News18 India World Cup 2019

ಕೇರಳ ಸಂತ್ರಸ್ತರ ನೆರವಿಗೆ ನಿಂತ ರಿಲಾಯನ್ಸ್ ಫೌಂಡೇಷನ್

news18
Updated:August 21, 2018, 9:56 PM IST
ಕೇರಳ ಸಂತ್ರಸ್ತರ ನೆರವಿಗೆ ನಿಂತ ರಿಲಾಯನ್ಸ್ ಫೌಂಡೇಷನ್
news18
Updated: August 21, 2018, 9:56 PM IST
-ನ್ಯೂಸ್ 18 ಕನ್ನಡ

ಕೇರಳ ರಾಜ್ಯವು ವರುಣನ ಆರ್ಭಟಕ್ಕೆ ಅಕ್ಷರಶಃ ತತ್ತರಿಸಿ ಹೋಗಿದೆ. ಪ್ರವಾಹದ ಹೊಡೆತಕ್ಕೆ ನಲುಗಿದ್ದ ಕೇರಳಕ್ಕೆ ಹಲವಾರು ಸಂಘ ಸಂಸ್ಥೆಗಳು ನೆರವಾಗಿದ್ದವು. ಇದೀಗ ಕೇರಳಿಗರಿಗೆ ಎಲ್ಲ ರೀತಿಯಲ್ಲೂ ಸಹಾಯ ಮಾಡಲು ರಿಲಾಯನ್ಸ್​ ಫೌಂಡೇಷನ್ ಮುಂದಾಗಿದೆ. ಈಗಾಗಲೇ ರಿಲಾಯನ್ಸ್​ ಸಂಸ್ಥೆಯಿಂದ ಮುಖ್ಯಮಂತ್ರಿ ಪರಿಹಾರ ನಿಧಿಗೆ 21 ಕೋಟಿ ರೂ ಧನ ಸಹಾಯ ನೀಡಲಾಗಿದೆ. ಅಲ್ಲದೆ ಸಂತ್ರಸ್ತರ ಪುನರ್ವಸತಿ, ಪರಿಹಾರಕ್ಕಾಗಿ 50 ಕೋಟಿ ರೂ.ವನ್ನು ರಿಲಾಯನ್ಸ್​ ಫೌಂಡೇಷನ್ ತೆಗೆದಿರಿಸಿದೆ. 'ಕೇರಳ ರಾಜ್ಯದ ನಮ್ಮ ಸಹೋದರ ಸಹೋದರಿಯರು ಪ್ರವಾಹದಿಂದ ಸಂಪೂರ್ಣ ಸಂಕಷ್ಟದಲ್ಲಿದ್ದು, ಅವರ ನೆರವಿಗೆ ನಿಲ್ಲುವುದು ನಮ್ಮೆಲ್ಲರ ಕರ್ತವ್ಯ' ಎಂದು ರಿಲಾಯನ್ಸ್ ಫೌಂಡೇಷನ್ ಅಧ್ಯಕ್ಷೆ ನೀತಾ ಅಂಬಾನಿ ತಿಳಿಸಿದ್ದಾರೆ. ಜೊತೆಗೆ ಮುಂದಿನ ದಿನಗಳಲ್ಲಿ ಕೇರಳದ ಜನರಿಗೆ ಪುನರ್ವಸತಿ, ಹೊಸ ಜೀವನಕ್ಕೆ ಅವಶ್ಯಕವಾದ ಸೌಲಭ್ಯಗಳನ್ನು ಒದಗಿಸಲು ರಿಲಾಯನ್ಸ್ ಫೌಂಡೇಷನ್  ಬದ್ಧವಾಗಿದೆ ಎಂದು ತಿಳಿಸಿದ್ದಾರೆ.

ಈ ಹಿಂದೆ ಕೂಡ ದೇಶದಲ್ಲಿ ನೈಸರ್ಗಿಕ ವಿಕೋಪಗಳು ಸಂಭವಿಸಿದಾಗ ರಿಲಾಯನ್ಸ್ ಸಂಸ್ಥೆ ಜನರ ಸಹಾಯಕ್ಕೆ ನಿಂತಿತ್ತು. 2013ರಲ್ಲಿ ಉತ್ತರಾಖಂಡ್​ನಲ್ಲಿ ಭೂಕಂಪನ ಉಂಟಾದಾಗ ತರಬೇತಿ ಹೊಂದಿದ್ದ ತಂಡಗಳನ್ನು ಸಂಸ್ಥೆ ಕಳುಹಿಸಿಕೊಟ್ಟಿದೆ. ನೈಸರ್ಗಿಕ ವಿಕೋಪಗಳಿಗೆ ಎಡೆಯಾದ ಪ್ರದೇಶಗಳಲ್ಲಿ ಕಾರ್ಯ ನಿರ್ವಹಿಸಲು ಹಲವಾರು ಸ್ವಯಂ ಸೇವಕರನ್ನು ರಿಲಾಯನ್ಸ್​ ಸಂಸ್ಥೆ ನೇಮಿಸಿಕೊಂಡಿತ್ತು. ಜಮ್ಮು ಮತ್ತು ಕಾಶ್ಮೀರದ ಪ್ರವಾಹ (2014), ನೇಪಾಳದ ಭೂಕಂಪ(2015) ತಮಿಳುನಾಡಿನಲ್ಲಿ ಉಂಟಾದ ಪ್ರವಾಹ (2015) ಗುಜರಾತ್ ಪ್ರವಾಹ(2015) ಮಹಾರಾಷ್ಟ್ರದ ಬರ ಪೀಡಿತ ಪ್ರದೇಶ(2016) ಪ್ರದೇಶಗಳ ನೆರವಿಗಾಗಿ ನಮ್ಮ ಸಂಸ್ಥೆ ಶ್ರಮಿಸಿತ್ತು ಎಂದು ಶ್ರೀಮತಿ ಅಂಬಾನಿ ತಿಳಿಸಿದರು. ಈಗ ಕೇರಳ ರಾಜ್ಯದಲ್ಲಿ ನಮ್ಮ ಪ್ರಯತ್ನವನ್ನು ಮುಂದುವರಿಸಲಿದ್ದೇವೆ. ಈಗಾಗಲೇ ರಿಲಾಯನ್ಸ್​ ಇಂಡಸ್ಟ್ರೀಸ್ ಮತ್ತು ಅದರ ಸಹ ಸಂಸ್ಥೆಗಳು ಈ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಕೇರಳದಾದ್ಯಂತ ಪರಿಹಾರ ಕಾರ್ಯಗಳನ್ನು ಕೈಗೆತ್ತಿಕೊಳ್ಳಲಾಗುತ್ತಿದೆ.

ಆಗಸ್ಟ್ 14ರಿಂದ ನೆರೆ ಪೀಡಿತ ಎರ್ನಾಕುಲಂ. ವಯನಾಡ್, ಅಲೆಪ್ಪಿ, ತ್ರಿಶೂರ್ ಇಡುಕ್ಕಿ ಮತ್ತು ಪತ್ತನಂತಿಟ್ಟ ಜಿಲ್ಲೆಗಳಲ್ಲಿ ರಕ್ಷಣೆ ಮತ್ತು ಪರಿಹಾರ ಕಾರ್ಯಗಳನ್ನು ರಿಲಾಯನ್ಸ್ ಸಂಸ್ಥೆ ಕೈಗೆತ್ತಿಕೊಂಡಿದೆ.

ರಿಲಾಯನ್ಸ್​ ಫೌಂಡೇಷನ್ ಇನ್​​ಫರ್ಮೇಷನ್ ಸರ್ವಿಸಸ್ ಮೂಲಕ (RFIS) ತಾತ್ಕಾಲಿಕ ಆಶ್ರಯಗಳನ್ನು ನೀಡಿದ್ದು, ರಕ್ಷಣಾ ಕಾರ್ಯಕ್ಕೆ ನೆರವಾಗುವಂತೆ ಹವಾಮಾನ ವೈಪರಿತ್ಯಗಳ ಮಾಹಿತಿಗಳನ್ನು ಒದಗಿಸುತ್ತಿದೆ. ಅಲ್ಲದೆ ರಾಜ್ಯ ವಿಕೋಪ ನಿರ್ವಹಣಾಧಿಕಾರಿಗಳಿಗೆ ಟೋಲ್ ಫ್ರಿ ಹೆಲ್ಪ್​ಲೈನ್ ಸಂಖ್ಯೆಗಳ ಸೇವೆಯನ್ನು ರಿಲಾಯನ್ಸ್ ನೀಡಿದೆ. 15 ಸಾವಿರ ಸಂತ್ರಸ್ತರನ್ನು ಗುರುತಿಸಿ ಅವರಿಗೆ ಆಶ್ರಯ, ಬಟ್ಟೆ, ಅಗತ್ಯ ಸಾಮಗ್ರಿಗಳನ್ನು ಪೂರೈಸುವ ಕೆಲಸವನ್ನು ರಿಲಾಯನ್ಸ್ ಫೌಂಡೇಷನ್ ಮಾಡಲಿದೆ ಎಂದು ಸಂಸ್ಥೆ ತಿಳಿಸಿದೆ.

  Loading...

 • ರಿಲಾಯನ್ಸ್ ರಿಟೈಲ್

 • ರಿಲಾಯನ್ಸ್ ರಿಟೈಲ್ ಶಾಪ್​ಗಳ ಮೂಲಕ ನೆರೆಪೀಡಿತರಿಗೆ ಆಹಾರ, ಗ್ಲೂಕೋಸ್ ಮತ್ತು

 • ಸಾನಿಟರಿ ಪ್ಯಾಡ್​ಗಳನ್ನು ಸರ್ಕಾರದ ಪರಿಹಾರ ಶಿಬಿರಗಳಲ್ಲಿರುವ 50 ಸಾವಿರಕ್ಕೂ ಅಧಿಕ ಜನರಿಗೆ ಒದಗಿಸಲಾಗಿದೆ

 • 2.6 ಮಿಲಿಯನ್ ಟನ್ ತೂಕದ ಪರಿಹಾರ ಸಾಮಗ್ರಿಗಳನ್ನು ಮಹಾರಾಷ್ಟ್ರ ಸರ್ಕಾರದ ನೆರವಿನೊಂದಿಗೆ ವಿಮಾನದ ಮೂಲಕ ಕೇರಳಕ್ಕೆ ರಿಲಾಯನ್ಸ್ ಸಂಸ್ಥೆ ಸಾಗಿಸಿ ಸಂತ್ರಸ್ತರಿಗೆ ನೀಡಲಾಗುತ್ತಿದೆ.

 • 7.5 ಲಕ್ಷ ಉಡುಪುಗಳನ್ನು, 1.5 ಲಕ್ಷ ಜೋಡಿ ಪಾದರಕ್ಷೆ ಮತ್ತು ಆಹಾರಗಳನ್ನು ನೆರೆಪೀಡಿತ ಪ್ರದೇಶಗಳಿಗಾಗಿ ತಯಾರಿಸಲಾಗುತ್ತಿದೆ.

 • ರಿಲಾಯನ್ಸ್​ ರಿಟೈಲ್ ಮೂಲಕ ಸಂಸ್ಥೆಯು 50 ಕೋಟಿ ರೂ. ಮೊತ್ತದ ಪರಿಹಾರ ನೀಡಲು ಯೋಜನೆಯನ್ನು ಹಾಕಿಕೊಂಡಿದೆ.


ವೈದ್ಯಕೀಯ ಸಹಾಯ

 • ಕೇರಳದಲ್ಲಿ ಸಾಂಕ್ರಾಮಿಕ ರೋಗಗಳನ್ನು ತಡೆಯಲು ವೈದ್ಯಕೀಯ ನೆರವು ನೀಡಲು ಕೂಡ ರಿಲಾಯನ್ಸ್ ಮುಂದಾಗಿದೆ. ಮಲಯಾಳಂ ಸ್ಪೀಕಿಂಗ್ ತಂಡದೊಂದಿಗೆ ಸೇರಿ ಮೂರು ಜಿಲ್ಲೆಗಳಲ್ಲಿ ರಿಲಾಯನ್ಸ್ ಫೌಂಡೇಷನ್ ವೈದ್ಯಕೀಯ ಶಿಬಿರಗಳನ್ನು ಸ್ಥಾಪಿಸಲಿದೆ.

 • ಹಾಗೆಯೇ ರಾಜ್ಯ ಸರ್ಕಾರಕ್ಕೆ ಔಷಧಿಗಳನ್ನು ಸರಬರಾಜು ಪೂರೈಸಲು ರಿಲಾಯನ್ಸ್ ಸಂಸ್ಥೆಯು ಯೋಜನೆ ಹಾಕಿಕೊಂಡಿದೆ. ಈ ಮೂಲಕ ನೆರೆ ಪೀಡಿತ ಜಿಲ್ಲೆಗಳಿಗೆ ಬೇಕಾದ ಔಷಧಿಗಳನ್ನು ತಲುಪಿಸಲು ಕೇರಳ ಸರ್ಕಾರಕ್ಕೆ ನೆರವಾಗಲಿದೆ.

 • ಜಾನುವಾರು ಶಿಬಿರಗಳು

 • ರಿಲಾಯನ್ಸ್ ಫೌಂಡೇಷನ್ ಮೂಲಕ ಜಾನುವಾರುಗಳನ್ನು ಕಾಪಾಡುವ ಕಾರ್ಯಗಳನ್ನು ಮಾಡಲಾಗುತ್ತದೆ. ಮಳೆಯಿಂದ ಖಾಯಿಲೆಗಳಿಗೆ ತುತ್ತಾಗಿರುವ ಪ್ರಾಣಿಗಳಿಗೆ ಚಿಕಿತ್ಸೆ ನೀಡಿ, ಆಹಾರಗಳನ್ನು ಒದಗಿಸಲು ಶಿಬಿರವನ್ನು ಸ್ಥಾಪಿಸಲಾಗುತ್ತದೆ.


ನಿರ್ಮಾಣ ಮತ್ತು ಸಹಾಯ

 • ಭಾರಿ ಮಳೆಗೆ ಹಾನಿಗೊಳಗಾದ ಶಾಲಾ ಕಾಲೇಜುಗಳ ಪುನರ್ನಿಮಾಣಕ್ಕೆ ರಿಲಾಯನ್ಸ್ ಕೈ ಜೋಡಿಸಲಿದೆ. ಅಲ್ಲದೆ ರಸ್ತೆಗಳ ನಿರ್ಮಾಣ, ಮೂಲಭೂತ ಸೌಕರ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಸಂಸ್ಥೆಯು ಕಾರ್ಯ ನಿರ್ವಹಿಸಲಿದೆ.


ನುರಿತ ಕೆಲಸಗಾರರು

 • ಕೇರಳ ರಾಜ್ಯವನ್ನು ಪುನರ್ನಿರ್ಮಿಸಲು ಬೇಕಾದ ನುರಿತ ತಂತ್ರಜ್ಞರ ತಂಡವನ್ನು ರಿಲಾಯನ್ಸ್ ಸಂಸ್ಥೆ ಒದಗಿಸಲಿದೆ.


ಗೃಹಪಯೋಗಿ ಉಪಕರಣಗಳ ದುರಸ್ತಿ 

 • ರಿಲಾಯನ್ಸ್ ಡಿಜಿಟಲ್ ಮೂಲಕ ಮಳೆಯಿಂದ ಹಾನಿಗೊಳಗಾದ ಗೃಹಪಯೋಗಿ ಉಪಕರಣಗಳ ರಿಪೇರಿ ಅವಕಾಶವನ್ನು ಸಂಸ್ಥೆ ನೀಡಲಿದೆ. ಇಲ್ಲಿ ಉಚಿತ ಸರ್ವೀಸ್ ನೀಡಲಿದ್ದು, ದುರಸ್ತಿಗೆ ಬಳಸಿದ ಹೊಸ ವಸ್ತುಗಳಿಗೆ ಮಾತ್ರ ವೆಚ್ಚ ಭರಿಸಿದರೆ ಸಾಕು ಎಂದು ಸಂಸ್ಥೆ ಹೇಳಿದೆ.


 • ರಿಲಯನ್ಸ್ ಜಿಯೊ

 • ರಿಲಯನ್ಸ್ ಟೆಲಿಕಾಂ ಸೇವೆಯಲ್ಲಿ ಗ್ರಾಹಕರಿಗೆ 7 ದಿನಗಳ ಕಾಲ ಅನಿಯಮಿತ ಕರೆ ಮತ್ತು ಡೇಟಾ ಪ್ಯಾಕ್ ಸೌಲಭ್ಯಗಳನ್ನು ಒದಗಿಸಲಿದೆ. ಇದರಿಂದ ತಮ್ಮ ಆತ್ಮೀಯ ವ್ಯಕ್ತಿಗಳೊಂದಿಗೆ ಸಂತ್ರಸ್ತರ ಶಿಬಿರದಲ್ಲಿರುವವರನ್ನು ಸಂಪರ್ಕಿಸಲು ಸಾಧ್ಯವಾಗಲಿದೆ ಎಂದು ಸಂಸ್ಥೆ ತಿಳಿಸಿದೆ.

 • ಇಡುಕ್ಕಿ ಮತ್ತು ಎರ್ನಾಕುಲಂ ನಡುವೆ 100mbps ಸೇವೆಯನ್ನು ರಿಲಾಯನ್ಸ್ ನೀಡಿದೆ. ಭೀಕರ ಮಳೆಯಿಂದಾಗಿ ಇಡುಕ್ಕಿ ಜಿಲ್ಲಾಧಿಕಾರಿ ಕಚೇರಿ ಮತ್ತು ಸುತ್ತಮುತ್ತಲಿನ ಬಿಎಸ್​ಎನ್ಎಲ್ ಸೇವೆಗಳನ್ನು ಪುನಃಸ್ಥಾಪಿಸಲು ಸಂಸ್ಥೆ ನೆರವಾಗಲಿದೆ.

 • ಪ್ರವಾಹದಿಂದ ಕಾಣೆಯಾದವರನ್ನು ಪತ್ತೆ ಹಚ್ಚಲು 1800-893-9999 ನ ಟೋಲ್ ಫ್ರೀ ನಂಬರನ್ನು ರಿಲಾಯನ್ಸ್ ಪ್ರಾರಂಭಿಸಿದ್ದು, ಈ ನಂಬರಿಗೆ ಸಂದೇಶ ನೀಡುವ ಮೂಲಕ ತಮ್ಮವರನ್ನು ಕಂಡುಕೊಳ್ಳಲು ರಿಲಾಯನ್ಸ್ ನೆರವಾಗಲಿದೆ.


ನೆಟ್ವರ್ಕ್ 18 / ನ್ಯೂಸ್ 18

 • ನೆಟ್ವರ್ಕ್ 18 ಟಿವಿಯು 24/7 ಸಹಾಯವಾಣಿ ಸೇವೆಯನ್ನು ಪ್ರಾರಂಭಿಸಿದೆ. ಇಲ್ಲಿಗೆ ಕರೆ ಮಾಡುವ ಮೂಲಕ ಕಾಣೆಯಾದ ಕುಟುಂಬಗಳನ್ನು ಪತ್ತೆ ಹಚ್ಚಬಹುದಾಗಿದೆ.

 • ಟಿವಿ ಚಾನೆಲ್​ಗಳು ಮತ್ತು ಸಾಮಾಜಿಕ ಮಾಧ್ಯಮಗಳು 'ಓಪನ್ ಹಾರ್ಟ್ಸ್, ಓಪನ್ ಹೋಮ್ಸ್​' ಎಂಬ ಅಭಿಯಾನ ಪ್ರಾರಂಭಿಸಿದ್ದು, ಈ ಮೂಲಕ ನೆರೆ ಪೀಡಿತ ಜನರಿಗೆ ತಮ್ಮ ಮನೆಗಳಲ್ಲಿ ಉಳಿಯಲು ಅವಕಾಶ ಕಲ್ಪಿಸಲಾಗಿದೆ.

 • ಟಿವಿ ಚಾನೆಲ್​ಗಳು ಮತ್ತು ಸಾಮಾಜಿಕ ಮಾಧ್ಯಮಗಳು ಸುಳ್ಳು ಸುದ್ದಿಗಳನ್ನು ಪತ್ತೆ ಹಚ್ಚಿ ಜನರಿಗೆ ಧೈರ್ಯ ತುಂಬುವ ಕೆಲಸಗಳನ್ನು ಮಾಡುತ್ತಿದೆ.

 • ಸ್ವಯಂ ಸೇವಕರ ಮೂಲಕ ವಿದ್ಯುತ್ ಇಲ್ಲದ ಪ್ರದೇಶಗಳಿಗೆ ವಿದ್ಯುತ್ ಪೂರೈಸುವ ಪವರ್ ಬ್ಯಾಂಕ್​ಗಳನ್ನು ತಲುಪಿಸುವ ಕಾರ್ಯಗಳನ್ನು ರಿಲಾಯನ್ಸ್ ಸಂಸ್ಥೆ ಮಾಡುತ್ತಿದೆ.

First published:August 21, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...