Bilkis Bano: ಅತ್ಯಾಚಾರ-ಕೊಲೆ ಪ್ರಕರಣದ ದೋಷಿಗಳ ಬಿಡುಗಡೆ: ನ್ಯಾಯದ ಮೇಲಿನ ನಂಬಿಕೆ ಛಿದ್ರ ಎಂದ ಸಂತ್ರಸ್ತೆ!

Gujarat 2002 Rape and Murder Case:ಸೋಮವಾರ, ಗುಜರಾತ್ ಸರ್ಕಾರವು ತನ್ನ ಕ್ಷಮಾದಾನ ನೀತಿಯ ಅಡಿಯಲ್ಲಿ ಬಿಲ್ಕಿಸ್ ಬಾನೊ ಅತ್ಯಾಚಾರ ಪ್ರಕರಣದ ದೋಷಿಗಳ ಬಿಡುಗಡೆಯನ್ನು ಅನುಮೋದಿಸಿತು. ಸೋಮವಾರ ಗೋಧ್ರಾ ಜೈಲಿನಿಂದ ಬಿಡುಗಡೆಯಾದ ನಂತರ ಆರೋಪಿಗಳನ್ನು ಹೂಮಾಲೆ ಹಾಕಿ ಸ್ವಾಗತಿಸಿ, ಸಿಹಿ ಹಂಚಲಾಯಿತು.

ಬಿಲ್ಕಿಸ್ ಬಾನೊ ರೇಪ್​ ಕೇಸ್

ಬಿಲ್ಕಿಸ್ ಬಾನೊ ರೇಪ್​ ಕೇಸ್

  • Share this:
ಗೋರ್ಧರಾ(ಆ.18): ಗುಜರಾತ್‌ನಲ್ಲಿ 2002 ರ ಗೋಧ್ರಾ (Godhra Violence) ನಂತರದ ಗಲಭೆಯಲ್ಲಿ ಬಲಿಯಾದ ಬಿಲ್ಕಿಸ್ ಬಾನೊ ಅವರು ಬುಧವಾರದಂದು, ತಾನು ಮತ್ತು ತನ್ನ ಕುಟುಂಬದ ಏಳು ಸದಸ್ಯರನ್ನು ಒಳಗೊಂಡ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾದ 11 ಅಪರಾಧಿಗಳನ್ನು ಅವಧಿಗೆ ಮುಂಚಿತವಾಗಿ ಬಿಡುಗಡೆ ಮಾಡಿರುವುದು ನ್ಯಾಯದ ಮೇಲಿನ ನಂಬಿಕೆಯನ್ನು ಛಿದ್ರಗೊಳಿಸಿದೆ ಎಂದು ಸಂತ್ರಸ್ತೆ ಬಿಲ್ಕಿಸ್ ಬಾನೊ ನುಡಿದಿದ್ದಾರೆ. ಬಿಲ್ಕಿಸ್ ಬಾನೊ (Bilkis Bano) ಸಾಮೂಹಿಕ ಅತ್ಯಾಚಾರ ಮತ್ತು ಅವರ ಕುಟುಂಬದ ಏಳು ಸದಸ್ಯರನ್ನು ಹತ್ಯೆಗೈದ ಪ್ರಕರಣದಲ್ಲಿ (Rape and Murder Case) ಶಿಕ್ಷೆಗೊಳಗಾದ ಎಲ್ಲಾ 11 ದೋಷಿಗಳಿಗೆ ಗುಜರಾತ್ ಸರ್ಕಾರವು ಕ್ಷಮಾದಾನ ನೀತಿಯ ಅಡಿಯಲ್ಲಿ ಕ್ಷಮಾದಾನ ನೀಡಿದೆ ಎಂಬುವುದು ಉಲ್ಲೇಖನೀಯ. ನಂತರ ಅವರನ್ನು ಆಗಸ್ಟ್ 15 ರಂದು ಗೋಧ್ರಾ ಸಬ್ ಜೈಲಿನಿಂದ ಬಿಡುಗಡೆ ಮಾಡಲಾಯಿತು.

ಸರ್ಕಾರದ ಕ್ರಮವನ್ನು ಟೀಕಿಸಿದ ಬಿಲ್ಕಿಸ್, "ಇಂತಹ ದೊಡ್ಡ ಮತ್ತು ಅನ್ಯಾಯದ ನಿರ್ಧಾರ" ತೆಗೆದುಕೊಳ್ಳುವ ಮೊದಲು ಯಾರೂ ತನ್ನ ಸುರಕ್ಷತೆಯ ಬಗ್ಗೆ ಅಥವಾ ಯೋಗಕ್ಷೇಮದ ಬಗ್ಗೆ ಯೋಚಿಸಲಿಲ್ಲ. ಆದರೀಗ ತನಗೆ "ಭಯವಿಲ್ಲದೇ ಶಾಂತಿಯುತವಾಗಿ ಬದುಕುವ" ಹಕ್ಕನ್ನು ನೀಡಬೇಕೆಂದು ಅವರು ಗುಜರಾತ್ ಸರ್ಕಾರವನ್ನು ಕೇಳಿದರು.

ಇದನ್ನೂ ಓದಿ: Bilkis Bano Case: ಬಿಲ್ಕಿಸ್ ಬಾನೊ ರೇಪ್​ ಕೇಸ್: ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದ 11 ದೋಷಿಗಳನ್ನು ಬಿಡುಗಡೆಗೊಳಿಸಿದ ಸರ್ಕಾರ!

20 ವರ್ಷಗಳ ಹಿಂದಿನ ಭಯಾನಕ ಘಟನೆ

ಬಿಲ್ಕಿಸ್ ಬಾನೊ ಪರವಾಗಿ ಅವರ ವಕೀಲ ಶೋಭಾ ಅವರು ನೀಡಿದ ಹೇಳಿಕೆಯಲ್ಲಿ, "ಎರಡು ದಿನಗಳ ಹಿಂದೆ ಆಗಸ್ಟ್ 15, 2022 ರಂದು, ನನ್ನ ಕುಟುಂಬ ಮತ್ತು ನನ್ನ ಜೀವನವನ್ನು ಹಾಳು ಮಾಡಿದ, ನನ್ನ ಮೂರು ವರ್ಷದ ಮಗುವನ್ನು ನನ್ನಿಂದ ಕಸಿದ 11 ಅಪರಾಧಿಗಳನ್ನು ಬಿಡುಗಡೆ ಮಾಡಿದ್ದಾರೆ. 20 ವರ್ಷಗಳ ಭಯಾನಕ ಘಟನೆ ಮತ್ತೆ ನನ್ನ ಮುಂದೆ ನಿಂತಿದೆ ಎಂದಿದ್ದಾರೆ.

ನ್ಯಾಯದ ಮೇಲಿನ ನನ್ನ ನಂಬಿಕೆ ಕಳೆದುಹೋಯಿತು

ಅಪರಾಧಿಗಳ ಬಿಡುಗಡೆ ಬಗ್ಗೆ ಮಾತನಾಡಿದ ಬಿಲ್ಕಿಸ್ ಸರ್ಕಾರದ ಈ ನಿರ್ಧಾರದಿಂದ ನಾಣು ಬಲವನ್ನೇ ಕಳೆದುಕೊಂಡಂತಾಗಿದ್ದೇನೆ. ನನ್ನ ಬಳಿ ಪದಗಳಿಲ್ಲ. ನನಗೆ ಇನ್ನೂ ಪ್ರಜ್ಞೆ ಬಂದಿಲ್ಲ. ಮಹಿಳೆಯ ಪಾಲಿಗೆ ನ್ಯಾಯ ಈ ರೀತಿ ಹೇಗೆ ಕೊನೆಗೊಳ್ಳಲು ಸಾಧ್ಯ? ನಾನು ನನ್ನ ದೇಶದ ಸುಪ್ರೀಂ ಕೋರ್ಟ್ ಅನ್ನು ನಂಬಿದ್ದೇನೆ. ಹೀಗಾಗಿ ನನ್ನ ಮೇಲಾದ ಭಯಾನಕ ಕೃತ್ಯವನ್ನು ಮರೆತು ನಿಧಾನವಾಗಿ ಬದುಕಲು ಕಲಿಯುತ್ತಿದ್ದೆ. ಅಪರಾಧಿಗಳ ಬಿಡುಗಡೆಯು ನನ್ನ ಶಾಂತಿಗೆ ಭಂಗ ತಂದಿದೆ ಮತ್ತು ನಾನು ನ್ಯಾಯದ ಮೇಲಿನ ನಂಬಿಕೆಯನ್ನು ಕಳೆದುಕೊಂಡಿದ್ದೇನೆ ಎಂದು ಸಂಕಟ ವ್ಯಕ್ತಪಡಿಸಿದ್ದಾರೆ.

Supreme Court On Free Fall of Freebies CJI NV Ramana said Please submit something before my retirement
ಸುಪ್ರೀಂಕೋರ್ಟ್


ಭದ್ರತೆಗಾಗಿ ಬೇಡಿಕೆ

'ನನ್ನ ದುಃಖ ಮತ್ತು ನನ್ನ ನಂಬಿಕೆಯನ್ನು ಕಳೆದುಕೊಳ್ಳುವುದು ಕೇವಲ ನನ್ನ ಸಮಸ್ಯೆ ಮಾತ್ರವಲ್ಲ, ಆದರೆ ಇದು ನ್ಯಾಯಾಲಯಗಳಲ್ಲಿ ನ್ಯಾಯಕ್ಕಾಗಿ ಹೋರಾಡುವ ಎಲ್ಲಾ ಮಹಿಳೆಯರಿಗೆ ಸಂಬಂಧಿಸಿದೆ ಎಂದಿದ್ದಾರೆ. ಅಲ್ಲದೇ ಅಪರಾಧಿಗಳ ಬಿಡುಗಡೆಯ ನಂತರ, ತನ್ನ ಮತ್ತು ತನ್ನ ಕುಟುಂಬದ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳುವಂತೆ ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಸಾಮೂಹಿಕ ಅತ್ಯಾಚಾರದ ನಂತರ ಸಾಯಲು ಬಿಟ್ಟರು

ಬಿಲ್ಕಿಸ್ ಬಾನೋ ಪ್ರಕರಣವು 3 ಮಾರ್ಚ್ 2002 ರಂದು ನಡೆದಿದೆ. ಗೋಧ್ರಾ ನಂತರದ ಗಲಭೆಗಳ ಸಂದರ್ಭದಲ್ಲಿ, ದಾಹೋಡ್ ಜಿಲ್ಲೆಯ ಲಿಮ್ಖೇಡಾ ತಾಲೂಕಿನ ರಂಧಿಕ್‌ಪುರ ಗ್ರಾಮದ ಬಿಲ್ಕಿಸ್ ಬಾನೋ ಅವರ ಮನೆಗೆ ಗುಂಪೊಂದು ನುಗ್ಗಿತು. ಕುಟುಂಬದವರ ಮೇಲೆ ಹಲ್ಲೆ ನಡೆದಿತ್ತು. ಆ ಸಮಯದಲ್ಲಿ ಐದು ತಿಂಗಳ ಗರ್ಭಿಣಿಯಾಗಿದ್ದ ಬಿಲ್ಕಿಸ್ ಬಾನೊ ಸಾಮೂಹಿಕ ಅತ್ಯಾಚಾರಕ್ಕೊಳಗಾದರು. ಈ ವೇಳೆ ಅವರ ಕುಟುಂಬದ ಏಳು ಸದಸ್ಯರನ್ನು ಹತ್ಯೆ ಮಾಡಲಾಗಿತ್ತು. ಬಿಲ್ಕಿಸ್ ಬಾನೋ ಸಾಮೂಹಿಕ ಅತ್ಯಾಚಾರ ಪ್ರಕರಣವು ಗುಜರಾತ್ ಗಲಭೆಯ ಅತ್ಯಂತ ಕೆಟ್ಟ ಪ್ರಕರಣವಾಗಿದೆ. ಆ ಸಮಯದಲ್ಲಿ ಬಿಲ್ಕಿಸ್ 21 ವರ್ಷ ವಯಸ್ಸಿನವರಾಗಿದ್ದರು ಮತ್ತು ಗರ್ಭಿಣಿಯಾಗಿದ್ದರು. ಗೋಧ್ರಾ ಗುಜರಾತ್ ಗಲಭೆಯ ನಂತರ ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ ಸಾಯಲು ಬಿಡಲಾಹಗಿತ್ತು. ಇತರ ಆರು ಸದಸ್ಯರು ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾದರು. ಈ ಪ್ರಕರಣದ ಆರೋಪಿಗಳನ್ನು 2004ರಲ್ಲಿ ಬಂಧಿಸಲಾಗಿತ್ತು.

ಇದನ್ನೂ ಓದಿ:  2002 ಗೋಧ್ರಾ ದಂಗೆ ಪ್ರಕರಣ: ಮೋದಿ ನೇತೃತ್ವದ ಗುಜರಾತ್​ ಸರ್ಕಾರಕ್ಕೆ ಕ್ಲೀನ್​ಚಿಟ್​

ದೇಹದ ಮೇಲೆ ಯಾವುದೇ ಬಟ್ಟೆ ಇರಲಿಲ್ಲ, ಬೇಡಿ ಪಡೆದಿದ್ದರು

ಸಾಮೂಹಿಕ ಅತ್ಯಾಚಾರದ ನಂತರ ತಾನು ಸುಮಾರು ಮೂರು ಗಂಟೆಗಳ ಕಾಲ ಪ್ರಜ್ಞಾಹೀನಳಾಗಿದ್ದಳು ಎಂದು ಬಿಲ್ಕಿಸ್ ಹೇಳಿದ್ದರು. ಎದ್ದೇಳಲು ಸಾಧ್ಯವಾಗದಷ್ಟು ನೋವು ಮೈಯಲ್ಲಿ ಇತ್ತು. ಪ್ರಜ್ಞೆ ಬಂದ ನಂತರ ಹೇಗೋ ನಿಭಾಯಿಸಿದೆ. ಇನ್ನು ಸ್ವಲ್ಪ ದಿನ ಇಲ್ಲಿಯೇ ಇದ್ದರೆ ತನ್ನನ್ನು ಸಾಯಿಸಿಬಿಡುತ್ತೇನೋ ಎಂಬ ಭಯವೂ ಮನದಲ್ಲಿ ಮೂಡಿತ್ತು. ಬರಿಗಾಲಿನಲ್ಲಿ ನಡೆದುಕೊಂಡು ಹೋಗಿ ಮತ್ತು ಹತ್ತಿರದ ಬುಡಕಟ್ಟು ಮಹಿಳೆಯಿಂದ ಬಟ್ಟೆಗಳನ್ನು ಎರವಲು ಪಡೆದೆ. ಬಳಿಕ ಹೋಮ್ ಗಾರ್ಡ್ ನನ್ನನ್ನು, ಅವರು ಲಿಮ್ಖೇಡಾ ಪೊಲೀಸ್ ಠಾಣೆಗೆ ಕರೆದೊಯ್ದರು, ಅಲ್ಲಿ ಪೊಲೀಸ್ ದೂರು ನೀಡಿದ್ದೆ ಎಂದು ಹೇಳಿದ್ದರು.
Published by:Precilla Olivia Dias
First published: