ಪ್ರವಾಹ ಪೀಡಿತ ಕೇರಳಕ್ಕೆ ರಿಲಾಯನ್ಸ್​ ಫೌಂಡೇಶನ್ ನೆರವು

news18
Updated:August 30, 2018, 10:57 PM IST
ಪ್ರವಾಹ ಪೀಡಿತ ಕೇರಳಕ್ಕೆ ರಿಲಾಯನ್ಸ್​ ಫೌಂಡೇಶನ್ ನೆರವು
news18
Updated: August 30, 2018, 10:57 PM IST
 ನ್ಯೂಸ್ 18 ಕನ್ನಡ 

ಬೆಂಗಳೂರು (ಆಗಸ್ಟ್ 30) :  ಶತಮಾನದ ಪ್ರವಾಹದಿಂದ ಕಂಗೆಟ್ಟಿದ್ದ ಕೇರಳ ಕಟ್ಟಲು ರಿಲಾಯನ್ಸ್ ಫೌಂಡೇಶನ್ ನೆರವಾಗಿದೆ. ಕೇರಳ ಸಿಎಂ ಪ್ರಕೃತಿ ವಿಕೋಪ ನಿಧಿಗೆ 21 ಕೋಟಿ ಹಣವನ್ನು ದೇಣಿಗೆ ನೀಡಿದೆ. ಕೇರಳ ಸಿಎಂ ಪಿಣರಾಯಿ ವಿಜಯನ್ ಭೇಟಿ ಮಾಡಿದ ಫೌಂಡೇಶನ್ ಅಧ್ಯಕ್ಷೆ ನೀತಾ ಅಂಬಾನಿ ಅನುದಾನ ಹಸ್ತಾಂತರ ಮಾಡಿದರು.

ರಿಲಾಯನ್ಸ್​ ಫೌಂಡೇಶ್​ನಿಂದದ ಕೇರಳಕ್ಕೆ 50 ಕೋಟಿ ಮೌಲ್ಯದ ಪರಿಹಾರ ಸಾಮಗ್ರಿ ಪೂರೈಕೆ ಮಾಡಲಾಗಿದೆ. ಫೌಂಡೇಶನ್​ ತಂಡದಿಂದ 6 ಸ್ಥಳಗಳಾದ ಎರ್ನಾಕುಲಂ, ವೈನಾಡು,ಅಳಪ್ಪುಳ,ತ್ರಿಶೂರ್​,ಇಡುಕ್ಕಿಯಲ್ಲಿ ನೆರವು ನೀಡಲು ಗುರುತಿಸಲಾಗಿದ್ದು, ತಾತ್ಕಾಲಿಕ ಶೆಡ್​, ಶಾಲೆ, ತಾತ್ಕಾಲಿಕ ಆಸ್ಪತ್ರೆಗಳ ನಿರ್ಮಾಣ  ಮಾಡಲು  ಫೌಂಡೇಶನ್ ನೇರವು ನೀಡುತ್ತಿದೆ.

ಪ್ರವಾಹ ಪೀಡಿತ ಕೇರಳದಲ್ಲಿ 15 ಸಾವಿರ ಕುಟುಂಬಗಳಿಗೆ ಅಗತ್ಯ ವಸ್ತುಗಳ ಪೂರೈಕೆ ಮಾಡಲಾಗಿದ್ದು, ನೆಟ್​ವರ್ಕ್​-18 ಸಂಸ್ಥೆಯಿಂದ 24/7 ಹೆಲ್ಪ್​ಲೈನ್​ ಸೇವೆ ಆರಂಭಿಸಲಾಗಿದೆ. ರಿಲಾಯನ್ಸ್​ ರೀಟೇಲ್​ನಿಂದ ರೆಡಿಮೇಡ್​ ಆಹಾರ ಪೂರೈಕೆ,
ರಿಲಾಯನ್ಸ್​ ಜಿಯೋದಿಂದ ಅನಿಯಮಿತ ವಾಯ್ಸ್, ಡೇಟಾ ಪ್ಯಾಕ್​ ನೀಡುತ್ತಿದ್ದು,
160 ನಿರಾಶ್ರಿತ ತಾಣಗಳಿಗೆ ಗ್ಲೂಕೋಸ್​, ಸ್ಯಾನಿಟೆರಿ ಪ್ಯಾಡ್​ಗಳನ್ನು ಪೂರೈಕೆ ಮಾಡಲಾಗುತ್ತಿದೆ.
Loading... 

 
First published:August 30, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...