Reliance-USAID Partnership - ಭಾರತದಲ್ಲಿ ಸ್ತ್ರೀಯರಿಗೆ ಸಮಾನ ಡಿಜಿಟಲ್ ಅವಕಾಶ ಕಲ್ಪಿಸಲು ಅಮೆರಿಕದ USAID ಮತ್ತು ರಿಲಾಯನ್ಸ್ ಒಪ್ಪಂದ

ಆರ್ಥಿಕ ಅಭಿವೃದ್ಧಿಯಲ್ಲಿ ಮಹಿಳೆಯರನ್ನ ಬಳಸಿಕೊಳ್ಳಲು ಮತ್ತು ಲಿಂಗೀಯ ಆರ್ಥಿಕ ಅಸಮಾನತೆಯನ್ನು ನೀಗಿಸಲು ಡಬ್ಲ್ಯೂ-ಜಿಡಿಪಿಯೊಂದಿಗೆ ರಿಲಾಯನ್ಸ್ ಫೌಂಡೇಶನ್ ಕೈಜೋಡಿಸಿದೆ.

ರಿಲಾಯನ್ಸ್ ಇಂಡಸ್ಟ್ರೀಸ್

ರಿಲಾಯನ್ಸ್ ಇಂಡಸ್ಟ್ರೀಸ್

  • Share this:
    ಮುಂಬೈ(ಆ. 12): ಭಾರತದಲ್ಲಿ ಡಿಜಿಟಲ್ ಕ್ಷೇತ್ರ ಗಣನೀಯವಾಗಿ ಬೆಳೆಯುತ್ತಿದೆ. ಇದರ ಮಧ್ಯೆ ಪುರುಷರು ಮತ್ತು ಮಹಿಳೆಯರ ಮಧ್ಯೆ ಡಿಜಿಟಲ್ ಅಂತರವೂ ಸೃಷ್ಟಿಯಾಗಿದೆ. ಈ ಅಂತರವನ್ನು ತಗ್ಗಿಸುವ ಉದ್ದೇಶದಿಂದ ಅಮೆರಿಕದ USAID ಮತ್ತು ರಿಲಾಯನ್ಸ್ ಫೌಂಡೇಶನ್ ಕೈಜೋಡಿಸಿವೆ. ಮಹಿಳೆಯರ ಜಾಗತಿಕ ಅಭಿವೃದ್ಧಿ ಮತ್ತು ಸಮೃದ್ಧಿ (W-GDP) ಯೋಜನೆ ಭಾಗವಾಗಿ ನಿನ್ನೆ ಈ ಒಪ್ಪಂದವನ್ನು ಘೋಷಿಸಲಾಗಿದೆ. ಅಮೆರಿಕ ಅಧ್ಯಕ್ಷರ ಸಲಹೆಗಾರ್ತಿ ಹಾಗೂ ಅವರ ಪುತ್ರಿ ಇವಾಂಕ ಟ್ರಂಪ್, ಅಮೆರಿಕದ ಉಪಕಾರ್ಯದರ್ಶಿ ಸ್ಟೀಫನ್ ಬೇಗುನ್ ಮತ್ತು ಯುಎಸ್​ಎಐಡಿ ಅಧಿಕಾರಿ ಬೋನ್ನೀ ಗ್ಲಿಕ್ ಅವರು ಈ ಕಾರ್ಯಕ್ರಮದ ವೇಳೆ ಭಾಗವಹಿಸಿದ್ದರು.

    ಮಹಿಳೆಯರ ಆರ್ಥಿಕ ಸಬಲೀಕರಣ ಹೆಚ್ಚಿಸಲು ವಿವಿಧ ಯೋಜನೆಗಳನ್ನ ಕೈಗೊಳ್ಳಲೆಂದು ಡಬ್ಲ್ಯೂ-ಜಿಡಿಪಿ ಫಂಡ್ ರಚಿಸಲಾಗಿದೆ. ಅಮೆರಿಕ ಸರ್ಕಾರದ ಸಂಪನ್ಮೂಲ ಮತ್ತು ಪರಿಣತಿಯ ಜೊತೆಗೆ ಖಾಸಗಿ ವಲಯವನ್ನೂ ಜೋಡಿಸುವ ಕೆಲಸ ಮಾಡಿದ್ದೇವೆ ಎಂದು ಇವಾಂಕ ಟ್ರಂಪ್ ಹೇಳಿದ್ದಾರೆ.

    ಮಹಿಳೆಯರನ್ನು ಹೊರಗಿಟ್ಟು ಜಾಗತಿಕ ಅಭಿವೃದ್ಧಿ ಸಾಧಿಸಲು ಸಾಧ್ಯವಿಲ್ಲ. ಮಹಿಳೆಯರ ಮೇಲೆ ಹೂಡಿಕೆ ಮಾಡಿದರೆ ಬಹಳಷ್ಟು ಪರಿವರ್ತನೆ ತರಲು ಸಾಧ್ಯ. ಮಹಿಳೆಯರು ಮತ್ತು ಪುರುಷರ ಮಧ್ಯೆ ಇರುವ ಆರ್ಥಿಕ ಅಂತರವನ್ನು ತಗ್ಗಿಸುವ ಪ್ರಯತ್ನ ಇದಾಗಿದೆ ಎಂದು ಯುಎಸ್​ಎಐಡಿಯ ಅಧಿಕಾರಿ ಜಾನ್ ಬಾರ್ಸಾ ತಿಳಿಸಿದ್ದಾರೆ.

    ಇದನ್ನೂ ಓದಿ: ಹಿಂದೂ ಕುಟುಂಬದ ಹೆಣ್ಣುಮಕ್ಕಳಿಗೆ ಅಪ್ಪನ ಆಸ್ತಿ ಹಕ್ಕು ಎಲ್ಲಾ ಕಾಲಕ್ಕೂ ಅನ್ವಯ: ಸುಪ್ರೀಂ ತೀರ್ಪು

    ಈ ಯೋಜನೆಯಲ್ಲಿ ರಿಲಾಯನ್ಸ್ ಫೌಂಡೇಶನ್ ಸಂಸ್ಥೆಯನ್ನು ಒಳಗೊಂಡಿರುವುದಕ್ಕೆ ಫೌಂಡೇಶನ್ ಮುಖ್ಯಸ್ಥೆ ನೀತಾ ಅಂಬಾನಿ ಇದೇ ವೇಳೆ ಹರ್ಷ ವ್ಯಕ್ತಪಡಿಸಿದ್ದಾರೆ. ಯುಎಸ್​ಎಐಡಿ ಜೊತೆ ಕೈಜೋಡಿಸುವ ಮೂಲಕ ಡಬ್ಲ್ಯೂ-ಜಿಡಿಪಿಯ ಈ ಕೈಂಕರ್ಯದಲ್ಲಿ ರಿಲಾಯನ್ಸ್ ಫೌಂಡೇಶನ್ ಭಾಗಿಯಾಗಿರುವುದನ್ನು ತಿಳಿಸಲು ನಮಗೆ ಹಮ್ಮೆಯಾಗುತ್ತಿದೆ. ಡಬ್ಲ್ಯೂ-ಜಿಡಿಪಿ ವುಮೆನ್​ಕನೆಕ್ಟ್ ಚಾಲೆಂಜ್ ಯೋಜನೆಯನ್ನು ದೇಶಾದ್ಯಂತ ಪ್ರಾರಂಭಿಸುತ್ತೇವೆ. ಭಾರತದಲ್ಲಿ ಲಿಂಗೀಯ ಅಂತರ ಹಾಗೂ ಡಿಜಿಟಲ್ ಅಂತರವನ್ನು ತಗ್ಗಿಸುವ ಗುರಿ ಹೊಂದಿದ್ದೇವೆ ಎಂದಿದ್ದಾರೆ.

    ಲಿಂಗೀಯ ಡಿಜಿಟಲ್ ಅಂತರ ತಗ್ಗಿಸಲು, ಮಹಿಳೆಯರಿಗೆ ವ್ಯವಹಾರ ಅವಕಾಶ ಹೆಚ್ಚಿಸಲು ಮತ್ತು ಸಬಲೀಕರಣ ಮಾಡಲು ಖಾಸಗಿ ವಲಯವನ್ನ ಬಳಸಿಕೊಂಡು ಡಬ್ಲ್ಯೂ-ಜಿಡಿಪಿ ವುಮೆನ್ಸ್ ಕನೆಕ್ಟ್ ಚಾಲೆಂಜ್ ಯೋಜನೆ ಹಮ್ಮಿಕೊಂಡಿದೆ. ಜಾಗತಿಕವಾಗಿ ಈ ಯೋಜನೆಯಿಂದ ಸಿಕ್ಕಿರುವ ಅನುಭವವನ್ನು ಬಳಸಿಕೊಂಡು ಭಾರತದಲ್ಲಿ ರಿಲಾಯನ್ಸ್ ಜೊತೆ ಈ ಕಾರ್ಯ ನಡೆಸಲು ಅಣಿಯಾಗಿದೆ. ವರ್ಕ್​ಫೋರ್ಸ್​ನಲ್ಲಿ ಮಹಿಳೆಯರಿಗೆ ಹೆಚ್ಚಿನ ಅವಕಾಶ, ಮಹಿಳಾ ಉದ್ಯಮಿಗಳಿಗೆ ಉತ್ತೇಜನ ಹಾಗೂ ಆರ್ಥಿಕತೆಯಲ್ಲಿ ಮಹಿಳೆಯರ ಸಬಲೀಕರ ಇವು ಮೂರು ಕೂಡ ಈ ಜಾಗತಿಕ ಯೋಜನೆಯ ಪ್ರಮುಖ ಗುರಿಗಳಾಗಿವೆ. 2025ರಷ್ಟರಲ್ಲಿ ಅಭಿವೃದ್ಧಿಶೀಲ ದೇಶಗಳಲ್ಲಿ 5 ಕೋಟಿಯಷ್ಟು ಮಹಿಳೆಯರಿಗೆ ಬಲ ತುಂಬ ಗುರಿ ಇದೆ.

    ಇದನ್ನೂ ಓದಿ: Covid Vaccine - ಕೋವಿಡ್ ಲಸಿಕೆ ತಯಾರಿಕೆಗೆ ಆತುರ ಇಲ್ಲ; ಸುರಕ್ಷತೆ, ಗುಣಮಟ್ಟ ಮುಖ್ಯ: ಭಾರತ್ ಬಯೋಟೆಕ್

    ಇನ್ನು, ಭಾರತದಲ್ಲಿ ಈ ಕೈಂಕರ್ಯಕ್ಕೆ ಜೋಡಿಸಿರುವ ರಿಲಾಯನ್ಸ್ ಫೌಂಡೇಶನ್ ಸಂಸ್ಥೆಯು ರಿಲಾಯನ್ಸ್ ಇಂಡಸ್ಟ್ರೀಸ್​ನ ಅಂಗವಾಗಿದೆ. ವಿಶ್ವದ ಅತ್ಯಂತ ಅತಿದೊಡ್ಡ ಸಂಸ್ಥೆಗಳಲ್ಲಿ ರಿಲಾಯನ್ಸ್ ಇಂಡಸ್ಟ್ರೀಸ್ (ಆರ್​ಐಎಲ್) ಕೂಡ ಒಂದು. ಅದರ ಭಾಗವಾಗಿ ರಿಲಾಯನ್ಸ್ ಫೌಂಡೇಶನ್ ದೇಶಾದ್ಯಂತ ಅನೇಕ ಸಾಮಾಜಿಕ ಕಾರ್ಯಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದೆ.
    Published by:Vijayasarthy SN
    First published: