Reliance PPE Kit: ಕಡಿಮೆ ಬೆಲೆಯಲ್ಲಿ ರಿಲಾಯನ್ಸ್ ಸಂಸ್ಥೆ​ ದಿನವೊಂದಕ್ಕೆ ತಯಾರಿಸುತ್ತಿದೆ 1 ಲಕ್ಷ ಪಿಪಿಇ ಕಿಟ್​

ಕೊರೋನಾ ವಿರುದ್ಧ ಹೋರಾಡುತ್ತಿರುವ ವೈದ್ಯರು, ನರ್ಸ್​ ಸೇರಿ ಅನೇಕರಿಗೆ ಪರ್ಸನಲ್​ ಪ್ರೊಟೆಕ್ಟಿವ್ ಇಕ್ವಿಪ್​ಮೆಂಟ್​ ಅತ್ಯಗತ್ಯವಾಗಿದೆ. ಹೀಗಾಗಿ, ರಿಲಾಯನ್ಸ್​ ಅಲೋಕ್​ ಇಂಡಸ್ಟ್ರೀಸ್​ನಲ್ಲಿ ಪಿಇಪಿ ಕಿಟ್​ ತಯಾರಿಕೆಯನ್ನು ಆರಂಭಿಸಿದೆ.  

news18-kannada
Updated:June 1, 2020, 12:00 PM IST
Reliance PPE Kit: ಕಡಿಮೆ ಬೆಲೆಯಲ್ಲಿ ರಿಲಾಯನ್ಸ್ ಸಂಸ್ಥೆ​ ದಿನವೊಂದಕ್ಕೆ ತಯಾರಿಸುತ್ತಿದೆ 1 ಲಕ್ಷ ಪಿಪಿಇ ಕಿಟ್​
ಪಿಪಿಇ ಕಿಟ್​
  • Share this:
Reliance PPE Kit: | ನವದೆಹಲಿ (ಮೇ 31): ಮುಕೇಶ್​ ಅಂಬಾನಿ ಒಡೆತನದ ರಿಲಾಯನ್ಸ್​ ಇಂಡಸ್ಟ್ರೀಸ್​ ಇತ್ತೀಚೆಗಷ್ಟೇ ಟೆಕ್ಸ್​ಟೈಲ್​ ಹಾಗೂ ಫ್ಯಾಬ್ರಿಕ್​ ತಯಾರಿಸುವ ಅಲೋಕ್​ ಇಂಡಸ್ಟ್ರೀಸ್​ ಸ್ವಾಧೀನವನ್ನು ಪಡೆದುಕೊಂಡಿತ್ತು. ಈಗ ಕೊರೋನಾ ವಿರುದ್ಧ ಹೋರಾಟದಲ್ಲಿ ಕೈ ಜೋಡಿಸಿರುವ ರಿಲಾಯನ್ಸ್,​ ಅಲೋಕ್​ ಇಂಡಸ್ಟ್ರೀಸ್​ಅನ್ನು ಪಿಪಿಇ ಕಿಟ್​ ತಯಾರಿಸುವ ಇಂಡಸ್ಟ್ರಿಯನ್ನಾಗಿ ಬದಲಾಯಿಸಿದೆ. ಕೊರೋನಾ ವಿರುದ್ಧ ಹೋರಾಡುತ್ತಿರುವ ವೈದ್ಯರು, ನರ್ಸ್​ ಸೇರಿ ಅನೇಕರಿಗೆ ಪರ್ಸನಲ್​ ಪ್ರೊಟೆಕ್ಟಿವ್ ಇಕ್ವಿಪ್​ಮೆಂಟ್​ ಅತ್ಯಗತ್ಯವಾಗಿದೆ. ಹೀಗಾಗಿ, ರಿಲಾಯನ್ಸ್​ ಅಲೋಕ್​ ಇಂಡಸ್ಟ್ರೀಸ್​ನಲ್ಲಿ ಪಿಇಪಿ ಕಿಟ್​ ತಯಾರಿಕೆಯನ್ನು ಆರಂಭಿಸಿದೆ.

ಚೀನಾದಿಂದ ಪಿಪಿಇ ಕಿಟ್​ ಆಮದು ಮಾಡಿಕೊಂಡರೆ ಪ್ರತಿ ಕಿಟ್​ಗೆ 2 ಸಾವಿರ ರೂಪಾಯಿ ವೆಚ್ಛ ತಗುಲುತ್ತದೆ. ಆದರೆ, ರಿಲಾಯನ್ಸ್​ ತಯಾರಿಸುವ ಕಿಟ್​ಗೆ ಕೇವಲ 650 ರೂಪಾಯಿ ವೆಚ್ಛ ತಗುಲಲಿದೆ. ವಿಶೇಷ ಎಂದರೆ ದಿನಕ್ಕೆ 1 ಲಕ್ಷ ಪಿಪಿಇ ಕಿಟ್​ಗಳನ್ನು ಸಿದ್ಧಪಡಿಸಲಾಗುತ್ತಿದೆ.

ಇದನ್ನೂ ಓದಿ: ಕೋವಿಡ್​​-19 ವಿರುದ್ಧ ಹೋರಾಟದಲ್ಲಿ ದೇಶದ ಪ್ರತಿಯೊಬ್ಬರ ಪಾತ್ರವಿದೆ - ಪ್ರಧಾನಿ ನರೇಂದ್ರ ಮೋದಿ

ಅಲೋಕ್​ ಇಂಡಸ್ಟ್ರೀಸ್​ನಲ್ಲಿ ಏಪ್ರಿಲ್​ ಮಧ್ಯದ ವೇಳಗೆ ಪಿಪಿಇ ಕಿಟ್​ ತಯಾರಿಕೆ ಆರಂಭಿಸಿದ್ದು, ಈಗ ದೊಡ್ಡ ಪ್ರಮಾಣದಲ್ಲಿ ಇದರ ತಯಾರಿಕೆ ಮುಂದುವರಿದಿದೆ. ಈ ಮೊದಲು ಹೊರ ದೇಶಗಳಿಂದ ಪಿಪಿಇ ಕಿಟ್​ಗಳನ್ನು ನಾವು ಆಮದು ಆಮದು ಮಾಡಿಕೊಳ್ಳಲಾಗುತ್ತಿತ್ತು. ಆದರೆ, ಕೊರೋನಾ ವೈರಸ್ ಭಾರತಕ್ಕೆ ದಾಳಿ ಮಾಡಿದ ನಂತರದಲ್ಲಿ ನಮ್ಮ ದೇಶದಲ್ಲಿ ಪಿಪಿಇ ಕಿಟ್​ ತಯಾರಿಕೆ ಆರಂಭಗೊಂಡಿದೆ.

ಈಗ ರಿಲಾಯನ್ಸ್​ ತಯಾರಿಸುತ್ತಿರುವ ಪಿಪಿಇ ಕಿಟ್​ಗಳು ಕೊರೋನಾ ವೈರಸ್​ ವಿರುದ್ಧ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಲಿವೆ. ಅಲ್ಲದೆ, ಇದಕ್ಕೆ ಬಳಕೆ ಮಾಡು ಕಚ್ಚಾ ವಸ್ತುಗಳು ತುಂಬಾನೇ ಗುಣಮಟ್ಟದ್ದಾಗಿದೆ.
First published: May 31, 2020, 1:25 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading