• ಹೋಂ
  • »
  • ನ್ಯೂಸ್
  • »
  • ದೇಶ-ವಿದೇಶ
  • »
  • Reliance:ಕೋವಿಡ್​ ಹೋರಾಟಕ್ಕೆ ಕೈ ಜೋಡಿಸಿದ ರಿಲಯನ್ಸ್​ ಫೌಂಡೇಶನ್​: ಮುಂಬೈನಲ್ಲಿ 850 ಬೆಡ್​ ವ್ಯವಸ್ಥೆ

Reliance:ಕೋವಿಡ್​ ಹೋರಾಟಕ್ಕೆ ಕೈ ಜೋಡಿಸಿದ ರಿಲಯನ್ಸ್​ ಫೌಂಡೇಶನ್​: ಮುಂಬೈನಲ್ಲಿ 850 ಬೆಡ್​ ವ್ಯವಸ್ಥೆ

ರಿಲಾಯನ್ಸ್ ಇಂಡಸ್ಟ್ರೀಸ್

ರಿಲಾಯನ್ಸ್ ಇಂಡಸ್ಟ್ರೀಸ್

ಬೆಡ್​, ಆಕ್ಸಿಜನ್​ ಹಾಗೂ ಔಷಧಗಳ ಕೊರತೆಯಿಂದಾಗಿ ಸೋಂಕಿತರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಇಂತಹ ತುರ್ತು ಪರಿಸ್ಥಿತಿಯಲ್ಲಿ ರಿಲಯನ್ಸ್​ ಫೌಂಡೇಶನ್ ಸೋಂಕಿತರ ನೆರವಿಗೆ ಆಗಮಿಸಿದೆ.

  • Share this:

     ಎರಡನೇ ಅಲೆ ಸೋಂಕಿಗೆ ತುತ್ತಾಗಿರುವ ದೇಶದಲ್ಲಿ ವೈದ್ಯಕೀಯ ತುರ್ತು ಪರಿಸ್ಥಿತಿ ಮುಂದುವರೆದಿದೆ. ಅದರಲ್ಲಿಯೂ ಮಹಾರಾಷ್ಟ್ರ, ಕರ್ನಾಟಕ ಮತ್ತು ದೆಹಲಿಗಳಲ್ಲಿ ವೈದ್ಯಕೀಯ ಬಿಕ್ಕಟ್ಟು ಎದುರಾಗಿದೆ. ಬೆಡ್​, ಆಕ್ಸಿಜನ್​ ಹಾಗೂ ಔಷಧಗಳ ಕೊರತೆಯಿಂದಾಗಿ ಸೋಂಕಿತರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಇಂತಹ ತುರ್ತು ಪರಿಸ್ಥಿತಿಯಲ್ಲಿ ರಿಲಾಯನ್ಸ್​ ಫೌಂಡೇಶನ್ ಸೋಂಕಿತರ ನೆರವಿಗೆ ಆಗಮಿಸಿದೆ. ಇದೇ ಹಿನ್ನಲೆ ಮುಂಬೈನಲ್ಲಿ ಕೋವಿಡ್​ ಸೋಂಕಿತರಿಗಾಗಿ 875 ಬೆಡ್​ ವ್ಯವಸ್ಥೆ ಮಾಡಿದೆ. ಈ ಮೂಲಕ ಬೆಡ್​ ಸಿಗದೇ ಪರದಾಡುತ್ತಿರುವವರಿಗೆ ಆಸರೆಯಾಗಿದೆ. ಇದಕ್ಕಾಗಿ ಮಹಾರಾಷ್ಟ್ರ ಸರ್ಕಾರ ಮತ್ತು ಬೃಹನ್​ ಮುಂಬೈ ಮುನ್ಸಿಪಲ್​ ಕಾರ್ಪೊರೇಷನ್​ ಜೊತೆಗೆ ರಿಲಯನ್ಸ್​ ಮಹತ್ವದ ಹೆಜ್ಜೆ ಇರಿಸಿದೆ.


    ಸರ್ ಎಚ್​ಎಬ್​ ರಿಲಯನ್ಸ್​ ಫೌಂಡೇಶನ್​ ಆಸ್ಪತ್ರೆ


    ರಿಲಯನ್ಸ್ ಪೌಂಡೇಶನ್​​ 100 ತೀವ್ರ ನಿಗಾ ಘಟಕ ಬೆಡ್​ ವ್ಯವಸ್ಥೆ ಮಾಡಿದ್ದು, ಇದು ಮೇ 15ರಿಂದ ಹಂತ ಹಂತವಾಗಿ ಕಾರ್ಯರೂಪಕ್ಕೆ ಬರಲಿದೆ.  ಸರ್​ ಎಚ್​ಎನ್​ ರಿಲಯನ್ಸ್​ ಫೌಂಡೇಶನ್​ ಆಸ್ಪತ್ರೆ ಮೇ 1 ರಿಂದಕಾರ್ಯ ನಿರ್ವಹಣೆ ಮಾಡಲಿದ್ದು, ಪ್ರಸ್ತುತ550 ಬೆಡ್​ಗಳಿವೆ. ಈ ಆಸ್ಪತ್ರೆ 650 ಬೆಡ್​ ಹೊಂದಲಿದ್ದು, ಕೋವಿಡ್​ ರೋಗಿಗಳ ಚಿಕಿತ್ಸೆಗೆ ಕಾರ್ಯ ನಿರ್ವಹಿಸಲಿದೆ. 500ಕ್ಕೂ ಹೆಚ್ಚು ಮುಂಚೂಣಿ ಆರೋಗ್ಯ ಕಾರ್ಯಕರ್ತರಾದ ವೈದ್ಯರು, ನರ್ಸ್​ಗಳು ವೈದ್ಯಯೇತರ ಸಿಬ್ಬಂದಿಗಳು ಕಾರ್ಯ ನಿರ್ವಹಿಸಲಿದ್ದಾರೆ. 650 ಬೆಡ್​ಗಳ ಈ ಆಸ್ಪತ್ರೆಯ ವೆಚ್ಚವನ್ನು ರಿಲಯನ್ಸ್ ಫೌಂಡೇಶನ್​ ನಿರ್ವಹಿಸಲಿದೆ, ಎನ್​ಎಸ್​ಸಿಐ ಮತ್ತು ಸೆವೆನ್​ ಹಿಲ್ಸ್​ ಆಸ್ಪತ್ರೆಯ ಎಲ್ಲಾ ಕೋವಿಡ್​ ರೋಗಿಗಳಿಗೆ ಉಚಿತ ಚಿಕಿತ್ಸೆ ನೀಡಲಾಗುವುದು.


    ಕಳೆದ ವರ್ಷ ರಿಲಯನ್ಸ್​ ಫೌಂಡೇಶನ್ ಮತ್ತು ಬಿಎಂಸಿ ಮುಂಬೈನಲ್ಲಿ ದೇಶದ ಮೊದಲ 250 ಬೆಡ್​ಗಳ ಕೋವಿಡ್​ ಆಸ್ಪತ್ರೆಯನ್ನು ರೂಪಿಸಿತ್ತು. ಈ 225 ಬೆಡ್​ನಲ್ಲಿ 100 ಬೆಡ್​ಗಳನ್ನು ರಿಲಯನ್ಸ್​ ಫೌಂಡೇಶನ್ ಪ್ರತ್ಯೇಕವಾಗಿ ನಿರ್ವಹಿಸಿತ್ತು.


    ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್​ನ ದಿ ಟ್ರೈಡೆಂಟ್​ ಹೋಟೆಲ್​ನಲ್ಲಿ ಚಿಕಿತ್ಸೆಗಾಗಿ 100 ಬೆಡ್​ ವ್ಯವಸ್ಥೆ ಮಾಡಲಾಗಿದೆ. ಇಲ್ಲಿ ಕೋವಿಡ್​ ಸೋಂಕಿನ ಸಾಧಾರಣ ಲಕ್ಷಣ ಹಾಗೂ ಲಕ್ಷಣ ರಹಿತ ರೋಗಿಗಳಿಗೆ ಮಾರ್ಗಸೂಚಿ ಅನುಸಾರವಾಗಿ ಚಿಕಿತ್ಸೆ ನಡೆಸಲಾಗುವುದು. ಸ್ಟೆಪ್​ಡೌನ್​ ವ್ಯವಸ್ಥೆಯನ್ನು ಸರ್​ ಎನ್​ಎನ್​ ರಿಲಯನ್ಸ್​ ಫೌಂಡೇಶನ್​ ನಿರ್ವಹಿಸಲಿದೆ.
    ಈ ವ್ಯವಸ್ಥೆಗಳ ಕುರಿತು ಮಹಾರಾಷ್ಟ್ರ ಮುಖ್ಯಮಂತ್ರಿ, ಪ್ರವಾಸೋದ್ಯಮ ಮತ್ತು ಪರಿಸರ ಅಧಿಕಾರಿಗಳೊಂದಿಗೆ ರಿಲಾಯನ್ಸ್​ ಪೌಂಡೇಶನ್​ ಮತ್ತು ಎಚ್​ಎನ್​ ರಿಲಯನ್ಸ್​ ಫೌಂಡೇಶನ್​ ಸಭೆಯಲ್ಲಿ ತೀರ್ಮಾನಿಸಿದೆ. ಈ ಮೂಲಕ ರಿಲಯನಸ್​ ಕೋವಿಡ್​ ಬಿಕ್ಕಟ್ಟಿನ ಈ ಪರಿಸ್ಥಿತಿಯಲ್ಲಿ ಸಮಾಜಿಕ ಸೇವೆಯಲ್ಲಿ ತೊಡಗಿಸಿಕೊಳ್ಳಲು ಮುಂದಾಗಿದೆ.


    ಇನ್ನು ಈ ಕುರಿತು ಮಾತನಾಡಿರುವ ರಿಲಯನ್ಸ್​ ಪೌಂಡೇಶನ್​ ಸಂಸ್ಥಾಪಕರೂ, ಮುಖ್ಯಸ್ಥರಾದ ನೀತಾ ಅಂಬಾನಿ, ರಿಲಯನ್ಸ್​ ದೇಶ ಸೇವೆಗಾಗಿ ಸಾದಾ ಮುಂಚೂಣಿಯಲ್ಲಿದೆ. ಸೋಂಕಿನ ಬಿಕ್ಕಟ್ಟಿನ ಇಂತಹ ಸಂದರ್ಭದಲ್ಲಿ ದೇಶದ ಜೊತೆ ನಿಲ್ಲುವುದು ಅಗತ್ಯವಾಗಿದೆ. ಸರ್​ ಎಚ್​ಎನ್​ ರಿಲಯನ್ಸ್​ ಫೌಂಡೆಶನ್​ ಮುಂಬೈನಲ್ಲಿ 875 ಬೆಡ್​ಗಳ ಮೂಲಕ ಕಾರ್ಯನಿರ್ವಹಿಸಲಿದೆ. ನಾವು ಈಗಾಗಲೇ ಮಹಾರಾಷ್ಟ್ರ, ಗುಜರಾತ್​, ದೆಹಲಿ, ರಾಜಸ್ಥಾನ, ಉತ್ತರ ಪ್ರದೇಶ, ಡಿಯೂ, ಡಮನ್​ ಮತ್ತು ನಗರ್​ ಹವೇಲಿಗೆ ಉಚಿತವಾಗಿ ಆಕ್ಸಿಜನ್​ ಪೂರೈಸುತ್ತಿದ್ದೇವೆ. ಇದನ್ನು ಇನ್ನಷ್ಟು ವಿಸ್ತರಿಸಲಿದ್ದೇವೆ. ಈ ಮೂಲಕ ಜನರ ಸೇವೆಗೆ ಏನೂ ಬೇಕಾದರೂ ನೀವು ಬದ್ಧತೆಯನ್ನು ನಿರ್ವಹಿಸಿದ್ದೇವೆ ಎಂದಿದ್ದಾರೆ.

    Published by:Seema R
    First published: