ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಸುವರ್ಣಾವಕಾಶ: ರಿಲಯನ್ಸ್​ ಫೌಂಡೇಶನ್​ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ

ವಿದ್ಯಾರ್ಥಿಗಳಲ್ಲಿನ ಕೌಶಲ್ಯವನ್ನು ರಿಲಯನ್ಸ್ ಪೋಷಿಸಲು ಈ ವಿದ್ಯಾರ್ಥಿ ವೇತನ ನೀಡಲಾಗುತ್ತಿದೆ

ರಿಲಯನ್ಸ್​​​ ಫೌಂಡೇಶನ್​​

ರಿಲಯನ್ಸ್​​​ ಫೌಂಡೇಶನ್​​

 • Share this:
  ನಾಳಿನ ಭಾರತದ ಸಂಭಾವ್ಯ ತಂತ್ರಜ್ಞಾನ ನಾಯಕರನ್ನು ಪೋಷಿಸುವ ಉದ್ದೇಶದಿಂದಲೇ ರಿಲಯನ್ಸ್ (Reliance)​ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ (Scholarship)  ನೀಡುತ್ತಿದೆ. ಅಂತಹ ದೇಶದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಶಿಕ್ಷಣ ವೇತನಕ್ಕೆ ರಿಲಯನ್ಸ್ ಫೌಂಡೇಶನ್ (Reliance Foundation) ಅರ್ಜಿ ಆಹ್ವಾನಿಸಿದೆ. ದೇಶದ ಮೂಲೆ ಮೂಲೆಯಲ್ಲಿನ ಪದವಿ ಪೂರ್ವ ವಿದ್ಯಾರ್ಥಿಗಳು ಇದಕ್ಕೆ ಮುಕ್ತವಾಗಿ ಅರ್ಜಿ ಸಲ್ಲಿಸಬಹುದಾಗಿದ್ದು, 100 ವಿದ್ಯಾರ್ಥಿಗಳು ಈ ಶಿಕ್ಷಣ ವೇತನ ಪಡೆಯಲಿದ್ದಾರೆ. ಪದವಿಪೂರ್ವ ವಿದ್ಯಾರ್ಥಿಗಳನ್ನು ಗುರುತಿಸಿ, ಬೆಂಬಲಿಸುವುದು ಇದರ ಮುಖ್ಯ ಧ್ಯೇಯವಾಗಿದೆ. ಈ ಮೂಲಕ ಭಾರತದ ತಾಂತ್ರಿಕ ಬೆಳವಣಿಗೆಯಲ್ಲಿ ಮುನ್ನಡೆಸಲು ಮತ್ತು ಮುಂಚೂಣಿಯಲ್ಲಿರಲು ಸಿದ್ಧರಾಗಿರುವ ವಿದ್ಯಾರ್ಥಿಗಳಲ್ಲಿನ ಕೌಶಲ್ಯವನ್ನು ರಿಲಯನ್ಸ್ ಪೋಷಿಸಲು ಸಿದ್ದವಾಗಿದೆ.

  ಯಾರೆಲ್ಲಾ ಅರ್ಹರು ಈ ಅರ್ಜಿಗೆ
  ಭಾರತದಾದ್ಯಂತ ಇರುವ ಶಿಕ್ಷಣ ಸಂಸ್ಥೆಗಳಲ್ಲಿ ಮೊದಲ ವರ್ಷದ ಪದವಿಪೂರ್ವ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳು ಈ ಶಿಕ್ಷಣ ವೇತನಕ್ಕೆ ಅರ್ಜಿ ಸಲ್ಲಿಸಬಹುದಾಗಿದೆ. ವಿದ್ಯಾರ್ಥಿಗಳು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್, ಕಂಪ್ಯೂಟರ್ ಸೈನ್ಸಸ್, ಗಣಿತ , ಕಂಪ್ಯೂಟಿಂಗ್, ಮತ್ತು ಎಲೆಕ್ಟ್ರಿಕಲ್ ಮತ್ತು/ಅಥವಾ ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್ ಪದವಿ ಅಭ್ಯಾಸಿಸುತ್ತಿರುವರಾಗಿರಬೇಕುಅಭಿವೃದ್ಧಿ ಕಾರ್ಯಕ್ರಮ, ತಜ್ಞರ ಸಂವಾದಗಳು, ಉದ್ಯಮದ ಮಾನ್ಯತೆ ಮತ್ತು ಸ್ವಯಂ ಸೇವಕರು ಸೇರಿದಂತೆ ನುರಿತವರ ಅವರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳನ್​ನು ಪೋಷಿಸುವುದು ಇದರ ಉದ್ದೇಶವಾಗಿದೆ. ಪ್ರತಿ ವರ್ಷ ರಿಲಯನ್ಸ್ ಫೌಂಡೇಶನ್​ ಈ ಅರ್ಜಿ ಅಹ್ವಾನಿಸುತ್ತಿದ್ದು, ಇದಕ್ಕೆ ಅರ್ಜಿ ಸಲ್ಲಿಸಲು ಯಾವುದೇ ಪ್ರವೇಶ ಶುಲ್ಕವಿಲ್ಲ

  ಎಷ್ಟು ಸಿಗಲಿದೆ ಶಿಕ್ಷಣ ವೇತನ
  ರಿಲಯನ್ಸ್ ಫೌಂಡೇಶನ್ ವಿದ್ಯಾರ್ಥಿ ವೇತನದ ಮೂಲಕ, 100 ಅರ್ಜಿಗಳಲ್ಲಿ 60 ಪದವಿಪೂರ್ವ ವಿದ್ಯಾರ್ಥಿಗಳು ಮತ್ತು 40 ಸ್ನಾತಕೋತ್ತ ವಿದ್ಯಾರ್ಥಿಗಳಿಗೆ ಶಿಕ್ಷಣ ವೇತನವನ್ನು ಸಂಸ್ಥೆ ನೀಡುತ್ತದೆ. ಪದವಿ ಪೂರ್ವ ವಿದ್ಯಾರ್ಥಿಗಳಿಗೆ ತಲಾ 4 ಲಕ್ಷ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ತಲಾ 6 ಲಕ್ಷ ರೂ ವಿದ್ಯಾರ್ಥಿ ವೇತನ ನೀಡಲಾಗುವುದು. ವಿದ್ಯಾರ್ಥಿಗಳನ್ನು ಬೆಂಬಲಿಸುವ ಗುರಿಯನ್ನು ಹೊಂದಿರುವ ಕಾರ್ಪೊರೇಟ್ ಫೌಂಡೇಶನ್‌ನಿಂದ ಪ್ರಶಸ್ತಿ ಮೌಲ್ಯದ ಕಾರ್ಯಕ್ರಮಗಳು ಆಯೋಜಿಸಲಾಗಿದೆ. ಈ ಮೂಲಕ ಸಾಮಾಜಿಕ ಒಳಿತಿಗಾಗಿ ವಿದ್ಯಾರ್ಥಿಗಳು ಹೆಚ್ಚಿನ ಅವಕಾಶಗಳನ್ನು ಪಡೆಯುತ್ತಾರೆ. ಇನ್ನು ಈ ಮೂಲಕ ವಿದ್ಯಾರ್ಥಿಗಳು ಜಾಗತಿಕ ಪ್ರಮುಖ ತಜ್ಞರೊಂದಿಗೆ, ಮಾರ್ಗದರ್ಶನ, ಇಂಟರ್ನ್‌ಶಿಪ್‌ಗಳು, ಸ್ವಯಂಸೇವಕರು, ಹಳೆಯ ವಿದ್ಯಾರ್ಥಿಗಳೊಂದಿಗೆ ಸಂವಾದಿಸುವ ಉತ್ತಮ ಅವಕಾಶವನ್ನು ಪಡೆಯಬಹುದಾಗಿದೆ

  ವಿದ್ಯಾರ್ಥಿಗಳಿಗೆ ಸಿಗಲಿದೆ ಉತ್ತಮ ಮಾರ್ಗದರ್ಶನ
  2021 ರಲ್ಲಿ 76 ವಿದ್ಯಾರ್ಥಿಗಳಿಗೆ ಮೊದಲ ಬಾರಿ ಈ ಪ್ರಶಸ್ತಿ ನೀಡಲಾಯಿತು. ಇದರಲ್ಲಿ ಮೊದಲ ವರ್ಷದ ಪದವಿಪೂರ್ವ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳು ಸೇರಿದ್ದು, ಇವರೆಲ್ಲಾ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI) ಮತ್ತು ಕಂಪ್ಯೂಟರ್ ಸೈನ್ಸ್​​ ಪದವಿ ಅಭ್ಯಾಸಿಸುತ್ತಿದ್ದರು. ರಿಲಯನ್ಸ್ ಫೌಂಡೇಶನ್ ಆಯ್ಕೆಯಾದ ಅರ್ಹ ಪದವಿಧರರು 21 ರಾಷ್ಟ್ರಗಳಲ್ಲಿ ದಾಖಲಾತಿ ಹೊಂದಲು ಅರ್ಹರಾಗಿತ್ತಾರೆ. ಈ ಆಯ್ಕೆಯಾದ ವಿದ್ಯಾರ್ಥಿಗಳು ಈಗಾಗಲೇ ಅನೇಕ ವಿದ್ವಾಂಸರ ಹಲವಾರು ವೃತ್ತಿಪರವಾಗಿ ಸಂವಾದ ಕಾರ್ಯಕ್ರಮ ಸೇರಿದಂತೆ ಅನೇಕರಲ್ಲಿ ಮಾರ್ಗದರ್ಶನ ಪಡೆದಿದ್ದಾರೆ.

  ಇದನ್ನು ಓದಿ: 2021 ಕೋವಿಡ್​ ಮಾತ್ರವಲ್ಲ, ಜಗತ್ತನ್ನು ಕಾಡಿದ ಹವಾಮಾನ ವೈಪರೀತ್ಯಗಳಿವು

  ಆಯ್ಕೆ ಹೇಗೆ?

  ರಿಲಯನ್ಸ್ ಫೌಂಡೇಶನ್ ಸ್ಕಾಲರ್‌ಶಿಪ್‌ಗಳು ದೇಶದ ವಿದ್ಯಾರ್ಥಿಗಳನ್ನು ಗುರುತಿಸಿ ಅವರ ಪ್ರತಿಭೆಗೆ ನಿರೇರುಯುತ್ತದೆ. ಇದಕ್ಕೆ ಅರ್ಜಿಗಳನ್ನು ವಿದ್ಯಾರ್ಥಿಗಳು ಆನ್‌ಲೈನ್ ಅಪ್ಲಿಕೇಶನ್ ಮೂಲಕ ಸಲ್ಲಿಸಬೇಕು. ಬಳಿಕ ಕಠಿಣ ಮತ್ತು ಸ್ಪರ್ಧಾತ್ಮಕ ಆಯ್ಕೆ ಪ್ರಕ್ರಿಯೆಯ ಮೂಲಕ ಆಯ್ಕೆ ಮಾಡಲಾಗುವುದು. ಆಯ್ಕೆಯಲ್ಲಿ ಪ್ರಮುಖ ಭಾರತೀಯ ಮತ್ತು ಅಂತರಾಷ್ಟ್ರೀಯ ತಜ್ಞರ ಸಮಿತಿಯೊಂದಿಗೆ ಸಂದರ್ಶನ ಇರುತ್ತದೆ. ಎಲ್ಲಾ ಸಾಮಾಜಿಕ-ಆರ್ಥಿಕ ಹಿನ್ನೆಲೆಯಿಂದ ವಿದ್ಯಾರ್ಥಿಗಳಿಗೆ ಅವಕಾಶ ನೀಡಲಾಗುವುದು

  ಇದನ್ನು ಓದಿ: ಹೊಸ ವರ್ಷಕ್ಕೆ ಈ ಐದು ನಿರ್ಣಯ ಕೈಗೊಳ್ಳಿ ಸಾಕು; ನಿಮ್ಮ ಜೀವನ ಹೇಗೆ ಬದಲಾಗತ್ತೆ ಗೊತ್ತಾ!

  ಶಿಕ್ಷಣ ಕ್ಷೇತ್ರದಲ್ಲಿ ರಿಲಯನ್ಸ್​
  ರಿಲಯನ್ಸ್ ಫೌಂಡೇಶನ್‌ನ ಅಭಿವೃದ್ಧಿ ಮತ್ತು ವಿಶ್ವ ದರ್ಜೆಯ ಶಿಕ್ಷಣ ಪಡೆಯಲು ಈ ವಿದ್ಯಾರ್ಥಿವೇತನಗಳು ನೀಡಲಾಗುತ್ತಿದೆ. ಫೌಂಡೇಶನ್ ವರ್ಷಕ್ಕೆ 14,000 ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣವನ್ನು ನೀಡುತ್ತವೆ. ಧೀರೂಭಾಯಿ ಅಂಬಾನಿ ಸ್ಕಾಲರ್‌ಶಿಪ್‌ಗಳು 1996 ರಿಂದ 12,500 ಕ್ಕೂ ಹೆಚ್ಚು ವಿದ್ಯಾರ್ಥಿವೇತನಗಳನ್ನು ಒದಗಿಸಿವೆ, ವಿದ್ಯಾರ್ಥಿಗಳು ಉನ್ನತ ಶಿಕ್ಷಣವನ್ನು ಮುಂದುವರಿಸಲು ಇದು ಅವಕಾಶ ನೀಡುತ್ತಿದೆ. ಜಿಯೋ ಇನ್‌ಸ್ಟಿಟ್ಯೂಟ್ ವಿಶ್ವ ದರ್ಜೆಯ ಬಹು-ಶಿಸ್ತಿನ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಯಾಗಲು ಸಿದ್ಧವಾಗಿದೆ. ಯುವ ನಾಯಕರನ್ನು ಅಭಿವೃದ್ಧಿಪಡಿಸುವ ಮತ್ತು ಅಧಿಕಾರ ನೀಡುವ ನಂಬಿಕೆಯೊಂದಿಗೆ ರಿಲಯನ್ಸ್ ಫೌಂಡೇಶನ್‌ನ ಕೆಲಸ ಮಾಡುತ್ತಿದೆ. ಈ ಮೂಲಕ ಕೌಶಲ್ಯ, ಜ್ಞಾನ ಮತ್ತು ಅವಕಾಶಗಳೊಂದಿಗೆ ನಾಳಿನ ಬಲಿಷ್ಠ ಭಾರತವನ್ನು ನಿರ್ಮಿಸುತ್ತಿದೆ.
  Published by:Seema R
  First published: