ರಿಲಾಯನ್ಸ್ ಉದ್ಯೋಗಿಗಳಿಂದ ಹೊಸ ದಾಖಲೆ; ಪುನರ್ಬಳಕೆಗಾಗಿ 70 ಟನ್ ಪ್ಲಾಸ್ಟಿಕ್ ತ್ಯಾಜ್ಯಗಳ ಸಂಗ್ರಹ

Recycle4Life ಅಭಿಯಾನದ ಮೂಲಕ ರಿಲಾಯನ್ಸ್ ಸಂಸ್ಥೆಗಳ ಉದ್ಯೋಗಿಗಳು ತಮ್ಮ ಮನೆ ಸುತ್ತಮುತ್ತಲ ಪ್ರದೇಶದಿಂದ ಪ್ಲಾಸ್ಟಿಕ್ ಬಾಟಲಿ ತ್ಯಾಜ್ಯಗಳನ್ನ ಕಲೆ ಹಾಕಿ ಹೊಸ ದಾಖಲೆ ನಿರ್ಮಿಸಿದ್ದಾರೆ.

news18
Updated:November 9, 2019, 1:15 PM IST
ರಿಲಾಯನ್ಸ್ ಉದ್ಯೋಗಿಗಳಿಂದ ಹೊಸ ದಾಖಲೆ; ಪುನರ್ಬಳಕೆಗಾಗಿ 70 ಟನ್ ಪ್ಲಾಸ್ಟಿಕ್ ತ್ಯಾಜ್ಯಗಳ ಸಂಗ್ರಹ
ರಿಲಾಯನ್ಸ್ ಉದ್ಯೋಗಿಗಳು ಸಂಗ್ರಹಿಸಿದ ಪ್ಲಾಸ್ಟಿಕ್ ತ್ಯಾಜ್ಯಗಳೊಂದಿಗೆ ನೀತಾ ಅಂಬಾನಿ
  • News18
  • Last Updated: November 9, 2019, 1:15 PM IST
  • Share this:
ಮುಂಬೈ(ನ. 09): ಕೇಂದ್ರ ಸರ್ಕಾರದ ಸ್ವಚ್ಛತಾ ಯೋಜನೆಗೆ ಪೂರಕವಾಗಿ ರಿಲಾಯ್ಸ್ ಫೌಂಡೇಶನ್ ಸಂಸ್ಥೆ ಟನ್​ಗಟ್ಟಲೆ ಪ್ಲಾಸ್ಟಿಕ್ ಬಾಟಲಿ ತ್ಯಾಜ್ಯಗಳನ್ನು ಸಂಗ್ರಹಿಸಿದೆ. ರಿಲಾಯನ್ಸ್ ಇಂಡಸ್ಟ್ರೀಸ್ ಸಂಸ್ಥೆ ಹಾಗೂ ಅದರ ಅಂಗ ಸಂಸ್ಥೆಗಳ ಲಕ್ಷಗಟ್ಟಲೆ ಉದ್ಯೋಗಿಗಳು, ಅವರ ಕುಟುಂಬ ಸದಸ್ಯರನ್ನು ಬಳಸಿ ರೂಪಿಸಲಾದ Recycle4Life ಎಂಬ ಬೃಹತ್ ಅಭಿಯಾನದ ಮೂಲಕ 78 ಟನ್​ನಷ್ಟು ಪ್ಲಾಸ್ಟಿಕ್ ಬಾಟಲಿಗಳನ್ನು ಸಂಗ್ರಹಿಸಿ ದಾಖಲೆ ನಿರ್ಮಿಸಲಾಗಿದೆ. ಈ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಪುನರ್ಬಳಕೆಗೆ ಉಪಯೋಗಿಸಲಾಗುತ್ತದೆ.

Recycle4Life ಅಭಿಯಾನ ಪ್ರಾರಂಭವಾಗಿದ್ದು ಅಕ್ಟೋಬರ್ ತಿಂಗಳಲ್ಲಿ. ರಿಲಾಯನ್ಸ್ ಉದ್ಯೋಗಿಗಳಿಗೆ ಅವರ ಮನೆ ಹಾಗೂ ಸುತ್ತಮುತ್ತಲ ಪ್ರದೇಶಗಳಿಂದ ಪ್ಲಾಸ್ಟಿಕ್ ಬಾಟಲಿ ತ್ಯಾಜ್ಯಗಳನ್ನು ಸಂಗ್ರಹಿಸಿ ತಮ್ಮ ಕಚೇರಿಗೆ ತರುವಂತೆ ಸೂಚಿಸಲಾಯಿತು. ಆರ್​ಐಎಲ್ ಹಾಗೂ ಅದರ ಪಾಲುದಾರಿಕೆ ಸಂಸ್ಥೆಗಳ ಉದ್ಯೋಗಿಗಳು ಈ ಮಹಾ ಅಭಿಯಾನದಲ್ಲಿ ಪಾಲ್ಗೊಂಡಿದ್ದು ವಿಶೇಷ.

ಈ ವೇಳೆ ಮಾತನಾಡಿದ ನೀತಾ ಅಂಬಾನಿ, “ನಮ್ಮ ಪರಿಸರದ ಬಗ್ಗೆ ಕಾಳಜಿ ತೋರುವುದು ರಿಲಾಯನ್ಸ್ ಫೌಂಡೇಶನ್​​ನ ಪ್ರಮುಖ ಆಶಯವಾಗಿದೆ. ಸ್ವಚ್ಛತಾ ಹೀ ಸೇವಾ ಕೈಂಕರ್ಯವನ್ನು ಉತ್ತೇಜಿಸಲು ನಡೆಸುತ್ತಿರುವ ಪ್ರಯತ್ನಗಳಲ್ಲಿ Recycle4Life ಅಭಿಯಾನವೂ ಒಂದು. ರಿಲಾಯನ್ಸ್ ಸಂಸ್ಥೆಗಳ ಸಾವಿರಾರು ಉದ್ಯೋಗಿಗಳು ಪಾಲ್ಗೊಂಡು ಈ ಅಭಿಯಾನಕ್ಕೆ ಯಶಸ್ಸು ತಂದಿದ್ದಾರೆ” ಎಂದು ತಿಳಿಸಿದ್ದಾರೆ.

ಕಲೆಹಾಕಲಾಗಿರುವ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಆರ್​ಐಎಲ್​ನ ರೀಲೈಕ್ಲಿಂಗ್ ಘಟಕಗಳಲ್ಲಿ ಪರಿಸರಸ್ನೇಹಿ ಪ್ರಕ್ರಿಯೆಗಳ ಮೂಲಕ ರೀಸೈಕಲ್ ಮಾಡಲಾಗುತ್ತದೆ. ಪರಿಸರ ಸ್ನೇಹಿ ರೀಸೈಕ್ಲಿಂಗ್ ವ್ಯವಸ್ಥೆಯಲ್ಲಿ ರಿಲಾಯನ್ಸ್ ಸಂಸ್ಥೆ ವಿಶ್ವದಲ್ಲೇ ಮುಂಚೂಣಿಯಲ್ಲಿದೆ. ಫೈಬರ್ ರೀ ಎಂಜಿನಿಯರಿಂಗ್ ತಂತ್ರಜ್ಞಾನವನ್ನು ಸಮರ್ಥವಾಗಿ ಬಳಸಿಕೊಂಡು ಅತ್ಯುತ್ತಮ PET ಪ್ಲಾಸ್ಟಿಕ್ ರೀಸೈಕ್ಲಿಂಗ್ ವ್ಯವಸ್ಥೆ ರೂಪಿಸಿದೆ. ಈ ರೀತಿ ರೀಸೈಕಲ್ ಆದ ಪ್ಲಾಸ್ಟಿಕನ್ನು ರಿಲಾಯನ್ಸ್​ನ ಬಟ್ಟೆಗಳ ತಯಾರಿಕೆಗೆ ಬಳಸಿಕೊಳ್ಳಲಾಗುತ್ತದೆ.
First published:November 9, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading