ಫುಲ್ ಪೈಸಾ ವಸೂಲ್ ಸೇಲ್: ರಿಲಯನ್ಸ್ ಫ್ರೆಶ್​ ಮತ್ತು ಸ್ಮಾರ್ಟ್​ನಲ್ಲಿ ಭರ್ಜರಿ ಆಫರ್

ಭಾರತದ 90 ನಗರಗಳಲ್ಲಿ ರಿಯಲನ್ಸ್ ಫುಲ್ ಪೈಸಾ ವಸೂಲ್ ಸೇಲ್ ನಡೆಸಲಿದೆ. ಕರ್ನಾಟಕದ ಸಣ್ಣ ನಗರಗಳಾದ ವಿಜಯಪುರ, ಬೆಳಗಾವಿ, ಧಾರವಾಡ, ಮಂಡ್ಯದಲ್ಲೂ ಈ ಸೇಲ್​ ಇರಲಿದೆ.

zahir | news18
Updated:January 25, 2019, 6:18 PM IST
ಫುಲ್ ಪೈಸಾ ವಸೂಲ್ ಸೇಲ್: ರಿಲಯನ್ಸ್ ಫ್ರೆಶ್​ ಮತ್ತು ಸ್ಮಾರ್ಟ್​ನಲ್ಲಿ ಭರ್ಜರಿ ಆಫರ್
@MapmyIndia Map
  • News18
  • Last Updated: January 25, 2019, 6:18 PM IST
  • Share this:
ದೇಶದ ಬೃಹತ್ ಕಂಪೆನಿ ರಿಲಯನ್ಸ್ ಇಂಡಸ್ಟ್ರೀಸ್​ ತನ್ನ​ ಅಂಗ ಸಂಸ್ಥೆಗಳಾದ ರಿಲಯನ್ಸ್ ಫ್ರೆಶ್ ಮತ್ತು ರಿಲಯನ್ಸ್ ಸ್ಮಾರ್ಟ್​ನಲ್ಲಿ 'ಫುಲ್ ಪೈಸಾ ವಸೂಲ್ ಸೇಲ್' ಆರಂಭಿಸಿದೆ. ಈ ಮೆಗಾ ರಿಟೇಲ್ ಮೇಳದಲ್ಲಿ ಗ್ರಾಹಕರಿಗೆ ಕಡಿಮೆ ದರದಲ್ಲಿ ವಸ್ತುಗಳನ್ನು ಕೊಂಡುಕೊಳ್ಳುವ ಅವಕಾಶ ಸಿಗಲಿದೆ. ಜನವರಿ 23 ರಿಂದ ಜನವರಿ 27ರ ವರೆಗೆ ನಡೆಯಲಿರುವ ಶಾಪಿಂಗ್ ಹಬ್ಬದಲ್ಲಿ ದಿನಸಿ, ಹಣ್ಣುಗಳು, ತರಕಾರಿಗಳು, ಅಡುಗೆ ಪರಿಕರಗಳು ಮತ್ತು ಗೃಹ ಉಪಯೋಗಿ ವಸ್ತುಗಳ ಮೇಲೆ ಗ್ರಾಹಕರು ಹಲವು ರೀತಿಯ ಆಫರ್​ಗಳನ್ನು ಪಡೆಯಬಹುದು.

ಇದೇ ಮೊದಲ ಬಾರಿಗೆ ದೇಶದ ಎರಡನೇ ದರ್ಜೆಯ ನಗರಗಳಲ್ಲೂ ಮಾಡ್ರನ್ ರೀಟೆಲ್ ಮೇಳವನ್ನು ಆಯೋಜಿಸಲು ರಿಲಯನ್ಸ್​ ನಿರ್ಧರಿಸಿದೆ. ಅದರಂತೆ ಭಾರತದ 90 ನಗರಗಳಲ್ಲಿ ರಿಯಲನ್ಸ್ ಫುಲ್ ಪೈಸಾ ವಸೂಲ್ ಸೇಲ್ ನಡೆಸಲಿದೆ. ಕರ್ನಾಟಕದ ಸಣ್ಣ ನಗರಗಳಾದ ವಿಜಯಪುರ, ಬೆಳಗಾವಿ, ಧಾರವಾಡ, ಮಂಡ್ಯದಲ್ಲೂ ಈ ಸೇಲ್​ ಇರಲಿದ್ದು ಹಾಗೆಯೇ ವಾರಂಗಲ್, ಕರ್ನೂಲ್, ವಿಜಯನಗರಂ, ಕಾಕಿನಾಡ, ವೆಲ್ಲೂರ್ ಮತ್ತು ನಾಗಾರ್ಕೊಯಿಲ್ ನಗರಗಳ ಗ್ರಾಹಕರು ಈ ಸೇಲ್​ನಲ್ಲಿ ಭಾಗಿಯಾಗಬಹುದಾಗಿದೆ. ಈ ನಿಟ್ಟಿನಲ್ಲಿ ರಿಲಯನ್ಸ್ ರೀಟೆಲ್ ಹೊಸ ಹೆಜ್ಜೆಯನ್ನು ಇಟ್ಟಿದ್ದು, ಈ ಮೂಲಕ ಹೊಸ ನಗರಗಳ ಹೊಸ ಗ್ರಾಹಕರನ್ನು ತಲುಪಲಿದೆ.

ಇದನ್ನೂ ಓದಿ: ತಲಾಖ್​ಗೆ ತಿರುಗೇಟು: ಅಮ್ಮನ ಮದುವೆ ಮಾಡಿಸಿದ ಮಗ

ರಿಲಯನ್ಸ್ ರೀಟೆಲ್ ಕಿರಾಣಿ (ಗ್ರಾಸರಿ) ವಿಭಾಗದಲ್ಲಿ - ರಿಲಯನ್ಸ್ ಫ್ರೆಶ್ ಮತ್ತು ರಿಲಯನ್ಸ್ ಸ್ಮಾರ್ಟ್ (ಹೈಪರ್ ಸ್ಟೋರ್) ಗಳನ್ನು ಕಳೆದ ಒಂದು ವರ್ಷದಲ್ಲಿ ಭಾರೀ ದೊಡ್ಡ ಮಟ್ಟದಲ್ಲಿ ವಿಸ್ತರಣೆ ಮಾಡುತ್ತಿದೆ. ಅದರಲ್ಲಿಯೂ ಎರಡನೇ ಮತ್ತು ಮೂರನೇ ದರ್ಜೆಯ ನಗರಗಳಲ್ಲಿ ಹೊಸ ಸೇವೆಯನ್ನು ಆರಂಭಿಸುತ್ತಿದೆ. ಈ ಮೂಲಕ ರಿಲಯನ್ಸ್ ರೀಟೆಲ್ ಸ್ಟೋರ್ ಗಳು ಬೆಂಗಳೂರು ಸೇರಿದಂತೆ 90 ನಗರಗಳಲ್ಲಿ ಸೇವೆಯನ್ನು ನೀಡಲು ಮುಂದಾಗಿದೆ. ಸಣ್ಣ ಪಟ್ಟಣಗಳಲ್ಲಿಯೂ ಮಾಡ್ರನ್ ಟ್ರೆಡ್ ಮಾದರಿಯ ಸೇವೆಯನ್ನು ನೀಡುತ್ತಿದ್ದು, ಹೊಸ ಮಾದರಿಯ ವಿಶೇಷವಾದ ರಿಟೇಲ್ ಶಾಪಿಂಗ್ ಅನುಭವನ್ನು ಭಾರತದ ಮೂಲೆ- ಮೂಲೆ ಗ್ರಾಹಕರನ್ನು ತಲುಪಲಿದೆ.

ಇದನ್ನೂ ಓದಿ: ಏರ್​ಟೆಲ್​ ಬಂಪರ್​ ​ಆಫರ್: ಒಂದು ವರ್ಷದವರೆಗೆ ಉಚಿತ ಕರೆ ಸೌಲಭ್ಯ

First published:January 25, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ