ರಾಷ್ಟ್ರಪತಿ ಸ್ಥಾನ ಸುಳ್ಳು, ಮಗಳಿಗೆ ಸಚಿವ ಸ್ಥಾನದ ಭರವಸೆ ನೀಡಲಾಗಿತ್ತು; ಮೋದಿ ಭೇಟಿಯ ಮಾತುಕತೆ ಬಹಿರಂಗಪಡಿಸಿದ ಶರದ್ ಪವಾರ್

2016ರಲ್ಲಿ ಮೋದಿ ಅವರು ಪವಾರ್ ಅವರ ಆಹ್ವಾನದ ಮೇರೆಗೆ ಪುಣೆಯ ವಸಂತದಾದಾ ಸಕ್ಕರೆ ಸಂಸ್ಥೆಗೆ ಭೇಟಿ ನೀಡಿದ್ದಾಗಲೂ ಶರದ್ ಪವಾರ್ ಅವರನ್ನು ಹಾಡಿ ಹೊಗಳಿದ್ದರು. ಪವಾರ್ ಅವರ ಮೇಲೆ ನನಗೆ ವೈಯಕ್ತಿಕ ಗೌರವ ಇದೆ. ನಾನು ಗುಜರಾತ್ ಮುಖ್ಯಮಂತ್ರಿಯಾಗಿದ್ದ ವೇಳೆ ನನ್ನ ಬೆರಳಿಡುದು ನಡೆಸುವ ಮೂಲಕ ಸಹಾಯ ಮಾಡಿದ್ದಾರೆ. ಇದನ್ನು ಸಾರ್ವಜನಿಕವಾಗಿ ಹೇಳಿಕೊಳ್ಳಲು ನನಗೆ ಹೆಮ್ಮೆಯಾಗುತ್ತದೆ ಎಂದು ಮೋದಿ ಹೇಳಿದ್ದರು.

HR Ramesh | news18-kannada
Updated:December 2, 2019, 10:08 PM IST
ರಾಷ್ಟ್ರಪತಿ ಸ್ಥಾನ ಸುಳ್ಳು, ಮಗಳಿಗೆ ಸಚಿವ ಸ್ಥಾನದ ಭರವಸೆ ನೀಡಲಾಗಿತ್ತು; ಮೋದಿ ಭೇಟಿಯ ಮಾತುಕತೆ ಬಹಿರಂಗಪಡಿಸಿದ ಶರದ್ ಪವಾರ್
ಎನ್​​ಸಿಪಿ ಅಧ್ಯಕ್ಷ ಶರದ್​​ ಪವಾರ್​​
  • Share this:
ಮುಂಬೈ: ಪ್ರಧಾನಿ ನರೇಂದ್ರ ಮೋದಿ ಅವರು ಜೊತೆಯಾಗಿ ಕೆಲಸ ಮಾಡೋಣ ಎಂದು ಹೇಳಿದ್ದರು. ಆದರೆ, ತಾವು ಈ ಅವಕಾಶ ತಿರಸ್ಕರಿಸಿದ್ದಾಗಿ ಎನ್​ಸಿಪಿ ಮುಖ್ಯಸ್ಥ ಶರದ್ ಪವಾರ್ ಸೋಮವಾರ ಹೇಳಿದ್ದಾರೆ.

ಮರಾಠಿ ಟಿ.ವಿ ಒಂದಕ್ಕೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿರುವ ಶರದ್ ಪವಾರ್, ಜೊತೆಯಾಗಿ ಕೆಲಸ ಮಾಡೋಣ ಎಂದು ಮೋದಿ ಅವರು ಅವಕಾಶ ನೀಡಿದ್ದರು. ಆಗ ಅವರಿಗೆ ಹೇಳಿದೆ, ನಮ್ಮ ಖಾಸಗಿ ಸಂಬಂಧ ತುಂಬಾ ಚೆನ್ನಾಗಿದೆ. ಮತ್ತು ಅದನ್ನು ಹಾಗೆಯೇ ಮುಂದುವರೆಸಿಕೊಂಡು ಹೋಗುತ್ತೇನೆ. ಆದರೆ, ಜೊತೆಯಾಗಿ ಕೆಲಸ ಮಾಡುವುದು ಮಾತ್ರ ಅಸಾಧ್ಯ ಎಂದು ಹೇಳಿದ್ದಾಗಿ ತಿಳಿಸಿದ್ದಾರೆ.

ಮೋದಿ ಸರ್ಕಾರ ಶರದ್ ಪವಾರ್ ಅವರನ್ನು ರಾಷ್ಟ್ರಪತಿಯನ್ನಾಗಿ ನೇಮಕ ಮಾಡುವ ಅವಕಾಶ ನೀಡಿತ್ತು ಎಂಬ ಸುದ್ದಿಯನ್ನು ಶರದ್ ಪವಾರ್ ಅಲ್ಲಗಳೆದರು. ಆದರೆ, ತಮ್ಮ ಮಗಳು ಸುಪ್ರಿಯಾ ಸುಳೆ ಅವರಿಗೆ ಮೋದಿ ಸಚಿವ ಸಂಪುಟದಲ್ಲಿ ಅವಕಾಶ ನೀಡುವುದಾಗಿ ಹೇಳಿದ್ದರು ಎಂದು ತಿಳಿಸಿದರು. ಸುಪ್ರಿಯಾ ಸುಳೆ ಅವರು ಶರದ್ ಪವಾರ್ ಅವರ ಮಗಳಾಗಿದ್ದು, ಪುಣೆ ಜಿಲ್ಲೆಯ ಬಾರಾಮತಿ ಕ್ಷೇತ್ರದ ಸಂಸದೆಯಾಗಿದ್ದಾರೆ.

ಕಳೆದ ತಿಂಗಳು ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆಗೆ ಮಹಾ ನಾಟಕೀಯ ಬೆಳವಣಿಗೆಗಳು ನಡೆಯುವ ಸಂದರ್ಭದಲ್ಲಿ ಶರದ್ ಪವಾರ್ ಅವರು ಪ್ರಧಾನಿ ಮೋದಿ ಅವರನ್ನು ಭೇಟಿಯಾಗಿದ್ದರು. ಶರದ್ ಪವಾರ್ ಅವರನ್ನು ಮೋದಿ ಸದಾ ಹೊಗಳಿಕೊಂಡೇ ಬಂದಿದ್ದಾರೆ. ಮತ್ತು ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ಪ್ರಚಾರದ ವೇಳೆಯೂ ಶರದ್ ಪವಾರ್ ವಿರುದ್ಧವಾಗಿಯೂ ವಾಗ್ದಾಳಿ ನಡೆಸಿರಲಿಲ್ಲ.

ಇದನ್ನು ಓದಿ: ಮಹಾರಾಷ್ಟ್ರ ಸ್ಪೀಕರ್ ಸ್ಪರ್ಧೆಯಿಂದ ಹಿಂದೆ ಸರಿದ ಬಿಜೆಪಿ; ಕಾಂಗ್ರೆಸ್ ನಾಯಕ ನಾನಾ ಪಟೋಲೆ ಅವಿರೋಧ ಆಯ್ಕೆ

ಮೋದಿ ಅವರು ಇತ್ತೀಚೆಗೆ 250ನೇ ರಾಜ್ಯಸಭೆ ಅಧಿವೇಶನ ಉದ್ದೇಶಿಸಿ ಮಾತನಾಡುವಾಗ, ಬಿಜೆಪಿಯೂ ಸೇರಿದಂತೆ ಇತರೆ ಪಕ್ಷಗಳು ಸಂಸದೀಯ ಕಟ್ಟುಪಾಡುಗಳನ್ನು ಎನ್​ಸಿಪಿಯಿಂದ ನೋಡಿ ಕಲಿಯಬೇಕು ಎಂದುಹೇಳಿದ್ದರು.

2016ರಲ್ಲಿ ಮೋದಿ ಅವರು ಪವಾರ್ ಅವರ ಆಹ್ವಾನದ ಮೇರೆಗೆ ಪುಣೆಯ ವಸಂತದಾದಾ ಸಕ್ಕರೆ ಸಂಸ್ಥೆಗೆ ಭೇಟಿ ನೀಡಿದ್ದಾಗಲೂ ಶರದ್ ಪವಾರ್ ಅವರನ್ನು ಹಾಡಿ ಹೊಗಳಿದ್ದರು. ಪವಾರ್ ಅವರ ಮೇಲೆ ನನಗೆ ವೈಯಕ್ತಿಕ ಗೌರವ ಇದೆ. ನಾನು ಗುಜರಾತ್ ಮುಖ್ಯಮಂತ್ರಿಯಾಗಿದ್ದ ವೇಳೆ ನನ್ನ ಬೆರಳಿಡುದು ನಡೆಸುವ ಮೂಲಕ ಸಹಾಯ ಮಾಡಿದ್ದಾರೆ. ಇದನ್ನು ಸಾರ್ವಜನಿಕವಾಗಿ ಹೇಳಿಕೊಳ್ಳಲು ನನಗೆ ಹೆಮ್ಮೆಯಾಗುತ್ತದೆ ಎಂದು ಮೋದಿ ಹೇಳಿದ್ದರು.
First published:December 2, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading