ಮುಂಬಯಿ, ಜುಲೈ 26: ಭಾರತದಾದ್ಯಂತ 10 ಲಕ್ಷ ಲಸಿಕೆ ಡೋಸ್ಗಳನ್ನು ನೀಡುವ ಮೂಲಕ ರಿಲಯನ್ಸ್ ಫೌಂಡೇಷನ್, ದೇಶದ ಕೋವಿಡ್-19 ಲಸಿಕೆ ಅಭಿಯಾನವನ್ನು ಚುರುಕುಗೊಳಿಸುವಲ್ಲಿ ನೆರವಾಗಿದೆ. ಉದ್ಯೋಗಿಗಳು, ಸಹವರ್ತಿಗಳು, ಪಾಲುದಾರರು ಮತ್ತು ಜನಸಾಮಾನ್ಯರಿಗೆ ಉಚಿತ ಲಸಿಕೆ ನೀಡುವ ಮೂಲಕ ಬೃಹತ್ ಸಮುದಾಯವನ್ನು ಕಾಪಾಡುವ ತನ್ನ ಬದ್ಧತೆಯನ್ನು ಈಡೇರಿಸಲು ರಿಲಯನ್ಸ್ ಫೌಂಡೇಷನ್, 'ಮಿಷನ್ ವ್ಯಾಕ್ಸಿನ್ ಸುರಕ್ಷಾ' ಯೋಜನೆಯನ್ನು ಏಪ್ರಿಲ್ನಲ್ಲಿ ಜಾರಿಗೊಳಿಸಿತ್ತು.
ಶೇ 100ರಷ್ಟು ತನ್ನ ಸಂಸ್ಥೆಯ ಉದ್ಯೋಗಿಗಳು ಮತ್ತು ಅವರ ಕುಟುಂಬದ ಸದಸ್ಯರಿಗೆ ಆದ್ಯತೆಯ ಮೇರೆಗೆ ಲಸಿಕೆ ನೀಡುವ ಅತಿ ದೊಡ್ಡ ಉಚಿತ ಕಾರ್ಪೊರೇಟ್ ಲಸಿಕೆ ಕಾರ್ಯಕ್ರಮವನ್ನು ರಿಲಯನ್ಸ್ ಫೌಂಡೇಷನ್ ಅನುಷ್ಠಾನಕ್ಕೆ ತಂದಿದೆ.
'ರಾಷ್ಟ್ರವ್ಯಾಪಿಯಾಗಿ ಈ ಯೋಜನೆ ಜಾರಿಗೊಳಿಸುವುದು ಬೃಹತ್ ಕಾರ್ಯವಾಗಿದೆ. ಆದರೆ ಇದು ನಮ್ಮ ಧರ್ಮ, ಪ್ರತಿ ಭಾರತೀಯನಿಗಾಗಿ ನಮ್ಮ ಕರ್ತವ್ಯ, ಸುರಕ್ಷತೆ ಮತ್ತು ರಕ್ಷಣೆಯ ನಮ್ಮ ಭರವಸೆಯಾಗಿದೆ. ಜತೆಯಾಗಿ ಸೇರಿ ನಾವು ಸಾಧಿಸಬಹುದು ಮತ್ತು ತಗ್ಗಿಸಬಹುದು ಎಂಬುದನ್ನು ನಮ್ಮ ಸಂಸ್ಥೆ ನಂಬಿದೆ' ಎಂದು ಕಳೆದ ತಿಂಗಳು ನಡೆದ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ರಿಲಯನ್ಸ್ ಫೌಂಡೇಷನ್ ಅಧ್ಯಕ್ಷೆ ನೀತಾ ಅಂಬಾನಿ ಅವರು ಹೇಳಿದ್ದರು.
ಇದುವರೆಗೂ ಶೇ 98ಕ್ಕಿಂತಲೂ ಅಧಿಕ ಅರ್ಹ ಉದ್ಯೋಗಿಗಳಿಗೆ ಕನಿಷ್ಠ ಒಂದು ಡೋಸ್ ಲಸಿಕೆ ನೀಡುವ ಮೂಲಕ ಈ ಭರವಸೆಯನ್ನು ಉಳಿಸಿಕೊಳ್ಳಲಾಗಿದೆ. 'ಮಿಷನ್ ವ್ಯಾಕ್ಸಿನ್ ಸುರಕ್ಷಾ' ಅಡಿಯಲ್ಲಿ ಈಗಾಗಲೇ ರಿಲಯನ್ಸ್ ಉದ್ಯೋಗಿಗಳು ಮತ್ತು ಕುಟುಂಬದವರಿಗೆ 10 ಲಕ್ಷಕ್ಕೂ ಅಧಿಕ ಡೋಸ್ಗಳನ್ನು ನೀಡಲಾಗಿದೆ. ದೇಶಾದ್ಯಂತ 171ಕ್ಕೂ ಹೆಚ್ಚು ಲಸಿಕಾ ಕೇಂದ್ರಗಳು ಉದ್ಯೋಗಿಗಳು, ಸಹವರ್ತಿಗಳು, ಜಂಟಿ ಉದ್ದಿಮೆ ಪಾಲುದಾರರು ಮತ್ತು ಆಫ್ ರೋಲ್ ಉದ್ಯೋಗ ವರ್ಗ, ನಿವೃತ್ತ ಉದ್ಯೋಗಿಗಳು ಮತ್ತು ಈ ಗುಂಪುಗಳ ಕುಟುಂಬದ ಎಂಟು ಸದಸ್ಯರು ಸೇರಿದಂತೆ ಅವರ ಎಲ್ಲಾ ಕುಟುಂಬದವರಿಗೂ ಲಸಿಕೆಗಳನ್ನು ನೀಡಲಾಗುತ್ತಿದೆ.
ಸಂಸ್ಥೆಯ ಸ್ಥಳಗಳಲ್ಲಿ ಸಮುದಾಯಗಳು ಹಾಗೂ ಸಾಮಾನ್ಯ ಜನತೆಗೆ ಎನ್ಜಿಒಗಳ ಮೂಲಕ ಹೆಚ್ಚುವರಿ 10 ಲಕ್ಷ ಡೋಸ್ಗಳನ್ನು ನೀಡುವ ಮೂಲಕ ಸಮುದಾಯ ಲಸಿಕೆ ಕಾರ್ಯಕ್ರಮ ಆರಂಭಿಸಲಾಗಿದೆ.
ರಿಲಯನ್ಸ್ ಫೌಂಡೇಷನ್ ಮತ್ತು ರಿಲಯನ್ಸ್ ಫೌಂಡೇಷನ್ ಆಸ್ಪತ್ರೆಯ 'ವಿ ಕೇರ್ ಇನಿಷಿಯೇಟಿವ್' ಮುಖಾಂತರ ದುರ್ಬಲ ಸಮುದಾಯಗಳಿಗೆ ಉಚಿತ ಲಸಿಕೆ ನೀಡುವ ಅಭಿಯಾನ ಆರಂಭಿಸಲಾಗಿದೆ. ಸರ್ ಎಚ್ ಎನ್ ರಿಲಯನ್ಸ್ ಫೌಂಡೇಷನ್ ಆಸ್ಪತ್ರೆಯು, ಸರ್ಕಾರಿ ವೈದ್ಯಕೀಯ ಶಿಷ್ಟಾಚಾರಗಳಿಗೆ ಅನುಗುಣವಾಗಿ ಪ್ರತಿ ಲಸಿಕೆ ಕೇಂದ್ರಗಳು ಕಾರ್ಯಾಚರಣೆ ನಡೆಸುವಂತೆ ಖಾತರಿಪಡಿಸಿಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ. ಲಸಿಕೆ ಕಾರ್ಯವಿಧಾನವನ್ನು ಡಿಜಿಟಲೀಕರಣ ಮಾಡಲಾಗಿದ್ದು, ಸ್ಲಾಟ್ ಬುಕ್ಕಿಂಗ್ನಿಂದ ಲಸಿಕೆ ಪ್ರಮಾಣಪತ್ರ ಡೌನ್ಲೋಡ್ ಮಾಡಿಕೊಳ್ಳುವವರೆಗೆ ಜಿಯೋ ಹೆಲ್ತ್ ಹಬ್ ಡಿಜಿಟಲ್ ಆರೋಗ್ಯ ಪ್ಲಾಟ್ಫಾರ್ಮ್ ತಡೆರಹಿತ ಚಟುವಟಿಕೆಗೆ ನೆರವಾಗುತ್ತಿದೆ.
2019-20ರ ಸಾಲಿನಲ್ಲಿ ದೇಶದ ಒಟ್ಟು ಸಿಎಸ್ಆರ್ ವಿನಿಯೋಗದಲ್ಲಿ ರಿಲಯನ್ಸ್ ಶೇ 4ರಷ್ಟು ಕಾಣಿಕೆ ನೀಡಿದೆ. ಇದು ದೇಶ ಎದುರಿಸುತ್ತಿರುವ ಹೊಸ ಕೋವಿಡ್ 19 ಸವಾಲುಗಳಲ್ಲಿ ಮತ್ತು ರಿಲಯನ್ಸ್ನ ಮತ್ತೊಂದು ಯೋಜನೆ 'ವಿ ಕೇರ್' ಬದ್ಧತೆಯನ್ನು ತಲುಪಲು ನೆರವಾಗುತ್ತಿದೆ.
ಇದನ್ನೂ ಓದಿ: ಅಸ್ಸಾಂ- ಮಿಜೋರಾಂ ಗಡಿ ಗಲಾಟೆ: ಪೊಲೀಸರ ಮೇಲೆ ಕಲ್ಲು ತೂರಾಟ, ಗುಂಡಿನ ದಾಳಿ
ಸಿಎಸ್ಆರ್ ಯೋಜನೆಗಳ ಮೂಲಕ ರಿಲಯನ್ಸ್ ಫೌಂಡೇಷನ್ ಅನೇಕ ಕೋವಿಡ್ 19 ನೆರವುಗಳನ್ನು ಒದಗಿಸಿದೆ. ಪ್ರತಿ ದಿನ ಒಂದು ಲಕ್ಷ ರೋಗಿಗಳ ವೈದ್ಯಕೀಯ ಆಕ್ಸಿಜನ್ ಅಗತ್ಯವನ್ನು ಪೂರೈಸಲು ಉಚಿತ ಉತ್ಪಾದನೆ ಮಾಡಲಾಗುತ್ತಿದೆ. ದೇಶಾದ್ಯಂತ 2000+ ಕೋವಿಡ್- ಆರೈಕೆ ಹಾಸಿಗೆಗಳು ಮತ್ತು ಸವಲತ್ತುಗಳನ್ನು ಒದಗಿಸುತ್ತಿದೆ. ಸಾಂಕ್ರಾಮಿಕದಿಂದ ತೊಂದರೆಗೆ ಸಿಲುಕಿದ ಸಂಕಷ್ಟದಲ್ಲಿರುವ ಸಮುದಾಯಗಳಿಗೆ 7.5 ಕೋಟಿಗೂ ಅಧಿಕ ಊಟಗಳನ್ನು ನೀಡಿದೆ. ಮುಂಚೂಣಿ ಕಾರ್ಯಕರ್ತರು, ದಿನಗೂಲಿ ಕಾರ್ಮಿಕರು, ಸಾರಿಗೆ ಕಾರ್ಮಿಕರು ಮತ್ತು ಇತರೆ ಗುಂಪುಗಳಿಗೆ ಒಂದು ಕೋಟಿಗೂ ಹೆಚ್ಚು ಮಾಸ್ಕ್ ಮತ್ತು ಸುರಕ್ಷತಾ ಸಂದೇಶಗಳನ್ನು ವಿತರಿಸಿದೆ.
ನ್ಯೂಸ್18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್ ನಿಯಮಗಳಾದ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ