• ಹೋಂ
  • »
  • ನ್ಯೂಸ್
  • »
  • ದೇಶ-ವಿದೇಶ
  • »
  • Rekha Singh:ಭಾರತ ಸೇನೆ ಸೇರಿದ ಗಲ್ವಾನ್ ವೀರ ದೀಪಕ್ ಸಿಂಗ್ ಪತ್ನಿ! ಲೆಫ್ಟಿನೆಂಟ್ ರೇಖಾ ಸಿಂಗ್​ರಿಂದ ಅಧಿಕಾರ ಸ್ವೀಕಾ

Rekha Singh:ಭಾರತ ಸೇನೆ ಸೇರಿದ ಗಲ್ವಾನ್ ವೀರ ದೀಪಕ್ ಸಿಂಗ್ ಪತ್ನಿ! ಲೆಫ್ಟಿನೆಂಟ್ ರೇಖಾ ಸಿಂಗ್​ರಿಂದ ಅಧಿಕಾರ ಸ್ವೀಕಾ

ಭಾರತೀಯ ಸೇನೆ ಸೇರಿದ ರೇಖಾಸಿಂಗ್

ಭಾರತೀಯ ಸೇನೆ ಸೇರಿದ ರೇಖಾಸಿಂಗ್

ದಿವಂಗತ ನಾಯಕ್ ದೀಪಕ್ ಸಿಂಗ್ ಅವರ ಪತ್ನಿ ಲೆಫ್ಟಿನೆಂಟ್ ರೇಖಾ ಅವರನ್ನು ಸೇನಾ ಆರ್ಡಿನೆನ್ಸ್ ಕಾರ್ಪ್ಸ್‌ನಲ್ಲಿ ಅಧಿಕಾರಿಯಾಗಿ ನಿಯೋಜಿಸಲಾಗಿದೆ

  • Share this:

ನವದೆಹಲಿ: ಗಲ್ವಾನ್ ವೀರ ದಿವಂಗತ ನಾಯಕ್ ದೀಪಕ್ ಸಿಂಗ್ (Deepak Singh) ಭಾರತೀಯ ಸೈನ್ಯದ (Indian Army) ಒಬ್ಬ ವೀರಪುತ್ರನಾಗಿದ್ದು ದೇಶಕ್ಕಾಗಿ ತಮ್ಮ ಪ್ರಾಣವನ್ನೇ ಬಲಿದಾನ ಮಾಡಿದ ಶೂರ ಸೈನಿಕ. ಇದೀಗ ಅವರ ಪತ್ನಿಯು ಸಹ ಗಂಡನಂತೆ ದೇಶ ಸೇವೆ ಮಾಡಲು ತಯಾರಾಗಿದ್ದು ಭಾರತೀಯ ಸೇನೆ ಸೇರಿದ್ದಾರೆ. ಅವರ ಪತ್ನಿ ಲೆಫ್ಟಿನೆಂಟ್ ರೇಖಾ ಸಿಂಗ್ (Rekha Singh) ಅವರು ಅಧಿಕಾರ ಸ್ವೀಕರಿಸಿದ್ದಾರೆ. ಇದು ಮಹಿಳೆಯರಿಗೆ ಹೆಮ್ಮೆಯ ವಿಷಯವೇ ಸರಿ. ಗಲ್ವಾನ್ ವ್ಯಾಲಿ ಘರ್ಷಣೆಯಲ್ಲಿ (Galwan Valley clashes) ಹುತಾತ್ಮರಾದ ದಿವಂಗತ ನಾಯಕ್, ವೀರ ಚಕ್ರ ವಿಜೇತ (ಮರಣೋತ್ತರ) ದೀಪಕ್ ಸಿಂಗ್ ಅವರ ಪತ್ನಿ, ಮಹಿಳಾ ಕೆಡೆಟ್ ರೇಖಾ ಸಿಂಗ್ ಅವರು ಒಟಿಎ ಚೆನ್ನೈನಿಂದ ತರಬೇತಿಯನ್ನು ಪೂರ್ಣಗೊಳಿಸಿದ ನಂತರ ಭಾರತೀಯ ಸೇನೆಗೆ ನೇಮಕಗೊಂಡರು.


ಗಲ್ವಾನ್ ಘರ್ಷಣೆಯ ಸಂದರ್ಭದಲ್ಲಿ ರೇಖಾ ಅವರ ಪತಿ ನಾಯಕ್ ದೀಪಕ್ ಅವರು ದೇಶಕ್ಕಾಗಿ ತಮ್ಮ ಪ್ರಾಣವನ್ನು ತ್ಯಾಗ ಮಾಡಿದರು. ಲೆಫ್ಟಿನೆಂಟ್ ರೇಖಾ ಅವರು ಇಂದು ಚೆನ್ನೈನ ಆಫೀಸರ್ಸ್ ಟ್ರೈನಿಂಗ್ ಅಕಾಡೆಮಿಯಿಂದ ನೇಮಕಗೊಂಡ 40 ಮಹಿಳಾ ಕೆಡೆಟ್‌ಗಳಲ್ಲಿ ಒಬ್ಬರಾಗಿದ್ದಾರೆ.


ಇದನ್ನೂ ಓದಿ: Court: 80 ವರ್ಷಗಳ ಕಾನೂನು ಹೋರಾಟದಲ್ಲಿ 93ರ ಅಜ್ಜಿಗೆ ಜಯ! ಕೊನೆಯುಸಿರೆಳೆಯುವ ಮುನ್ನವೇ ಸಿಕ್ತು ನ್ಯಾಯ!


ಲೆಫ್ಟಿನೆಂಟ್ ರೇಖಾ ಸಿಂಗ್


ರೇಖಾ ಅವರು ಬಿಹಾರ ರೆಜಿಮೆಂಟ್‌ನ 16 ನೇ ಬೆಟಾಲಿಯನ್‌ನ ನಾಯಕ್ ದೀಪಕ್ ಸಿಂಗ್ ಅವರನ್ನು ವಿವಾಹವಾಗಿದ್ದರು. ರೇಖಾ ಅವರ ಗಂಡ ಜೂನ್ 15, 2020 ರಂದು ಗಲ್ವಾನ್‌ನಲ್ಲಿ ಚೀನಾದ ಪಿಎಲ್‌ಎ ಸೈನಿಕರ ವಿರುದ್ಧ ಹೋರಾಡುತ್ತಿರುವಾಗ ಆ ಯುದ್ಧದಲ್ಲಿ ವೀರಮರಣ ಹೊಂದಿದ್ದರು.


ನವೆಂಬರ್ 2021 ರಲ್ಲಿ ಅವರಿಗೆ ಮರಣೋತ್ತರವಾಗಿ ವೀರ ಚಕ್ರವನ್ನು ನೀಡಲಾಯಿತು. ಪರಮವೀರ ಚಕ್ರ ಮತ್ತು ಮಹಾವೀರ ಚಕ್ರದ ನಂತರ ವೀರ ಚಕ್ರವು ಭಾರತದ ಮೂರನೇ ಅತ್ಯುನ್ನತ ಯುದ್ಧಕಾಲದ ಮಿಲಿಟರಿ ಗೌರವವಾಗಿದೆ.


ಈಗ ಭಾರತ ಮತ್ತು ಚೀನಾ ನಡುವಿನ ಗಲ್ವಾನ್ ಕಣಿವೆಯ ಘರ್ಷಣೆಯಲ್ಲಿ ತನ್ನ ಪತಿಯನ್ನು ಕಳೆದುಕೊಂಡ ಸುಮಾರು ಮೂರು ವರ್ಷಗಳ ನಂತರ, ಲೆಫ್ಟಿನೆಂಟ್ ರೇಖಾ ಸಿಂಗ್ ಪೂರ್ವ ಲಡಾಖ್‌ಗೆ ತೆರಳಲು ಸಿದ್ಧರಾಗಿದ್ದಾರೆ. ಅಲ್ಲಿ ಅವರು ಸೇನೆಯ ಉಪಕರಣಗಳು, ಬಟ್ಟೆ ಮತ್ತು ಯುದ್ಧ ಸಾಮಗ್ರಿಗಳ ಪೂರೈಕೆ ಸರಪಳಿಯನ್ನು  ನೋಡಿಕೊಳ್ಳುತ್ತಾರೆ.




ಲಾಜಿಸ್ಟಿಕ್ ಸಪೋರ್ಟ್ ವಿಭಾಗದಲ್ಲಿ ಕೆಲಸ


ದಿವಂಗತ ನಾಯಕ್ ದೀಪಕ್ ಸಿಂಗ್ ಅವರ ಪತ್ನಿ ಲೆಫ್ಟಿನೆಂಟ್ ರೇಖಾ ಅವರನ್ನು ಸೇನಾ ಆರ್ಡಿನೆನ್ಸ್ ಕಾರ್ಪ್ಸ್‌ನಲ್ಲಿ ಅಧಿಕಾರಿಯಾಗಿ ನಿಯೋಜಿಸಲಾಗಿದೆ. ಯುದ್ಧದ ಸಂದರ್ಭದಲ್ಲಿ ಪಡೆಗೆ ವಸ್ತು ಮತ್ತು ಲಾಜಿಸ್ಟಿಕ್ ಸಪೋರ್ಟ್ ಒದಗಿಸುವ ಜವಾಬ್ದಾರಿಯನ್ನು ಅವರಿಗೆ ಶನಿವಾರದಂದು ವಹಿಸಲಾಯಿತು.


ಸೈನಿಕರ ಪತ್ನಿಯರು ಪರಂಪರೆಯನ್ನು ಮುಂದುವರೆಸುತ್ತಿದ್ದಾರೆ


ಇಂದಿನ ದಿನಗಳಲ್ಲಿ ಹಲವಾರು ಸೇನಾ ಪತ್ನಿಯರು ತಮ್ಮ ಗಂಡಂದಿರ ವೀರ ಪರಂಪರೆಯನ್ನು ಮುಂದುವರಿಸಲು ಸಶಸ್ತ್ರ ಪಡೆಗಳನ್ನು ಸೇರುವುದನ್ನು ಆಯ್ಕೆ ಮಾಡಿಕೊಂಡಿದ್ದಾರೆ.


ಅಧಿಕಾರಿಗಳಾಗಲು ಅರ್ಹತೆ ಹೊಂದಿರುವ ಮಹಿಳೆಯರನ್ನು ಸೇನೆಯು ಆಯ್ಕೆ ಮಾಡಿಕೊಳ್ಳುತ್ತಿದೆ ಮತ್ತು ತರಬೇತಿಯನ್ನು ನೀಡುತ್ತಿದೆ. ಇದರಿಂದ ಆ ಮಹಿಳೆಯರು ತಮ್ಮ ದಿವಂಗತ ಗಂಡನ ಹೆಜ್ಜೆಗಳನ್ನು, ಅವರು ಅನುಸರಿಸಿದ ವೀರ ಪರಂಪರೆಯನ್ನು ಮುಂದುವರೆಸಲು ಸಾಧ್ಯವಾಗುತ್ತದೆ.


ಇದನ್ನೂ ಓದಿ: Famous Lakes in India: ಪ್ರವಾಸಿ ಪ್ರಿಯರನ್ನು ಆಕರ್ಷಿಸುವ ಭಾರತದ 10 ಅತ್ಯಂತ ಸುಂದರವಾದ ಸರೋವರಗಳು ಇಲ್ಲಿವೆ ನೋಡಿ!


ಸೇನೆ ಸೇರುತ್ತಿರುವ ವೀರ ಯೋಧರ ಪತ್ನಿಯರು


ಸೈನ್ಯವು, ಅವರ ಜೀವನದಲ್ಲಿ ಹೇಗೆ ಪ್ರಾರಂಭಿಸಬೇಕು ಎಂಬುದರ ಕುರಿತು ಅವರಿಗೆ ಸಾಕಷ್ಟು ಸಲಹೆ ಮತ್ತು ತರಬೇತಿಗಳನ್ನು ನೀಡುತ್ತಿದೆ. ರೇಖಾ ಸಿಂಗ್ ಅವರ ಈ ಯಶಸ್ಸಿನ ಕಥೆಯು ಸೇನೆಗಳಲ್ಲಿ ಹೆಚ್ಚುತ್ತಿರುವ ಸೇನಾ ಸಂಗಾತಿಗಳ ಸಂಖ್ಯೆಯನ್ನು ವಿವರಿಸುತ್ತದೆ.


ಈ ಮಹಿಳಾ ಮಣಿಗಳ ಪತಿಯಂದಿರು ಕರ್ತವ್ಯದ ಸಂದರ್ಭದಲ್ಲಿ ಯುದ್ಧದ ಸಂಘರ್ಷದಲ್ಲಿ ಹೋರಾಡಿ ತಮ್ಮ ಪ್ರಾಣವನ್ನು ತ್ಯಾಗ ಮಾಡಿದ್ದಾರೆ. ಈಗ ಅವರ ಪತ್ನಿಯಂದಿರು ತಮ್ಮ ಪ್ರೀತಿಪಾತ್ರರ ವೀರ ಪರಂಪರೆಯನ್ನು ಮುಂದುವರಿಸಲು ಸಶಸ್ತ್ರ ಪಡೆಗಳಲ್ಲಿ ವೃತ್ತಿಜೀವನವನ್ನು ಯಶಸ್ವಿಯಾಗಿ ಆರಂಭಿಸುತ್ತಿದ್ದಾರೆ.

First published: