‘RIL AGM 2020: 13 ಲಕ್ಷ ಕೋಟಿ ಮೌಲ್ಯದ ಮೊದಲ ಭಾರತೀಯ ಕಂಪನಿ ರಿಲಾಯನ್ಸ್‘ - ಮುಕೇಶ್ ಅಂಬಾನಿ

ರಿಲಾಯನ್ಸ್​ ಇಂಡಸ್ಟ್ರೀಸ್​​ ಮುಖ್ಯಸ್ಥ ಮುಕೇಶ್​ ಅಂಬಾನಿ

ರಿಲಾಯನ್ಸ್​ ಇಂಡಸ್ಟ್ರೀಸ್​​ ಮುಖ್ಯಸ್ಥ ಮುಕೇಶ್​ ಅಂಬಾನಿ

ಭಾರತದ ಕ್ಲೌಡ್​​​ ಆಧಾರಿತ ವಿಡಿಯೋ ಕಾನ್ಫರೆನ್ಸ್​​​ ಆ್ಯಪ್​​ ಇದಾಗಿದೆ. ರಿಲಾಯನ್ಸ್​ ಇಂಡಸ್ಟ್ರೀಸ್​​ ಸಂಸ್ಥೆಯೂ ಈ ವರ್ಷ ಭಾರೀ ದಾಖಲೆ ಮಾಡಿದೆ. 13 ಲಕ್ಷ ಕೋಟಿ ಮೌಲ್ಯದ ಮೊದಲ ಭಾರತೀಯ ಕಂಪನಿ ರಿಲಯನ್ಸ್ ಆಗಿದೆ ಎಂದರು ಮುಕೇಶ್ ಅಂಬಾನಿ.

  • Share this:

150 ಬಿಲಿಯನ್​​​​​ ಡಾಲರ್​​ ಮಾರ್ಕೆಟ್​​​​​ ಕ್ಯಾಪಿಟಲೈಜೇಷನ್​​​​​​ ಸಾಧಿಸಿದ ದೇಶದ ಮೊದಲ ಕಂಪನಿ ರಿಲಾಯನ್ಸ್​​ ಎಂದು ಭಾರತದ ಶ್ರೀಮಂತ ಉದ್ಯಮಿ ಮುಕೇಶ್​​ ಅಂಬಾನಿ ಹೇಳಿದರು. ರಿಲಾಯನ್ಸ್ ಇಂಡಸ್ಟ್ರೀಸ್​ನ ವಾರ್ಷಿಕ ಸಾಮಾನ್ಯ ಸಭೆ (ಎಜಿಎಂ) ಪ್ರಾರಂಭವಾಗಿದೆ. ವಿಶ್ವದ ಹೂಡಿಕೆದಾರರನ್ನು ಆಕರ್ಷಿಸುವ ಮೂಲಕ ಬಹಳ ಸದ್ದು ಮಾಡಿದ್ದ ರಿಲಿಯಾನ್ಸ್​ ಈಗ ಮತ್ತೊಮ್ಮೆ ಎಜಿಎಂ ಸಭೆ ಮೂಲಕ ದೇಶದ ಗಮನ ಸಳೆದಿದೆ.  ಈ ಎಜಿಎಂ ಸಭೆಯಲ್ಲಿ ಆನ್​ಲೈನ್​​ ಮೂಲಕ 500 ಸ್ಥಳಗಳಿಂದ 1 ಲಕ್ಷಕ್ಕೂ ಹೆಚ್ಚು ಷೇರುದಾರರು ಲಾಗ್ ಇನ್ ಆಗಿ ಭಾಗಿಯಾಗಿದ್ದಾರೆ. ಈ ಸಭೆಯನ್ನುದ್ದೇಶಿಸಿ ಮಾತಾಡುವ ವೇಳೆ ಮುಕೇಶ್​​ ಅಂಬಾನಿ ಈ ವಿಚಾರ ಪ್ರಸ್ತಾಪಿಸಿದರು.


ಪ್ರಸ್ತುತ ಮಾರಕ ಕೊರೋನಾ ವೈರಸ್ ರೋಗವೂ ಅನೇಕ ಸಮಸ್ಯೆಗಳೊಂದಿಗೆ ಹೊಸ ಅವಕಾಶಗಳನ್ನು ಸೃಷ್ಟಿಸಿದೆ. ಈ ಕೊರೋನಾ ಸಂದರ್ಭದಲ್ಲೇ ಜಿಯೋ ಟೀಮ್​​​ ಜಿಯೋ ಮೀಟ್​ ಅನ್ನು ರಿಲೀಸ್​ ಮಾಡಿದೆ. ಈಗಾಗಲೇ 5 ಮಿಲಿಯನ್​​​​​ ಯೂಸರ್ಸ್​​​ JioMeet ಆ್ಯಪ್​​ ಅನ್ನು ಡೌನ್​ಲೋಡ್​​ ಮಾಡಿಕೊಂಡಿದ್ದಾರೆ ಎಂದರು.


ಭಾರತದ ಕ್ಲೌಡ್​​​ ಆಧಾರಿತ ವಿಡಿಯೋ ಕಾನ್ಫರೆನ್ಸ್​​​ ಆ್ಯಪ್​​ ಇದಾಗಿದೆ. ರಿಲಾಯನ್ಸ್​ ಇಂಡಸ್ಟ್ರೀಸ್​​ ಸಂಸ್ಥೆಯೂ ಈ ವರ್ಷ ಭಾರೀ ದಾಖಲೆ ಮಾಡಿದೆ. 13 ಲಕ್ಷ ಕೋಟಿ ಮೌಲ್ಯದ ಮೊದಲ ಭಾರತೀಯ ಕಂಪನಿ ರಿಲಯನ್ಸ್ ಆಗಿದೆ ಎಂದರು ಮುಕೇಶ್ ಅಂಬಾನಿ.


ಜತೆಗೆ ರಿಲಯನ್ಸ್​ ಇಂಡಸ್ಟ್ರೀಸ್​ನ ಭಾಗವಾಗಿರುವ ಜಿಯೋದಲ್ಲಿ ಗೂಗಲ್ ಶೇ. 7.7ರಷ್ಟು ಷೇರು ಹೊಂದುವ ಮೂಲಕ 33,000 ಕೋಟಿ ರೂ. ಹೂಡಿಕೆ ಮಾಡಲಿದೆ ಎಂದು ಮುಕೇಶ್​​ ಅಂಬಾನಿ ಖಚಿತಪಡಿಸಿದರು.




ಇದನ್ನೂ ಓದಿ: RIL AGM 2020: Jioದಲ್ಲಿ Google 33,000 ಕೋಟಿ ರೂ. ಹೂಡಿಕೆ; ಮುಕೇಶ್ ಅಂಬಾನಿ ಘೋಷಣೆ

top videos


    ಅಂತಾರಾಷ್ಟ್ರೀಯ ಮಟ್ಟದಲ್ಲಿ ವರ್ಚುವಲ್ ಈವೆಂಟ್ ಷೇರುದಾರರು ಸೇರಿದಂತೆ ಜಾಗತಿಕ ಹೂಡಿಕೆದಾರರನ್ನು ಆಕರ್ಷಿಸುವ ಸಲುವಾಗಿ Chatbot‌ ಅನ್ನು ಪ್ರಾರಂಭಿಸಲಾಗಿದೆ. ಈಗಾಗಲೇ ವಿಶ್ವದ 6ನೇ ಅತಿ ಶ್ರೀಮಂತ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಮುಕೇಶ್ ಅಂಬಾನಿ ಪಾತ್ರರಾಗಿದ್ದಾರೆ. ವಿಶ್ವದ ಟಾಪ್​ 10 ಶ್ರೀಮಂತರ ಪಟ್ಟಿಯಲ್ಲಿರುವ ಏಷ್ಯಾದ ಏಕೈಕ ವ್ಯಕ್ತಿ ಮುಕೇಶ್ ಅಂಬಾನಿ. ಭಾರತದ ಶ್ರೀಮಂತರ ಪೈಕಿ ಮುಕೇಶ್ ಅಂಬಾನಿ ಮೊದಲ ಸ್ಥಾನದಲ್ಲಿದ್ದಾರೆ.

    First published: