ವಿಶ್ವ ದರ್ಜೆಯ ಇಂಧನ ಪಾಲುದಾರಿಕೆಗೆ ರಿಲಯನ್ಸ್-ಬಿಪಿ ಒಪ್ಪಂದ

2011ರಲ್ಲಿ ಆರ್​ಐಎಲ್ ಹಾಗೂ ಬಿಪಿ ಕಂಪೆನಿಗಳು ಇಂಡಿಯಾ ಗ್ಯಾಸ್ ಸೊಲ್ಯೂಶನ್ಸ್ ಪ್ರೈವೇಟ್ ಲಿಮಿಟೆಡ್ ಸಹಭಾಗಿತ್ವದಲ್ಲಿ ಹೊಸ ಒಪ್ಪಂದವನ್ನು ಮಾಡಿಕೊಂಡಿತು. ಈ ಮೂಲಕ ದೇಶದಲ್ಲಿ ಅಡುಗೆ ಅನಿಲದ ಕೊರತೆ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲಾಗಿತ್ತು.

zahir | news18-kannada
Updated:August 6, 2019, 7:54 PM IST
ವಿಶ್ವ ದರ್ಜೆಯ ಇಂಧನ ಪಾಲುದಾರಿಕೆಗೆ ರಿಲಯನ್ಸ್-ಬಿಪಿ ಒಪ್ಪಂದ
Reliance-BP
  • Share this:
ರಿಲಯನ್ಸ್ ಇಂಡ್ರಸ್ಟ್ರೀಸ್ ಲಿಮಿಟೆಡ್ ಹಾಗೂ ಜಾಗತಿಕ ಇಂಧನ ಸಂಸ್ಥೆ ಬಿಪಿ ಜಂಟಿಯಾಗಿ ಹೊಸ ಒಪ್ಪಂದಕ್ಕೆ ಸಹಿ ಹಾಕಿದೆ. ನೂತನ ಒಪ್ಪಂದದಲ್ಲಿ ಪ್ರಕಾರ ಉಭಯ ಕಂಪೆನಿಗಳು ದೇಶದಾದ್ಯಂತ ಇಂಧನ ರಿಟೇಲ್ ಮಾರುಕಟ್ಟೆ ಹಾಗೂ ವೈಮಾನಿಕ ಇಂಧನ ವ್ಯವಹಾರವನ್ನು ಸಹಭಾಗಿತ್ವದಲ್ಲಿ ಪ್ರಾರಂಭಿಸಲಿದೆ.

ಭಾರತದಲ್ಲಿ ಪೈಪೋಟಿ ದರದಲ್ಲಿ ಇಂಧನಗಳ ಬೇಡಿಕೆ ಹೆಚ್ಚಾಗುತ್ತಿದೆ. ಈ ಸಂದರ್ಭದಲ್ಲಿ ಪ್ರಸಕ್ತ ಇರುವ ಕೊರತೆಯನ್ನು ನೂತನ ಸಹಭಾಗಿತ್ವದಿಂದ ಪೂರೈಸಲು ಎರಡು ಬೃಹತ್ ಕಂಪೆನಿಗಳು ಒಪ್ಪಂದ ಮಾಡಿಕೊಂಡಿದೆ.

ರಿಲಯನ್ಸ್‌ನ ಅಸ್ತಿತ್ವದಲ್ಲಿರುವ ಭಾರತೀಯ ಇಂಧನ ಮಾರುಕಟ್ಟೆಯನ್ನು ವಿಸ್ತರಿಸುವುದು ಮತ್ತು ಅದರೊಂದಿಗೆ ವೈಮಾನಿಕ ಇಂಧನಕ್ಕಾಗಿ ಪರ್ಯಾಯ ವ್ಯವಸ್ಥೆ ರೂಪಿಸಲು ಹೊಸ ಒಪ್ಪಂದ ಸಹಾಯಕವಾಗಲಿದೆ. ಇದರಿಂದ ಮುಂಬರುವ ದಿನಗಳಲ್ಲಿ ದೇಶದಲ್ಲಿನ ಬೇಡಿಕೆಗೆ ಅನುಗುಣವಾಗಿ ತೈಲ ಪೂರೈಕೆಗೆ ಸಾಧ್ಯವಾಗಲಿದೆ.

2011ರಲ್ಲಿ ಆರ್​ಐಎಲ್ ಹಾಗೂ ಬಿಪಿ ಕಂಪೆನಿಗಳು ಇಂಡಿಯಾ ಗ್ಯಾಸ್ ಸೊಲ್ಯೂಶನ್ಸ್ ಪ್ರೈವೇಟ್ ಲಿಮಿಟೆಡ್ ಸಹಭಾಗಿತ್ವದಲ್ಲಿ ಹೊಸ ಒಪ್ಪಂದವನ್ನು ಮಾಡಿಕೊಂಡಿತು. ಈ ಮೂಲಕ ದೇಶದಲ್ಲಿ ಅಡುಗೆ ಅನಿಲದ ಕೊರತೆ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲಾಗಿತ್ತು.  ಇದೀಗ ಉಭಯ ಕಂಪೆನಿಗಳ ಸಹಭಾಗಿತ್ವದಲ್ಲಿ ತೈಲ ಒಪ್ಪಂದವಾಗಿರುವುದರಿಂದ ಮುಂದಿನ ದಿನಗಳಲ್ಲಿ ಇಂಧನದ ಸಮಸ್ಯೆಗೆ ಪರಿಹಾರ ಕಾಣಲಿದೆ ಎಂದು ನಿರೀಕ್ಷಿಸಲಾಗಿದೆ.

ಮುಂದಿನ 20 ವರ್ಷಗಳಲ್ಲಿ ಇಂಧನ ಬೇಡಿಕೆಯಿರುವ ದೇಶಗಳ ಪಟ್ಟಿಯಲ್ಲಿ ಭಾರತ ಮೊದಲ ಸ್ಥಾನದಲ್ಲಿರಲಿದೆ. ಏಕೆಂದರೆ  2 ದಶಕಗಳಲ್ಲಿ ಪ್ರಸ್ತುತ ದೇಶದಲ್ಲಿರುವ ಕಾರುಗಳ ಸಂಖ್ಯೆ ಸುಮಾರು ಆರು ಪಟ್ಟು ಹೆಚ್ಚಳವಾಗಲಿದೆ ಎಂದು ಅಂದಾಜಿಸಲಾಗಿದೆ. ಹೀಗಾಗಿ ದೇಶದ ಅಭಿವೃದ್ಧಿಯನ್ನು ಗಮನದಲ್ಲಿರಿಸಿ ಆರ್​ಐಎಲ್ ಹಾಗೂ ಬಿಪಿ ತೈಲ ಒಪ್ಪಂದಕ್ಕೆ ಸಹಿ ಹಾಕಿದೆ. ಪ್ರಸ್ತುತ ರಿಲಯನ್ಸ್​ ಅಡಿಯಲ್ಲಿ 1,400 ಪೆಟ್ರೋಲ್ ಪಂಪ್ ಇದ್ದು, ಇದನ್ನು  ಮುಂದಿನ ಐದು ವರ್ಷಗಳಲ್ಲಿ ದೇಶದಾದ್ಯಂತ 5,500 ವಿಸ್ತರಿಸಲು ಉಭಯ ಕಂಪೆನಿಗಳು ಯೋಜನೆ ಹಾಕಿಕೊಂಡಿದೆ.

“ಬಿಪಿ ಕಂಪೆನಿಯೊಂದಿಗಿನ ನಮ್ಮ ಪಾಲುದಾರಿಕೆಯನ್ನು ವಿಸ್ತರಿಸಲು ನಾವು ಸಂತೋಷಪಡುತ್ತೇವೆ. ಇಂಧನ ಕ್ಷೇತ್ರದಲ್ಲಿ ಎರಡು ಕಂಪೆನಿಗಳ ಸಹಭಾಗಿತ್ವವು ಹೊಸ ಸಂಬಂಧಗಳಿಗೆ ಸಾಕ್ಷಿಯಾಗಲಿದೆ. ಬಿಪಿ ಮತ್ತು ರಿಲಯನ್ಸ್ ನಡುವೆ ಭಾರತದಲ್ಲಿ ಅನಿಲ ಸಂಪನ್ಮೂಲಗಳನ್ನು ಅಭಿವೃದ್ಧಿಪಡಿಸುವುದರೊಂದಿಗೆ ವೈಮಾನಿಕ ಇಂಧನಗಳ ಪೂರೈಕೆಯನ್ನು ವಿಸ್ತರಿಸಲಿದೆ" ಎಂದು ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್​ನ ಮುಖ್ಯಸ್ಥ ಮುಖೇಶ್ ಅಂಬಾನಿ ತಿಳಿಸಿದ್ದಾರೆ.
First published: August 6, 2019, 7:54 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading