Reliance AGM 2022 Live Updates: ದೀಪಾವಳಿಗೆ ಭಾರತೀಯರಿಗೆ ಬಂಪರ್! ಜಿಯೋ 5ಜಿ ಆರಂಭ

RIL 45th AGM Live Updates: ಈ ಆರ್ಥಿಕ ಮತ್ತು ರಾಜಕೀಯ ಅಸ್ಥಿರತೆಯ ನಡುವೆ ಭಾರತ ಗಟ್ಟಿಯಾಗಿ ನಿಂತಿದೆ. ಇದಕ್ಕಾಗಿ ನಾನು ಪ್ರಧಾನಿ ಮೋದಿಯನ್ನು ಅಭಿನಂದಿಸುತ್ತೇನೆ ಎಂದು ಮುಕೇಶ್ ಅಂಬಾನಿ ಹೇಳಿದ್ದಾರೆ.

ಮುಕೇಶ್​ ಅಂಬಾನಿ

ಮುಕೇಶ್​ ಅಂಬಾನಿ

 • Share this:
  ಇದೇ ವರ್ಷದ ದೀಪಾವಳಿ ಹಬ್ಬದ ವೇಳೆಗೆ ರಿಲಯನ್ಸ್ ಜಿಯೋ 5G ದೆಹಲಿ, ಮುಂಬೈ, ಕೋಲ್ಕತ್ತಾ ಮತ್ತು ಚೆನ್ನೈ ಮಹಾನಗರಗಳು ಸೇರಿದಂತೆ ಹಲವು ನಗರಗಳಲ್ಲಿ (Reliance Jio 5G) ಆರಂಭವಾಗಲಿದೆ ಎಂದು ಉದ್ಯಮ ಕ್ಷೇತ್ರದ ದಿಗ್ಗಜ ಮುಕೇಶ್ ಅಂಬಾನಿ (Mukesh Ambani) ಘೋಷಿಸಿದ್ದಾರೆ. JIO 5G ಎಲ್ಲಾ ಅಂಶಗಳಲ್ಲಿ ನಿಜವಾದ 5G ಆಗಿರುತ್ತದೆ. ಇದು ಇಡೀ ದೇಶವನ್ನು ಒಂದುಗೂಡಿಸುತ್ತದೆ ಎಂದು ಅವರು ಖಚಿತಪಡಿಸಿದರು. ರಿಲಯನ್ಸ್ ವಾರ್ಷಿಕ ಸಭೆಯಲ್ಲಿ (RIL AGM Live Updates) ಭಾಗವಹಿಸಿ ಮಾತನಾಡಿದ ಅವರು ರಿಲಯನ್ಸ್​ ಹಮ್ಮಿಕೊಂಡಿರುವ ಭವಿಷ್ಯದ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು.

  ‘ವಿ ಕೇರ್’ಎಂಬುದು ರಿಲಯನ್ಸ್‌ನ ತತ್ವಶಾಸ್ತ್ರ. ಜಗತ್ತಿನ ಕೆಲವು ಭಾಗಗಳಲ್ಲಿ ತೀವ್ರ ಆರ್ಥಿಕ ಒತ್ತಡವಿದೆ. ಈ ಆರ್ಥಿಕ ಮತ್ತು ರಾಜಕೀಯ ಅಸ್ಥಿರತೆಯ ನಡುವೆ ಭಾರತ ಗಟ್ಟಿಯಾಗಿ ನಿಂತಿದೆ. ಇದಕ್ಕಾಗಿ ನಾನು ಪ್ರಧಾನಿ ಮೋದಿಯನ್ನು ಅಭಿನಂದಿಸುತ್ತೇನೆ ಎಂದು ಮುಕೇಶ್ ಅಂಬಾನಿ ಹೇಳಿದ್ದಾರೆ.

  ಸಣ್ಣ ವ್ಯಾಪಾರಿಗಳಿಗೆ ಸಹಾಯಹಸ್ತ
  ಜಿಯೋ 5G 100 ಮಿಲಿಯನ್ ಮನೆಗಳನ್ನು ಸಾಟಿಯಿಲ್ಲದ ಡಿಜಿಟಲ್ ಅನುಭವಗಳು ಮತ್ತು ಸ್ಮಾರ್ಟ್ ಹೋಮ್ ಪರಿಹಾರಗಳೊಂದಿಗೆ ಸಂಪರ್ಕಿಸುತ್ತದೆ ಎಂದು ಮುಕೇಶ್ ಅಂಬಾನಿ ಹೇಳಿದರು. ನಾವು ಹತ್ತಾರು ಮಿಲಿಯನ್ ಸಣ್ಣ ವ್ಯಾಪಾರಿಗಳು ಮತ್ತು ಸಣ್ಣ ವ್ಯಾಪಾರಗಳನ್ನು ಹೆಚ್ಚಿನ ಎತ್ತರಕ್ಕೆ ತಲುಪಿಸುತ್ತೇವೆ ಎಂದು ಅವರು ಭರವಸೆ ನೀಡಿದರು.

  ಮಾಧ್ಯಮ ಜಗತ್ತಿನಲ್ಲೂ ನಂಬರ್ 1
  ನಮ್ಮ ಮಾಧ್ಯಮ ವ್ಯವಹಾರವು ಕಳೆದ ವರ್ಷ ಅತ್ಯಧಿಕ ಬೆಳವಣಿಗೆಯನ್ನು ಸಾಧಿಸಿತು. ಇದರ ಪರಿಣಾಮವಾಗಿ ದಾಖಲೆಯ ಚಂದಾದಾರಿಕೆಗಳು ಮತ್ತು ಜಾಹೀರಾತು ಆದಾಯಗಳು ಹರಿದು ಬಂದಿವೆ. ನಮ್ಮ ರಾಷ್ಟ್ರಮಟ್ಟದ ಸುದ್ದಿವಾಹಿನಿಗಳಾದ  CNN-News18, CNBC-TV18 ಮತ್ತು News18 ಇಂಡಿಯಾ ಸತತವಾಗಿ ನಂಬರ್ 1 ಸ್ಥಾನದಲ್ಲಿವೆ ಎಂದು ಅವರು ಹೆಮ್ಮೆ ವ್ಯಕ್ತಪಡಿಸಿದರು.

  ಇದನ್ನೂ ಓದಿ: Ganesh Chaturthi: ಮಂಗಳೂರು ಗಣಪನ ಅಮೆರಿಕಾ ಪ್ರಯಾಣ!

  ಅಗ್ರ 10 ದೇಶಗಳ ಸಾಲಿಗೆ ಭಾರತ
  ಇದೇ ಸಂದರ್ಭದಲ್ಲಿ ಮಾತನಾಡಿದ ಆಕಾಶ್ ಅಂಬಾನಿ ಭಾರತವು ಶೀಘ್ರದಲ್ಲೇ ಸ್ಥಿರ ಬ್ರಾಡ್‌ಬ್ಯಾಂಡ್‌ ಸೇವೆ ಒದಗಿಸುವ ದೇಶಗಳಲ್ಲಿ ಅಗ್ರ 10 ರಾಷ್ಟ್ರಗಳಲ್ಲಿ ಸೇರಬಹುದು, ಜಿಯೋ 5G ಅಲ್ಟ್ರಾ-ಹೈ-ಸ್ಪೀಡ್ ಫಿಕ್ಸೆಡ್ ಬ್ರಾಡ್‌ಬ್ಯಾಂಡ್ ಅನ್ನು ಸಹ ನೀಡುತ್ತದೆ ಎಂದು ತಿಳಿಸಿದರು.

  ಇದನ್ನೂ ಓದಿ: Mukesh Ambani: 3D ವರ್ಲ್ಡ್ ಆಫ್ ಮೆಟಾವರ್ಸ್‌ನಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ವಾರ್ಷಿಕ ಸಭೆ! ನೀವೂ ಹೀಗೆ ಭಾಗವಹಿಸಿ

  JioMart ಮತ್ತು WhatsApp ಪಾಲುದಾರಿಕೆ
  JioMart ಮತ್ತು WhatsApp ಪಾಲುದಾರಿಕೆ ಬೆಳವಣಿಗೆಗೆ ಸಹಾಯ ಮಾಡುತ್ತದೆ. JioMart-WhatsApp ಬಳಕೆದಾರರು WhatsApp ಪಾವತಿ, ಕ್ಯಾಶ್ ಆನ್ ಡೆಲಿವರಿ ಮತ್ತು ಇತರ ಪಾವತಿ ವಿಧಾನಗಳನ್ನು ಬಳಸಬಹುದು ಎಂದು ಇಶಾ ಅಂಬಾನಿ ರಿಲಯನ್ಸ್ ವಾರ್ಷಿಕ ಸಭೆಯಲ್ಲಿ ಘೋಷಿಸಿದರು.

  ಇದನ್ನೂ ಓದಿ: Mukesh Ambani: 3D ವರ್ಲ್ಡ್ ಆಫ್ ಮೆಟಾವರ್ಸ್‌ನಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ವಾರ್ಷಿಕ ಸಭೆ! ನೀವೂ ಹೀಗೆ ಭಾಗವಹಿಸಿ

  ಮುಕೇಶ್ ಅಂಬಾನಿ ಅವರು 3D ವರ್ಲ್ಡ್ ಆಫ್ ಮೆಟಾವರ್ಸ್‌ನಲ್ಲಿ ಮಾತನಾಡಿದ್ದಾರೆ. ಈ ಮೂಲಕ ವರ್ಚುವಲ್ ರಿಯಾಲಿಟಿ ಪ್ಲಾಟ್‌ಫಾರ್ಮ್‌ನಲ್ಲಿ ಏಕಕಾಲದಲ್ಲಿ ವಾರ್ಷಿಕ ಸಾಮಾನ್ಯ ಸಭೆಯನ್ನು (AGM) ನಡೆಸುವ ಜಾಗತಿಕವಾಗಿ ಮೊದಲ ಕಂಪನಿಗಳಲ್ಲಿ ರಿಲಯನ್ಸ್ ಒಂದಾಗಲಿದೆ.

  ಇದನ್ನೂ ಓದಿ: Ganesh Chaturthi: ಮಂಗಳೂರು ಗಣಪನ ಅಮೆರಿಕಾ ಪ್ರಯಾಣ!

  ಜೊತೆಗೆ ಅಧಿಕೃತ ಜಿಯೋಮೀಟ್ ಪ್ರಸಾರದ ಜೊತೆಗೆ ಐದು ಪ್ರಮುಖ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಲ್ಲಿ ವಾರ್ಷಿಕ ಸಭೆಯನ್ನು ನೇರ ಪ್ರಸಾರ ಮಾಡಲಾಗುತ್ತದೆ. ಕಂಪನಿಯ ವಾರ್ಷಿಕ ವರದಿ 2021-22 ರ ವ್ಯಾಪಾರವಾರು ಮುಖ್ಯಾಂಶಗಳು ಈ ಸಭೆಯಲ್ಲಿ ಪ್ರಸ್ತಾವನೆಗೊಳ್ಳಲಿದೆ.

  ಜಿಯೋ-ವಾಟ್ಸ್​ಆ್ಯಪ್ ಒಪ್ಪಂದ
  ರಿಲಯನ್ಸ್​ (Reliance) ಇಂದು 2022ರ ವಾರ್ಷಿಕ ಸಾಮಾನ್ಯ ಸಭೆ ಆಯೋಜಿಸುವ ಮೂಲಕ ಗ್ರಾಹಕರಿಗೆ ಭರ್ಜರಿ ಉಡುಗೊರೆ ನೀಡಿದೆ. ರಿಲಯನ್ಸ್​ ಇಂಡಸ್ಟ್ರೀಸ್​ನ ಅಧ್ಯಕ್ಷ ಮುಖೇಶ್​ ಅಂಬಾನಿ (Mukesh Ambani) ಇದೇ ದೀಪಾವಳಿ (Diwali) ವೇಳೆಗೆ 5G ಸೇವೆ ಆರಂಭಿಸುವುದಾಗಿ ಮತ್ತು ಕ್ವಾಲ್​ಕ್ಯಾಮ್​ (Qualcomm) ಜೊತೆಗಿನ ಪಾಲುದಾರಿಕೆಯ ಬಗ್ಗೆ ಹೇಳಿಕೊಂಡಿದ್ದಾರೆ. ಇದರೊಂದಿಗೆ ಜಿಯೋ ಫ್ಲಾಟ್​ಫಾರ್ಮ್​ (Jio Platform) ಗಳು ವಾಟ್ಸ್​ಆ್ಯಪ್ (WhatsApp)​ ಮೂಲಕ ಎಂಡ್​-ಟು-ಎಂಡ್​ ಶಾಪಿಂಗ್​ ಅನುಭವ ನೀಡಲಿದೆ ಎಂಬುದನ್ನು ಘೋಷಿಸಿದ್ದಾರೆ.

  ಮೆಟಾ ಮತ್ತು ಜಿಯೋ ಪ್ಲಾಟ್‌ಫಾರ್ಮ್‌ಗಳು ವಾಟ್ಸ್​ಆ್ಯಪ್​​​ನಲ್ಲಿ ಎಂಡ್-ಟು-ಎಂಡ್ ಶಾಪಿಂಗ್ ಅನುಭವವನ್ನು ನೀಡಲಿವೆ. ಗ್ರಾಹಕರು ತಮ್ಮ ವಾಟ್ಸ್​ಆ್ಯಪ್​ ಚಾಟ್‌ನಲ್ಲಿಯೇ ಜಿಯೋಮಾರ್ಟ್​ನಿಂದ (JioMart) ಶಾಪಿಂಗ್ ಮಾಡಬಹುದಾಗಿದೆ. ಈ ಮೂಲಕ ಗ್ರಾಹಕರು ಸುಲಭವಾಗಿ ತಮಗೆ ಬೇಕಾದ ವಸ್ತುವನ್ನು ಖರೀದಿಸಲು ಅವಕಾಶ ಕಲ್ಪಿಸಿದೆ.
  Published by:guruganesh bhat
  First published: