Women Connect Challenge India: ಮಹಿಳಾ ತಂತ್ರಜ್ಞಾನ ಸಬಲೀಕರಣಕ್ಕೆ 8.5 ಕೋಟಿ ಅನುದಾನ ನೀಡಿದ ರಿಲಯನ್ಸ್ ಫೌಂಡೇಷನ್!

ರಿಲಯನ್ಸ್ ಜಿಯೋ ಮೂಲಕ 1.3 ಶತಕೋಟಿಗೂ ಹೆಚ್ಚು ಭಾರತೀಯರು ಪ್ಯಾನ್-ಇಂಡಿಯಾ ಡಿಜಿಟಲ್ ಕ್ರಾಂತಿ ಕಂಡಿದ್ದಾರೆ. ಇಂದು, ಜಿಯೋ ಭಾರತದ ಅತಿದೊಡ್ಡ ಡಿಜಿಟಲ್ ಸೇವೆಗಳ ಕಂಪನಿಯಾಗಿದ್ದು, 120 ದಶಲಕ್ಷ ಮಹಿಳಾ ಬಳಕೆದಾರರನ್ನು ಹೊಂದಿರುವ ವಿಶ್ವದ ಎರಡನೇ ಅತಿದೊಡ್ಡ ಕಂಪನಿಯಾಗಿದ್ದು, ಡಿಜಿಟಲ್ ವಿಭಜನೆಯನ್ನು ಕಡಿಮೆ ಮಾಡಲು ಈ ಸಂಖ್ಯೆ ವೇಗವಾಗಿ ಬೆಳೆಯುತ್ತಿದೆ.

ರಿಲಯನ್ಸ್​ ಇಂಡಸ್ಟ್ರೀಸ್

ರಿಲಯನ್ಸ್​ ಇಂಡಸ್ಟ್ರೀಸ್

  • Share this:
    ಮುಂಬೈ, (ಸೆಪ್ಟೆಂಬರ್ 28): ರಿಲಾಯನ್ಸ್ ಫೌಂಡೇಶನ್ (Reliance Foundation) ಮತ್ತು ಯುಎಸ್‌ ಏಜೆನ್ಸಿ ಫಾರ್ ಇಂಟರ್‌ನ್ಯಾಷನಲ್ ಡೆವಲಪ್‌ಮೆಂಟ್ (USAID) ಆರಂಭಿಸಿದ ವುಮೆನ್ ಕನೆಕ್ಟ್ ಚಾಲೆಂಜ್ ಇಂಡಿಯಾ (Women Connect Challenge India) ಮೂಲಕ ಭಾರತದಾದ್ಯಂತ ಹತ್ತು ಸಂಸ್ಥೆಗಳನ್ನು ಅನುದಾನಿತರಾಗಿ ಆಯ್ಕೆ ಮಾಡಲಾಗಿದೆ. ಈ ಮೂಲಕ, ಡಿಜಿಟಲ್ ಲಿಂಗ ಪಕ್ಷಪಾತ (Women Digital Divide) ಸಮಸ್ಯೆ ಪರಿಹರಿಸಲು 11 ಕೋಟಿ ರೂಪಾಯಿಗಳಿಗಿಂತ ಹೆಚ್ಚು ($ 1.5 ದಶಲಕ್ಷ USD) ಹೂಡಿಕೆ ಮಾಡಲಾಗಿದೆ ಮತ್ತು ಇದರಲ್ಲಿ, ರಿಲಯನ್ಸ್ ಫೌಂಡೇಶನ್ ರೂ 8.5 ಕೋಟಿಗಳನ್ನು ($ 1.1 ದಶಲಕ್ಷ USD) ವಿನೂತನ ಪರಿಹಾರಗಳನ್ನು ರೂಪಿಸುವ ಯೋಜನೆಗಳಿಗೆ ಅನುದಾನ ಒದಗಿಸಿದೆ. 17 ರಾಜ್ಯಗಳಾದ್ಯಂತ 3 ಲಕ್ಷಕ್ಕೂ ಹೆಚ್ಚು (300,000) ಮಹಿಳೆಯರು ಮತ್ತು ಯುವತಿಯರು ತಂತ್ರಜ್ಞಾನದ ಮೂಲಕ ಮಹಿಳಾ ಆರ್ಥಿಕ ಸಬಲೀಕರಣವನ್ನು ಹೆಚ್ಚಿಸುವ ಪ್ರಯೋಜನ ಪಡೆಯಲಿದ್ದಾರೆ.

    ಈ ಕುರಿತು ಮಾತನಾಡಿದ ರಿಲಯನ್ಸ್ ಫೌಂಡೇಶನ್ ಸ್ಥಾಪಕ ಅಧ್ಯಕ್ಷೆ ನೀತಾ ಎಂ ಅಂಬಾನಿ (RIL Founder Chairman Nita M Ambani) ಅವರು, "ಜೀವನದ ಪ್ರತಿಯೊಂದು ಹಂತದಲ್ಲೂ ಮಹಿಳೆಯರನ್ನು ಸಕ್ರಿಯಗೊಳಿಸುವುದು ಮತ್ತು ಸಬಲೀಕರಣಗೊಳಿಸುವುದು ನಮ್ಮ ಧ್ಯೇಯವಾಗಿದೆ. ನಾವು ಜಿಯೋವನ್ನು ಪ್ರಾರಂಭಿಸುವ ಮೂಲಕ ಡಿಜಿಟಲ್ ಕ್ರಾಂತಿಗೆ ಮುನ್ನುಡಿ ಬರೆದೆವು. ಇದು ಸಮಾನ ಅವಕಾಶದ ಕ್ರಾಂತಿ ಸಹ ಆಗಿದೆ. ಜಿಯೋ ಮೂಲಕ, ನಾವು ನಮ್ಮ ದೇಶದ ಉದ್ದಗಲಕ್ಕೂ ಕೈ ಗೆಟುಕುವ ಸಂಪರ್ಕವನ್ನು ಕಲ್ಪಿಸುತ್ತಿದ್ದೇವೆ. ರಿಲಯನ್ಸ್ ಫೌಂಡೇಶನ್ ಯುಎಸ್‌ಐಐಡಿ ಜೊತೆಗಿನ ಪಾಲುದಾರಿಕೆಯಲ್ಲಿ ಭಾರತದಲ್ಲಿ ಲಿಂಗ ಡಿಜಿಟಲ್ ವಿಭಜನೆ ಸಮಸ್ಯೆ ಪರಿಹಾರಾರ್ಥವಾಗಿ ಕೆಲಸ ಮಾಡುತ್ತಿದೆ. ಅಸಮಾನತೆಯನ್ನು ಪರಿಹರಿಸಲು ಮತ್ತು ತೊಡೆದುಹಾಕಲು ತಂತ್ರಜ್ಞಾನವು ಪ್ರಬಲ ಸಾಧನವಾಗಿದೆ. ನಮ್ಮ ಮಹಿಳಾ ಸಂಪರ್ಕ ಚಾಲೆಂಜ್ ಇಂಡಿಯಾದ ಹತ್ತು ವಿಜೇತರನ್ನು ನಾನು ಅಭಿನಂದಿಸುತ್ತೇನೆ ಎಂದು ಹೇಳಿದರು.

    ಅನುದೀಪ್ ಫೌಂಡೇಷನ್, ಬರೆಫುಟ್ ಕಾಲೇಜ್ ಇಂಟರ್​ನ್ಯಾಷನಲ್, ಸೆಂಟರ್ ಫಾರ್ ಯೂತ್ ಆ್ಯಂಡ್ ಸೋಷಿಯಲ್ ಡೆವೆಲಪ್​ಮೆಂಟ್, ಫ್ರೆಂಡ್ಸ್ ಆಫ್ ವುಮೆನ್ಸ್ ವರ್ಲ್ಡ್ ಬ್ಯಾಂಕಿಂಗ್, ನಂದಿ ಫೌಂಡೇಷನ್, ಪ್ರೋಫೆಷನ್ ಅಸಿಸ್ಟೆಂಟ್ ಫಾರ್ ಡೆವಲಪ್​ಮೆಂಟ್ ಆ್ಯಕ್ಷನ್, ಸೊಸೈಟಿ ಫಾರ್ ಡೆವಲಪ್​ಮೆಂಟ್ ಅಲ್ಟರ್​ನೆಟಿವ್ಸ್, ಸೊಲಿದರಿದಾದ್ ರೀಜಿನಲ್ ಎಕ್ಸ್​ಪರ್ಟಿಸ್ ಸೆಂಟರ್, ಟಿಎನ್​ಎಸ್ ಇಂಡಿಯಾ ಫೌಂಡೇಷನ್ ಮತ್ತು ಝಡ್​ಎಂಕ್ಯೂ ಡೆವಲಪ್​ಮೆಂಟ್​ ಹತ್ತು ಅನುದಾನ ನೀಡುವ ಸಂಸ್ಥೆಗಳಾಗಿವೆ. ಮಹಿಳಾ ರೈತರು, ಉದ್ಯಮಿಗಳು, ಸ್ವ-ಸಹಾಯ ಸಂಘಗಳ ಸದಸ್ಯರಿಗೆ ಡಿಜಿಟಲ್ ಲಿಂಗ ಅಸಮಾನತೆ ನಿವಾರಿಸಿ, ಸಾಮಾಜಿಕ ಮತ್ತು ಸಾಂಸ್ಕೃತಿಕ ಸಮಾನತೆ ಕುರಿತು ಮಾತನಾಡಲಾಯಿತು.

    ವುಮೆನ್ ಕನೆಕ್ಟ್ ಚಾಲೆಂಜ್ ಇಂಡಿಯಾವನ್ನು ಆಗಸ್ಟ್ 2020 ರಲ್ಲಿ ಆರಂಭಿಸಲಾಯಿತು. 180 ಕ್ಕೂ ಹೆಚ್ಚು ಅರ್ಜಿಗಳ ಸಂಗ್ರಹ, 10 ಸಂಸ್ಥೆಗಳನ್ನು 12 ರಿಂದ 15 ತಿಂಗಳ ಅವಧಿಯಲ್ಲಿ ತಲಾ 75 ಲಕ್ಷದಿಂದ 1 ಕೋಟಿ ($ 100,000 - $ 135,000) ಅನುದಾನದೊಂದಿಗೆ ಆಯ್ಕೆ ಮಾಡಲಾಗಿದೆ. ಜನವರಿ 2021 ರಲ್ಲಿ, ಯುಎಸ್‌ಐಐಡಿ ಮತ್ತು ರಿಲಯನ್ಸ್ ಫೌಂಡೇಶನ್ ಜಂಟಿಯಾಗಿ ಸೊಲ್ವರ್ಸ್ ಸಿಂಪೋಸಿಯಂ ಅನ್ನು ಆಯೋಜಿಸಿದ್ದು, ಸೆಮಿ-ಫೈನಲಿಸ್ಟ್‌ಗಳು ಮತ್ತು ಬಾಹ್ಯ ಪರಿಣಿತರನ್ನು ಒಟ್ಟುಗೂಡಿಸಿ ಸಾಮರ್ಥ್ಯ ವೃದ್ಧಿಗಾಗಿ ಭಾರತದಲ್ಲಿ ಲಿಂಗ ಡಿಜಿಟಲ್ ವಿಭಜನೆಯ ಕುರಿತು ಚಿಂತನೆ ನಡೆಸಿತು.

    ಇದನ್ನು ಓದಿ: Apple iPad: ಯಾವ ಆ್ಯಪಲ್‌ ಐಪ್ಯಾಡ್ ಬೆಸ್ಟ್​? ಖರೀದಿಸುವಾಗ ಯಾವೆಲ್ಲಾ ಅಂಶಗಳನ್ನು ಪರಿಗಣಿಸಬೇಕು?

    ಮೊಬೈಲ್ ಇಂಟರ್ನೆಟ್ ಜಾಗೃತಿ ಮಹಿಳೆಯರಲ್ಲಿ ಪ್ರತಿವರ್ಷ ಹೆಚ್ಚುತ್ತಿದೆ. 2017 ರಲ್ಲಿ ಭಾರತದಲ್ಲಿ ಕೇವಲ ಶೇ. 19 ಮಹಿಳೆಯರು ಮಾತ್ರ ಮೊಬೈಲ್ ಇಂಟರ್ನೆಟ್ ಬಗ್ಗೆ ತಿಳಿದಿದ್ದರು. 2020 ರಲ್ಲಿ ಇದು ಶೇ. 53ಕ್ಕೆ ಏರಿತು. ಮಾಲೀಕತ್ವದ ವಿಷಯದಲ್ಲಿ ಪರುಷರು ಶೇ.79 ರಷ್ಟು ಮೊಬೈಲ್ ಫೋನ್ ಹೊಂದಿದ್ದರೆ ಮಹಿಳೆಯರು ಶೇ. 67 ಮೊಬೈಲ್ ಫೋನ್ ಹೊಂದಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ರಿಲಯನ್ಸ್ ಫೌಂಡೇಶನ್‌ನ ಕ್ರಮಗಳು ಡಿಜಿಟಲ್ ವಿಭಜನೆಯನ್ನು ನಿವಾರಿಸುವ ಗುರಿಯನ್ನು ಹೊಂದಿವೆ. ರಿಲಯನ್ಸ್ ಜಿಯೋ ಮೂಲಕ 1.3 ಶತಕೋಟಿಗೂ ಹೆಚ್ಚು ಭಾರತೀಯರು ಪ್ಯಾನ್-ಇಂಡಿಯಾ ಡಿಜಿಟಲ್ ಕ್ರಾಂತಿ ಕಂಡಿದ್ದಾರೆ. ಇಂದು, ಜಿಯೋ ಭಾರತದ ಅತಿದೊಡ್ಡ ಡಿಜಿಟಲ್ ಸೇವೆಗಳ ಕಂಪನಿಯಾಗಿದ್ದು, 120 ದಶಲಕ್ಷ ಮಹಿಳಾ ಬಳಕೆದಾರರನ್ನು ಹೊಂದಿರುವ ವಿಶ್ವದ ಎರಡನೇ ಅತಿದೊಡ್ಡ ಕಂಪನಿಯಾಗಿದ್ದು, ಡಿಜಿಟಲ್ ವಿಭಜನೆಯನ್ನು ಕಡಿಮೆ ಮಾಡಲು ಈ ಸಂಖ್ಯೆ ವೇಗವಾಗಿ ಬೆಳೆಯುತ್ತಿದೆ.
    Published by:HR Ramesh
    First published: