ಪುಕ್ಸಟ್ಟೆ ಲೈಫಲ್ಲಿ ಅಯ್ಯಪ್ಪ ಹವಾ; ಹೊಸ ಮಾದರಿಯ ಭಕ್ತಿಯ ಅಲೆ ಇವತ್ತು ಪ್ರಾರಂಭ

ಅರವಿಂದ್ ಕುಪ್ಳಿಕರ್ ಅವರು ನಿರ್ದೇಶಿಸಿರುವ “ಪುಕ್ಸಟ್ಟೆ ಲೈಫು ಪುರ್​ಸೊತ್ತೇ ಇಲ್ಲ” ಸಿನಿಮಾದಲ್ಲಿ ಸಂಚಾರಿ ವಿಜಯ್ ಪ್ರಧಾನ ಪಾತ್ರ ನಿರ್ವಹಿಸಿದ್ಧಾರೆ. ಅಚ್ಯುತ್ ಕುಮಾರ್, ರಂಗಾಯಣ ರಘು, ಮಾತಂಗಿ ಪ್ರಸನ್ನ ಅವರು ಪ್ರಮುಖ ಪಾತ್ರವರ್ಗದಲ್ಲಿದ್ಧಾರೆ.

news18
Updated:January 24, 2020, 7:07 PM IST
ಪುಕ್ಸಟ್ಟೆ ಲೈಫಲ್ಲಿ ಅಯ್ಯಪ್ಪ ಹವಾ; ಹೊಸ ಮಾದರಿಯ ಭಕ್ತಿಯ ಅಲೆ ಇವತ್ತು ಪ್ರಾರಂಭ
ಪುಕ್ಸಟ್ಟೆ ಲೈಫು ಸಿನಿಮಾ
  • News18
  • Last Updated: January 24, 2020, 7:07 PM IST
  • Share this:
ಬೆಂಗಳೂರು(ಜ. 24): ಸಂಚಾರಿ ವಿಜಯ್ ಅಭಿನಯದ “ಪುಕ್ಸಟ್ಟೆ ಲೈಫು ಪುರ್​ಸೊತ್ತೇ ಇಲ್ಲ” ಸಿನಿಮಾ ಬಹುತೇಕ ಬಿಡುಗಡೆಗೆ ಸಿದ್ಧವಾಗಿದೆ. ಈ ಸಿನಿಮಾಗಾಗಿ ಸಿದ್ಧವಾಗಿರುವ ಅಯ್ಯಪ್ಪ ಹಾಡು ಹಲವು ದಿನಗಳಿಂದ ಸಾಕಷ್ಟು ಕುತೂಹಲ ಮತ್ತು ನಿರೀಕ್ಷೆ ಮೂಡಿಸಿತ್ತು. ಇದೀಗ ‘ಸ್ವಾಮಿಯೇ ಶರಣಂ ಅಯ್ಯಪ್ಪ’ ಹಾಡು ಇವತ್ತು ರಿಲೀಸ್ ಆಗಿದೆ. ಹೊಸ ಮಾದರಿಯಲ್ಲಿ, ಮಾಡರ್ನ್ ಫೀಲ್​ನಲ್ಲಿ ರಾಗ ಸಂಯೋಜನೆಯಾಗಿರುವುದು ಈ ಹಾಡಿನ ವಿಶೇಷ.

ವಾಸು ದೀಕ್ಷಿತ್ ಸಾಹಿತ್ಯ ಬರೆದು ಸಂಗೀತ ನಿರ್ದೇಶಿಸಿರುವ ಅಯ್ಯಪ್ಪ ಅಯ್ಯಪ್ಪ ಹಾಡು ಇವತ್ತು ಬಿಡುಗಡೆಗೊಂಡು ಸದ್ದು ಮಾಡಲು ಪ್ರಾರಂಭಿಸಿದೆ. ಅದಿತಿ ಸಾಗರ್ ಜೊತೆ ವಾಸು ದೀಕ್ಷಿತ್ ಅವರೂ ಈ ಹಾಡಿಗೆ ಧ್ವನಿ ರೂಪದಲ್ಲಿ ಜೀವ ತುಂಬಿದ್ದಾರೆ. ಜೋಲ್ ಸಕ್ಕರಿ ಅವರಿಂದ ಗಿಟಾರ್, ನಂದಕಿಶೋರ್ ದೇಸಾಯಿ ಅವರಿಂದ ಹಾರ್ಮೋನಿಯಂ, ಸಂದೀಪ್ ವಶಿಷ್ಠರಿಂದ ಸ್ಯಾಕ್ಸೋಫೋನ್ ಮತ್ತು ಪ್ರಣವ್ ಸ್ವರೂಪ್ ಅವರಿಂದ ವಯೋಲಿನ್ ಪಕ್ಕಾ ವಾದ್ಯ ಈ ಹಾಡಿನಲ್ಲಿ ಮೇಳೈಸಿವೆ.

ಇದನ್ನೂ ಓದಿ: KGF Chapter 2: ನಾರಾಚಿ ಅಡ್ಡದಿಂದ ಹೊರಬಿತ್ತು ಕೆ.ಜಿ.ಎಫ್ ಚಿತ್ರದ ಹಳೆಯ ಸುದ್ದಿ

ಅರವಿಂದ್ ಕುಪ್ಳಿಕರ್ ಅವರು ನಿರ್ದೇಶಿಸಿರುವ “ಪುಕ್ಸಟ್ಟೆ ಲೈಫು ಪುರ್​ಸೊತ್ತೇ ಇಲ್ಲ” ಸಿನಿಮಾದಲ್ಲಿ ಸಂಚಾರಿ ವಿಜಯ್ ಪ್ರಧಾನ ಪಾತ್ರ ನಿರ್ವಹಿಸಿದ್ಧಾರೆ. ಅಚ್ಯುತ್ ಕುಮಾರ್, ರಂಗಾಯಣ ರಘು, ಮಾತಂಗಿ ಪ್ರಸನ್ನ ಅವರು ಪ್ರಮುಖ ಪಾತ್ರವರ್ಗದಲ್ಲಿದ್ಧಾರೆ.

ಅಯ್ಯಪ್ಪ ಅಯ್ಯಪ್ಪ ಹಾಡಿನ ಯೂಟ್ಯೂಬ್ ವಿಡಿಯೋ:


ದೊಡ್ಡ ನಗರದಲ್ಲಿ ಬದುಕು ಕಟ್ಟಿಕೊಳ್ಳುವ ಕನಸಿನಲ್ಲಿ ಬರುವ ಜನರು ಇಲ್ಲಿ ನರಕಯಾತನೆ ಹೇಗೆ ಅನುಭವಿಸುತ್ತಾರೆ ಎಂಬ ವಿಚಾರವನ್ನು ಚಿತ್ರದಲ್ಲಿ ಹಾಸ್ಯಾತ್ಮಕವಾಗಿ ಚಿತ್ರಿಸಲಾಗಿದೆ. ಬಹುತೇಕ ಚಿತ್ರೀಕರಣ ಮುಕ್ತಾಯವಾಗಿದ್ದು, ಮುಂದಿನ ತಿಂಗಳ (ಫೆಬ್ರವರಿ) ಅಂತ್ಯಕ್ಕೆ ತೆರೆಗೆ ಬರುವ ನಿರೀಕ್ಷೆ ಇದೆ.ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.

First published:January 24, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ