HOME » NEWS » National-international » RELIANCE ANNOUNCES JIOPHONE NEXT SMARTPHONE IN PARTNERSHIP WITH GOOGLE AVAILABLE FROM SEPTEMBER 10 HG

JioPhone Next: ಸೆ.10 ರಿಂದ ಜಿಯೋಫೋನ್​ ನೆಕ್ಸ್ಟ್​ ಖರೀದಿಗೆ ಲಭ್ಯ; ಬೆಲೆ, ವೈಶಿಷ್ಟ್ಯ ಕುರಿತಾದ ಮಾಹಿತಿ ಇಲ್ಲಿದೆ

JioPhone Next: ರಿಲಯನ್ಸ್​ ಜಿಯೋ ಜನಪ್ರಿಯ ಗೂಗಲ್​ ಜತೆ ಕೈಜೋಡಿಸಿಕೊಂಡು ಜಿಯೋಫೋನ್​ ನೆಕ್ಸ್ಟ್​​​ ​ ಅನ್ನು ಅಭಿವೃದ್ಧಿ ಪಡಿಸಿದ್ದಾರೆ. ಇದು ಆ್ಯಂಡ್ರಾಯ್ಡ್​ ಸ್ಮಾರ್ಟ್​ಫೋನ್​ ಆಗಿದ್ದು, ಪ್ಲೇ ಸ್ಟೋರ್​ಗೆ ಸಂಪೂರ್ಣ ಪ್ರವೇಶವನ್ನು ನೀಡುತ್ತದೆ. ಇದರ ಮೂಲಕ ಹಲವಾರು ಅಪ್ಲಿಕೇಶನ್​ ಅನ್ನು ಡೌನ್​ಲೋಡ್​ ಮಾಡಲು ಅನುವು ಮಾಡಿಕೊಡುತ್ತದೆ.

news18-kannada
Updated:June 24, 2021, 4:46 PM IST
JioPhone Next: ಸೆ.10 ರಿಂದ ಜಿಯೋಫೋನ್​ ನೆಕ್ಸ್ಟ್​ ಖರೀದಿಗೆ ಲಭ್ಯ; ಬೆಲೆ, ವೈಶಿಷ್ಟ್ಯ ಕುರಿತಾದ ಮಾಹಿತಿ ಇಲ್ಲಿದೆ
Jionphone next​​​​
  • Share this:
ರಿಲಯನ್ಸ್​ ಜಿಯೋ ವಾರ್ಷಿಕ ಸಾಮಾನ್ಯ ಸಭೆಯಲ್ಲಿ Jionphone next​ ಸ್ಮಾರ್ಟ್​ಫೋನನ್ನು ಘೋಷಿಸಲಾಗಿದೆ. ನೂತನ ಫೋನ್​ ಸೆಪ್ಟೆಂಬರ್​ 10ರಿಂದ ಖರೀದಿಗೆ ಸಿಗಲಿದೆ.

ರಿಲಯನ್ಸ್​ ಜಿಯೋ ಜನಪ್ರಿಯ ಗೂಗಲ್​ ಜತೆ ಕೈಜೋಡಿಸಿಕೊಂಡು ಜಿಯೋಫೋನ್​ ನೆಕ್ಸ್ಟ್​​​ ​ ಅನ್ನು ಅಭಿವೃದ್ಧಿ ಪಡಿಸಿದ್ದಾರೆ. ಇದು ಆ್ಯಂಡ್ರಾಯ್ಡ್​ ಸ್ಮಾರ್ಟ್​ಫೋನ್​ ಆಗಿದ್ದು, ಪ್ಲೇ ಸ್ಟೋರ್​ಗೆ ಸಂಪೂರ್ಣ ಪ್ರವೇಶವನ್ನು ನೀಡುತ್ತದೆ. ಇದರ ಮೂಲಕ ಹಲವಾರು ಅಪ್ಲಿಕೇಶನ್​ ಅನ್ನು ಡೌನ್​ಲೋಡ್​ ಮಾಡಲು ಅನುವು ಮಾಡಿಕೊಡುತ್ತದೆ.

ವಾರ್ಷಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ್ದ ಮುಖೇಶ್​ ಅಂಬಾನಿ ಕೈಗೆಟಕುವ 4G ಸ್ಮಾರ್ಟ್​ಫೋನ್ ಸಹಾಯದಿಂದ 300 ಮಿಲಿಯನ್​ 2G ಬಳಕೆದಾರರನ್ನ 4Gಗೆ ಅಪ್​ಗ್ರೇಡ್​ ಮಾಡುವ ಗುರಿಯನ್ನು ಹೊಂದಿದೆ. ಕಂಪನಿ ಮುಂದಿನ ಹಂತದ ಚಂದಾದಾರರ ಬೆಳವಣಿಗೆಯತ್ತ ಹೆಚ್ಚು ಗಮನ ಹರಿಸಲಿದೆ ಎಂದು ಹೇಳಿದರು.

Jionphone next​​​​


Jionphone next​​​​ ಬಿಡುಗಡೆ ದಿನಾಂಕ:

ಮುಂಬರುವ ಸೆಪ್ಟೆಂಬರ್​ 10ರಿಂದ ಖರೀದಿಗೆ ಲಭ್ಯವಿರುತ್ತದೆ. ಅಂದಹಾಗೆಯೇ ಸ್ಮಾಟ್​ಫೋನ್​ ಬೆಲೆ ಇನ್ನೂ ಬಹಿರಂಗವಾಗಿಲ್ಲ. ಆದರೆ ಭಾರತದಲ್ಲಿ ಬಿಡುಗಡೆಗೊಳಿಸಿದ ಬಳಿಕೆ ಹೊರ ದೇಶಗಳಿಗೂ ಪರಿಚಯಿಸುವ ಯೋಜನೆ ಹಾಕಿಕೊಂಡಿದೆ.

ಜಿಯೋಫೋನ್​ ನೆಕ್ಸ್ಟ್ ಭಾರತದಲ್ಲಿ ಮತ್ತು ಜಾಗತಿಕವಾಗಿ ಅತ್ಯಂತ ಒಳ್ಳೆಯ ಸ್ಮಾರ್ಟ್​ಫೋನ್​ಗಳಲ್ಲಿ ಒಂದಾಗಲಿದೆ ಎಂದು ಅಂಬಾನಿ ಹೇಳಿದರು.ಜಿಯೋ ಫೋನ್​ ವೈಶಿಷ್ಟ್ಯ:

ರಿಲಯನ್ಸ್​ ಇಂಡಸ್ಟ್ರೀಸ್​ ಅಧ್ಯಕ್ಷ ಮುಖೇಶ್​ ಅಂಬಾನಿ ಅವರು ಜಿಯೋಫೋನ್​ ನೆಕ್ಸ್ಟ್​​ ‘ಅಲ್ಟ್ರಾ-ಕೈಗೆಡುವ’ ಸ್ಮಾರ್ಟ್​ಫೋನ್ ಆಗಿರಲಿದೆ. ಸ್ಮಾರ್ಟ್​ಕ್ಯಾಮೆರಾ ವೈಶಿಷ್ಟ್ಯ ಗ್ರಾಹಕರನ್ನು ಸೆಳೆಯಲಿದೆ ಎಂದರು.
Published by: Harshith AS
First published: June 24, 2021, 4:44 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories