‘ಗೋವು ಸಾಕಾಣಿಕೆ ಮಾಡಿದರೆ ಕೈದಿಗಳ ಮನಸ್ಥಿತಿ ಬದಲಾಗುತ್ತದೆ: ಆರ್​​ಎಸ್​ಎಸ್​ ಮುಖ್ಯಸ್ಥ ಮೋಹನ್​​ ಭಾಗವತ್​​

ಗೋವು ಜತ್ತಿನ ತಾಯಿ. ಮಣ್ಣು, ಪ್ರಾಣಿ, ಪಕ್ಷಿ ಮತ್ತು ಮನುಷ್ಯರು ಎಂಬ ಭೇದ ಮಾಡದೇ ಗೋವು ಎಲ್ಲರನ್ನೂ ಪೋಷಿಸುತ್ತಿದೆ. ಖಾಯಿಲೆಯಿಂದ ಬಳಲುತ್ತಿರುವ ಮನುಷ್ಯನನ್ನು ರಕ್ಷಿಸಿ, ಆತನ ಹೃದಯವನ್ನು ಹೂವಿನಂತೆ ಬದಲಾಯಿಸುತ್ತದೆ ಎಂದು ಭಾಗವತ್​​ ತಿಳಿಸಿದರು.

news18-kannada
Updated:December 8, 2019, 6:09 PM IST
‘ಗೋವು ಸಾಕಾಣಿಕೆ ಮಾಡಿದರೆ ಕೈದಿಗಳ ಮನಸ್ಥಿತಿ ಬದಲಾಗುತ್ತದೆ: ಆರ್​​ಎಸ್​ಎಸ್​ ಮುಖ್ಯಸ್ಥ ಮೋಹನ್​​ ಭಾಗವತ್​​
ಮೋಹನ್ ಭಾಗವತ್
  • Share this:
ನವದೆಹಲಿ(ಡಿ.08): ಗೋವು ಸಾಕುವ ಕೆಲಸ ಮಾಡಿದ ಬಳಿಕ ಜೈಲಿನಲಿದ್ದ ಎಷ್ಟೋ ಕೈದಿಗಳ ಮನಸ್ಥಿತಿ ಬದಲಾಗಿತ್ತು ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಖ್ಯಸ್ಥ ಮೋಹನ್​​ ಭಾಗವತ್​​ ಹೇಳಿಕೆ ನೀಡಿದ್ದಾರೆ.

ಶನಿವಾರ(ಇಂದು) ಗೋ ವಿಗ್ಯಾನ್ ಸಂಶೋಧನ್ ಸಂಸ್ಥಾ ಆಯೋಜಿಸಿದ್ದ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಆರ್​ಎಸ್​ಎಸ್​ ಮುಖ್ಯಸ್ಥ ಮೋಹನ್​​ ಭಾಗವತ್​​ ಭಾಗವಹಿಸಿದ್ದರು. ಇಲ್ಲಿನ ಪ್ರಶಸ್ತಿ ಪ್ರಧಾನ ಸಮಾರಭವನ್ನುದ್ದೇಶಿಸಿ ಮಾತಾಡಿದ ಮೋಹನ್​​ ಭಾಗವತ್​​, ಕೈದಿಗಳಿಗೆ ಹಸು ಸಾಕುವ ಕೆಲಸ ನೀಡಿದಾಗ ಅವರಲ್ಲಿಯೂ ಬದಲಾವಣೆ ಕಂಡು ಬಂದಿದೆ ಎಂದರು.

ಗೋವು ಜತ್ತಿನ ತಾಯಿ. ಮಣ್ಣು, ಪ್ರಾಣಿ, ಪಕ್ಷಿ ಮತ್ತು ಮನುಷ್ಯರು ಎಂಬ ಭೇದ ಮಾಡದೇ ಗೋವು ಎಲ್ಲರನ್ನೂ ಪೋಷಿಸುತ್ತಿದೆ. ಖಾಯಿಲೆಯಿಂದ ಬಳಲುತ್ತಿರುವ ಮನುಷ್ಯನನ್ನು ರಕ್ಷಿಸಿ, ಆತನ ಹೃದಯವನ್ನು ಹೂವಿನಂತೆ ಬದಲಾಯಿಸುತ್ತದೆ ಎಂದು ತಿಳಿಸಿದರು.

ಜೈಲುಗಳಲ್ಲೇ ಗೋಶಾಲೆಗಳನ್ನು ನಿರ್ಮಿಸಿ ಕೈದಿಗಳಿಗೆ ಅದರ ಹೊಣೆ ನೀಡಿದ್ದೆವು. ಇದರ ಜವಾಬ್ದಾರಿ ಹೊತ್ತ ಬಳಿಕ ಕೈದಿಗಳ ಮನಸ್ಥಿತಿ ಬದಲಾಗಿದೆ. ಈ ಬಗ್ಗೆ ಜೈಲು ಅಧಿಕಾರಿಗಳೇ ನನ್ನ ಬಗ್ಗೆ ತಮ್ಮಾಭಿಪ್ರಾಯ ಹಂಚಿಕೊಂಡಿದ್ದಾರೆ. ಇದನ್ನೇ ನಾನು ನಿಮಗೆ ಹೇಳುತ್ತಿದ್ದೇನೆ ಎಂದು ಸ್ಪಷ್ಟನೆ ನೀಡಿದರು.

ಇದನ್ನೂ ಓದಿ: ಮಾನ ಮರ್ಯಾದೆ ಇರೋರು ಬಿಜೆಪಿಗೆ ಹೋಗೋದಿಲ್ಲ: ಎಸ್​​.ಟಿ ಸೋಮಶೇಖರ್​​ಗೆ ಸಿದ್ದರಾಮಯ್ಯ ಟಾಂಗ್​​

ಗೋವುಗಳ ವೈಶಿಷ್ಟ್ಯವನ್ನು ಜಗತ್ತಿಗೆ ಸಾರಬೇಕಿದೆ. ಕೈದಿಗಳ ಮನಪರಿವರ್ತನೆಗೆ ಗೋವು ಸಾಕಾಣಿಕೆ ಬಹಳ ಅವಶ್ಯಕವಾಗಿದೆ. ಹಾಗಾಗಿ ನಾವು ಗೋವು ರಕ್ಷಿಸುವ ಕಾರ್ಯ ಕೈದಿಗಳಿಗೆ ನೀಡಿ ಪ್ರಯೋಗ ಮಾಡಬಹುದು. ಈ ಬಗ್ಗೆ ಇತಿಹಾಸದಲ್ಲಿ ದಾಖಲಿಸಬಹುದು ಎಂದು ಅಭಿಪ್ರಾಯಪಟ್ಟರು.
First published: December 8, 2019, 6:06 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading