New Companies: ಬಾಗಿಲು ತೆರೆಯಲು ರೆಡಿಯಾಗಿವೆ 17 ಸಾವಿರ ಹೊಸ ಕಂಪನಿಗಳು, ಲಕ್ಷಾಂತರ ನಿರುದ್ಯೋಗಿಗಳಿಗೆ ಸಿಗಲಿದೆ ಕೆಲಸ

ಕಳೆದ ವರ್ಷ 2021ರಲ್ಲಿ 17 ಸಾವಿರ ಹೊಸ ಕಂಪನಿಗಳು ನೋಂದಣಿಯಾಗಿವೆ. ಇದರೊಂದಿಗೆ ಒಟ್ಟು ಸಕ್ರಿಯ ಕಂಪನಿಗಳ ಸಂಖ್ಯೆ 14.1 ಲಕ್ಷಕ್ಕೆ ಏರಿಕೆಯಾಗಿದೆ ಎಂದು ಕಾರ್ಪೊರೇಟ್​ ವ್ಯವಹಾರಗಳ ಸಚಿವಾಲಯ ತಿಳಿಸಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಕೋವಿಡ್​ 19 (Covid 19) ಬಿಕ್ಕಟ್ಟಿನಿಂದ ದೇಶದಲ್ಲಿ ಹಲವು ಕಂಪನಿಗಳು ಬಾಗಿಲು ಮುಚ್ಚಿದವು. ದೇಶದಲ್ಲಿ ನಿರುದ್ಯೋಗ ತಾಂಡವವಾಡ್ತಿದೆ. ಈ ಸಮಯದಲ್ಲಿ ಹೊಸದಾಗಿ 17,000 ಸಾವಿರ ಕಂಪನಿಗಳು (New Company) ತೆರೆಯುತ್ತಿವೆ. ದೇಶದಲ್ಲಿ ಕಳೆದ ಸೆಪ್ಟೆಂಬರ್​ 30ರ ವೇಳೆಗೆ 7.73 ಲಕ್ಷಕ್ಕೂ ಹೆಚ್ಚು ಕಂಪನಿಗಳು ಸ್ಥಗಿತವಾಗಿವೆ ಎಂಬ ಆಘಾತಕಾರಿ ಅಂಶವನ್ನು ಸರಕಾರದ ಅಂಕಿ ಅಂಶ (Government statistics) ಬಹಿರಂಗಪಡಿಸಿದೆ. ಕಾರ್ಪೊರೇಟ್​ ವ್ಯವಹಾರಗಳ (Corporate Affairs) ಸಚಿವಾಲಯದ ಮಾಹಿತಿ ಪ್ರಕಾರ, 2021ರ ಸೆಪ್ಟೆಂಬರ್​ 30ರ ವೇಳೆಗೆ ಒಟ್ಟು 22,32,699 ಕಂಪನಿ ನೋಂದಣಿಯಾಗಿತ್ತು (Registration). ಈ ಪೈಕಿ 7,73,070 ಕಂಪನಿಗಳು ಮುಚ್ಚಿವೆ. 2,298 ಕಂಪನಿಗಳು ತಾತ್ಕಾಲಿಕವಾಗಿ ನಿಷ್ಕ್ರಿಯಗೊಂಡಿದೆ. 6,944 ಕಂಪನಿಗಳು ಮಾರಾಟ ಹಾಗೂ ಹರಾಜಿನ ಮೂಲಕ ನಗದೀಕರಣದ ಪ್ರಕ್ರಿಯೆಯಲ್ಲಿದೆ. 36, 110 ಕಂಪನಿಗಳ ನೋಂದಣಿ ರದ್ದಾಗುವ ಹಂತದಲ್ಲಿದೆ. ಈ ನಡುವೆ 2021ರ ಸೆಪ್ಟೆಂಬರ್​ನಲ್ಲಿ 17,000 ಹೊಸ ಕಂಪನಿಗಳು ನೋಂದಣಿಯಾಗಿದೆ.

17,000 ಹೊಸ ಕಂಪನಿಗಳ ನೋಂದಣಿ

ಕೊರೊನಾ ಬಂದಾಗಿನಿಂದ ದೇಶದಲ್ಲಿ ಹಲವು ಕಂಪನಿಗಳು ಬಾಗಿಲು ಮುಚ್ಚಿವೆ. ಇನ್ನು ಕೆಲವೆಡೆ ಸಿಬ್ಬಂದಿಗಳಿಗೆ ಸಂಬಳ ನೀಡಲಾಗದೆ ಕಂಪನಿಗಳಲ್ಲಿ ಹಲವರನ್ನು ತೆಗೆದು ಹಾಕಿದ್ರು. ಇದ್ರಿಂದ ಸಾವಿರಾರು ಮಂದಿ ನಿರುದ್ಯೋಗಿಗಳಾದ್ರು. ಇದೀಗ ಮತ್ತೆ ಸುಧಾರಿಸಿಕೊಳ್ತಿರೋ ಆರ್ಥಿಕ ವ್ಯವಸ್ಥೆಯಿಂದ ನಿರುದೋಗ್ಯಿಗಳಿಗೆ ಕೆಲಸದ ಭಾಗ್ಯ ಸಿಗಲಿದೆ.

ಕಳೆದ ವರ್ಷ 2021ರಲ್ಲಿ 17 ಸಾವಿರ ಹೊಸ ಕಂಪನಿಗಳು ನೋಂದಣಿಯಾಗಿವೆ. ಇದರೊಂದಿಗೆ ಒಟ್ಟು ಸಕ್ರಿಯ ಕಂಪನಿಗಳ ಸಂಖ್ಯೆ 14.1 ಲಕ್ಷಕ್ಕೆ ಏರಿಕೆಯಾಗಿದೆ ಎಂದು ಕಾರ್ಪೊರೇಟ್​ ವ್ಯವಹಾರಗಳ ಸಚಿವಾಲಯ ತಿಳಿಸಿದೆ. 2021ರ ಸೆಪ್ಟೆಂಬರ್​ ವೇಳೆಗೆ 4535 ಎಲ್​ಎಲ್​ಪಿಗಳು ನೋಂದಣಿಯಾಗಿವೆ. 2020ರ ಏಪ್ರಿಲ್​ನಲ್ಲಿ ಹೊಸ ಕಂಪನಿಗಳ ಮಾಸಿಕ ನೋಂದಣಿ 3,209ಕ್ಕೆ ಕುಸಿದಿತ್ತು.

ಇದನ್ನೂ ಓದಿ: Anganwadi Jobs: ಹಾವೇರಿಯಲ್ಲಿ 70 ಅಂಗನವಾಡಿ ಕಾರ್ಯಕರ್ತೆ & ಸಹಾಯಕಿ ಹುದ್ದೆಗಳು ಖಾಲಿ

ಉತ್ತರ ಭಾರತದಲ್ಲಿ ನಿರುದ್ಯೋಗ ಹೆಚ್ಚಳ

ದೇಶದ 12 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ನಿರುದ್ಯೋಗ ದರ ಇಳಿಮುಖವಾಗುತ್ತಿದ್ದರೂ. 8 ರಾಜ್ಯಗಳಲ್ಲಿ ನಿರುದ್ಯೋಗದ ಪ್ರಮಾಣ ಎರಡಂಕಿಯ ಕಳವಳಕಾರಿ ಮಟ್ಟದಲ್ಲಿ ಮುಂದುವರಿದಿದೆ ಎಂದು ಸಿಎಂಐಇ ತಿಳಿಸಿದೆ. ದಿಲ್ಲಿಯಲ್ಲಿ ನಿರುದ್ಯೋಗದ ಪ್ರಮಾಣ ಶೇ.16.8ಕ್ಕೆ ಏರಿದೆ. ನಿರುದ್ಯೋಗದ ಪ್ರಮಾಣ ಶೇ.17.9, ಹರಿಯಾಣದಲ್ಲಿ ಶೇಕಡಾ 20.3, ಜಮ್ಮುಕಾಶ್ಮೀರದಲ್ಲಿ ಶೇ. 21.6, ಬಿಹಾರ, ತ್ರಿಪುರಾ, ಜಾರ್ಖಂಡ, ಪುದುಚೇರಿಯಲ್ಲಿ ಶೇ.10 ಮತ್ತು ಶೇ. 15ರ ನಡುವೆ ಇದೆ ಎಂದು ತಿಳಿಸಿದೆ. ಸೆಂಟರ್​ ಫಾರ್​ ಮಾನಿಟರಿಂಗ್​ ಇಂಡಿಯನ್​ ಎಕಾನೆಮಿ ಪ್ರಕಾರ ಅಕ್ಟೋಬರ್​ ವೇಳೆಗೆ ನಿರುದ್ಯೋಗ ಪ್ರಮಾಣ ಶೇ. 7.8ರ ಮಟ್ಟದಲ್ಲಿದೆ.

ರಾಜ್ಯದಲ್ಲಿ 8 ಹೊಸ ಕೈಗಾರಿಕಾ ಪ್ರದೇಶ

ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ ವತಿಯಿಂದ ಹೊಸದಾಗಿ 8 ಕೈಗಾರಿಕಾ ಪ್ರದೇಶಗಳನ್ನು ನಿರ್ಮಿಸೋದಾಗಿ ಸಚಿವ ಮುರುಗೇಶ್​ ನಿರಾಣಿ ತಿಳಿಸಿದ್ದಾರೆ. ಹೊಸದಾಗಿ ನಿರ್ಮಿಸಲು ಉದ್ದೇಶಿಸಿರೋ ಕೈಗಾರಿಕ ಪ್ರದೇಶಗಳೆಂದರೆ, ರಾಮನಗರದ ಹಾರೋಹಳ್ಳಿ 5ನೇ ಹಂತ, ಚಿಕ್ಕಬಳ್ಳಾಪುರದ ಗೌರಿಬಿದನೂರು 3ನೇ ಹಂತ, ತುಮಕೂರನ ಮಧುಗಿರಿ ಕೈಗಾರಿಕಾ ಪ್ರದೇಶ, ಕೋಲಾರದ ಜಕ್ಕಸಂದ್ರ 2ನೇ ಹಂತ, ಮಂಡ್ಯದ ಕುದುರೆಗುಂಡಿ ಕೈಗಾರಿಕಾ ಪ್ರದೇಶ, ಯಾದಗಿರಿಯ ಕಡೇಚೂರು 2ನೇ ಹಂತ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಓಬಳಾಪುರ ಕೈಗಾರಿಕಾ ಪ್ರದೇಶ ಎಂದು ಸಚಿವರು ತಿಳಿಸಿದ್ದಾರೆ.

ಇದನ್ನೂ ಓದಿ: TCS is Hiring: ಪದವೀಧರರಿಂದ ಅರ್ಜಿ ಆಹ್ವಾನಿಸಿದ ಟಿಸಿಎಸ್​, ವಾರ್ಷಿಕ ಪ್ಯಾಕೇಜ್ ₹ 7 ಲಕ್ಷ

ಉದ್ಯೋಗ ಸೃಷ್ಟಿಗೂ ಆಗಲಿದೆ ಅನುಕೂಲ

ಹೊಸ ಕೈಗಾರಿಕಾ ಪ್ರದೇಶಗಳ ನಿರ್ಮಾಣದಿಂದ ಕೈಗಾರಿಕಾ ವಲಯ ಬೆಂಗಳೂರಿನಿಂದ ಹೊರಗೂ ವಿಸ್ತಾರಗೊಳ್ಳಲಿದೆ. ಕೈಗಾರಿಕೆಗಳಿಗೆ ಹೆಚ್ಚಿನ ಉತ್ತೇಜನ ಸಿಗಲಿದ್ದು, ಉದ್ಯೋಗ ಸೃಷ್ಟಿಗೂ ಇದು ಅನುಕೂಲವಾಗಲಿದೆ ಎಂದು ಸಚಿವರು ತಿಳಿಸಿದ್ರು. ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ ಇನ್ವೆಸ್ಟ್​ ಕರ್ನಾಟಕ 2022 ಅನ್ನು ಈ ವರ್ಷದ ನವೆಂಬರ್​ 2 ರಿಂದ 4ರವರೆಗೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ಆಯೋಜಿಸಲು ಉದ್ದೇಶಿಸಲಾಗಿದೆ. ಇದೀಗ ಮತ್ತೆ ಸುಧಾರಿಸಿಕೊಳ್ತಿರೋ ಆರ್ಥಿಕ ವ್ಯವಸ್ಥೆಯಿಂದ ನಿರುದೋಗ್ಯಿಗಳಿಗೆ ಕೆಲಸದ ಭಾಗ್ಯ ಸಿಗಲಿದೆ.
Published by:Pavana HS
First published: