Congress President Election: ರಾಹುಲ್ ಗಾಂಧಿ ಮಾತಿನಂತೆ ನಡೆದುಕೊಳ್ಳಲು ಗೆಹ್ಲೋಟ್ ರೆಡಿ, ಸಿಎಂ ಸ್ಥಾನ ತೊರೆಯುವ ಸುಳಿವು!

ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್

ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್

  • Share this:
ನವದೆಹಲಿ(ಸೆ.23): ಕಾಂಗ್ರೆಸ್ ಅಧ್ಯಕ್ಷ (Congress President Poll) ಸ್ಥಾನದ ರೇಸ್‌ನಲ್ಲಿ ಮುಂಚೂಣಿಯಲ್ಲಿರುವ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ (Ashok Gehlot) ತಮ್ಮ ನಡೆ ಬದಲಾಯಿಸುತ್ತಿದ್ದಾರೆ. ಗಾಂಧಿ ಕುಟುಂಬದ ಮೊದಲ ಆಯ್ಕೆಯಾಗಿ ಪರಿಗಣಿಸಲ್ಪಟ್ಟಿರುವ ಅಶೋಕ್ ಗೆಹ್ಲೋಟ್ ಅವರು ಮುಂದಿನ ಅಧ್ಯಕ್ಷರಾಗುವ ಪ್ರಬಲ ಅವಕಾಶವನ್ನು ಹೊಂದಿದ್ದಾರೆ, ಆದಾಗ್ಯೂ, ಅವರು ಶಶಿ ತರೂರ್ (Shashi Tharoor) ಸೇರಿದಂತೆ ಅನೇಕ ಇತರ ಸಹೋದ್ಯೋಗಿಗಳೊಂದಿಗೆ ಸ್ಪರ್ಧಿಸಬೇಕಾಗುತ್ತದೆ. ಕಾಂಗ್ರೆಸ್ ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಘೋಷಿಸಿದ ಅಶೋಕ್​ ಗೆಹ್ಲೋಟ್ ಅವರು ಅಧ್ಯಕ್ಷರಾದ ಬಳಿಕ ರಾಜಸ್ಥಾನದ ಮುಖ್ಯಮಂತ್ರಿ ಸ್ಥಾನವನ್ನು ತೊರೆಯುವುದಾಗಿ ಸೂಚಿಸಿದ್ದಾರೆ. ಅಷ್ಟೇ ಅಲ್ಲ, ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸುವುದಾಗಿಯೂ ಖಚಿತಪಡಿಸಿದ್ದಾರೆ.

ಇದನ್ನೂ ಓದಿ: 7 ವರ್ಷ ಹಗ್ಗಜಗ್ಗಾಟದ ನಿರ್ಭಯಾ ಅತ್ಯಾಚಾರ ಪ್ರಕರಣ ನೇಣು ಶಿಕ್ಷೆಯೊಂದಿಗೆ ಸಮಾಪ್ತಿ; ಸೂರ್ಯೋದಯಕ್ಕೂ ಮುನ್ನವೇ ಕಣ್ಮುಚ್ಚಿದ ಅಪರಾಧಿಗಳು

ಟೈಮ್ಸ್ ಆಫ್ ಇಂಡಿಯಾದ ವರದಿಯ ಪ್ರಕಾರ, ಗಾಂಧಿ ಕುಟುಂಬದ ಅಭ್ಯರ್ಥಿ ಎಂದು ಪರಿಗಣಿಸಲ್ಪಟ್ಟ ಅಶೋಕ್ ಗೆಹ್ಲೋಟ್ ಜೈಪುರದಲ್ಲಿ ಕಾಂಗ್ರೆಸ್ ಅಧ್ಯಕ್ಷರ ಚುನಾವಣಾ ಕಣಕ್ಕೆ ಪ್ರವೇಶಿಸುವ ನಿರ್ಧಾರವನ್ನು ಘೋಷಿಸಿದರು, ತಮ್ಮ ಮುಖ್ಯಮಂತ್ರಿ ಸ್ಥಾನವನ್ನು ತ್ಯಜಿಸುವ ಸುಳಿವು ನೀಡಿದರು. ಈ ಹಿಂದೆ ಅಶೋಕ್ ಗೆಹ್ಲೋಟ್ ಅವರು ಕಾಂಗ್ರೆಸ್ ಅಧ್ಯಕ್ಷರಾಗಿ ಆಯ್ಕೆಯಾದ ನಂತರವೂ ರಾಜಸ್ಥಾನದ ಮುಖ್ಯಮಂತ್ರಿಯಾಗಿ ಮುಂದುವರಿಯುವುದಾಗಿ ಹೇಳಿದ್ದರು. ಆದರೆ ಯಾವಾಗ ರಾಹುಲ್ ಗಾಂಧಿ 'ಒಬ್ಬ ವ್ಯಕ್ತಿ, ಒಂದು ಸ್ಥಾನ' ತತ್ವವನ್ನು ಪ್ರತಿಪಾದಿಸಿದರೋ, ಅದಾದ ಇದಾದ ನಂತರ ಅಶೋಕ್ ಗೆಹ್ಲೋಟ್ ಅವರ ಧ್ವನಿಯೂ ಬದಲಾಯಿತು. ಪಕ್ಷದ ನೂತನ ಅಧ್ಯಕ್ಷರು ‘ಒಬ್ಬ ವ್ಯಕ್ತಿ ಒಂದು ಹುದ್ದೆ’ ತತ್ವವನ್ನು ಅನುಸರಿಸಬೇಕು ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಅಧಿಸೂಚನೆ ಹೊರಡಿಸಿದ ಬೆನ್ನಲ್ಲೇ, ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವುದಿಲ್ಲ ಎಂದು ಸೂಚಿಸಿದ್ದಾರೆ.

ರಾಹುಲ್ ಮಾತಿಗೆ ಗೆಹ್ಲೋಟ್ ಸಹಮತ

'ಒಬ್ಬ ವ್ಯಕ್ತಿ, ಒಂದು ಹುದ್ದೆ' ಪರಿಕಲ್ಪನೆಯ ವಿಚಾರವಾಗಿ ಗುರುವಾರ ರಾಹುಲ್ ಗಾಂಧಿ ಉಲ್ಲೇಖಿಸಿದ್ದರು. 'ನಾವು ತೆಗೆದುಕೊಂಡ ನಿರ್ಧಾರ, ಉದಯಪುರದಲ್ಲಿ ನಾವು ತೆಗೆದುಕೊಂಡಿರುವುದು ಕಾಂಗ್ರೆಸ್ ಪಕ್ಷದ ಬದ್ಧತೆಯಾಗಿದೆ. ಹಾಗಾಗಿ ಬದ್ಧತೆಯನ್ನು ಉಳಿಸಿಕೊಳ್ಳಲಾಗುವುದು ಎಂದು ನಾನು ಭಾವಿಸುತ್ತೇನೆ' ಎಂದು ಅಶೋಕ್ ಗೆಹ್ಲೋಟ್ ಹೇಳಿದ್ದಾರೆ. ಕಾಂಗ್ರೆಸ್ ಅಧ್ಯಕ್ಷರು ಮುಖ್ಯಮಂತ್ರಿ ಆಗಲ್ಲ ಎಂದೂ ತಿಳಿಸಿದ್ದಾರೆ. 22 ವರ್ಷಗಳ ನಂತರ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಚುನಾವಣಾ ಸ್ಪರ್ಧೆಯ ಪ್ರಬಲ ಸಾಧ್ಯತೆಯ ನಡುವೆ ಗುರುವಾರ ಅಧಿಸೂಚನೆ ಹೊರಡಿಸಲಾಗಿದೆ ಮತ್ತು ಇದರೊಂದಿಗೆ ಚುನಾವಣಾ ಪ್ರಕ್ರಿಯೆ ಪ್ರಾರಂಭವಾಯಿತು ಎಂಬುವುದು ಉಲ್ಲೇಖನೀಯ.

Bharat Jodo Yatra Day 2 Sonia Gandhi defined will play Congress Rejuvenation
ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿ


ಚುನಾವಣೆ ಯಾವಾಗ? ಫಲಿತಾಂಶ ಯಾವಾಗ ಸಿಗುತ್ತದೆ?

ಕಾಂಗ್ರೆಸ್ ಅಧ್ಯಕ್ಷರ ಆಯ್ಕೆಗೆ ಘೋಷಿತ ವೇಳಾಪಟ್ಟಿಯ ಪ್ರಕಾರ, ಅಧಿಸೂಚನೆ ಹೊರಡಿಸಿದ ನಂತರ, ಈಗ ನಾಮಪತ್ರ ಸಲ್ಲಿಸುವ ಪ್ರಕ್ರಿಯೆಯು ಸೆಪ್ಟೆಂಬರ್ 24 ರಿಂದ 30 ರವರೆಗೆ ನಡೆಯಲಿದೆ. ನಾಮಪತ್ರ ಹಿಂಪಡೆಯಲು ಅಕ್ಟೋಬರ್ 8 ಕೊನೆಯ ದಿನವಾಗಿದೆ. ಒಂದಕ್ಕಿಂತ ಹೆಚ್ಚು ಅಭ್ಯರ್ಥಿಗಳಿದ್ದಲ್ಲಿ ಅಕ್ಟೋಬರ್ 17 ರಂದು ಮತದಾನ ನಡೆಯಲಿದ್ದು, ಅಕ್ಟೋಬರ್ 19 ರಂದು ಫಲಿತಾಂಶ ಪ್ರಕಟವಾಗಲಿದೆ. ಬುಧವಾರ, ಅಧಿಸೂಚನೆ ಹೊರಡಿಸುವ ಒಂದು ದಿನ ಮೊದಲು, ರಾಜಸ್ಥಾನ ಮುಖ್ಯಮಂತ್ರಿ ಗೆಹ್ಲೋಟ್ ಮತ್ತು ಪಕ್ಷದ ಹಿರಿಯ ನಾಯಕ ಶಶಿ ತರೂರ್ ಚುನಾವಣಾ ಕಣಕ್ಕೆ ಇಳಿಯುವ ಸ್ಪಷ್ಟ ಸಂಕೇತ ನೀಡಿದ ಬಳಿಕ 22 ವರ್ಷಗಳ ನಂತರ ದೇಶದ ಅತ್ಯಂತ ಹಳೆಯ ಪಕ್ಷದ ಅಧ್ಯಕ್ಷರನ್ನು ಚುನಾವಣೆ ಮೂಲಕ ಆಯ್ಕೆ ಮಾಡುವುದು ಖಚಿತವಾಗಿದೆಸ. 2000ನೇ ಇಸವಿಯಲ್ಲಿ ಸೋನಿಯಾ ಗಾಂಧಿ ಮತ್ತು ಜಿತೇಂದ್ರ ಪ್ರಸಾದ್ ನಡುವೆ ಪೈಪೋಟಿ ನಡೆದಿದ್ದು, ಪ್ರಸಾದ್ ಸೋಲನುಭವಿಸಿದ್ದರು. ಈ ಹಿಂದೆ 1997ರಲ್ಲಿ ಅಧ್ಯಕ್ಷ ಸ್ಥಾನಕ್ಕೆ ಸೀತಾರಾಮ್ ಕೇಸರಿ, ಶರದ್ ಪವಾರ್ ಹಾಗೂ ರಾಜೇಶ್ ಪೈಲಟ್ ನಡುವೆ ಪೈಪೋಟಿ ಏರ್ಪಟ್ಟಿದ್ದು, ಕೇಸರಿ ಗೆದ್ದಿದ್ದರು.

ಗೆಹ್ಲೋಟ್ ವಿರುದ್ಧ ಶಶಿ ತರೂರ್ ಪಂದ್ಯ ಬಹುತೇಕ ಫಿಕ್ಸ್

ಏತನ್ಮಧ್ಯೆ, ಅಶೋಕ್ ಗೆಹ್ಲೋಟ್ ಗುರುವಾರ ಕೊಚ್ಚಿ ತಲುಪಿ ರಾಹುಲ್ ಗಾಂಧಿ ಅವರೊಂದಿಗೆ ಭಾರತ ಜೋಡೋ ಯಾತ್ರೆಯಲ್ಲಿ ಪಾಲ್ಗೊಂಡರು. ಈ ಹಿಂದೆ ಅಶೋಕ್ ಗೆಹ್ಲೋಟ್ ಅವರು ಪಕ್ಷದ ನಿರ್ಧಾರವನ್ನು ಒಪ್ಪಿಕೊಳ್ಳುವುದಾಗಿ ನೇರವಾಗಿ ಹೇಳಿದ್ದರು, ಆದರೆ ಅದಕ್ಕೂ ಮೊದಲು ರಾಹುಲ್ ಗಾಂಧಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಲು ಮನವೊಲಿಸಲು ಕೊನೆಯ ಪ್ರಯತ್ನ ಮಾಡುವುದಾಗಿ ಹೇಳಿದ್ದರು. ಇಂದು ಅಂದರೆ ಶುಕ್ರವಾರ ರಾಹುಲ್ ಗಾಂಧಿ ದೆಹಲಿ ತಲುಪಿ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡಲಿದ್ದಾರೆ ಎಂದು ಹೇಳಲಾಗಿದೆ. ಇದೀಗ ಅಶೋಕ್ ಗೆಹ್ಲೋಟ್ ವಿರುದ್ಧ ಶಶಿ ತರೂರ್ ಸ್ಪರ್ಧೆ ಎಂಬುದು ಬಹುತೇಕ ನಿರ್ಧಾರವಾಗಿದ್ದು, ರಾಜಸ್ಥಾನದಲ್ಲಿ ಗೆಹ್ಲೋಟ್ ಸ್ಥಾನದಲ್ಲಿ ಯಾರು ಮುಖ್ಯಮಂತ್ರಿಯಾಗಲಿದ್ದಾರೆ ಎಂಬುವುದೇ ಬಹುದೊಡ್ಡ ಪ್ರಶ್ನೆಯಾಗಿದೆ.

ಇದನ್ನೂ ಓದಿ:  ನಿರ್ಭಯಾ ತಾಯಿ ಪಾತ್ರವನ್ನು ನನಗೆ ಕೊಡಿ ಎಂದ ಸ್ಯಾಂಡಲ್​ವುಡ್​ ನಟಿ!

ಪೈಲಟ್ ಮುಖ್ಯಮಂತ್ರಿಯಾಗುತ್ತಾರಾ?

ಸುದ್ದಿಗಾರರೊಂದಿಗೆ ಮಾತನಾಡಿದ ಅಶೋಕ್ ಗೆಹ್ಲೋಟ್, ರಾಜಸ್ಥಾನದಲ್ಲಿ ಏನಾಗುತ್ತದೆ, ಕಾಂಗ್ರೆಸ್ ನಾಯಕತ್ವ ಯಾವ ನಿರ್ಧಾರ ತೆಗೆದುಕೊಳ್ಳುತ್ತದೆ, ಶಾಸಕರು ಏನು ಯೋಚಿಸುತ್ತಾರೆ ಎಂಬುದನ್ನು ನೋಡೋಣ ಎಂದು ಹೇಳಿದರು. ಹೇಗಾದರೂ, ಅಶೋಕ್ ಗೆಹ್ಲೋಟ್ ಕಾಂಗ್ರೆಸ್ ಮುಖ್ಯಸ್ಥರಾದರೆ, ಅಂತಹ ಪರಿಸ್ಥಿತಿಯಲ್ಲಿ, ಗೆಹ್ಲೋಟ್ ಅವರು ತಮ್ಮ ಆಪ್ತರೊಬ್ಬರನ್ನು ಮುಖ್ಯಮಂತ್ರಿಯಾಗಿ ಮಾಡಬಹುದು ಎನ್ನಲಾಗಿದೆ. ಆದರೂ ಸಚಿನ್ ಪೈಲಟ್ ಅವರ ಆಪ್ತ ನಾಯಕರು ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಮುಂದಿನ ವರ್ಷ ಈ ಜವಾಬ್ದಾರಿಯನ್ನು ಪೈಲಟ್‌ಗೆ ವಹಿಸಿಕೊಡಬೇಕು ಎಂದಿದ್ದಾರೆ.
Published by:Precilla Olivia Dias
First published: