮಾಸಿಕದಲ್ಲಿ ಪ್ರತಿ ಗ್ರಾಹಕರಿಂದ ದೊರಕಿದ ಸರಾಸರಿ ಆದಾಯ  ರೂ. 138.4ರಷ್ಟಿತ್ತು. ಈ ತ್ರೈಮಾಸಿಕದಲ್ಲಿ ಒಟ್ಟಾರೆ ಡೇಟಾ ಟ್ರಾಫಿಕ್ ವಾರ್ಷಿಕ ಶೇ. 38.5ರಷ್ಟು ಹೆಚ್ಚಳ ಕಂಡು ಬಂದಿದ್ದು 20.3 ಶತಕೋಟಿ ಜಿಬಿ ತಲುಪಿದೆ. ಈ ಅವಧಿಯ ಒಟ್ಟಾರೆ ವಾಯ್ಸ್ ಟ್ರಾಫಿಕ್ 1.06 ಲಕ್ಷ ಕೋಟಿ ನಿಮಿಷಗಳಷ್ಟಿತ್ತು.

  ರಿಲಯನ್ಸ್ ರೀಟೇಲ್:
  ರಿಲಯನ್ಸ್ ರೀಟೇಲ್ ಈ ತ್ರೈಮಾಸಿಕದಲ್ಲಿ 1,941 ಕೋಟಿ ರೂ.ಗಳ EBITDA ಹಾಗೂ 962 ಕೋಟಿ ರೂ.ಗಳ ನಿವ್ವಳ ಲಾಭ ಗಳಿಸಿದೆ. 12,803  ಮಳಿಗೆಗಳನ್ನು ನಿರ್ವಹಿಸುತ್ತಿರುವ ರಿಲಯನ್ಸ್ ರೀಟೇಲ್ ಜಾಲಕ್ಕೆ ಈ ತ್ರೈಮಾಸಿಕದಲ್ಲಿ 123 ಹೊಸ ಮಳಿಗೆಗಳು ಸೇರಿವೆ. ಜಿಯೋಮಾರ್ಟ್ ಸೇವೆಗಳನ್ನು ಈವರೆಗೆ 218 ನಗರಗಳಿಗೆ ವಿಸ್ತರಿಸಲಾಗಿದ್ದು, ಕಳೆದ ತ್ರೈಮಾಸಿಕಕ್ಕೆ ಹೋಲಿಸಿದಾಗ ಇವುಗಳ ಸಂಖ್ಯೆಯಲ್ಲಿ ಶೇ. 25ರಷ್ಟು ಏರಿಕೆ ಕಂಡುಬಂದಿದೆ.

  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.
  Published by:HR Ramesh
  First published: