King Charles III: ಕಿಂಗ್ ಚಾರ್ಲ್ಸ್ ಹಿರಿ ಮುತ್ತಜ್ಜ ಮತ್ತು ಕ್ಯಾಮಿಲ್ಲಾ ಪಾರ್ಕರ್ ಮುತ್ತಜ್ಜಿ ನಡುವೆ ಇತ್ತು ಪ್ರೇಮ ಸಂಬಂಧ!

ಇಂಗ್ಲೆಂಡ್ ರಾಜ (ಚಾರ್ಲ್ಸ್ III ) ನ ಹಿರಿ ಮುತ್ತಜ್ಜ ಎಡ್ವರ್ಡ್ VII ಹಾಗೂ ರಾಣಿ ಕ್ಯಾಮಿಲ್ಲಾ ಪಾರ್ಕರ್ (ಚಾರ್ಲ್ಸ್ ಪತ್ನಿ) ಅವರ ಮುತ್ತಜ್ಜಿ ಆಲಿಸ್ ಕೆಪ್ಪೆಲ್ ನಡುವಿನ ಪ್ರಣಯ ಸಂಬಂಧವಾಗಿದೆ. ರಾಜಮನೆತನಗಳಲ್ಲಿ ವಿವಾಹೇತರವಲ್ಲದ ಅದೆಷ್ಟೋ ಪ್ರಣಯ ಸಂಬಂಧಗಳು ಕಥೆಗಳಾಗಿ ಹರಿದಾಡುತ್ತವೆ. ಇದೇ ರೀತಿ ಎಡ್ವರ್ಡ್ ಹಾಗೂ ಆಲಿಸ್ ಅವರ ಪ್ರಣಯ ಸುದ್ದಿಯಾಗಿತ್ತು.

ಕಿಂಗ್ ಚಾರ್ಲ್ಸ್ III ಮತ್ತು ರಾಣಿ ಕ್ಯಾಮಿಲ್ಲಾ ಪಾರ್ಕರ್

ಕಿಂಗ್ ಚಾರ್ಲ್ಸ್ III ಮತ್ತು ರಾಣಿ ಕ್ಯಾಮಿಲ್ಲಾ ಪಾರ್ಕರ್

  • Share this:
 ರಾಣಿ ಎಲಿಜಬೆತ್ II (Queen Elizabeth II) ಮರಣದ ನಂತರ, ಚಾರ್ಲ್ಸ್ III (Charles III) ಗದ್ದುಗೆ ಏರುವುದರೊಂದಿಗೆ ಅನೇಕ ಕಥೆಗಳು ಮತ್ತೆ ಗರಿಗೆದರಿಗೊಂಡಿವೆ. ಅದರಲ್ಲಿ ಪ್ರಮುಖವಾದುದು ಇಂಗ್ಲೆಂಡ್ ರಾಜ (ಚಾರ್ಲ್ಸ್ III ) ನ ಹಿರಿ ಮುತ್ತಜ್ಜ ಎಡ್ವರ್ಡ್ VII (Edward VII) ಹಾಗೂ ರಾಣಿ ಕ್ಯಾಮಿಲ್ಲಾ ಪಾರ್ಕರ್ (Queen Camilla Parker) (ಚಾರ್ಲ್ಸ್ ಪತ್ನಿ) ಅವರ ಮುತ್ತಜ್ಜಿ ಆಲಿಸ್ ಕೆಪ್ಪೆಲ್ (Alice Keppel)ನಡುವಿನ ಪ್ರಣಯ ಸಂಬಂಧವಾಗಿದೆ. ರಾಜಮನೆತನಗಳಲ್ಲಿ ವಿವಾಹೇತರವಲ್ಲದ ಅದೆಷ್ಟೋ ಪ್ರಣಯ ಸಂಬಂಧಗಳು (Relationship) ಕಥೆಗಳಾಗಿ ಹರಿದಾಡುತ್ತವೆ. ಇದೇ ರೀತಿ ಎಡ್ವರ್ಡ್ ಹಾಗೂ ಆಲಿಸ್ ಅವರ ಪ್ರಣಯ ಸುದ್ದಿಯಾಗಿತ್ತು.

ವಯಸ್ಸಿನ ಅಂತರವಿದ್ದರೂ ಪ್ರಣಯ ಮಸುಕಾಗಲಿಲ್ಲ
ಚಾರ್ಲ್ಸ್ ಹಾಗೂ ಕೆಪ್ಪೆಲ್ ಅವರ ವಿವಾಹಕ್ಕೂ ಮುನ್ನ ಇವರಿಬ್ಬರ ಹಿರಿ ಮುತ್ತಜ್ಜ ಹಾಗೂ ಮುತ್ತಜ್ಜಿ ಪ್ರಣಯಿಗಳಾಗಿದ್ದರು. ಚಾರ್ಲ್ಸ್ ಹಾಗೂ ಕ್ಯಾಮಿಲ್ಲಾ ಅವರ ಪ್ರಣಯವೂ ಅವರ ಮುತ್ತಜ್ಜ ಮುತ್ತಜ್ಜಿ ಕಥೆಗೆ ಸಮಾನವಾಗಿದೆ. 1880 ರ ದಶಕದ ಅಂತ್ಯದಲ್ಲಿ ರಾಜಕುಮಾರನಾಗಿದ್ದ ಎಡ್ವರ್ಡ್ VII ಹಾಗೂ ಆಲಿಸ್ ಕೆಪ್ಪೆಲ್ ಭೇಟಿಯಾದರು.

ಈ ಸಮಯದಲ್ಲಿ ಎಡ್ವರ್ಡ್‌ಗೆ 59 ವರ್ಷವಾಗಿದ್ದರೆ, ಆಲಿಸ್ ಕೆಪ್ಪೆಲ್ 29 ವರ್ಷದವರಾಗಿದ್ದರು. ಪ್ರಣಯಕ್ಕೆ ವಯಸ್ಸಿನ ಹಂಗಿಲ್ಲ ಎಂಬ ಮಾತಿನಂತೆ ತಮ್ಮ ತಮ್ಮ ವಯಸ್ಸು ಇಬ್ಬರಿಗೂ ಯಾವುದೇ ಸಮಸ್ಯೆಯನ್ನುಂಟು ಮಾಡಲಿಲ್ಲ. ಈ ಸಮಯದಲ್ಲಿ ಕ್ಯಾಮಿಲ್ಲಾ ಪಾರ್ಕರ್ ಅವರ ಮುತ್ತಜ್ಜಿ (ಆಲಿಸ್ ಕೆಪ್ಪೆಲ್) ಕೂಡ ಜಾರ್ಜ್ ಕೆಪ್ಪೆಲ್ ಅವರನ್ನು ವಿವಾಹವಾಗಿದ್ದರು.

ಆಲಿಸ್ ಕೆಪ್ಪೆಲ್ ಎಡ್ವರ್ಡ್ VII ಸಂಬಂಧ
ತಮ್ಮ ಪ್ರಣಯ ಸಂಬಂಧವನ್ನು ಸುಲಭವಾಗಿ ನಡೆಸಿಕೊಂಡು ಹೋಗಲು ಇಬ್ಬರಿಗೂ ಯಾವುದೇ ತೊಡಕಿರಲಿಲ್ಲ. ಇಬ್ಬರೂ ವಿವಾಹಿತರಾಗಿದ್ದರೂ ತಮ್ಮ ಪ್ರಣಯ ಸಂಬಂಧವನ್ನು ನಡೆಸಿಕೊಂಡು ಹೋಗುತ್ತಿದ್ದರು. ಹೀಗೆಯೇ ಈ ಸಂಬಂಧ ತುಂಬಾ ಸಮಯ ನಡೆಯಿತು.

ಎಡ್ವರ್ಡ್ ಜೀವನದಲ್ಲಿ ಆಲಿಸ್‌ಗೆ ವಿಶೇಷ ಸ್ಥಾನ
ಎಡ್ವರ್ಡ್ ಜೀವನದಲ್ಲಿ ಆಲಿಸ್ ಮಾತ್ರವೇ ಆಗಿರಲಿಲ್ಲ ಆತ ಅನೇಕ ಹೆಂಗಳೆಯರ ಸಹವಾಸ ನಡೆಸಿದ್ದರು. ಅದಾಗ್ಯೂ ಆಲಿಸ್ ಆತನಿಗೆ ಬಹುವಿಶೇಷ ಎಂದೆನಿಸಿದ್ದರು. ಡೆನ್ಮಾರ್ಕ್‌ನ ಅಲೆಕ್ಸಾಂಡ್ರಾ ಅವರನ್ನು ಎಡ್ವರ್ಡ್ ವಿವಾಹವಾಗಿದ್ದರೂ, ಎಡ್ವರ್ಡ್ ಆಲಿಸ್‌ ಮೇಲಿನ ಪ್ರೀತಿಯನ್ನು ಬಚ್ಚಿಟ್ಟಿರಲಿಲ್ಲ.

ಇದನ್ನೂ ಓದಿ:  Diamond: 500 ಕ್ಯಾರೆಟ್ ವಜ್ರ ಮರಳಿಸಿ! ಬ್ರಿಟನ್​ಗೆ ದಕ್ಷಿಣ ಆಫ್ರಿಕಾದಿಂದ ಒತ್ತಾಯ

ಎಡ್ವರ್ಡ್ ಹಾಗೂ ಆಲಿಸ್ ಪ್ರೀತಿ; ಚಾರ್ಲ್ಸ್ ದಂಪತಿಗಳಿಗಿಂತ ಏಕೆ ಭಿನ್ನ?
ಚಾರ್ಲ್ಸ್ III ಹಾಗೂ ಕ್ಯಾಮಿಲ್ಲಾ ಪಾರ್ಕರ್‌ಗಿಂತ ಭಿನ್ನವಾಗಿ ಎಂದೆಂದೂ ಪರಸ್ಪರ ವಿವಾಹವಾಗುವುದಿಲ್ಲ. ಅಂತಿಮವಾಗಿ ತಾವು ಬಯಸಿದಂತೆಯೇ ಅಂತ್ಯಗೊಳ್ಳುತ್ತಾರೆ. 1901 ರಲ್ಲಿ ರಾಣಿ ವಿಕ್ಟೋರಿಯಾ ನಿಧನರಾದಾಗ ಆ ಸ್ಥಾನಕ್ಕೆ ಎಡ್ವರ್ಡ್ VII ಬರುತ್ತಾರೆ. ಈ ಸಮಯದಲ್ಲಿ ಕೂಡ ಆಲಿಸ್ ಎಡ್ವರ್ಡ್‌ಗೆ ಪ್ರೀತಿಪಾತ್ರರಾಗಿದ್ದರು ಇನ್ನು ರಾಜಮನೆತನಗಳ ದಾಖಲೆಗಳು ಉಲ್ಲೇಖಿಸಿದಂತೆ ವೆಸ್ಟ್‌ಮಿನ್‌ಸ್ಟರ್ ಅಬ್ಬೆಯಲ್ಲಿನ ಪ್ರಮುಖ ಸ್ಥಳದಲ್ಲಿ ಎಡ್ವರ್ಡ್ ಪಟ್ಟಾಭಿಷೇಕ ಸಮಯದಲ್ಲಿ ಹಾಗೂ ರಾಣಿ ವಿಕ್ಟೋರಿಯಾ ಅವರ ಅಂತಿಮ ವಿದಾಯ ಸಮಯದಲ್ಲಿ ಆಲಿಸ್ ಉಪಸ್ಥಿತರಿದ್ದರು ಎಂದಾಗಿದೆ.

ಸಾವು ಮಾತ್ರವೇ ಈ ಪ್ರೇಮಿಗಳನ್ನು ಪ್ರತ್ಯೇಕಗೊಳಿಸಿತು
ಎಡ್ವರ್ಡ್ ಹಾಗೂ ಆಲಿಸ್ ಅವರ ಪ್ರೇಮವು ಎಂದಿಗೂ ಕ್ಷೀಣಿಸಲಿಲ್ಲ, ಆದರೆ 1910 ರಲ್ಲಿ ಎಡ್ವರ್ಡ್ VII ಮರಣವು ಇಬ್ಬರ ಪ್ರೀತಿಯನ್ನು ಬೇರ್ಪಡಿಸಿತು. ಪಲ್ಮನರಿ ಎಂಫಿಸೆಮಾಕ್ಕೆ ಕಾರಣವಾದ ಬ್ರಾಂಕೈಟಿಸ್‌ನಿಂದ ರಾಜನು ಮರಣಹೊಂದಿದನು.

ಎಡ್ವರ್ಡ್ ಪತ್ನಿಯೇ ಗಂಡನ ಅಂತಿಮ ವಿದಾಯಕ್ಕೆ ಆಲಿಸ್‌ರನ್ನು ಆಹ್ವಾನಿಸಿದ್ದರು
ಡೆನ್ಮಾರ್ಕ್‌ನ ಅಲೆಕ್ಸಾಂಡ್ರಾ ಆಲಿಸ್ ಕೆಪ್ಪರ್ ಅವರನ್ನು ಖುದ್ದಾಗಿ ತಾನೇ ಆಹ್ವಾನಿಸಿದ್ದರು. ಆಕೆ ತನ್ನ ಪ್ರೀತಿಪಾತ್ರ ಮನುಷ್ಯನಾಗಿ ಸ್ವಗೃಹದಲ್ಲಿಯೇ ವಿದಾಯ ಹೇಳಲಿ ಎಂಬುದು ಅಲೆಕ್ಸಾಂಡ್ರಾ ನಿರ್ಧಾರವಾಗಿತ್ತು.

ಇದನ್ನೂ ಓದಿ:  Prince Harry and Meghan: ಬಕಿಂಗ್‌ಹ್ಯಾಮ್ ಅರಮನೆ ಸ್ವಾಗತ ಸಮಾರಂಭದಲ್ಲಿ ಪ್ರಿನ್ಸ್ ಹ್ಯಾರಿ, ಮೇಘನ್ ಗೈರು: ಕಾರಣವೂ ಬಹಿರಂಗ!

ಎಡ್ವರ್ಡ್ VII ರ ಮರಣಾ ನಂತರವೂ ಆಲಿಸ್ ಕೆಪ್ಪರ್‌ಗೆ ಆಸ್ಥಾನದಲ್ಲಿದ್ದ ವಿಶೇಷ ಸ್ಥಾನ ಹಾಗೆಯೇ ಉಳಿಯಿತು. ಇನ್ನು ಆಲಿಸ್‌ಗೆ ಜನಿಸಿದ ಮಕ್ಕಳಲ್ಲೊಬ್ಬನು ಎಡ್ವರ್ಡ್‌ನದ್ದು, ಇದು ಆಕೆಯ ಪತಿ ಜಾರ್ಜ್ ಕೆಪ್ಪಲ್‌ಗೆ ಜನಿಸಿದ್ದಲ್ಲ ಎಂಬ ವದಂತಿ ಕೂಡ ಹರಿದಾಡಿವೆ.
Published by:Ashwini Prabhu
First published: