ರಿಲಯನ್ಸ್​ ಫೌಂಡೇಷನ್ ಅಧ್ಯಕ್ಷೆ ನೀತಾ ಅಂಬಾನಿ ಸಾಧನೆಯ ಹಾದಿ ಇಲ್ಲಿದೆ...

ಅಕ್ಟೋಬರ್ 7 ರಿಂದ 10 ರವರೆಗೆ ಲಂಡನ್​ನಲ್ಲಿ ನಡೆಯಲಿರುವ 2019ರ ಈ ಸಮ್ಮೇಳನದಲ್ಲಿ ನೀತಾ ಅಂಬಾನಿಯವರಲ್ಲದೆ ವಿಶ್ವದಾದ್ಯಂತ ಸುಮಾರು 3,000 ಕ್ಕೂ ಹೆಚ್ಚು ಕ್ರೀಡಾಪಟುಗಳು, ಕ್ರೀಡಾ ಉದ್ಯಮಿಗಳು ಮತ್ತು ಕ್ರೀಡಾ ಕ್ಷೇತ್ರದ ಅಭಿವೃದ್ಧಿಗಾಗಿ ಕೆಲಸ ಮಾಡುತ್ತಿರುವವರು ಭಾಗವಹಿಸಲಿದ್ದಾರೆ. ಭಾರತದ ಹೆಸರಾಂತ ಉದ್ಯಮಿಯಾಗಿರುವ ನೀತಾ ಅಂಬಾನಿ ಉದ್ಯಮ ಕ್ಷೇತ್ರದಲ್ಲಿ ಮಾಡಿರುವ ಸಾಧನೆಗಳ ಪಟ್ಟಿ ಇಲ್ಲಿದೆ.

Sushma Chakre | news18-kannada
Updated:October 8, 2019, 6:58 PM IST
ರಿಲಯನ್ಸ್​ ಫೌಂಡೇಷನ್ ಅಧ್ಯಕ್ಷೆ ನೀತಾ ಅಂಬಾನಿ ಸಾಧನೆಯ ಹಾದಿ ಇಲ್ಲಿದೆ...
ನೀತಾ ಅಂಬಾನಿ
 • Share this:
ನವದೆಹಲಿ (ಅ. 8): ರಿಲಯನ್ಸ್ ಫೌಂಡೇಶನ್​ನ ಸಂಸ್ಥಾಪಕ ಅಧ್ಯಕ್ಷೆ ಮತ್ತು ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿಯ (ಐಒಸಿ) ಮೊದಲ ಭಾರತೀಯ ಮಹಿಳಾ ಸದಸ್ಯೆ ನೀತಾ ಅಂಬಾನಿ ಲಂಡನ್​ನಲ್ಲಿ ಇಂದು ಸಂಜೆ  ದಿ ಸ್ಪೋರ್ಟ್ ಬ್ಯುಸಿನೆಸ್ ಶೃಂಗಸಭೆಯಲ್ಲಿ “ಬಿಲಿಯನ್ ಡ್ರೀಮ್ಸ್: ದಿ ಇಂಡಿಯಾ ಆಪರ್ಚುನಿಟಿ” ಎಂಬ ಶೀರ್ಷಿಕೆಯ ಕುರಿತು ತಮ್ಮ ವಿಷಯ ಮಂಡನೆ ಮಾಡಲಿದ್ದಾರೆ.

ಅಕ್ಟೋಬರ್ 7 ರಿಂದ 10 ರವರೆಗೆ ಲಂಡನ್​ನಲ್ಲಿ ನಡೆಯಲಿರುವ 2019ರ ಈ ಸಮ್ಮೇಳನದಲ್ಲಿ ನೀತಾ ಅಂಬಾನಿಯವರಲ್ಲದೆ ವಿಶ್ವದಾದ್ಯಂತ ಸುಮಾರು 3,000 ಕ್ಕೂ ಹೆಚ್ಚು ಕ್ರೀಡಾಪಟುಗಳು, ಕ್ರೀಡಾ ಉದ್ದಿಮೆದಾರರು ಮತ್ತು ಕ್ರೀಡಾ ಕ್ಷೇತ್ರದ ಅಭಿವೃದ್ಧಿಗಾಗಿ ಕೆಲಸ ಮಾಡುತ್ತಿರುವವರು ಭಾಗವಹಿಸಲಿದ್ದಾರೆ. ಭಾರತದ ಹೆಸರಾಂತ ಉದ್ಯಮಿಯಾಗಿರುವ ನೀತಾ ಅಂಬಾನಿ ಉದ್ಯಮ ಕ್ಷೇತ್ರದಲ್ಲಿ ಮಾಡಿರುವ ಸಾಧನೆಗಳ ಪಟ್ಟಿ ಇಲ್ಲಿದೆ.


 • ರಿಲಯನ್ಸ್​ ಫೌಂಡೇಷನ್ ಮುಖ್ಯಸ್ಥೆಯಾಗಿರುವ ನೀತಾ ಅಂಬಾನಿ 2017ರಲ್ಲಿ ಅವರಿಗೆ ರಾಷ್ಟ್ರೀಯ ಪ್ರೋತ್ಸಾಹನ್ ಪ್ರಶಸ್ತಿ ಲಭಿಸಿದೆ.

 • ರಿಲಯನ್ಸ್ ಫೌಂಡೇಶನ್ ಸ್ಥಾಪಿಸಿ ಬಡ ಮಕ್ಕಳಿಗೆ ಉಚಿತ ಶಿಕ್ಷಣ ನೀಡುವ ಮೂಲಕ ಅವರು ಸಮಾಜ ಸೇವೆಯಲ್ಲಿಯೂ ಗುರುತಿಸಿಕೊಂಡಿದ್ದಾರೆ.

 • ತಮ್ಮ ಫೌಂಡೇಷನ್ ಮೂಲಕ ಭಾರತದ ಕ್ರೀಡಾ ಕ್ಷೇತ್ರವನ್ನು ಪ್ರಚಾರ ಮಾಡುವಲ್ಲಿ ಶ್ರಮ ವಹಿಸಿದ್ದಾರೆ.

 • ನ್ಯಾಷನಲ್ ಬಾಸ್ಕೆಟ್​ಬಾಲ್​ ಅಸೋಸಿಯೇಷನ್​ಗೆ ಸಹಭಾಗಿತ್ವ ನೀಡುವ ಮೂಲಕ ರಿಲಯನ್ಸ್​ ಫೌಂಡೇಷನ್ ಜೂನಿಯರ್ ಎನ್​ಬಿಎ ಪ್ರೋಗ್ರಾಂ ಮಾಡಿದ್ದಾರೆ.
 • ರಿಲಯನ್ಸ್​ ಫೌಂಡೇಷನ್​ನ ಜೂನಿಯರ್ ಎನ್​ಬಿಎ ಪ್ರೋಗ್ರಾಂ ಜಗತ್ತಿನ ಅತಿ ದೊಡ್ಡ ಎನ್​ಬಿಎ ಪ್ರೋಗ್ರಾಂ ಎನಿಸಿಕೊಂಡಿದೆ.

 • ರಿಲಯನ್ಸ್​ ಫೌಂಡೇಷನ್​ನ ಎನ್​ಬಿಎ ಪ್ರೋಗ್ರಾಂ 20 ರಾಜ್ಯಗಳ, 34 ನಗರಗಳ 1.1 ಕೋಟಿ ಮಕ್ಕಳನ್ನು ತಲುಪಿದೆ.

 • ಕ್ರಿಕೆಟ್​ ಕ್ರೀಡೆಯ ಬಗ್ಗೆ ಹೆಚ್ಚು ಆಸಕ್ತರಾಗಿರುವ ಮಕ್ಕಳನ್ನು ಬಾಸ್ಕೆಟ್​ಬಾಲ್​ನತ್ತ ಆಕರ್ಷಿಸಿ ಅವರನ್ನು ಎಲ್ಲ ಕ್ರೀಡೆಗಳಲ್ಲಿ ತೊಡಗಿಸಿಕೊಳ್ಳುವಂತೆ ನೀತಾ ಅಂಬಾನಿ ಮಾಡಿದ್ದಾರೆ.

 • ಕಳೆದ ತಿಂಗಳಾಂತ್ಯದಲ್ಲಿ ಮುಂಬೈನಲ್ಲಿ ಭಾರತದ ಮೊದಲ ಎನ್​ಬಿಎ ಕ್ರೀಡೆಯನ್ನು ನೀತಾ ಅಂಬಾನಿ ಆಯೋಜಿಸಿದ್ದರು.

 • ರಿಲಯನ್ಸ್​ ಫೌಂಡೇಷನ್ ಯೂಥ್ ಸ್ಪೋರ್ಟ್ಸ್​ ಇದುವರೆಗೂ 5 ಸಾವಿರ ಶಿಕ್ಷಣ ಸಂಸ್ಥೆಗಳ 40 ಲಕ್ಷ ಮಕ್ಕಳ ಮೇಲೆ ಪರಿಣಾಮ ಬೀರಿದೆ.

 • ಕ್ರೀಡಾ ಕ್ಷೇತ್ರದಲ್ಲಿನ ನೀತಾ ಅಂಬಾನಿ ಸಾಧನೆಯನ್ನು ಗುರುತಿಸಿದ್ದ ಟೈಮ್ಸ್ ಆಫ್ ಇಂಡಿಯಾ ಸಂಸ್ಥೆ 2017ರಲ್ಲಿ “ಭಾರತೀಯ ಕ್ರೀಡೆಗಳ ಅತ್ಯುತ್ತಮ ಕಾರ್ಪೊರೇಟ್ ಪ್ರವರ್ತಕಿ” ಪ್ರಶಸ್ತಿ ನೀಡಿ ಗೌರವಿಸಿದೆ.

 • 2017ರಲ್ಲಿ ರಾಷ್ಟ್ರಪತಿ ರಾಮನಾಥ ಕೋವಿಂದ್ ನೀತಾ ಅಂಬಾನಿ ಅವರಿಗೆ ರಾಷ್ಟ್ರೀಯ ಕ್ರೀಡಾ ಪ್ರಚಾರ ಪ್ರಶಸ್ತಿ ನೀಡಿದ್ದರು.

 • 2016ರಲ್ಲಿ ನೀತಾ ಅಂಬಾನಿ ಅವರನ್ನು ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿಯ ಎರಡು ಪ್ರತಿಷ್ಠಿತ ಆಯೋಗಗಳಿಗೆ ಸದಸ್ಯೆಯಾಗಿ ಆಯ್ಕೆಯಾಗಿದ್ದರು.

 • ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿಯ (ಐಒಸಿ) ಮೊದಲ ಭಾರತೀಯ ಮಹಿಳಾ ಸದಸ್ಯೆ ಎಂಬ ಹೆಗ್ಗಳಿಕೆ ನೀತಾ ಅಂಬಾನಿ ಅವರದ್ದು.

 • ನೀತಾ ಅಂಬಾನಿ ಐಪಿಎಲ್ ಕ್ರಿಕೆಟ್​ನ ಮುಂಬೈ ಇಂಡಿಯನ್ಸ್​ ತಂಡದ ಒಡೆತನವನ್ನೂ ಹೊಂದಿದ್ದಾರೆ

 • ಮುಂಬೈ ಇಂಡಿಯನ್ಸ್​ ತಂಡ ಈ ವರ್ಷವೂ ಸೇರಿದಂತೆ ಒಟ್ಟು 4 ಐಪಿಎಲ್​ ಪಂದ್ಯಗಳಲ್ಲಿ ಜಯ ಗಳಿಸಿತ್ತು.First published: October 8, 2019, 6:58 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading