‘RIL AGM 2020: 13 ಲಕ್ಷ ಕೋಟಿ ಮೌಲ್ಯದ ಮೊದಲ ಭಾರತೀಯ ಕಂಪನಿ ರಿಲಾಯನ್ಸ್‘ - ಮುಕೇಶ್ ಅಂಬಾನಿ

ಭಾರತದ ಕ್ಲೌಡ್​​​ ಆಧಾರಿತ ವಿಡಿಯೋ ಕಾನ್ಫರೆನ್ಸ್​​​ ಆ್ಯಪ್​​ ಇದಾಗಿದೆ. ರಿಲಾಯನ್ಸ್​ ಇಂಡಸ್ಟ್ರೀಸ್​​ ಸಂಸ್ಥೆಯೂ ಈ ವರ್ಷ ಭಾರೀ ದಾಖಲೆ ಮಾಡಿದೆ. 13 ಲಕ್ಷ ಕೋಟಿ ಮೌಲ್ಯದ ಮೊದಲ ಭಾರತೀಯ ಕಂಪನಿ ರಿಲಯನ್ಸ್ ಆಗಿದೆ ಎಂದರು ಮುಕೇಶ್ ಅಂಬಾನಿ

news18-kannada
Updated:July 16, 2020, 9:34 AM IST
‘RIL AGM 2020: 13 ಲಕ್ಷ ಕೋಟಿ ಮೌಲ್ಯದ ಮೊದಲ ಭಾರತೀಯ ಕಂಪನಿ ರಿಲಾಯನ್ಸ್‘ - ಮುಕೇಶ್ ಅಂಬಾನಿ
ರಿಲಾಯನ್ಸ್​ ಇಂಡಸ್ಟ್ರೀಸ್​​ ಮುಖ್ಯಸ್ಥ ಮುಕೇಶ್​ ಅಂಬಾನಿ
  • Share this:
ಮುಂಬೈ : 150 ಬಿಲಿಯನ್​​​​​ ಡಾಲರ್​​ ಮಾರ್ಕೆಟ್​​​​​ ಕ್ಯಾಪಿಟಲೈಜೇಷನ್​​​​​​ ಸಾಧಿಸಿದ ದೇಶದ ಮೊದಲ ಕಂಪನಿ ರಿಲಾಯನ್ಸ್​​ ಎಂದು ಭಾರತದ ಶ್ರೀಮಂತ ಉದ್ಯಮಿ ಮುಕೇಶ್​​ ಅಂಬಾನಿ ಹೇಳಿದರು. ರಿಲಾಯನ್ಸ್ ಇಂಡಸ್ಟ್ರೀಸ್​ನ ವಾರ್ಷಿಕ ಸಾಮಾನ್ಯ ಸಭೆ (ಎಜಿಎಂ) ಪ್ರಾರಂಭವಾಗಿದೆ. ವಿಶ್ವದ ಹೂಡಿಕೆದಾರರನ್ನು ಆಕರ್ಷಿಸುವ ಮೂಲಕ ಬಹಳ ಸದ್ದು ಮಾಡಿದ್ದ ರಿಲಿಯಾನ್ಸ್​ ಈಗ ಮತ್ತೊಮ್ಮೆ ಎಜಿಎಂ ಸಭೆ ಮೂಲಕ ದೇಶದ ಗಮನ ಸಳೆದಿದೆ.  ಈ ಎಜಿಎಂ ಸಭೆಯಲ್ಲಿ ಆನ್​ಲೈನ್​​ ಮೂಲಕ 500 ಸ್ಥಳಗಳಿಂದ 1 ಲಕ್ಷಕ್ಕೂ ಹೆಚ್ಚು ಷೇರುದಾರರು ಲಾಗ್ ಇನ್ ಆಗಿ ಭಾಗಿಯಾಗಿದ್ದಾರೆ. ಈ ಸಭೆಯನ್ನುದ್ದೇಶಿಸಿ ಮಾತಾಡುವ ವೇಳೆ ಮುಕೇಶ್​​ ಅಂಬಾನಿ ಈ ವಿಚಾರ ಪ್ರಸ್ತಾಪಿಸಿದರು.

ಪ್ರಸ್ತುತ ಮಾರಕ ಕೊರೋನಾ ವೈರಸ್ ರೋಗವೂ ಅನೇಕ ಸಮಸ್ಯೆಗಳೊಂದಿಗೆ ಹೊಸ ಅವಕಾಶಗಳನ್ನು ಸೃಷ್ಟಿಸಿದೆ. ಈ ಕೊರೋನಾ ಸಂದರ್ಭದಲ್ಲೇ ಜಿಯೋ ಟೀಮ್​​​ ಜಿಯೋ ಮೀಟ್​ ಅನ್ನು ರಿಲೀಸ್​ ಮಾಡಿದೆ. ಈಗಾಗಲೇ 5 ಮಿಲಿಯನ್​​​​​ ಯೂಸರ್ಸ್​​​ JioMeet ಆ್ಯಪ್​​ ಅನ್ನು ಡೌನ್​ಲೋಡ್​​ ಮಾಡಿಕೊಂಡಿದ್ದಾರೆ ಎಂದರು.

ಭಾರತದ ಕ್ಲೌಡ್​​​ ಆಧಾರಿತ ವಿಡಿಯೋ ಕಾನ್ಫರೆನ್ಸ್​​​ ಆ್ಯಪ್​​ ಇದಾಗಿದೆ. ರಿಲಾಯನ್ಸ್​ ಇಂಡಸ್ಟ್ರೀಸ್​​ ಸಂಸ್ಥೆಯೂ ಈ ವರ್ಷ ಭಾರೀ ದಾಖಲೆ ಮಾಡಿದೆ. 13 ಲಕ್ಷ ಕೋಟಿ ಮೌಲ್ಯದ ಮೊದಲ ಭಾರತೀಯ ಕಂಪನಿ ರಿಲಯನ್ಸ್ ಆಗಿದೆ ಎಂದು ಮುಕೇಶ್ ಅಂಬಾನಿ ತಿಳಿಸಿದರು

ಇದನ್ನೂ ಓದಿ : RIL AGM 2020 : ಸದ್ಯದಲ್ಲೇ ದೇಶದಲ್ಲಿ ಜಿಯೋ 5ಜಿ ಸೇವೆ ಆರಂಭ: ಬೇರೆ ದೇಶಗಳಿಗೂ 5ಜಿ ಸೊಲ್ಯೂಷನ್​ ಸೇವೆ

ಜತೆಗೆ ರಿಲಯನ್ಸ್​ ಇಂಡಸ್ಟ್ರೀಸ್​ನ ಭಾಗವಾಗಿರುವ ಜಿಯೋದಲ್ಲಿ ಗೂಗಲ್ ಶೇ. 7.7ರಷ್ಟು ಷೇರು ಹೊಂದುವ ಮೂಲಕ 33,000 ಕೋಟಿ ರೂ. ಹೂಡಿಕೆ ಮಾಡಲಿದೆ ಎಂದು ಮುಕೇಶ್​​ ಅಂಬಾನಿ ಖಚಿತಪಡಿಸಿದರು



ಅಂತಾರಾಷ್ಟ್ರೀಯ ಮಟ್ಟದಲ್ಲಿ ವರ್ಚುವಲ್ ಈವೆಂಟ್ ಷೇರುದಾರರು ಸೇರಿದಂತೆ ಜಾಗತಿಕ ಹೂಡಿಕೆದಾರರನ್ನು ಆಕರ್ಷಿಸುವ ಸಲುವಾಗಿ Chatbot‌ ಅನ್ನು ಪ್ರಾರಂಭಿಸಲಾಗಿದೆ. ಈಗಾಗಲೇ ವಿಶ್ವದ 6ನೇ ಅತಿ ಶ್ರೀಮಂತ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಮುಕೇಶ್ ಅಂಬಾನಿ ಪಾತ್ರರಾಗಿದ್ದಾರೆ. ವಿಶ್ವದ ಟಾಪ್​ 10 ಶ್ರೀಮಂತರ ಪಟ್ಟಿಯಲ್ಲಿರುವ ಏಷ್ಯಾದ ಏಕೈಕ ವ್ಯಕ್ತಿ ಮುಕೇಶ್ ಅಂಬಾನಿ. ಭಾರತದ ಶ್ರೀಮಂತರ ಪೈಕಿ ಮುಕೇಶ್ ಅಂಬಾನಿ ಮೊದಲ ಸ್ಥಾನದಲ್ಲಿದ್ದಾರೆ.
Published by: G Hareeshkumar
First published: July 16, 2020, 9:33 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading