ಭಾರತದ ಅತಿದೊಡ್ಡ ಎಲೆಕ್ಟ್ರಾನಿಕ್ಸ್ ಸೇಲ್ - ಡಿಜಿಟಲ್ ಇಂಡಿಯಾ ಸೇಲ್ ಅನ್ನು ಜುಲೈ 26 ರಂದು ಆರಂಭಿಸಲು ರಿಲಾಯನ್ಸ್ ಡಿಜಿಟಲ್ ನಿರ್ಧರಿಸಿದೆ. ರಿಲಾಯನ್ಸ್ ಡಿಜಿಟಲ್ ಮತ್ತು ಮೈ ಜಿಯೋ ಸ್ಟೋರ್ಗಳಲ್ಲಿ ಮತ್ತು www.reliancedigital.in ನಲ್ಲಿ ಸೇಲ್ ಲೈವ್ ಆಗಲಿದೆ.
ವಿಶಾಲವಾದ ಶ್ರೇಣಿಯ ಎಲೆಕ್ಟ್ರಾನಿಕ್ ಐಟಂಗಳ ಮೇಲೆ ಅತ್ಯುತ್ತಮ ಡೀಲ್ಗಳನ್ನು ಗ್ರಾಹಕರು ಪಡೆಯಬಹುದು ಮತ್ತು ಕನಿಷ್ಠ ವಹಿವಾಟು ರೂ. 10,000/- ಮೇಲೆ ಎಸ್ಬಿಐ ಕ್ರೆಡಿಟ್ ಕಾರ್ಡ್ಸ್ ಮೇಲೆ 10% ಕ್ಯಾಶ್ಬ್ಯಾಕ್ ಅನ್ನು ಜುಲೈ 22 ರಿಂದ ಆಗಸ್ಟ್ 5, 2021 ರ ವರೆಗೆ ಪಡೆಯಬಹುದು. ಎಸ್ಬಿಐ ಕ್ರೆಡಿಟ್ ಕಾರ್ಡ್ ವಹಿವಾಟುಗಳ ಮೇಲೆ ರೂ. 5,000/- ವರೆಗೆ ಉಳಿತಾಯ ಮಾಡಬಹುದು. ಎಸ್ಬಿಐ ಕ್ರೆಡಿಟ್ ಕಾರ್ಡ್ ಇಎಂಐ ವಹಿವಾಟುಗಳ ಮೇಲೂ ಕೊಡುಗೆ ಲಭ್ಯವಿದೆ. ಟೆಲಿವಿಷನ್ಗಳು, ಹೋಮ್ ಅಪ್ಲೈಯನ್ಸ್ಗಳು, ಮೊಬೈಲ್ ಫೋನ್ಗಳು, ಲ್ಯಾಪ್ಟಾಪ್ಗಳು ಮತ್ತು ಅಕ್ಸೆಸರಿಗಳಂತಹ ವಿಶಾಲ ಶ್ರೇಣಿಯಲ್ಲಿ ವಿಶೇಷ ಕೊಡುಗೆಗಳು ಲಭ್ಯವಿವೆ.
ಸ್ಮಾರ್ಟ್ಫೋನ್ ವಿಭಾಗದಲ್ಲಿ, ರಿಯಾಯಿತಿ ಮತ್ತು ಆಕರ್ಷಕ ಕ್ಯಾಶ್ಬ್ಯಾಕ್ಗಳನ್ನು ಗ್ರಾಹಕರು ಪಡೆಯಬಹುದು. ಆಕಸ್ಮಿಕ ಹಾನಿ ಮತ್ತು ನೀರಿಗೆ ಬಿದ್ದು ಹಾಳಾದರೆ ಕವರೇಜ್ ಜುಲೈ 31 ರ ವರೆಗೆ ಆಯ್ದ ಮೊಬೈಲ್ ಖರೀದಿ ಮೇಲೆ ಲಭ್ಯವಿದೆ. ಅತ್ಯಂತ ನಿರೀಕ್ಷಿತ ಒನ್ಪ್ಲಸ್ ನಾರ್ಡ್2 ಸ್ಮಾರ್ಟ್ಫೋನ್ ಕೂಡಾ ಜುಲೈ 28 ರಿಂದ ಮಾರಾಟಕ್ಕೆ ಲಭ್ಯವಾಗಲಿದೆ. ಇದರ ಜೊತೆಗೆ, ವೆರೆಬಲ್ ಮಾರ್ಕೆಟ್ನಲ್ಲಿ ಅತ್ಯಂತ ಬೇಡಿಕೆಯಲ್ಲಿರುವ ಆಪಲ್ ವಾಚ್ ಸಿರೀಸ್ 6 ಸೆಲ್ಯುಲರ್ 44ಎಂಎಂ ಮತ್ತು ಸ್ಯಾಮ್ಸಂಗ್ ಗ್ಯಾಲಾಕ್ಸಿ ಆಕ್ಟಿವ್ 2 ಕೂಡಾ ಆಕರ್ಷಕ ಬೆಲೆಗಳಲ್ಲಿ ಲಭ್ಯವಿದೆ. ಹೊಚ್ಚಹೊಸ ಸ್ಮಾರ್ಟ್ವಾಚ್ ಫೈರ್ ಬೋಲ್ಟ್ ಅಗ್ನಿ ಎಸ್ಪಿಒ2 ವಿಶೇಷಣದೊಂದಿಗೆ ವಿಶೇಷವಾಗಿ ಡಿಜಿಟಲ್ ಇಂಡಿಯಾ ಸೇಲ್ನಲ್ಲಿ ರೂ. 2,599/- ಕ್ಕೆ ಲಭ್ಯವಿದೆ.
ಲ್ಯಾಪ್ಟಾಪ್ ವಿಭಾಗದಲ್ಲಿ, ಬ್ಯಾಂಕ್ ಕ್ಯಾಶ್ಬ್ಯಾಕ್ ಮತ್ತು ಬ್ರ್ಯಾಂಡ್ ವಾರಂಟಿ ಕೊಡುಗೆಗಳ ಜೊತೆಗೆ ರೂ. 14,990/- ವರೆಗಿನ ಮೌಲ್ಯದ ಪ್ರಯೋಜನಗಳನ್ನು ಗ್ರಾಹಕರು ಪಡೆಯಬಹುದು. ಆಸಸ್ 10 ನೇ ಜೆನ್ ಐ5 ಗೇಮಿಂಗ್ ಲ್ಯಾಪ್ಟಾಪ್ 16 ಜಿಬಿ ರ್ಯಾಮ್ ಹಾಗೂ 4ಜಿಬಿ ಎನ್ವಿಡಿಯಾ ಜಿಫೋರ್ಸ್ ಜಿಟಿಎಕ್ಸ್ 1650 ಗ್ರಾಫಿಕ್ಸ್ ಸಹಿತ ವಿಶೇಷ ಬೆಲೆ ರೂ. 64,999/- ರಲ್ಲಿ ಲಭ್ಯವಿದೆ. ಹಾಗೂ, ಮ್ಯಾಕ್ಬುಕ್ ಪ್ರೋ ರೂ. 1,12,990/- ಫ್ಲಾಟ್ ಬೆಲೆಯಲ್ಲಿ ಲಭ್ಯವಿದ್ದು, ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಗೆ ರೂ. 7000/- ಎಚ್ಡಿಎಫ್ಸಿ ಕ್ಯಾಶ್ಬ್ಯಾಕ್ ಲಭ್ಯವಿದೆ. ತೆಳ್ಳಗಿನ ಮತ್ತು ಹಗುರ ಲ್ಯಾಪ್ಟಾಪ್ಗಳನ್ನು ಗ್ರಾಹಕರು ರೂ. 16,999/-* ಬೆಲೆಯಿಂದ ಆರಂಭಿಸಿ ಖರೀದಿ ಮಾಡಬಹುದು. ತೆಳ್ಳನೆಯ ಮತ್ತು ಹಗುರ ಲ್ಯಾಪ್ಟಾಪ್ಗಳ ಮೇಲೆ ವಿಶೇಷ ಡೀಲ್ ಜುಲೈ 26 ಮತ್ತು 27 ರಂದು ಮಾತ್ರ ಲಭ್ಯವಿದೆ.
ಇತರ ಎಲೆಕ್ಟ್ರಾನಿಕ್ ಐಟಂಗಳ ಮೇಲೂ ಆಕರ್ಷಕ ಕೊಡುಗೆಗಳು ಇವೆ. 32 ಇಂಚಿನ ಸ್ಮಾರ್ಟ್ ಟಿವಿಗಳು ರೂ. 12,990/- ರಿಂದ ಲಭ್ಯವಿವೆ. ಡೈರೆಕ್ಟ್ ಕೂಲ್ ರೆಫ್ರಿಜರೇಟರ್ಗಳು ರೂ. 11,990* ರಿಂದ ಆರಂಭಿಸಿ ಲಭ್ಯವಿದ್ದು, ರೂ. 1,999 ವರೆಗಿನ ಮೌಲ್ಯದ ಉಚಿತ ಉಡುಗೊರೆಗಳು ಇವೆ. ಟಾಪ್ ಲೋಡ್ ವಾಶಿಂಗ್ ಮಶಿನ್ಗಳು ರೂ. 13,290/- ರಿಂದ ಆರಂಭಿಸಿ ಲಭ್ಯವಿದ್ದು, ಇದರ ಜೊತೆಗೆ ರೂ.1,999/- ವರೆಗಿನ ಮೌಲ್ಯದ ಉಚಿತ ಸಾಮಗ್ರಿಗಳಿವೆ. ಅಲ್ಲದೆ, ರೂ. 3,498/- ಮೌಲ್ಯದ ಬ್ರೇಕ್ಫಾಸ್ಟ್ ಕಾಂಬೋ (ಸ್ಯಾಂಡ್ವಿಚ್ ಮೇಕರ್ ಮತ್ತು ಎಲೆಕ್ಟ್ರಿಕ್ ಕೆಟಲ್) ವಿಶೇಷ ಬೆಲೆ ರೂ. 1,199/-* ರಲ್ಲಿ ಲಭ್ಯವಿದೆ.
ಸುಲಭ ಹಣಕಾಸು ಮತ್ತು ಇಎಂಐ ಆಯ್ಕೆಗಳೊಂದಿಗೆ ಡಿಜಿಟಲ್ ಇಂಡಿಯಾ ಮಾರಾಟದ ಅನುಭವವನ್ನು ಈ ವರ್ಷ ಇನ್ನಷ್ಟು ಲಾಭದಾಯಕವಾಗಿಸಲಾಗಿದೆ. ಗ್ರಾಹಕರು ತಮ್ಮ ಹತ್ತಿರದ ಅಂಗಡಿಗಳಿಂದ ಇನ್ಸ್ಟಾ ಡೆಲಿವರಿ * (3 ಗಂಟೆಗಳಿಗಿಂತ ಕಡಿಮೆ ಅವಧಿಯಲ್ಲಿ ವಿತರಣೆ) ಮತ್ತು ಸ್ಟೋರ್ ಪಿಕ್-ಅಪ್ * ಆಯ್ಕೆಗಳನ್ನು ಸಹ ಪಡೆಯಬಹುದು. ಎಲ್ಲಾ ಮಳಿಗೆಗಳು ಮತ್ತು ವಿತರಣಾ ಪಾಲುದಾರರು ಗ್ರಾಹಕರು ಮತ್ತು ನೌಕರರ ಸುರಕ್ಷತೆಯ ಹಿತದೃಷ್ಟಿಯಿಂದ COVID- ಸುರಕ್ಷತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಅನುಸರಿಸುತ್ತಿದ್ದಾರೆ.
* ಎಲ್ಲಾ ಕೊಡುಗೆಗಳು ಮತ್ತು ಬೆಲೆಗಳಿಗೆ ನಿಯಮಗಳು ಮತ್ತು ಷರತ್ತುಗಳು ಅನ್ವಯವಾಗುತ್ತವೆ.
ರಿಲಾಯನ್ಸ್ ಡಿಜಿಟಲ್ ಬಗ್ಗೆ
ರಿಲಯನ್ಸ್ ಡಿಜಿಟಲ್ ಭಾರತದ ಅತಿದೊಡ್ಡ ಎಲೆಕ್ಟ್ರಾನಿಕ್ಸ್ ಚಿಲ್ಲರೆ ವ್ಯಾಪಾರಿಯಾಗಿದ್ದು, 460+ ದೊಡ್ಡ ಸ್ವರೂಪ ಹೊಂದಿರುವ ರಿಲಯನ್ಸ್ ಡಿಜಿಟಲ್ ಮಳಿಗೆಗಳು ಮತ್ತು 1800+ ಮೈ ಜಿಯೋ ಮಳಿಗೆಗಳು ದೇಶದ ಪ್ರತಿಯೊಂದು ಮೂಲೆ ಮತ್ತು ಮೂಲೆಯಲ್ಲಿ ಗ್ರಾಹಕರಿಗೆ ಸೇವೆ ಸಲ್ಲಿಸುತ್ತಿದ್ದು, ಇತ್ತೀಚಿನ ತಂತ್ರಜ್ಞಾನವನ್ನು ಎಲ್ಲರಿಗೂ ಒದಗಿಸುವಂತೆ ಮಾಡುತ್ತದೆ. 200 ಕ್ಕೂ ಹೆಚ್ಚು ಅಂತರರಾಷ್ಟ್ರೀಯ ಮತ್ತು ರಾಷ್ಟ್ರೀಯ ಬ್ರ್ಯಾಂಡ್ಗಳು ಮತ್ತು 5000 ಕ್ಕೂ ಹೆಚ್ಚು ಉತ್ಪನ್ನಗಳನ್ನು ಉತ್ತಮ ಬೆಲೆಗೆ ಹೊಂದಿರುವ ರಿಲಯನ್ಸ್ ಡಿಜಿಟಲ್, ಗ್ರಾಹಕರಿಗೆ ತಮ್ಮ ಜೀವನಶೈಲಿಗಾಗಿ ಸರಿಯಾದ ತಂತ್ರಜ್ಞಾನದ ಪರಿಹಾರವನ್ನು ಕಂಡುಹಿಡಿಯಲು ಸಹಾಯ ಮಾಡುವ ಅತಿದೊಡ್ಡ ಮಾಡೆಲ್ಗಳನ್ನು ಹೊಂದಿದೆ. ರಿಲಯನ್ಸ್ ಡಿಜಿಟಲ್ನಲ್ಲಿ, ಪ್ರತಿ ಅಂಗಡಿಯಲ್ಲಿನ ತರಬೇತಿ ಪಡೆದ ಮತ್ತು ಸುಶಿಕ್ಷಿತ ಸಿಬ್ಬಂದಿ ಪ್ರತಿ ಉತ್ಪನ್ನದ ಬಗ್ಗೆ ಗ್ರಾಹಕರಿಗೆ ವಿವರವಾಗಿ ಸಲಹೆ ನೀಡಲು ಯಾವಾಗಲೂ ಸಂತೋಷಪಡುತ್ತಾರೆ. ಬಹು ಮುಖ್ಯವಾಗಿ, ರಿಲಯನ್ಸ್ ಡಿಜಿಟಲ್ ತನ್ನ ಎಲ್ಲಾ ಉತ್ಪನ್ನಗಳಿಗೆ ಮಾರಾಟದ ನಂತರದ ಸೇವೆಯನ್ನು ಒದಗಿಸುತ್ತದೆ. ಚಿಲ್ಲರೆ ವ್ಯಾಪಾರಿ ಮತ್ತು ಭಾರತದ ಏಕೈಕ ಐಎಸ್ಒ 9001 ಪ್ರಮಾಣೀಕೃತ ಎಲೆಕ್ಟ್ರಾನಿಕ್ಸ್ ಸೇವಾ ಬ್ರಾಂಡ್ನ ರಿಲಯನ್ಸ್ ರೆಸ್ಕ್ಯೂನಲ್ಲಿ ಇಡೀ ವಾರದಲ್ಲಿ ಮಾರಾಟ ಲಭ್ಯವಿದೆ ಮತ್ತು ಸಮಗ್ರ ಪರಿಹಾರಗಳನ್ನು ಒದಗಿಸಲು ಸಂಪೂರ್ಣವಾಗಿ ಸಜ್ಜಾಗಿದೆ.
ಇದನ್ನೂ ಓದಿ: ನಾನು ಸಿಎಂ ಆಗಿದ್ದವನು; ನೂತನ ಸಂಪುಟದಲ್ಲಿ ಸಚಿವನಾಗಿ ಮುಂದುವರೆಯಲ್ಲ: ಜಗದೀಶ್ ಶೆಟ್ಟರ್
ಸುಲಭ ಖರೀದಿಗಾಗಿ, ಈಗ ಗ್ರಾಹಕರು ಯಾವುದೇ ರಿಲಯನ್ಸ್ ಡಿಜಿಟಲ್ ಸ್ಟೋರ್ಗೆ ಭೇಟಿ ನೀಡಬಹುದು ಅಥವಾ
www.reliancedigital.in ಗೆ ಲಾಗ್ ಇನ್ ಮಾಡಬಹುದು, ಇದು ಇನ್ಸ್ಟಾ ಡೆಲಿವರಿ (3 ಗಂಟೆಗಳಿಗಿಂತ ಕಡಿಮೆ ಅವಧಿಯಲ್ಲಿ ವಿತರಣೆ) ಮತ್ತು ತಮ್ಮ ಹತ್ತಿರದ ಅಂಗಡಿಗಳಿಂದ ಸ್ಟೋರ್ ಪಿಕ್-ಅಪ್ ಆಯ್ಕೆಗಳನ್ನು ನೀಡುತ್ತದೆ. ಹೆಚ್ಚಿನ ಮಾಹಿತಿಗಾಗಿ
www.reliancedigital.in ಗೆ ಲಾಗಿನ್ ಮಾಡಿ.
ನ್ಯೂಸ್18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್ ನಿಯಮಗಳಾದ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ