• ಹೋಂ
  • »
  • ನ್ಯೂಸ್
  • »
  • ದೇಶ-ವಿದೇಶ
  • »
  • ರಿಲಯನ್ಸ್ ಬಿಪಿ ಮೊಬಿಲಿಟಿ ಮತ್ತು ಸ್ವಿಗ್ಗಿ ಸಹಭಾಗಿತ್ವ; ಇನ್ನು ಎಲೆಕ್ಟ್ರಾನಿಕ್ ವಾಹನಗಳಲ್ಲಿ ಡೆಲಿವರಿ!

ರಿಲಯನ್ಸ್ ಬಿಪಿ ಮೊಬಿಲಿಟಿ ಮತ್ತು ಸ್ವಿಗ್ಗಿ ಸಹಭಾಗಿತ್ವ; ಇನ್ನು ಎಲೆಕ್ಟ್ರಾನಿಕ್ ವಾಹನಗಳಲ್ಲಿ ಡೆಲಿವರಿ!

ರಿಲಯನ್ಸ್​ ಇಂಡಸ್ಟ್ರೀಸ್

ರಿಲಯನ್ಸ್​ ಇಂಡಸ್ಟ್ರೀಸ್

ಪರಿಸರ ಸ್ನೇಹಿ ನಡೆ: ರಿಲಯನ್ಸ್ ಬಿಪಿ ಮೊಬಿಲಿಟಿ ಲಿಮಿಟೆಡ್ ಭಾರತದಲ್ಲಿ ಆಹಾರ ವಿತರಣೆಗಾಗಿ ಇವಿಗಳನ್ನು(ವಿದ್ಯುತ್​ ಚಾಲಿತ ವಾಹನಗಳು)  ತ್ವರಿತಗತಿಯಲ್ಲಿ ಅಳವಡಿಸಿಕೊಳ್ಳಲು ಸಜ್ಜು •  ಆಹಾರ ವಿತರಣೆಯಲ್ಲಿ ವಿದ್ಯುತ್ ಚಾಲಿತ ದ್ವಿಚಕ್ರ ವಾಹನಗಳ ಅಳವಡಿಕೆಯನ್ನು ಉತ್ತೇಜಿಸಲು ಸ್ವಿಗ್ಗಿಯೊಂದಿಗೆ ಒಪ್ಪಂದಕ್ಕೆ ಸಹಿ • ಆರ್​ಬಿಎಂಎಲ್​ ಜಿಯೋ ಬಿಪಿ ಬ್ಯಾಟರಿ ಬದಲಾಯಿಸುವ ಕೇಂದ್ರಗಳ ಮೂಲಕ ಎಲ್ಲಿಯೂ ತೊಂದರೆ ಆಗದಂತೆ ನೋಡಿಕೊಳ್ಳಲಾಗುವುದು. • ಜಿಯೋ-ಬಿಪಿ ತನ್ನ ಚಿಲ್ಲರೆ ಮಾರಾಟ ಕೇಂದ್ರಗಳನ್ನು ಮುಂದಿನ 5 ವರ್ಷಗಳಲ್ಲಿ ಸಾವಿರಾರು ಬ್ಯಾಟರಿ ಸ್ವಾಪ್ ವಿತರಣಾ ಜಾಲವನ್ನು ಸ್ಥಾಪಿಸುವ ಗುರಿ ಹೊಂದಿದೆ.

ಮುಂದೆ ಓದಿ ...
  • Share this:

    ಮುಂಬೈ, 5 ಆಗಸ್ಟ್: ಸದೃಢವಾದ ಹಾಗೂ ಆಕರ್ಷಕವಾದ ಎಲೆಕ್ಟ್ರಿಕ್ ವಾಹನಗಳ (ಇವಿ) ವ್ಯವಸ್ಥೆ ಅಸ್ತಿತ್ವಕ್ಕೆ ತರುವ ನಿಟ್ಟಿನಲ್ಲಿ ರಿಲಯನ್ಸ್ ಬಿಪಿ ಮೊಬಿಲಿಟಿ ಲಿಮಿಟೆಡ್ ಮತ್ತು ಸ್ವಿಗ್ಗಿ ಜೊತೆಗೆ ಸೇರಿ ಸಂಘಟಿತ ಪ್ರಯತ್ನಕ್ಕೆ ಮುಂದಾಗಿವೆ. ಭಾರತದ ವಿತರಣಾ ವ್ಯವಸ್ಥೆ ಅಂದರೆ ಡೆಲಿವರಿ ವಿಭಾಗದಲ್ಲಿ ಬ್ಯಾಟರಿ ಚಾಲಿತ ವಾಹನಗಳನ್ನು ಪರಿಚಯಿಸುವ ಪ್ರಯೋಗಕ್ಕೆ ಚಾಲನೆ ನೀಡುತ್ತಿರುವುದಾಗಿ ಈ ಸಹಭಾಗಿತ್ವ ಘೋಷಿಸಿದೆ.


    ಈ ಪಾಲುದಾರಿಕೆಯ ಪ್ರಮುಖ ಅಂಶ ಏನೆಂದರೆ ಬ್ಯಾಟರಿ ಚಾಲಿತ ಎಲೆಕ್ಟ್ರಿಕ್ ವಾಹನಗಳನ್ನು (ಇವಿ) ಅಳವಡಿಸಿಕೊಳ್ಳುವುದನ್ನು ಉತ್ತೇಜಿಸುವ ಗುರಿ ಹೊಂದಿದ್ದು, ಜಿಯೋ-ಬಿಪಿಯ ಬ್ಯಾಟರಿ ಸ್ವಾಪ್ ಕೇಂದ್ರಗಳ ನೆಟ್ವರ್ಕ್ ಮತ್ತು ಸ್ವಿಗ್ಗಿಯ ಡೆಲಿವರಿ ಬಾಯ್​ಗಳ  ಮೂಲಕ ಇದನ್ನು ಕಾರ್ಯಾಚರಣೆಗೆ ತರಲಿದೆ.


    ಎರಡು ಪ್ರಮುಖ ಉದ್ಯಮಗಳ ಈ ಪಾಲುದಾರಿಕೆಯು ನವೀನ ವ್ಯಾಪಾರ ಮಾದರಿಗಳ ಮೂಲಕ ಪರಿಸರ ಸ್ನೇಹಿ ಮತ್ತು ವೆಚ್ಚವನ್ನು ತಗ್ಗಿಸಲು ಪರಿಹಾರವನ್ನು ಕಂಡುಕೊಳ್ಳುವುದರ ಜೊತೆಗೆ ಒಂದು ಹೊಸಾ ಅನುಭೂತಿಯನ್ನು ಗ್ರಾಹಕರಿಗೆ ನೀಡುವ ಸಲುವಾಗಿ ಈ ಯೋಜನೆಗೆ ಕೈ ಹಾಕಲಾಗಿದೆ.


    ಆರ್​ಬಿಎಂಎಲ್​ ಮತ್ತು ಸ್ವಿಗ್ಗಿ ನೆರವಿನಿಂದ ವಿವಿಧ ಸ್ಥಳಗಳಲ್ಲಿ ಜಿಯೋ-ಬಿಪಿ ಬ್ಯಾಟರಿ ವಿನಿಮಯ ಕೇಂದ್ರಗಳನ್ನು ಸ್ಥಾಪಿಸಲಾಗುತ್ತಿದ್ದು, ವಾಹನಗಳಿಗೆ ಬೇಕಾದ ಬ್ಯಾಟರಿ ವಿನಿಮಯಕ್ಕೆ ಸಂಬಂಧಿಸಿದ ನೆರವನ್ನು ಇಲ್ಲಿ ಒದಗಿಸಲಾಗುತ್ತದೆ,  ಸ್ವಿಗ್ಗಿ ಸಿಬ್ಬಂದಿಗೆ ಅಗತ್ಯವಿರುವ ಎಲ್ಲ ತಾಂತ್ರಿಕ ನೆರವು ಮತ್ತು ತರಬೇತಿಯನ್ನು ಸಹ ನೀಡಲಾಗುತ್ತದೆ.


    ಈ ಕುರಿತು ರಿಲಯನ್ಸ್ ಬಿಪಿ ಮೊಬಿಲಿಟಿ ಲಿಮಿಟೆಡ್​ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ  ಹರೀಶ್ ಸಿ. ಮೆಹ್ತಾ ಮಾತನಾಡಿ , "ಎಲೆಕ್ಟ್ರಿಕ್ ಮೊಬಿಲಿಟಿಯ ಬಗ್ಗೆ ಭಾರತ ಸರ್ಕಾರ ಹೊಂದಿರುವ ದೂರದೃಷ್ಟಿಯನ್ನು ಬೆಂಬಲಿಸುವ ಉದ್ದೇಶದಿಂದ, ಈ ಸೇವೆಗಳಿಗೆ ಮುಂದಾಗಿದೆ. ಅಲ್ಲದೆ ಅದಕ್ಕೆ ಪೂರಕವಾದ ವ್ಯವಸ್ಥೆಯನ್ನು ರಚಿಸಲು ಬದ್ಧವಾಗಿದೆ.


    ದೇಶದಲ್ಲಿ ಎಲೆಕ್ಟ್ರಿಕ್ ವಾಹನಗಳ ಜನಪ್ರಿಯತೆಯನ್ನು ತೀವ್ರಗೊಳಿಸಲು ಸಹಾಯ ಮಾಡುವ ಜೊತೆಗೆ  ಜಾಗತಿಕವಾಗಿ ಟ್ರಂಡ್​ ಆಗುತ್ತಿರುವ ಅಂಶವನ್ನು ಸದುಪಯೋಗಪಡಿಸಿಕೊಳ್ಳಲಾಗುತ್ತಿದೆ. ಆರ್​ಬಿಎಂಎಲ್​ ತನ್ನ ಎಲ್ಲಾ ಪಾಲುದಾರರಿಗೆ ಡಿಜಿಟಲ್ ರೂಪದಲ್ಲಿ ಸಕ್ರಿಯಗೊಳಿಸಿದ ಸೇವೆಗಳನ್ನು ನೀಡುತ್ತದೆ, ಇವಿ ಚಾರ್ಜಿಂಗ್ ಹಬ್​ ಮತ್ತು ಬ್ಯಾಟರಿ ವಿನಿಮಯ ಕೇಂದ್ರಗಳನ್ನು ಒಳಗೊಂಡ ಸದೃಢ ಮತ್ತು ಸುಸ್ಥಿರ ಮೂಲಸೌಕರ್ಯವನ್ನು ಅಸ್ತಿತ್ವಕ್ಕೆ ತರುತ್ತಿದೆ.


    ಸ್ವಿಗ್ಗಿಯೊಂದಿಗಿನ ನಮ್ಮ ಸಹಯೋಗವು ದೇಶದ ವಿತರಣೆ ಮತ್ತು ಸಾರಿಗೆ ವ್ಯವಸ್ಥೆಯಲ್ಲಿ ಸಂಚಲನ ಉಂಟು ಮಾಡಲಿದ್ದು, ಇವಿ ಅಳವಡಿಕೆಯನ್ನು ಹೆಚ್ಚಿಸುವ ಸಾಮರ್ಥ್ಯವನ್ನು ಹೊಂದಿದೆ. ಸ್ವಿಗ್ಗಿ ಮತ್ತು ಅವರ ಡೆಲಿವರಿ ಬಾಯ್​ಗಳು ನಮ್ಮ ವ್ಯಾಪಕವಾದ ಬ್ಯಾಟರಿ ಸ್ವಾಪ್ ಕೇಂದ್ರಗಳ ನೆರವಿನಿಂದ ಅಪಾರ ಲಾಭ ಪಡೆಯುತ್ತಾರೆ ಎನ್ನುವ ವಿಶ್ವಾಸವಿದೆʼʼ ಎಂದು ಹೇಳಿದರು.


    ಸ್ವಿಗ್ಗಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶ್ರೀಹರ್ಷ ಮಜೆಟಿ ಅವರು ಮಾತನಾಡಿ, "ವ್ಯವಹಾರದ ಬೆಳವಣಿಗೆಯು ತನ್ನ ಪಾಲುದಾರರ ಹಿತಾಸಕ್ತಿಗಳು, ಸಮುದಾಯದ ಹಿತಾಸಕ್ತಿ ಮತ್ತು ಪರಿಸರದ ಮೇಲೆ ಒತ್ತಡವನ್ನು ಕಡಿಮೆ ಮಾಡುವುದರ ಜೊತೆ, ಜೊತೆಗೆ ಸಾಗಬೇಕಾದ ಅನಿವಾರ್ಯತೆ ನಮ್ಮಗಳ ಮೇಲೆ ಇದೆ. ನಮ್ಮ ಡೆಲಿವರ್​ ಬಾಯ್​ಗಳು ಪ್ರತಿದಿನ ಸರಾಸರಿ 80- 100 ಕಿಮೀ ಪ್ರಯಾಣಿಸುವ ಮೂಲಕ ಪ್ರತಿ ತಿಂಗಳು ಲಕ್ಷಾಂತರ ಆರ್ಡರ್​ಗಳನ್ನು ಪಡೆಯುತ್ತಿದೆ ಹಾಗೂ ನಮ್ಮ ಗ್ರಾಹಕರಿಗೆ ಅತ್ಯುತ್ತಮ ಸೇವೆ ಒದಗಿಸುತ್ತಿದೆ.


    ನಮ್ಮ ಗ್ರಾಹಕರಿಗೆ ಹೆಚ್ಚಿನ ಅನುಕೂಲವನ್ನು ಒದಗಿಸುವುದರ ಜೊತೆಗೆ ನಮ್ಮ ಕೆಲಸಗಳು ಸಹ ಪರಿಸರದ ಮೇಲೆ ಹೇಗೆ ಪರಿಣಾಮ ಬೀರುತ್ತವೆ ಎಂಬ ಬಗ್ಗೆಯೂ ನಾವು ಎಚ್ಚರವಹಿಸಬೇಕು ಮತ್ತು ನಮ್ಮ ಪ್ರಯಾಣವನ್ನು ಹೆಚ್ಚು ಸುಸ್ಥಿರವಾಗಿರಬೇಕು. ಆದ ಕಾರಣ ಭವಿಷ್ಯದ ದೃಷ್ಟಿಯಿಂದ ಅಗತ್ಯವಾದ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದೇವೆ. ಇವಿಗಳತ್ತ ನಾವು ಹೊರಳಿರುವುದು ಪರಿವರ್ತನೆಯ ಈ ದಿಕ್ಕಿನಲ್ಲಿ ಒಂದು ಪ್ರಮುಖ ಹಂತವಾಗಿದೆ. ಇದು ಪರಿಸರದ ಮೇಲೆ ಧನಾತ್ಮಕ ಪರಿಣಾಮ ಬೀರುತ್ತದೆ. ಹಾಗೆಯೇ ನಮ್ಮ ವಿತರಣಾ ಪಾಲುದಾರರಿಗೆ ಹೆಚ್ಚು ಗಳಿಸಲು ಶಕ್ತಿ ನೀಡುತ್ತದೆʼ ಎಂದು ಹೇಳಿದರು.


    ದೇಶದಾದ್ಯಂತ ಭಾರತದ ಅತಿದೊಡ್ಡ ಬ್ಯಾಟರಿ ವಿನಿಮಯ ಕೇಂದ್ರಗಳನ್ನು, ಆರ್​ಬಿಎಂಎಲ್​ ಎಲೆಕ್ಟ್ರಿಕ್ ವಾಹನಗಳ ಸರಪಳಿಯಲ್ಲಿರುವ ಎಲ್ಲಾ ಪಾಲುದಾರರಿಗೆ ಅನುಕೂಲವಾಗುವಂತಹ ವ್ಯವಸ್ಥೆಯನ್ನು ಸೃಷ್ಟಿಸುತ್ತಿದೆ. ಸ್ವಿಗ್ಗಿಯೊಂದಿಗೆ ರಿಲಯನ್ಸ್​ ಕಂಪನಿಯ ಸಹಯೋಗವು ಭಾರತದಲ್ಲಿ ವಿತರಣೆ ಮತ್ತು ಸಾರಿಗೆ ವ್ಯವಸ್ಥೆಯಲ್ಲಿ ಸಂಚಲನ ಮೂಡಿಸುವ ಜೊತೆಗೆ, ಎಲೆಕ್ಟ್ರಿಕ್ ವಾಹನಗಳ ಅಳವಡಿಕೆಯನ್ನು ತೀವ್ರಗೊಳಿಸಲು ಸಿದ್ಧವಾಗಿದೆ. ವಿಶೇಷವಾಗಿ ಕಟ್ಟಡ ಕಡೆಯ ವ್ಯಕ್ತಿಗೂ ವಿತರಿಸುವ ವ್ಯವಸ್ಥೆಗೆ, ಉನ್ನತ-ಕಾರ್ಯಕ್ಷಮತೆಯ ಬ್ಯಾಟರಿಗಳು ಉತ್ತಮವಾದ ಆನ್-ರೋಡ್ ಶ್ರೇಣಿಯ ಜೊತೆಗೆ, ಒಂದೆರಡು ನಿಮಿಷಗಳಲ್ಲಿ ಬ್ಯಾಟರಿ ಬದಲಾಯಿಸಿಕೊಳ್ಳಬಹುದಾದ ವ್ಯವಸ್ಥೆಯು ಎರಡು ಮತ್ತು ಮೂರು-ಚಕ್ರ ವಾಹನಗಳಿಗೆ ಅತಿ ಹೆಚ್ಚು ನೆರವಾಗಲಿವೆ.


    ಜಿಯೋ-ಬಿಪಿ ಮುಂದಿನ 5 ವರ್ಷಗಳಲ್ಲಿ ತನ್ನ ಚಿಲ್ಲರೆ ಮಾರಾಟ ಮಳಿಗೆಗಳಲ್ಲಿ ಸಾವಿರ ಬ್ಯಾಟರಿ ಸ್ವಾಪ್ ಕೇಂದ್ರಗಳ ವಿತರಣಾ ಜಾಲವನ್ನು ಸ್ಥಾಪಿಸುವುದರ ಜೊತೆಗೆ ಪ್ರಮುಖ ವಸತಿ ಮತ್ತು ವಾಣಿಜ್ಯ ಸಂಕೀರ್ಣಗಳು, ಮಾಲ್​ಗಳು, ಹೋಟೆಲ್​ಗಳು, ವ್ಯಾಪಾರ ಉದ್ಯಾನವನಗಳು, ಐಟಿ ಹಬ್​ಗಳು, ಪಾರ್ಕಿಂಗ್ ಸ್ಥಳಗಳು ಭಾರತದ ಸಂಭಾವ್ಯ ನಗರ ಪ್ರದೇಶಗಳು. ಬ್ಯಾಟರಿ ಬದಲಾವಣೆಯ ಹಬ್​ಗಳು ಕಟ್ಟ ಕಡೆಯ ವ್ಯಕ್ತಿಗೂ ಸಿಗುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.


    ಇದನ್ನೂ ಓದಿ: Corona virus: ಪ್ರವಾಸಿಗರೆ ಎಚ್ಚರ; ಕೊಡಗಿನ ಪ್ರವಾಸಿ ತಾಣಗಳ ಭೇಟಿಗೆ ಕೋವಿಡ್ ನೆಗೆಟಿವ್ ವರದಿ ಕಡ್ಡಾಯ


    ಕಾರು (ಉದ್ಯಮ ಕೇಂದ್ರ ಸಾರಿಗೆ ವ್ಯವಸ್ಥೆ ಮತ್ತು ಗ್ರಾಹಕ ಕೇಂದ್ರಿತ ಸಾರಿಗೆ ವ್ಯವಸ್ಥೆ ) ಮತ್ತು ಬಸ್​ಗಳಿಗೆ ಹೊಂದುವ ಚಾರ್ಜಿಂಗ್ ಕೇಂದ್ರಗಳನ್ನು ಸ್ಥಾಪಿಸುತ್ತಿದೆ. ಮುಂದಿನ ದಿನಗಳಲ್ಲಿ ಇವು ನಗರಗಳಲ್ಲಿ ಕಾಣಿಸಿಕೊಳ್ಳಲಿವೆ. ಜಿಯೋ-ಬಿಪಿ ಎಲೆಕ್ಟ್ರಿಕ್ ವಾಹನಗಳ ಕ್ಷೇತ್ರದಲ್ಲಿ ಬಿಪಿಯ ಶ್ರೇಷ್ಠ ಜಾಗತಿಕ ಸಂಚಲನವನ್ನೇ  ಭಾರತದಲ್ಲಿ ಮಾಡುತ್ತಿದೆ ಮತ್ತು ಗ್ರಾಹಕರನ್ನು ಸಂತೋಷಪಡಿಸುವ, ವಿಭಿನ್ನ ಗ್ರಾಹಕ ಅನುಭವವನ್ನು ಸೃಷ್ಟಿಸಲು ಪ್ರಯತ್ನಿಸುತ್ತಿದೆ.


    ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.

    Published by:HR Ramesh
    First published: