Reliance AGM 2021: ಇಡೀ ವಿಶ್ವವೇ ಹಸಿರು ಕ್ರಾಂತಿಯೆಡೆಗೆ ಸಾಗುತ್ತಿದೆ, ರಿಲಯನ್ಸ್ ಭಾರತವನ್ನು ಆ ಹೊಸಾ ವಿಶ್ವದೆಡೆಗೆ ಮುನ್ನಡೆಸಲಿದೆ: ಮೋಹನ್​ದಾಸ್ ಪೈ

Reliance AGM 2021: ಭಾರತವು ಡಿಜಿಟಲ್ ಯುಗದಲ್ಲಿ ವಾಲ್‌ಮಾರ್ಟ್, ಅಮೆಜಾನ್, ಚೀನಾ ಆ್ಯಪ್‌ಗಳ ಮುಂದೆ ಸಡ್ಡುಹೊಡೆದು ನಿಲ್ಲಲು ಸಾಧ್ಯವೇ ಎಂಬುದು ಹೆಚ್ಚಿನವರ ಆತಂಕಕ್ಕೆ ಕಾರಣವಾಗಿತ್ತು. ಆದರೆ ಜಿಯೋ ಈ ವಿಷಯದಲ್ಲಿ ಡಿಜಿಟಲ್ ಕ್ರಾಂತಿಯನ್ನೇ ಉಂಟುಮಾಡಿದೆ. ಭಾರತ ಕೂಡ ಡಿಜಿಟಲ್ ಯುಗದಲ್ಲಿ ಸಮನಾಗಿ ಪೈಪೋಟಿಯನ್ನು ನೀಡುತ್ತದೆ ಎಂದು ವಿಶ್ವಕ್ಕೆ ತೋರಿಸಿಕೊಟ್ಟಿದೆ.

ರಿಲಯನ್ಸ್​ ಇಂಡಸ್ಟ್ರೀಸ್

ರಿಲಯನ್ಸ್​ ಇಂಡಸ್ಟ್ರೀಸ್

 • Share this:

  Reliance AGM 2021: ರಿಲಯನ್ಸ್‌ನ ವಾರ್ಷಿಕ ಮಹಾಸಭೆಯು ಹೆಚ್ಚಿನ ಭರವಸೆಗಳನ್ನೇ ಭಾರತೀಯರಿಗೆ ಪರಿಚಯ ಮಾಡಿಕೊಟ್ಟಿದ್ದು ರಿಲಯನ್ಸ್ ಮೇಲೆ ಜನರಿಗಿದ್ದ ಭರವಸೆಯನ್ನು ನೂರ್ಮಡಿಗೊಳಿಸಿದೆ. ಒಂದು ಕಾಲದಲ್ಲಿ ಧೀರೂ ಭಾಯ್ ಅಂಬಾನಿ ವಾರ್ಷಿಕ ಮಹಾಸಭೆಯನ್ನು ನಡೆಸುತ್ತಿದ್ದ ಸಂದರ್ಭದಲ್ಲಿ ಸ್ಟೇಡಿಯಂನಲ್ಲಿದ್ದ ಎಲ್ಲಾ ಆಸನಗಳು ಭರ್ತಿಯಾಗುತ್ತಿದ್ದವು. ಅವರು ಮಾಡುತ್ತಿದ್ದ ಹೊಸ ಹೊಸ ಘೋಷಣೆಗಳು, ಭಾರತದ ಕ್ರಾಂತಿಗೆ ಅವರು ನೀಡುತ್ತಿದ್ದ ಕೊಡುಗೆಗಳತ್ತ ಎಲ್ಲರ ಚಿತ್ತವಿತ್ತು. ಈಗ ಅದೇ ಪರಂಪರೆಯನ್ನು ಮುಖೇಶ್ ಅಂಬಾನಿ ಮುಂದುವರಿಸಿದ್ದಾರೆ. ಭಾರತಕ್ಕೆ ಭರವಸೆಯ ಹೊಸ ಬೆಳಗನ್ನು ಮುಖೇಶ್ ಅಂಬಾನಿ ವಾರ್ಷಿಕ ಮಹಾಸಭೆ ಒದಗಿಸಿದೆ. ಈ ಬಗ್ಗೆ ಇನ್ಫೋಸಿಸ್‌ ಮಾಜಿ ಸಿಎಫ್‌ಒ ಮೋಹನ್‌ದಾಸ್‌ ಪೈ (Mohandas Pai) ನ್ಯೂಸ್‌18 ಗೆ ವಿವರಿಸಿದ್ದಾರೆ.


  ರಿಲಯನ್ಸ್ ದೊಡ್ಡ ವಿಸ್ತರಣಾ ಯೋಜನೆಯನ್ನೇ ಘೋಷಿಸಿದ್ದು ಕಾರ್ಪೋರೇಶನ್‌ನ ಹೊಸ ಅಭ್ಯುದಯವನ್ನೇ ನಾವಿಲ್ಲಿ ಕಂಡುಕೊಳ್ಳಬಹುದಾಗಿದೆ. ತೈಲದಿಂದ ಹಿಡಿದು ರಾಸಾಯನಿಕಗಳ ವ್ಯವಹಾರ, ಚಿಲ್ಲರೆ ವ್ಯಾಪಾರ ಮತ್ತು ತಂತ್ರಜ್ಞಾನ ಆಧಾರಿತ ಜಿಯೋ ವ್ಯವಹಾರಗಳನ್ನೇ ಮುಖ್ಯವಾಗಿ ಕೇಂದ್ರೀಕರಿಸಿದೆ. ರಿಲಯನ್ಸ್ ಕಳೆದ ವರ್ಷ ಗಳಿಸಿದ ಆದಾಯದ ಮೊತ್ತ 44.4 ಬಿಲಿಯನ್ ಡಾಲರ್‌ಗಳಾಗಿತ್ತು (ರೂ.32,93,57,86,80,000.00). ಇನ್ನು ರಿಲಯನ್ಸ್ ಮಾಡಿದ ಅತಿ ಮಹತ್ವದ ಘೋಷಣೆ ಎಂದರೆ ಹಸಿರು ಕ್ರಾಂತಿಯಾಗಿದೆ 2035 ರೊಳಗೆ ಇಂಗಾಲ-ತಟಸ್ಥ ಸ್ಥಾನಮಾನವನ್ನು ಸಾಧಿಸುವ ಯೋಜನೆಯನ್ನು ರಿಲಯನ್ಸ್ ಹೊಂದಿದೆ. ಅಂದಹಾಗೆ ಈ ಸಭೆ ನಡೆದಿದ್ದು ಡಿಜಿಟಲ್ ಪ್ಲಾಟ್‌ಫಾರ್ಮ್‌ನಲ್ಲಾಗಿದೆ.


  ಇದನ್ನೂ ಓದಿ: ನಾವು ಸಂಸ್ಥೆಯ ಸಿಬ್ಬಂದಿ, ಕುಟುಂಬ, ದೇಶ, ಭೂಮಿ, ಜನರ ಬಗ್ಗೆ ಕಾಳಜಿ ವಹಿಸುತ್ತೇವೆ; ಮುಖೇಶ್ ಅಂಬಾನಿ

  ಜಿಯೋ ಕ್ರಾಂತಿ


  ರಿಲಯನ್ಸ್‌ನ ಹಸಿರು ಕ್ರಾಂತಿಯ ಜೊತೆಗೆ ಜಿಯೋಫೋನ್ ಸ್ಮಾರ್ಟ್‌ಫೋನ್‌ನ ಬಿಡುಗಡೆ. ಗೂಗಲ್ ಸಿಇಒ ಸುಂದರ್ ಪಿಚೈ ಅವರು ಈ ಮಹಾಸಭೆಯಲ್ಲಿದ್ದರು ಎಂಬುದು ಮಹತ್ವದ ಸುದ್ದಿಯಾಗಿದೆ. ಜಿಯೋ ಫೋನ್ ಜಾಗತಿಕ ಉತ್ಪನ್ನವಾಗಿದ್ದು 6 ಬಿಲಿಯನ್ ಜನರಿಗೆ ಕಡಿಮೆ ವೆಚ್ಚದಲ್ಲಿ ಇಂಟರ್ನೆಟ್ ಸೇವೆಯನ್ನು ಲಭ್ಯವಾಗಿಸಲಿದೆ. ಜಿಯೋ ಮತ್ತು ಗೂಗಲ್ ಪಾಲುದಾರಿಕೆಯನ್ನು ಈ ಸ್ಮಾರ್ಟ್‌ಫೋನ್ ಸಾಮಾನ್ಯರ ಕೈಸೇರಲಿದೆ. ಜಿಯೋ ಬರಿಯ ಘೋಷಣೆಗಳನ್ನು ಮಾತ್ರ ಮಾಡದೇ ತನ್ನ ಯೋಜನೆಗಳನ್ನು ಸಾಕಾರಗೊಳಿಸುವಲ್ಲಿ ಕೂಡ ಮಹತ್ವದ ಪಾತ್ರ ವಹಿಸುತ್ತದೆ. ರಿಲಯನ್ಸ್ ಒಂದೇ ದೇಶಕ್ಕೆ 20,000 ಕೋಟಿಗಿಂತಲೂ ಹೆಚ್ಚು ಆದಾಯವನ್ನು ನೀಡುತ್ತಿದೆ. ಹಾಗಾದರೆ 2030 ರ ಸಮಯದಲ್ಲಿ ಹೆಚ್ಚಿನ ಕಂಪೆನಿಗಳು ಇದೇ ರೀತಿಯ ಆದಾಯವನ್ನು ದೇಶಕ್ಕೆ ನೀಡಲಿರುವುದು ಖಚಿತವಾಗಿದೆ. ರಿಲಯನ್ಸ್ ಈ ರೀತಿಯ ಕ್ರಾಂತಿಯನ್ನು ಉಂಟುಮಾಡಲಿದೆ.
  ರಿಲಯನ್ಸ್ ಇಂಡಸ್ಟ್ರೀಸ್ ಕಳೆದ 9 ವಾರಗಳಲ್ಲಿ 10 ಹೂಡಿಕೆಗಳನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ. ಸಣ್ಣ ವರ್ತಕರು, ರೈತರೂ ಸಾಮಾನ್ಯರೂ ಒಳಗೊಂಡಂತೆ ಭಾರತದಾದ್ಯಂತ 1.3 ಶತಕೋಟಿ ಜನರು ಹಾಗೂ ಉದ್ಯಮಗಳಿಗೆ ಡಿಜಿಟಲ್ ಇಂಡಿಯಾವನ್ನು ಲಭ್ಯವಾಗುವಂತೆ ಮಾಡುವುದು ಜಿಯೋದ ದೂರದೃಷ್ಟಿಯಾಗಿದೆ. ಮುಂದಿನ 12 ತಿಂಗಳುಗಳಲ್ಲಿ 500 ಮಿಲಿಯನ್‌ಗಿಂತಲೂ ಹೆಚ್ಚಿನ ಸಬ್‌ಸ್ಕ್ರೈಬರ್‌ಗಳ ಮೂಲಕ ಜಿಯೋ ಜಾಗತಿಕವಾಗಿ ಉನ್ನತ ಸ್ಥಾನವನ್ನಲಂಕರಿಸಲಿದೆ.


  (ಲೇಖಕ: ಟಿ ವಿ ಮೋಹನ್​ದಾಸ್ ಪೈ)

  Published by:Soumya KN
  First published: