Reliance AGM 2022: ಇನ್ಮುಂದೆ ವಾಟ್ಸಾಪ್​ನಲ್ಲೂ ಭರ್ಜರಿ ಶಾಪಿಂಗ್​ಗೆ ಅವಕಾಶ! ಗ್ರಾಹಕರಿಗೆ ಜಿಯೋಮಾರ್ಟ್​ ಮತ್ತಷ್ಟು ಹತ್ತಿರ

ಮೆಟಾ ಮತ್ತು ಜಿಯೋ, ವಾಟ್ಸಾಪ್‌ನಲ್ಲಿ ಶಾಪಿಂಗ್​ಗೆ ವೇದಿಕೆ ಕಲ್ಪಿಸಿದೆ. ಮೊಟ್ಟಮೊದಲ ಬಾರಿಗೆ ವಾಟ್ಸಾಪ್​ನಲ್ಲಿ ಶಾಪಿಂಗ್ ಪ್ರಾರಂಭಿಸುವುದಾಗಿ ಘೋಷಿಸಿವೆ. ಜಿಯೋಮಾರ್ಟ್​ನಲ್ಲಿ ಗ್ರಾಹಕರು ತಮಗೆ ಬೇಕಾದ ವಸ್ತುಗಳನ್ನು ಖರೀದಿ ಮಾಡಬಹುದು. ಅಲ್ಲದೇ ಇದು ಜಾಗತಿಕವಾಗಿ ಮೊದಲ ವಾಟ್ಸಾಪ್ ಶಾಪಿಂಗ್​ನ ವೇದಿಕೆಯಾಗಿದೆ.

RIL ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಮುಖೇಶ್ ಅಂಬಾನಿ

RIL ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಮುಖೇಶ್ ಅಂಬಾನಿ

 • Share this:
  ಶಾಪಿಂಗ್ ಅಂದಾಕ್ಷಣ ನಮಗೆಲ್ಲಾ ಹೊರಗೆ ಹೋಗೋದೇ ನೆನಪಾಗುತ್ತೆ. ಆದರೆ ಕೆಲಸದ ಬ್ಯುಸಿ, ಟ್ರಾಫಿಕ್ ಸಮಸ್ಯೆ, ಕೊರೋನಾ ಅಂತೆಲ್ಲಾ ಇರುವಾಗ ನಮಗೆ ಕುಳಿತಲ್ಲಿಂದಲೇ ಶಾಪಿಂಗ್ (Online Shopping) ಬೆಸ್ಟ್ ಅನ್ಸತ್ತೆ. ಅದಕ್ಕಾಗಿ ಈಗ ನಿಮ್ಮ ಜಿಯೋ ಮತ್ತಷ್ಟು ಸುಲಭವಾಗಿ ಶಾಪಿಂಗ್​ಗೆ ಅವಕಾಶ ಮಾಡಿಕೊಡ್ತಿದೆ. ಅದರಲ್ಲೂ ವಾಟ್ಸಾಪ್​​ನಲ್ಲಿ (WhatsApp) ಶಾಪಿಂಗ್ ಮಾಡೋದಂದ್ರೆ ಇನ್ನು ಸುಲಭ. ಈಗ ವಾಟ್ಸಾಪ್​​ನಲ್ಲಿ ಜಿಯೋಮಾರ್ಟ್​ (JioMart) ಆರಂಭಿಸಲಾಗಿದೆ. ಮೆಟಾ (Meta) ಮತ್ತು ಜಿಯೋ (Jio) ಫ್ಲ್ಯಾಟ್​ಫಾರ್ಮ್‌ಗಳ ಅಡಿಯಲ್ಲಿ ಜಿಯೋಮಾರ್ಟ್​ ವಾಟ್ಸಾಪ್​ನಲ್ಲಿ ಲಭ್ಯವಾಗಲಿದೆ. ರಿಲಯನ್ಸ್​ 2022ರ ವಾರ್ಷಿಕ ಸಭೆಯಲ್ಲಿ ಇದನ್ನು ಘೋಷಿಸಲಾಯ್ತು.

  ವಾಟ್ಸಾಪ್​​ನಲ್ಲಿ ಮೊಟ್ಟಮೊದಲ ಶಾಪಿಂಗ್ ಅನುಭವ
  ಆಗಸ್ಟ್ 29, 2022ರಂದು ಮೆಟಾ ಮತ್ತು ಜಿಯೋ, ವಾಟ್ಸಾಪ್‌ನಲ್ಲಿ ಶಾಪಿಂಗ್​ಗೆ ವೇದಿಕೆ ಕಲ್ಪಿಸಿದೆ. ಮೊಟ್ಟಮೊದಲ ಬಾರಿಗೆ ವಾಟ್ಸಾಪ್​ನಲ್ಲಿ ಶಾಪಿಂಗ್ ಪ್ರಾರಂಭಿಸುವುದಾಗಿ ಘೋಷಿಸಿವೆ. ಇಲ್ಲಿ ಗ್ರಾಹಕರು ತಮಗೆ ಬೇಕಾದ ವಸ್ತುಗಳನ್ನು ಖರೀದಿ ಮಾಡಬಹುದು. ಅಲ್ಲದೇ ಇದು ಜಾಗತಿಕವಾಗಿ ಮೊದಲ ವಾಟ್ಸಾಪ್ ಶಾಪಿಂಗ್​ನ ವೇದಿಕೆ.

  ಯಾವುದೇ ವಸ್ತುವನ್ನು ಕುಳಿತಲ್ಲಿಂದಲೇ ಖರೀದಿಸಿ
  ಮೆಟಾ ಪಾಲುದಾರಿಕೆಯ ಜಿಯೋಮಾರ್ಟ್​ನಲ್ಲಿ ಯಾವುದೇ ಉತ್ಪನ್ನವನ್ನು ಖರೀಸಬಹುದಾಗಿದೆ. ಭಾರತ ದೇಶಾದ್ಯಂತ ವಾಟ್ಸಾಪ್​​​ನಲ್ಲಿ ಈ ಶಾಪಿಂಗ್​​ನ ಅನುಭವ ನೀವು ಪಡೆಯಬಹುದು. ಭಾರತದಲ್ಲಿನ ಬಳಕೆದಾರರು, ಹಿಂದೆಂದೂ ಆನ್‌ಲೈನ್‌ ಶಾಪಿಂಗ್​​ನಲ್ಲಿ ಪಡೆಯದಂತಹ ಅನುಭವವನ್ನು ಇಲ್ಲಿ ಪಡೆಯಬಹುದು. ವಾಟ್ಸಾಪ್​ ಚಾಟ್​ನಲ್ಲೇ ಶಾಪಿಂಗ್ ಮಾಡಬಹುದು. ದಿನಬಳಕೆಯ ಎಲ್ಲಾ ವಸ್ತುಗಳನ್ನು ಕುಳಿತಲ್ಲಿಂದಲೇ ಶಾಪಿಂಗ್ ಮಾಡಿಕೊಳ್ಳಿ.

  ಇದನ್ನೂ ಓದಿ: ದೀಪಾವಳಿಗೆ ಭಾರತೀಯರಿಗೆ ಬಂಪರ್! ಜಿಯೋ 5ಜಿ ಆರಂಭ

  ಜಿಯೋಮಾರ್ಟ್​ಗೆ ಮಾರ್ಕ್​ ಜುಕರ್​ಬರ್ಗ್​ ಮೆಚ್ಚುಗೆ
  ಜಿಯೋಮಾರ್ಟ್​ನ ವಾಟ್ಸಾಪ್​ ಶಾಪಿಂಗ್ ಬಗ್ಗೆ ಮೆಟಾ ಸಂಸ್ಥಾಪಕ ಮತ್ತು ಸಿಇಒ ಮಾರ್ಕ್ ಜುಕರ್‌ಬರ್ಗ್ ಫೇಸ್​​ಬುಕ್ ಪೋಸ್ಟ್​​ನಲ್ಲಿ ಖುಷಿ ಹಂಚಿಕೊಂಡಿದ್ದಾರೆ. ಭಾರತದಲ್ಲಿ ಜಿಯೋಮಾರ್ಟ್​ನೊಂದಿಗೆ ನಮ್ಮ ಪಾಲುದಾರಿಕೆಯನ್ನು ಪ್ರಾರಂಭಿಸಿದ್ದಕ್ಕೆ ಸಂತಸಗೊಂಡಿದ್ದೇನೆ. ಇದು ದಣಿವರಿಯದ ಶಾಪಿಂಗ್ ಆಗಿದೆ. ಇದರಿಂದ ನಾನು ಉತ್ಸುಕನಾಗಿದ್ದೇನೆ ಅಂತಾ ತಿಳಿಸಿದ್ದಾರೆ.

  ಜನರು ಈಗ ವಾಟ್ಸಾಪ್​ ಚಾಟ್‌ನಲ್ಲಿಯೇ ಜಿಯೋಮಾರ್ಟ್​ನಿಂದ ದಿನಸಿ ವಸ್ತುಗಳನ್ನು ಖರೀದಿಸಬಹುದು. ವ್ಯಾಪಾರಕ್ಕೂ ಕೂಡ ಮೆಸೇಜ್ ಕಳಿಸಬಹುದು. ಈ ಚಾಟ್​​ನಿಂದ ಶಾಪಿಂಗ್ ಮಾಡೋದು ಒಂದು ಹೊಸ ಅನುಭವ ಅಂತಾ ಮಾರ್ಕ್ ಜುಕರ್‌ಬರ್ಗ್ ಹೇಳಿದ್ದಾರೆ.

  ಭಾರತ ಡಿಜಿಟಲ್ ಆಗಿ ಮುನ್ನಡೆಯಲಿ-ಮುಖೇಶ್​ ಅಂಬಾನಿ
  ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಮುಖೇಶ್ ಅಂಬಾನಿ ಮಾತನಾಡಿ, ಇಡೀ ವಿಶ್ವದಲ್ಲೇ ನಮ್ಮ ಭಾರತವನ್ನು ಡಿಜಿಟಲ್ ಆಗಿ ಮುನ್ನಡೆಸೋದು ನಮ್ಮ ಗುರಿಯಾಗಿದೆ. ಯಾವಾಗ ಜಿಯೋ ಮತ್ತು ಮೆಟಾ 2020ರಲ್ಲಿ ನಮ್ಮ ಪಾಲುದಾರಿಕೆಯನ್ನು ಘೋಷಿಸಿತ್ತೋ, ಅಂದಿನಿಂದ ನಾನು ಮತ್ತು ಮಾರ್ಕ್ ಜುಕರ್​ಬರ್ಗ್​ ಗ್ರಾಹಕರಿಗೆ ಹೆಚ್ಚಿನದನ್ನು ಕೊಡವುದರ ಬಗ್ಗೆ ಮಾಹಿತಿ ಹಂಚಿಕೊಂಡಿದ್ದೇವೆ ಅಂದರು.

  ಜಿಯೋಮಾರ್ಟ್​ನಲ್ಲಿ ಶಾಪಿಂಗ್​​ ಸಂತಸ ಅನುಭವಿಸಿ- ಮುಖೇಶ್ ಅಂಬಾನಿ
  ಆನ್‌ಲೈನ್‌ನಲ್ಲಿ ಜನರು ವ್ಯವಹಾರಗಳನ್ನು ಹೆಚ್ಚು ಮಾಡಿದಂತೆ ನಮಗೂ ಹೊಸ ಹುರುಪು ಬರುತ್ತದೆ. ಹೊಸ ಪರಿಹಾರ ಸಿಗುತ್ತದೆ. ವಾಟ್ಸಾಪ್​ನಲ್ಲಿ ಶಾಪಿಂಗ್ ಪ್ರತಿಯೊಬ್ಬನ ದೈನಂದಿನ ಜೀವನಕ್ಕೆ ಅನುಕೂಲವಾಗುತ್ತದೆ. ನಾವು ಅಭಿವೃದ್ಧಿ ಹೊಂದಲು ಹೆಮ್ಮೆಪಡುವ ಅನುಭವವು ಇಲ್ಲಿ ಸಿಗುತ್ತದೆ. ಜಿಯೋಮಾರ್ಟ್​ನಲ್ಲಿ ಮೊದಲಿನಿಂದ ಕೊನೆಯವರಿಗೆ ಎಲ್ಲಾ ಶಾಪಿಂಗ್ ಆಗಲಿದೆ ಅಂತಾ ಉಲ್ಲೇಖಿಸಿದರು.

  ವಾಟ್ಸಾಪ್​ನಲ್ಲಿ ಶಾಪಿಂಗ್ ಅನ್ನೋದು ಡಿಜಿಟಲ್​ನಲ್ಲಿ ಹೊಸ ಪರಿಚಯ. ವಾಟ್ಸಾಪ್ ಮೂಲಕ ಜಿಯೋಮಾರ್ಟ್​ನಲ್ಲಿ ಶಾಪಿಂಗ್ ಮಾಡೋದು ಹೊಸ ಅನುಭವ. ಈ ಆನ್‌ಲೈನ್ ಶಾಪಿಂಗ್‌ ಲಕ್ಷಾಂತರ ಭಾರತೀಯರಿಗೆ ಸರಳ ಮತ್ತು ಅನುಕೂಲಕರ ಮಾರ್ಗವನ್ನು ತೋರಿಸುತ್ತದೆ ಅಂತಾ ಮುಖೇಶ್ ಅಂಬಾನಿ ಸಂತಸ ಹಂಚಿಕೊಂಡರು.

  ಇದನ್ನೂ ಓದಿ: ಕ್ವಾಲ್​ಕಾಮ್ ಜೊತೆ ಪಾಲುದಾರಿಕೆಯನ್ನು ಘೋಷಿಸಿದ ಮುಖೇಶ್ ಅಂಬಾನಿ!

  ಎಲ್ಲಾ ವರ್ಗದ ಜನರಿಗೂ ಖರೀದಿಯ ಅವಕಾಶ
  ಹೊಸ ರೀತಿಯಲ್ಲಿ ಸಂಪರ್ಕ ಸಾಧಿಸಲು ಮತ್ತು ದೇಶದಲ್ಲಿ ಆರ್ಥಿಕ ಬೆಳವಣಿಗೆಯನ್ನು ಉತ್ತೇಜಿಸಲು ಈಗ ಜಿಯೋಮಾರ್ಟ್​ ಆನ್ ಆಗಿದೆ. ಇದು ಮೆಟಾ ಮತ್ತು ಜಿಯೋ ಸಹಯೋಗದ ನಡುವಿನ ಕಾರ್ಯತಂತ್ರದ ಪಾಲುದಾರಿಕೆಯ ಭಾಗವಾಗಿದೆ. ಭಾರತದ ಎಲ್ಲಾ ವರ್ಗಗಳ ಜನರಿಗೆ ಉತ್ತಮ ಖರೀದಿಯ ಅವಕಾಶವನ್ನು ಜಿಯೋಮಾರ್ಟ್​ ನೀಡಲಿದೆ.

  JioMart ಸಂಖ್ಯೆ +917977079770

  ಸಾಟಿಯಿಲ್ಲದ ಸರಳತೆ ಮತ್ತು ಅನುಕೂಲತೆಯೊಂದಿಗೆ ವಾಟ್ಸಾಪ್​ನಲ್ಲಿ ಜಿಯೋಮಾರ್ಟ್​ ಮೂಲಕ ಎಲ್ಲಾ ವಸ್ತುಗಳನ್ನು ಖರೀದಿ ಮಾಡಿ. ಗ್ರಾಹಕರು ವಾಟ್ಸಾಪ್ ಮೂಲಕ ಜಿಯೋಮಾರ್ಟ್‌ನಲ್ಲಿ 'ಹಾಯ್' ಎಂದು ಕಳುಹಿಸುವ ಮೂಲಕ ಶಾಪಿಂಗ್ ಪ್ರಾರಂಭಿಸಬಹುದು. ವಾಟ್ಸಾಪ್​​ನಲ್ಲಿ JioMart ಸಂಖ್ಯೆ +917977079770.
  Published by:Thara Kemmara
  First published: