ನವದೆಹಲಿ: ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ನ ( Reliance Retail Ventures Limited) ಅಂಗ ಸಂಸ್ಥೆಯಾದ ರಿಲಯನ್ಸ್ ರಿಟೇಲ್ ವೆಂಚರ್ಸ್ ಲಿಮಿಟೆಡ್ (RRVL) 'ಮೆಟ್ರೋ ಇಂಡಿಯಾ' (Metro India) ಬ್ರ್ಯಾಂಡ್ನ ಅಡಿಯಲ್ಲಿ ಕಾರ್ಯನಿರ್ವಹಿಸುವ ಮೆಟ್ರೋ ಕ್ಯಾಶ್ (Metro CASH) ಮತ್ತು ಕ್ಯಾರಿ ಇಂಡಿಯಾ ಪ್ರೈವೇಟ್ ಲಿಮಿಟೆಡ್ನಲ್ಲಿ (Carry India Pvt Ltd) 2,850 ಕೋಟಿ ರೂ. ನಗದು ಪರಿಗಣನೆಯಾದ 100 ಪ್ರತಿಶತ ಈಕ್ವಿಟಿ ಪಾಲನ್ನು ಪಡೆಯಲು ನಿರ್ಣಾಯಕ ಒಪ್ಪಂದಗಳಿಗೆ ಸಹಿ ಹಾಕಿದೆ ಹಾಗೂ ಈ ಕುರಿತು ಜಂಟಿ ಹೇಳಿಕೆಯನ್ನು ನೀಡಿದೆ.
ಮೆಟ್ರೋ ಇಂಡಿಯಾ ಸ್ವಾಧೀನಪಡಿಸಿಕೊಂಡ ರಿಲಯನ್ಸ್
ಈ ಸ್ವಾಧೀನದ ಮೂಲಕ ಪ್ರಮುಖ ನಗರಗಳಾದ್ಯಂತ ಪ್ರಮುಖ ಸ್ಥಳಗಳಲ್ಲಿ ನೆಲೆಗೊಂಡಿರುವ ಮೆಟ್ರೋ ಇಂಡಿಯಾ ಸ್ಟೋರ್ಗಳ ನೆಟ್ವರ್ಕ್ಗೆ ರಿಲಯನ್ಸ್ ರಿಟೇಲ್ ಪ್ರವೇಶವನ್ನು ಪಡೆದುಕೊಳ್ಳಲಿದ್ದು, ಇದರೊಂದಿಗೆ ನೋಂದಾವಣೆಗೊಂಡಿರುವ ಕಿರಾಣಾ ಹಾಗೂ ಇತರ ಸಂಸ್ಥೆಗಳ ಗ್ರಾಹಕರ ದೊಡ್ಡ ಜಾಲ ಅಂತೆಯೇ ಹೆಚ್ಚು ಸಾಮರ್ಥ್ಯವುಳ್ಳ ನೆಟ್ವರ್ಕ್ಗೆ ಪ್ರವೇಶ ಪಡೆಯಲಿದೆ.
ಗ್ರಾಹಕರ ಸೇವೆಯನ್ನು ಮತ್ತಷ್ಟು ವರ್ಧಿಸುವ ಭರವಸೆ
ಈ ಸ್ವಾಧೀನಪಡಿಸುವಿಕೆಯು ರಿಲಯನ್ಸ್ ರಿಟೇಲ್ನ ತಂತ್ರಜ್ಞಾನ ವೇದಿಕೆಗಳು ಮತ್ತು ಸೋರ್ಸಿಂಗ್ ಸಾಮರ್ಥ್ಯಗಳಾದ್ಯಂತ ದಕ್ಷತೆಯನ್ನು ಹೆಚ್ಚಿಸುವ ಮೂಲಕ ಗ್ರಾಹಕರು ಅಂತೆಯೇ ಸಣ್ಣ ವ್ಯಾಪಾರಿಗಳಿಗೆ ಉತ್ತಮ ಸೇವೆಯನ್ನು ಒದಗಿಸುವ ಸಾಮರ್ಥ್ಯವನ್ನು ಮತ್ತಷ್ಟು ಬಲಪಡಿಸುತ್ತದೆ ಎಂದು ಸಂಸ್ಥೆಯ ವಕ್ತಾರರು ತಿಳಿಸಿದ್ದಾರೆ.
ಹೊಸ ವಾಣಿಜ್ಯ ತಂತ್ರದೊಂದಿಗೆ ಹೊಂದಿಕೆಯಾಗುತ್ತದೆ
ಈ ಸ್ವಾಧೀನ ಹಾಗೂ ವಹಿವಾಟು ಕೆಲವೊಂದು ನಿಯಮಗಳು ಹಾಗೂ ಷರತ್ತುಗಳಿಗೆ ಒಳಪಟ್ಟಿದ್ದು, ಮಾರ್ಚ್ 2023 ರೊಳಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ ಎಂದು ತಿಳಿಸಿದೆ. ಬೆಳವಣಿಗೆಯ ಕುರಿತು ಪ್ರತಿಕ್ರಿಯಿಸಿದ RRVL ನಿರ್ದೇಶಕಿ ಇಶಾ ಅಂಬಾನಿ ಮೆಟ್ರೋ ಇಂಡಿಯಾದ ಸ್ವಾಧೀನಪಡಿಸುವಿಕೆಯು ಸಣ್ಣ ವ್ಯಾಪಾರಿಗಳು ಮತ್ತು ಉದ್ಯಮದೊಂದಿಗೆ ಸಕ್ರಿಯ ಸಹಯೋಗವನ್ನು ಏರ್ಪಡಿಸಲಿದ್ದು, ಇದು ಸಂಸ್ಥೆಯ ಹೊಸ ವಾಣಿಜ್ಯ ತಂತ್ರದೊಂದಿಗೆ ಹೊಂದಿಕೆಯಾಗುತ್ತದೆ ಎಂದು ತಿಳಿಸಿದ್ದಾರೆ.
B2B ಮಾರುಕಟ್ಟೆಯಲ್ಲಿ ಹೆಚ್ಚಿನ ಸಾಮರ್ಥ್ಯವುಳ್ಳ ಉದ್ಯಮೆದಾರ
ಮೆಟ್ರೋ ಇಂಡಿಯಾ ಭಾರತೀಯ B2B ಮಾರುಕಟ್ಟೆಯಲ್ಲಿ ಹೆಚ್ಚಿನ ಸಾಮರ್ಥ್ಯವುಳ್ಳ ಉದ್ಯಮೆದಾರ ಎಂಬ ಹೆಸರನ್ನು ಗಿಟ್ಟಿಸಿಕೊಂಡಿದೆ. ಜೊತೆಗೆ ಹೆಚ್ಚು ಬಲವಾದ ಗ್ರಾಹಕ ಅನುಭವವನ್ನುಂಟು ಮಾಡುವ ಬಹು-ಚಾನೆಲ್ ಪ್ಲ್ಯಾಟ್ಫಾರ್ಮ್ ಅನ್ನು ನಿರ್ಮಿಸಿದೆ. ಭಾರತದಲ್ಲಿರುವ ಸಣ್ಣ ವ್ಯವಹಾರಗಳಿಗೆ ಈ ಸ್ವಾಧೀನವು ವಿಭಿನ್ನ ರೀತಿಯ ಮೌಲ್ಯವನ್ನು ಉಂಟುಮಾಡಲಿದ್ದು, ಆರ್ಥಿಕವಾಗಿ ಸಹಾಯ ಮಾಡುತ್ತದೆ ಎಂದು ನಂಬಿರುವುದಾಗಿ ಇಶಾ ತಿಳಿಸಿದ್ದಾರೆ.
ರಿಲಯನ್ಸ್ ಸಮರ್ಥ ಸಂಸ್ಥೆ
ಮೆಟ್ರೋ ಎಜಿ ಸಿಇಒ ಸ್ಟೆಫೆನ್ ಗ್ರೂಬೆಲ್ ಸ್ವಾಧೀನದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ್ದು ರಿಲಯನ್ಸ್ ಮೂಲಕ ಸಮರ್ಥ ಹಾಗೂ ಸಿದ್ಧ ಪಾಲುದಾರರನ್ನು ಪಡೆದುಕೊಂಡಿದ್ದು ಈ ಮಾರುಕಟ್ಟೆ ಪರಿಸರಲ್ಲಿ ಮೆಟ್ರೋ ಇಂಡಿಯಾವನ್ನು ಮುನ್ನಡೆಸಿಕೊಂಡು ಹೋಗುವ ಸಾಮರ್ಥ್ಯ ಸಂಸ್ಥೆಗಿದೆ ಎಂಬ ನಂಬಿಕೆಯಿಂದಲೇ ಈ ಪ್ರಕ್ರಿಯೆಯತ್ತ ನಾವು ಮುಂದಡಿ ಇರಿಸಿದ್ದೇವೆ ಎಂದು ತಿಳಿಸಿದ್ದಾರೆ.
ಅತಿದೊಡ್ಡ ಚಿಲ್ಲರೆ ವ್ಯಾಪಾರಿ
ರಿಲಯನ್ಸ್ 16,600 ಕ್ಕೂ ಹೆಚ್ಚು ಮಳಿಗೆಗಳನ್ನು ಹೊಂದಿರುವ ಭಾರತದ ಅತಿದೊಡ್ಡ ಚಿಲ್ಲರೆ ವ್ಯಾಪಾರಿಯಾಗಿದೆ ಮತ್ತು ಬಲವಾದ ಸಗಟು ಘಟಕವು ಭಾರತದಲ್ಲಿ ತನ್ನ ಕಾರ್ಯಾಚರಣೆಯನ್ನು ಇನ್ನಷ್ಟು ವಿಸ್ತಾರಗೊಳಿಸುತ್ತದೆ. ಮೆಟ್ರೋ 34 ದೇಶಗಳಲ್ಲಿ ಸಗಟು ಮತ್ತು ಆಹಾರ ಚಿಲ್ಲರೆ ವ್ಯಾಪಾರದಲ್ಲಿ ಪ್ರಮುಖ ಅಂತರರಾಷ್ಟ್ರೀಯ ಉದ್ಯಮೆದಾರ ಎಂದೆನಿಸಿದೆ.
31 ಸಗಟು ವಿತರಣಾ ಕೇಂದ್ರಗಳ ನಿರ್ವಹಣೆ
ಮೆಟ್ರೋ ಕ್ಯಾಶ್ & ಕ್ಯಾರಿ, ಹಾಗೂ ಸಗಟು ವಿಭಾಗವು 2003 ರಲ್ಲಿ ಭಾರತವನ್ನು ಪ್ರವೇಶಿಸಿತು ಮತ್ತು ಪ್ರಸ್ತುತ ದೇಶಾದ್ಯಂತ 31 ಸಗಟು ವಿತರಣಾ ಕೇಂದ್ರಗಳನ್ನು ನಿರ್ವಹಿಸುತ್ತದೆ. ಸಂಸ್ಥೆಯ ವೆಬ್ಸೈಟ್ ತಿಳಿಸಿರುವಂತೆ ವ್ಯಾಪಾರ ಗ್ರಾಹಕರಿಗೆ ಮಾತ್ರ ಸೇವೆ ಸಲ್ಲಿಸುತ್ತಿದೆ. ಹಣ್ಣು, ತರಕಾರಿ, ಸಾಮಾನ್ಯ ದಿನಸಿ, ಎಲೆಕ್ಟ್ರಾನಿಕ್ಸ್, ಗೃಹೋಪಯೋಗಿ ವಸ್ತುಗಳು, ಉಡುಪುಗಳು ಹೀಗೆ ಬೇರೆ, ಬೇರೆ ಉತ್ಪನ್ನಗಳನ್ನು ಹೋಟೆಲ್, ರೆಸ್ಟೋರೆಂಟ್, ಸಂಸ್ಥೆಗಳ ಗ್ರಾಹಕರಿಗೆ ಮಾರಾಟ ಮಾಡುತ್ತದೆ. ರಿಲಯನ್ಸ್ ರಿಟೇಲ್, ತೈಲದಿಂದ ಆರಂಭಗೊಂಡು ದೂರಸಂಪರ್ಕ ಸಮೂಹದವರೆಗೆ ರಿಟೇಲ್ ಸಂಸ್ಥೆ ಎನಿಸಿದ್ದು, USD 18 ಶತಕೋಟಿ ಆದಾಯದೊಂದಿಗೆ ಅಗ್ರ ಜಾಗತಿಕ ಚಿಲ್ಲರೆ ವ್ಯಾಪಾರಿಗಳಲ್ಲಿ 56 ನೇ ಸ್ಥಾನದಲ್ಲಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ