ಕ್ಯಾನ್ಸರ್‌ನಿಂದ ಸಾವನ್ನಪ್ಪಿದ ನಿಜ ಜೀವನದ ಟಾರ್ಜನ್ Ho Van Lang

Story of real life Tarzan: ನಿಜ ಜೀವನದ ಟಾರ್ಜನ್ ಹೊ ವಾನ್ ಲ್ಯಾಂಗ್ ಅಷ್ಟು ದಶಕಗಳ ಬಳಿಕ ಮತ್ತೆ ನಾಗರೀಕ ಜೀವನಕ್ಕೆ ಮರಳಲು ಮನಸ್ಸು ಮಾಡಿದ್ದು ತನ್ನ ಹಿರಿಯ ಸಹೋದರನಿಂದಾಗಿ. ತನ್ನ ಸಹೋದರ ಮಾಡಿದ ಮನವಿಗೆ ಒಪ್ಪಿ ಲ್ಯಾಂಗ್ ಮತ್ತು ಅವನ ತಂದೆ ವಿಯೆಟ್ನಾಂ ಸಮಾಜದ ಜೊತೆ ಒಡನಾಟ ಆರಂಭಿಸಿದರು.

ನಿಜ ಜೀವನದ ಟಾರ್ಜನ್​ ಇನ್ನಿಲ್ಲ

ನಿಜ ಜೀವನದ ಟಾರ್ಜನ್​ ಇನ್ನಿಲ್ಲ

  • Share this:
ಸಿನಿಮಾಗಳ ಟಾರ್ಜನ್ ಕಥೆ ಒಂದು ರೀತಿಯದ್ದಾದರೆ, ನಿಜ ಜೀವನದ ಟಾರ್ಜನ್ ಹೊ ವಾನ್ ಲ್ಯಾಂಗ್   (Real Life Tarzan of Vietnam) ಕಥೆ ಮತ್ತೊಂದು ರೀತಿಯದ್ದು. ವಿಯೆಟ್ನಾಂನ ದಟ್ಟ ಕಾಡಿನಲ್ಲಿ 40 ವರ್ಷಗಳ ಕಾಲ ಬದುಕಿ , ಕೇವಲ ಎಂಟು ವರ್ಷಗಳ ಹಿಂದೆಯಷ್ಟೇ ಅವರು “ನಾಗರೀಕ ಸಮಾಜ” ಕ್ಕೆ ಮರಳಿದ್ದರು. ಆದರೆ ಬಹುಷಃ ಹೆಚ್ಚು ಕಾಲ ನಾಗರೀಕ ಸಮಾಜದಲ್ಲಿ ಬದುಕುವ ವಿಧಿ ಅವರದಾಗಿಲಿಲ್ಲ. ಸೋಮವಾರ ಲ್ಯಾಂಗ್ ಯಕೃತ್ತಿನ ಕ್ಯಾನ್ಸರ್‌ನಿಂದ ಸಾವನ್ನಪ್ಪಿದ್ದಾರೆ. ಹೊ ವಾನ್ ಲ್ಯಾಂಗ್​ಗೆ 52 ವರ್ಷ ವಯಸ್ಸಾಗಿತ್ತು. ದ ಸನ್ ನ ವರದಿಗಳ ಪ್ರಕಾರ, 1972ರಲ್ಲಿ ವಿಯೆಟ್ನಾಂ ಯುದ್ಧ ನಡೆದಾಗ, ಪರಾರಿಯಾದ ಆತ ತಮ್ಮ ತಂದೆ ಹಾಗೂ ಸಹೋದರನ ಜೊತೆ ಕ್ವಾಂಗ್ ನ್ಗೈ ಪ್ರಾಂತ್ಯದ ಟೇ ಟ್ರಾ ಜಿಲ್ಲೆಯ ದಟ್ಟ ಕಾಡಿನಲ್ಲಿ ಸುಮಾರು 41 ವರ್ಷಗಳ ಕಾಲ ಜೀವನ ಸವೆಸಿದ್ದಾರೆ. ವಿಯಟ್ನಾಂ ಯುದ್ಧದ ಸಂದರ್ಭದಲ್ಲಿ ಅವರ ಮನೆಯ ಮೇಲೆ ಯುಎಸ್ ನ ಬಾಂಬ್ ಬಿದ್ದ ಕಾರಣ ತಾಯಿ ಮತ್ತು ಇಬ್ಬರು ಒಡ ಹುಟ್ಟಿದವರು ಸಾವನ್ನಪ್ಪಿದ್ದರು.

ನಿಜ ಜೀವನದ ಟಾರ್ಜನ್ ಹೊ ವಾನ್ ಲ್ಯಾಂಗ್ ಅಷ್ಟು ದಶಕಗಳ ಬಳಿಕ ಮತ್ತೆ ನಾಗರೀಕ ಜೀವನಕ್ಕೆ ಮರಳಲು ಮನಸ್ಸು ಮಾಡಿದ್ದು ತನ್ನ ಹಿರಿಯ ಸಹೋದರನಿಂದಾಗಿ. ತನ್ನ ಸಹೋದರ ಮಾಡಿದ ಮನವಿಗೆ ಒಪ್ಪಿ ಲ್ಯಾಂಗ್ ಮತ್ತು ಅವನ ತಂದೆ ವಿಯೆಟ್ನಾಂ ಸಮಾಜದ ಜೊತೆ ಒಡನಾಟ ಆರಂಭಿಸಿದರು. 2013 ರಲ್ಲಿ ಆತನ ತಂದೆ ಹೋ ವ್ಯಾನ್ ತಾನ್ ಆರೋಗ್ಯ ಹದಗೆಟ್ಟಾಗ ವೈದ್ಯಕೀಯ ಸಹಾಯವನ್ನು ಕೂಡ ಕೋರಿದ್ದರು. ಆದರೆ , 2017 ರಲ್ಲಿ ಲ್ಯಾಂಗ್ ತಂದೆ ಸಾವನ್ನಪ್ಪಿದ್ದು, ಅದಕ್ಕೆ ಕಾರಣ ತಿಳಿದು ಬಂದಿಲ್ಲ. ಆರಂಭದಲ್ಲಿ ಅವರು ಹಳ್ಳಿಯೊಂದನ್ನು ಪ್ರವೇಶಿಸಿದ್ದಾಗ, ಯುದ್ಧ ಇನ್ನೂ ಕೂಡ ಮುಂದುವರೆಯುತ್ತಿದೆ ಎಂದು ಭಾವಿಸಿದ್ದರು. ಆದರೆ ‘ನಾಗರೀಕತೆ’ಗೆ ಮರಳಿದ ನಂತರ ಅವರಿಬ್ಬರು ಕ್ರಮೇಣ ಆಧುನಿಕ ಜೀವನ ಶೈಲಿಯನ್ನು ಜೀವಿಸಲು ಆರಂಭಿಸಿದ್ದರು.

Meet real life tarzan who never knew about women and sex for 41 long years
ನಿಜ ಜೀವನದ ಟಾರ್ಜನ್​


ಲ್ಯಾಂಗ್‍ನ ಮರಣದ ನಂತರ, ಅವರ ಆತನ ಸ್ನೇಹಿತ ಅಲವ್ಯಾರೋ ಸಿರೇಜೋ, ನಾಗರೀಕ ಪ್ರಪಂಚದ ಒತ್ತಡ ಮತ್ತು ಕಳಪೆ ಆಹಾರ ಅವನಿಗೆ ಸರಿ ಹೊಂದಲಿಲ್ಲ ಮತ್ತು ಅವನ ಆರೋಗ್ಯದ ಮೇಲೆ ಮಾರಕ ಪರಿಣಾಮ ಬೀರಿತು ಎಂದು ಹೇಳಿದ್ದಾರೆ. “ಲ್ಯಾಂಗ್ ಮದ್ಯಪಾನ ಮಾಡುವುದು ಮತ್ತು ಸಂಸ್ಕರಿತ ಆಹಾರವನ್ನು ತಿನ್ನುವುದನ್ನು ಕಲಿತುಕೊಂಡಿದ್ದ, ಹಾಗಾಗಿ ಆಧುನಿಕ ಜೀವನವು ಅವನ ಮೇಲೆ ಮಾರಕ ಪರಿಣಾಮಗಳನ್ನು ಬೀರಿತು” ಎಂದು ಸಿರೇಜೋ ಹೇಳಿದ್ದಾರೆ.

“ಅವನು ಹೋಗುತ್ತಿರುವುದನ್ನು ನೋಡಿ ದುಃಖವಾಗುತ್ತಿದೆ, ಆದರೆ ನನಗೆ ಅದು ಅವನ ಸ್ವಾತಂತ್ರ್ಯದಂತೆ ಅನಿಸುತ್ತಿದೆ. ಏಕೆಂದರೆ ಕಳೆದ ಕೆಲವು ತಿಂಗಳುಗಳಿಂದ ಅವನು ನರಳುತ್ತಿದ್ದದ್ದು ನನಗೆ ಗೊತ್ತು ” ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: Real Life Tarzan: 41 ವರ್ಷ ಕಾಡಿನಲ್ಲಿದ್ದ ಈ ವ್ಯಕ್ತಿಗೆ ಮಹಿಳೆ, ಲೈಂಗಿಕತೆ ಎಂದರೇನು ಎಂಬುದೇ ಗೊತ್ತಿರಲಿಲ್ಲವಂತೆ..!

ಅಧಿಕಾರಿಗಳ ಪ್ರಕಾರ, ಅವರು ತಂದೆ ಮಗನನ್ನು ಮೊದಲ ಬಾರಿ ಕಂಡು ಹಿಡಿದಾಗ, ಲ್ಯಾಂಗ್‍ಗೆ ಕೆಲವು ಪದಗಳ ಉಚ್ಚಾರಣೆ ಮಾತ್ರ ಗೊತ್ತಿತ್ತು. ಆದರೆ ತಂದೆಗೆ ಕೊಂಚ ಮಟ್ಟಿಗೆ ಅಲ್ಪ ಸಂಖ್ಯಾತ ಕೋರ್ ಭಾಷೆ ತಿಳಿದಿತ್ತು.

ಲ್ಯಾಂಗ್ ಅದ್ಭುತವಾದ ಬದುಕನ್ನು ಜೀವಿಸಿದ್ದು, ಇಡೀ ವಿಶ್ವದಲ್ಲಿ ಹೆಸರುವಾಸಿಯಾಗಿದ್ದಾರೆ ಎಂದು ಸಿರೆಜೋ ಹೇಳಿದ್ದಾರೆ. ಅವರು ಲ್ಯಾಂಗ್‍ನನ್ನು ಭೇಟಿಯಾಗಿದ್ದು ತಮ್ಮ ಕೆಲಸದ ಮೂಲಕ. ಕಾಡಿನಿಂದ ಮರಳಿದ ಬಳಿಕ , ಲ್ಯಾಂಗ್ ನಾಗರೀಕತೆಯನ್ನು ತನ್ನದಾಗಿಸಿಕೊಳ್ಳುವಾಗಿನ ಭಾವುಕ, ಸುಂದರ ಮತ್ತು ಮನ ತಟ್ಟುವ ಕೆಲವು ಸನ್ನಿವೇಶಗಳನ್ನು ಕೂಡ ಅವರು ಸೆರೆ ಹಿಡಿದಿದ್ದಾರೆ. ಲ್ಯಾಂಗ್ ದಟ್ಟ ಕಾಡಿನೊಳಗಿನ ತನ್ನ ಹಳೆಯ ಮನೆಯಲ್ಲಿ, ಹಿಂದೆ ತನ್ನ ತಂದೆಯೊಂದಿಗೆ ಬದುಕಿದ ರೀತಿಯಲ್ಲಿಯೇ ಒಂದು ವಾರವನ್ನು ಕಳೆದಿದ್ದರು ಎಂದು ಸಿರೆಜೋ ಹೇಳಿದ್ದಾರೆ.

ಸಿರೆಜೋ ಲ್ಯಾಂಗ್ ಜೀವನದ ಬಗ್ಗೆ ಒಂದು ಪುಸ್ತಕವನ್ನು ಕೂಡ ಬರೆದಿದ್ದಾರೆ. ಮತ್ತು ಅವರಿಬ್ಬರು ದಟ್ಟವಾದ ಕಾಡಿನಲ್ಲಿ ವಾಸಿಸುತ್ತಿದ್ದ ದಿನಗಳ ದೃಶಗಳನ್ನು ಒಗ್ಗೂಡಿಸಿ ಒಂದು ಚಿತ್ರಣವನ್ನು ಕೂಡ ರಚಿಸಿದ್ದಾರೆ.
Published by:Anitha E
First published: